ಟಿಡಿಎಸ್ ಕಟ್ ಮಾಡಿ ಸರ್ಕಾರಕ್ಕೆ ಪಾವತಿಸದೇ ಕಷ್ಟದಲ್ಲಿರುವವರಿಗೆ ಖುಷಿ ಸುದ್ದಿ, ಟಿಡಿಎಸ್ ಡೀಫಾಲ್ಟ್ ಶುಲ್ಕ ಇಳಿಕೆ, ಹೊಸ ಮಾರ್ಗಸೂಚಿ ಪ್ರಕಟ
ಇದು ಟಿಡಿಎಸ್ ಟಿಡಿಎಸ್ ಕಟ್ ಮಾಡಿ ಸರ್ಕಾರಕ್ಕೆ ಪಾವತಿಸದೇ ಕಷ್ಟದಲ್ಲಿರುವವರಿಗೆ ಖುಷಿ ಸುದ್ದಿ. ಟಿಡಿಎಸ್ ಡೀಫಾಲ್ಟ್ ಶುಲ್ಕ ಇಳಿಕೆ ಮಾಡಿರುವ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಅದರ ವಿವರ ಹೀಗಿದೆ.
(1 / 7)
ತೆರಿಗೆ ಪಾವತಿದಾರರು ಟಿಡಿಎಸ್ ಕಟ್ ಮಾಡಿ ಪಾವತಿಸದೇ ಡೀಫಾಲ್ಟ್ ಮಾಡಿಕೊಂಡಿದ್ದರೆ, ಅಂಥವರಿಗೆ ವಿಧಿಸುವ ದಂಡದ ಪ್ರಮಾಣವನ್ನು ಇಳಿಕೆ ಮಾಡಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇದು ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸುವ ಮತ್ತು ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. (ಸಾಂಕೇತಿಕ ಚಿತ್ರ)
(2 / 7)
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಲದ ಬಜೆಟ್ ಭಾಷಣದಲ್ಲಿ ನೇರ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಮತ್ತು ಪ್ರಕ್ರಿಯೆಯನ್ನು ಸುಲಭಗೊಳಿಸುವುದಾಗಿ ಹೇಳಿದ್ದರಿ. ಅದರ ಭಾಗವಾಗಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಈ ಮಾರ್ಗಸೂಚಿಯನ್ನು ಗುರುವಾರ (ಅಕ್ಟೋಬರ್ 17) ಪ್ರಕಟಿಸಿದೆ. (ಕಡತ ಚಿತ್ರ)
(3 / 7)
ಹಿಂದಿನ ಮಾರ್ಗಸೂಚಿಗಳಲ್ಲಿ ಕಂಡುಬರುವ ಅನೇಕ ಸಂಕೀರ್ಣತೆಗಳನ್ನು ತೆಗೆದುಹಾಕುವ ಮೂಲಕ ಪರಿಷ್ಕೃತ ಮಾರ್ಗಸೂಚಿಗಳು ಒಟ್ಟು ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ತೆರಿಗೆದಾರರಿಗೆ ಹೆಚ್ಚು ಸುಲಭವಾಗಿ ವ್ಯವಸ್ಥೆಯ ಸೌಲಭ್ಯಗಳು ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿವೆ ಎಂದು ಹಣಕಾಸು ಸಚಿವಾಲಯ ವಿವರಿಸಿದೆ. (ಸಾಂಕೇತಿಕ ಚಿತ್ರ)
(4 / 7)
ಹೊಸ ಮಾರ್ಗಸೂಚಿಯಲ್ಲಿ ಹಳೆಯ ಅಪರಾಧಗಳ ವರ್ಗೀಕರಣ ಇಲ್ಲವಾಗಿದೆ. ಇದು ತೆರಿಗೆದಾರರಿಗೆ ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಇದಲ್ಲದೆ ವ್ಯಕ್ತಿ ಅಥವಾ ಸಂಸ್ಥೆ ಎಷ್ಟು ಸಲ ಬೇಕಾದರೂ ತೆರಿಗೆ ಕಾಂಪೌಂಡಿಂಗ್ ವಿಚಾರವಾಗಿ ಅರ್ಜಿ ಸಲ್ಲಿಸಬಹುದು. ಅದಕ್ಕೆ ಮಿತಿ ಇಲ್ಲ, (ಸಾಂಕೇತಿಕ ಚಿತ್ರ)
(5 / 7)
ಪರಿಷ್ಕೃತ ಮಾರ್ಗಸೂಚಿಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 275A ಮತ್ತು 276B ಅಡಿಯಲ್ಲಿ ಅಪರಾಧಗಳನ್ನು ಸಂಯೋಜಿಸಲು ಸಹ ಅನುಮತಿಸುತ್ತದೆ. ಈ ಹಿಂದೆ, ದೂರು ಸಲ್ಲಿಸಿದ ನಂತರ ಕಾಂಪೌಂಡಿಂಗ್ ಅರ್ಜಿಗಳನ್ನು ಸಲ್ಲಿಸಲು 36-ತಿಂಗಳ ಕಾಲಮಿತಿ ಇತ್ತು, ಆದರೆ ಈಗ ಈ ನಿರ್ಬಂಧವನ್ನು ತೆಗೆದುಹಾಕಲಾಗಿದೆ. (ಸಾಂಕೇತಿಕ ಚಿತ್ರ)
(6 / 7)
ಕಂಪನಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳನ್ನು (HUFs) ಗಮನದಲ್ಲಿರಿಸಿಕೊಂಡು ಈ ಹೊಸ ಪರಿಷ್ಕರಣೆ ಮಾಡಲಾಗಿದೆ. ಇದರಂತೆ ಈಗ ಪ್ರಮುಖ ಆರೋಪಿಯು ಕಾಂಪೌಂಡಿಂಗ್ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಬದಲಾಗಿ, ಮುಖ್ಯ ಆರೋಪಿ ಮತ್ತು ಯಾವುದೇ ಸಹ-ಆರೋಪಿಗಳ ಅಪರಾಧಗಳನ್ನು ಮುಖ್ಯ ಆರೋಪಿ ಅಥವಾ ಯಾವುದೇ ಸಹ-ಆರೋಪಿಗಳಿಂದ ಸಂಬಂಧಿತ ಕಾಂಪೌಂಡಿಂಗ್ ಶುಲ್ಕವನ್ನು ಪಾವತಿಸಿದ ನಂತರ ಸಂಯೋಜಿಸಬಹುದು. (ಸಾಂಕೇತಿಕ ಚಿತ್ರ)
ಇತರ ಗ್ಯಾಲರಿಗಳು