‌IPL 2024: ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 10 ಆಟಗಾರರು; ಅಗ್ರಪಂಕ್ತಿಯಲ್ಲಿ ಎಸ್‌ಆರ್‌ಎಚ್‌-ಆರ್‌ಸಿಬಿ ದಾಂಡಿಗರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ‌Ipl 2024: ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 10 ಆಟಗಾರರು; ಅಗ್ರಪಂಕ್ತಿಯಲ್ಲಿ ಎಸ್‌ಆರ್‌ಎಚ್‌-ಆರ್‌ಸಿಬಿ ದಾಂಡಿಗರು

‌IPL 2024: ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 10 ಆಟಗಾರರು; ಅಗ್ರಪಂಕ್ತಿಯಲ್ಲಿ ಎಸ್‌ಆರ್‌ಎಚ್‌-ಆರ್‌ಸಿಬಿ ದಾಂಡಿಗರು

  • Most sixes in IPL 2024: ಐಪಿಎಲ್ 2024ರಲ್ಲಿ ದಾಖಲೆಯ ಸಿಕ್ಸರ್‌ಗಳು ಸಿಡಿದಿವೆ. ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪೈಕಿ ಎಸ್‌ಆರ್‌ಎಚ್‌ ಹಾಗೂ ಆರ್‌ಸಿಬಿ ಆಟಗಾರರು ಮೇಲುಗೈ ಸಾಧಿಸಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ 17ನೇ ಆವೃತ್ತಿಯಲ್ಲಿ ಅಧಿಕ ಸಿಕ್ಸರ್‌ ಸಿಡಿಸಿದ ಟಾಪ್ 10 ಬ್ಯಾಟರ್‌ಗಳ ಪಟ್ಟಿಯನ್ನು ನೋಡೋಣ.

ಐಪಿಎಲ್ 2024ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ್ದಾರೆ. ಈ ವರ್ಷ 16 ಇನ್ನಿಂಗ್ಸ್‌ ಆಡಿರುವ ಅವರು ಒಟ್ಟು 42 ಸಿಕ್ಸರ್‌ ಬಾರಿಸಿದ್ದಾರೆ. ಆ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಅಭಿಷೇಕ್ ಶರ್ಮಾ ಈ ವರ್ಷ 484 ರನ್ ಗಳಿಸಿದ್ದಾರೆ.
icon

(1 / 10)

ಐಪಿಎಲ್ 2024ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ್ದಾರೆ. ಈ ವರ್ಷ 16 ಇನ್ನಿಂಗ್ಸ್‌ ಆಡಿರುವ ಅವರು ಒಟ್ಟು 42 ಸಿಕ್ಸರ್‌ ಬಾರಿಸಿದ್ದಾರೆ. ಆ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಅಭಿಷೇಕ್ ಶರ್ಮಾ ಈ ವರ್ಷ 484 ರನ್ ಗಳಿಸಿದ್ದಾರೆ.(PTI)

ಈ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಜೊತೆಗೆ ಅನ್ರಿಚ್ ಕ್ಲಾಸೆನ್ ಎರಡನೇ ಸ್ಥಾನದಲ್ಲಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಸ್ಟಾರ್ ಈ ವರ್ಷ 15 ಇನ್ನಿಂಗ್ಸ್‌ ಆಡಿ 38 ಸಿಕ್ಸರ್‌ ಬಾರಿಸಿದ್ದಾರೆ. ಅವರು ಈ ಬಾರಿ 479 ರನ್ ಗಳಿಸಿದ್ದಾರೆ.
icon

(2 / 10)

ಈ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಜೊತೆಗೆ ಅನ್ರಿಚ್ ಕ್ಲಾಸೆನ್ ಎರಡನೇ ಸ್ಥಾನದಲ್ಲಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಸ್ಟಾರ್ ಈ ವರ್ಷ 15 ಇನ್ನಿಂಗ್ಸ್‌ ಆಡಿ 38 ಸಿಕ್ಸರ್‌ ಬಾರಿಸಿದ್ದಾರೆ. ಅವರು ಈ ಬಾರಿ 479 ರನ್ ಗಳಿಸಿದ್ದಾರೆ.(AP)

ಐಪಿಎಲ್ 2024ರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರೆಂಜ್‌ ಕ್ಯಾಪ್‌ ವಿಜೇತ ಆಟಗಾರ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆರ್‌ಸಿಬಿ ಸ್ಟಾರ್ 15 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 38 ಸಿಕ್ಸರ್ ಸಿಡಿಸಿದ್ದಾರೆ. ವಿರಾಟ್ 741 ರನ್ ಗಳಿಸಿದ್ದಾರೆ.
icon

(3 / 10)

ಐಪಿಎಲ್ 2024ರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರೆಂಜ್‌ ಕ್ಯಾಪ್‌ ವಿಜೇತ ಆಟಗಾರ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆರ್‌ಸಿಬಿ ಸ್ಟಾರ್ 15 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 38 ಸಿಕ್ಸರ್ ಸಿಡಿಸಿದ್ದಾರೆ. ವಿರಾಟ್ 741 ರನ್ ಗಳಿಸಿದ್ದಾರೆ.(AFP)

ನಿಕೋಲಸ್ ಪೂರನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಆಟಗಾರ 14 ಇನ್ನಿಂಗ್ಸ್‌ ಆಡಿ ಒಟ್ಟು 36 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಐಪಿಎಲ್ 2024ರಲ್ಲಿ ಅವರು ಒಟ್ಟು 499 ರನ್ ಗಳಿಸಿದ್ದಾರೆ.
icon

(4 / 10)

ನಿಕೋಲಸ್ ಪೂರನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಆಟಗಾರ 14 ಇನ್ನಿಂಗ್ಸ್‌ ಆಡಿ ಒಟ್ಟು 36 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಐಪಿಎಲ್ 2024ರಲ್ಲಿ ಅವರು ಒಟ್ಟು 499 ರನ್ ಗಳಿಸಿದ್ದಾರೆ.(AFP)

ಆರ್‌ಸಿಬಿಯ ರಜತ್ ಪಾಟೀದಾರ್ ಐದನೇ ಸ್ಥಾನದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಈ ವರ್ಷ ಐಪಿಎಲ್‌ನ 13 ಇನ್ನಿಂಗ್ಸ್‌ ಆಡಿ 33 ಸಿಕ್ಸರ್‌ ಬಾರಿಸಿದ್ದಾರೆ. ಅವರು ಒಟ್ಟು 395 ರನ್ ಗಳಿಸಿದ್ದಾರೆ.
icon

(5 / 10)

ಆರ್‌ಸಿಬಿಯ ರಜತ್ ಪಾಟೀದಾರ್ ಐದನೇ ಸ್ಥಾನದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಈ ವರ್ಷ ಐಪಿಎಲ್‌ನ 13 ಇನ್ನಿಂಗ್ಸ್‌ ಆಡಿ 33 ಸಿಕ್ಸರ್‌ ಬಾರಿಸಿದ್ದಾರೆ. ಅವರು ಒಟ್ಟು 395 ರನ್ ಗಳಿಸಿದ್ದಾರೆ.(AP)

ಐಪಿಎಲ್ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸುನಿಲ್ ನರೈನ್ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅವರು 33 ಸಿಕ್ಸರ್‌ ಬಾರಿಸಿದ್ದಾರೆ. ಒಟ್ಟು 488 ರನ್ ಗಳಿಸಿದ್ದಾರೆ.
icon

(6 / 10)

ಐಪಿಎಲ್ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸುನಿಲ್ ನರೈನ್ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅವರು 33 ಸಿಕ್ಸರ್‌ ಬಾರಿಸಿದ್ದಾರೆ. ಒಟ್ಟು 488 ರನ್ ಗಳಿಸಿದ್ದಾರೆ.(AFP)

ರಾಜಸ್ಥಾನ್‌ ರಾಯಲ್ಸ್‌ ಬ್ಯಾಟರ್ ರಿಯಾನ್ ಪರಾಗ್ 33 ಸಿಕ್ಸರ್ ಬಾರಿಸಿದ್ದಾರೆ. ಇವರು ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಒಟ್ಟು 573 ರನ್ ಗಳಿಸಿದ್ದಾರೆ.
icon

(7 / 10)

ರಾಜಸ್ಥಾನ್‌ ರಾಯಲ್ಸ್‌ ಬ್ಯಾಟರ್ ರಿಯಾನ್ ಪರಾಗ್ 33 ಸಿಕ್ಸರ್ ಬಾರಿಸಿದ್ದಾರೆ. ಇವರು ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಒಟ್ಟು 573 ರನ್ ಗಳಿಸಿದ್ದಾರೆ.(AP)

ಪಟ್ಟಿಯಲ್ಲಿ ಟ್ರಾವಿಸ್ ಹೆಡ್ 8ನೇ ಸ್ಥಾನದಲ್ಲಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕ ಬ್ಯಾಟರ್‌ ಈ ವರ್ಷದ ಐಪಿಎಲ್‌ನ 15 ಇನ್ನಿಂಗ್ಸ್‌ಗಳಲ್ಲಿ 32 ಸಿಕ್ಸರ್ ಬಾರಿಸಿದ್ದಾರೆ. ಒಟ್ಟು 567 ರನ್ ಗಳಿಸಿದ್ದಾರೆ.
icon

(8 / 10)

ಪಟ್ಟಿಯಲ್ಲಿ ಟ್ರಾವಿಸ್ ಹೆಡ್ 8ನೇ ಸ್ಥಾನದಲ್ಲಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕ ಬ್ಯಾಟರ್‌ ಈ ವರ್ಷದ ಐಪಿಎಲ್‌ನ 15 ಇನ್ನಿಂಗ್ಸ್‌ಗಳಲ್ಲಿ 32 ಸಿಕ್ಸರ್ ಬಾರಿಸಿದ್ದಾರೆ. ಒಟ್ಟು 567 ರನ್ ಗಳಿಸಿದ್ದಾರೆ.(AFP)

ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ ಜ್ಯಾಕ್ ಫ್ರೇಸರ್ ಮೆಕ್ಗುರ್ಕ್ 9ನೇ ಸ್ಥಾನದಲ್ಲಿದ್ದಾರೆ. ಆಸೀಸ್ ಸ್ಟಾರ್ 9 ಇನ್ನಿಂಗ್ಸ್‌ ಮಾತ್ರವೇ ಆಡಿ 28 ಸಿಕ್ಸರ್ ಬಾರಿಸಿದ್ದಾರೆ.
icon

(9 / 10)

ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ ಜ್ಯಾಕ್ ಫ್ರೇಸರ್ ಮೆಕ್ಗುರ್ಕ್ 9ನೇ ಸ್ಥಾನದಲ್ಲಿದ್ದಾರೆ. ಆಸೀಸ್ ಸ್ಟಾರ್ 9 ಇನ್ನಿಂಗ್ಸ್‌ ಮಾತ್ರವೇ ಆಡಿ 28 ಸಿಕ್ಸರ್ ಬಾರಿಸಿದ್ದಾರೆ.(AP)

ಈ ಪಟ್ಟಿಯಲ್ಲಿ ಶಿವಂ ದುಬೆ 10ನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಆಲ್ರೌಂಡರ್ 14 ಇನ್ನಿಂಗ್ಸ್‌ ಆಡಿ 28 ಸಿಕ್ಸರ್ ಬಾರಿಸಿದ್ದಾರೆ. ಅವರು ಒಟ್ಟು 396 ರನ್ ಗಳಿಸಿದ್ದಾರೆ.
icon

(10 / 10)

ಈ ಪಟ್ಟಿಯಲ್ಲಿ ಶಿವಂ ದುಬೆ 10ನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಆಲ್ರೌಂಡರ್ 14 ಇನ್ನಿಂಗ್ಸ್‌ ಆಡಿ 28 ಸಿಕ್ಸರ್ ಬಾರಿಸಿದ್ದಾರೆ. ಅವರು ಒಟ್ಟು 396 ರನ್ ಗಳಿಸಿದ್ದಾರೆ.(PTI)


ಇತರ ಗ್ಯಾಲರಿಗಳು