ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರೆಗೆ ಹರಿದು ಬಂದ ಜನ ಸಾಗರ, ಬೇಡಗಂಪಣ ಬಾಲೆಯರ ಸೇವೆಯ ಹಾಲರವಿ ಉತ್ಸವದಲ್ಲಿ ಉಘೇ ಎಂದ ಭಕ್ತ ಗಣ
- ಕರ್ನಾಟಕದ ಗಡಿ ಭಾಗದಲ್ಲಿರುವ ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಂಗವಾಗಿ ಹಾಲರವಿ ಉತ್ಸವ ವಿಶೇಷ. ಬೇಡಗಂಪಣ ಸಮುದಾಯದ ಬಾಲೆಯರು ಮಾದಪ್ಪನಿಗೆ ಜಲವನ್ನು ಹೊತ್ತು ತಂದು ಅರ್ಪಿಸುವುದು ಸಂಪ್ರದಾಯ. ಇದರ ಚಿತ್ರ ನೋಟ ಇಲ್ಲಿದೆ.
- ಕರ್ನಾಟಕದ ಗಡಿ ಭಾಗದಲ್ಲಿರುವ ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಂಗವಾಗಿ ಹಾಲರವಿ ಉತ್ಸವ ವಿಶೇಷ. ಬೇಡಗಂಪಣ ಸಮುದಾಯದ ಬಾಲೆಯರು ಮಾದಪ್ಪನಿಗೆ ಜಲವನ್ನು ಹೊತ್ತು ತಂದು ಅರ್ಪಿಸುವುದು ಸಂಪ್ರದಾಯ. ಇದರ ಚಿತ್ರ ನೋಟ ಇಲ್ಲಿದೆ.
(1 / 6)
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಅಂಗವಾಗಿ ಹಾಲರವಿ ಉತ್ಸವ ನಡೆಯಿತು.
(2 / 6)
ದೀಪಾವಳಿ ವೇಳೆ ಬೆಟ್ಟದಲ್ಲಿ ಆಚರಿಸುವ ಹಾಲರವಿ ಉತ್ಸವ ವಿಶೇಷವಾದದ್ದು. ಬೇಡ ಗಂಪಣ ಸಮುದಾಯದ ಬಾಲೆಯರು ಇದರಲ್ಲಿ ಭಾಗಿಯಾಗುತ್ತಾರೆಬೇಡಗಂಪಣ ಸಮುದಾಯದ ಬಾಲೆಯರು ದೀಪಾವಳಿ ಉಪವಾಸ ಇರುತ್ತಾರೆ. ನಂತರ ಬೆಟ್ಟಕ್ಕೆ ಆಗಮಿಸಿ ಹಳ್ಳಕ್ಕೆ ತೆರಳಿ ಹಾಲುಹಳ್ಳದ ನೀರನ್ನು ತರುತ್ತಾರೆ.ಮಂಗಳವಾದ್ಯದೊಂದಿಗೆ ಬರುವ ಬಾಲೆಯರನ್ನು ದೇಗುಲಕ್ಕೆ ಸ್ವಾಗತಿಸಲಾಗುತ್ತದೆ.
(3 / 6)
ಬೇಡಗಂಪಣ ಸಮುದಾಯದ ಬಾಲೆಯರು ಬೆಟ್ಟಕ್ಕೆ ಬಂದು ಇಲ್ಲಿ ಒಂದು ಸುತ್ತು ಹಾಕು ಬಂದು ತಂದ ಜಲವನ್ನು ದೇಗುಲಕ್ಕೆ ಅರ್ಪಿಸಿ ನಂತರ ತೀರ್ಥ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ.
(4 / 6)
ಹಾಲರವಿ ಉತ್ಸವದಲ್ಲಿ ಬೇಡಗಂಪಣ ಸಮುದಾಯದವರ ಜತೆಗೆ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಭಾಗಿಯಾಗುತ್ತಾರೆ. ಹಾಲು ಹಳ್ಳದ ತೀರ್ಥವನ್ನು ಮನೆಗೆ ಕೊಂಡೊಯ್ಯುತ್ತಾರೆ.
(5 / 6)
ಇಲ್ಲಿಂದ ತೀರ್ಥವನ್ನು ತೆಗೆದುಕೊಂಡು ಹೋಗಿ ಮನೆಯವರೆಲ್ಲರೂ ಸೇವಿಸಿದರೆ ದೃಷ್ಟಿ ದೋಷ ಸಹಿತ ಏನೇ ಸಮಸ್ಯೆ ಇದ್ದರೂ ಪರಿಹಾರ ಸಿಗಬಹುದು ಎನ್ನುವುದು ಭಕ್ತಗಣದ ನಂಬಿಕೆ.
ಇತರ ಗ್ಯಾಲರಿಗಳು