ಜಿಂಬಾಬ್ವೆ ವಿರುದ್ಧ ಮಿಂಚಿದ್ದ ಭಾರತದ ಐವರು ಆಟಗಾರರಿಗೆ ಶ್ರೀಲಂಕಾ ಸರಣಿಗಿಲ್ಲ ಸ್ಥಾನ!
- India vs Sri Lanka: ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ಎದುರಿನ ಟಿ20ಐ ಸರಣಿಯಲ್ಲಿ ಮಿಂಚಿದ ಭಾರತದ ಆಟಗಾರರಿಗೆ ಜುಲೈ 27 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧ ಟಿ20ಐ ಸರಣಿಗೆ ಆಯ್ಕೆಯಾಗಿಲ್ಲ. ಅವರ ಪಟ್ಟಿ ಇಲ್ಲಿದೆ.
- India vs Sri Lanka: ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ಎದುರಿನ ಟಿ20ಐ ಸರಣಿಯಲ್ಲಿ ಮಿಂಚಿದ ಭಾರತದ ಆಟಗಾರರಿಗೆ ಜುಲೈ 27 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧ ಟಿ20ಐ ಸರಣಿಗೆ ಆಯ್ಕೆಯಾಗಿಲ್ಲ. ಅವರ ಪಟ್ಟಿ ಇಲ್ಲಿದೆ.
(1 / 6)
ಜುಲೈ 27ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ ಜಿಂಬಾಬ್ವೆ ಎದುರಿನ ಟಿ20ಐ ಸರಣಿಯಲ್ಲಿ ಮಿಂಚಿದ ಐವರಿಗೆ ಅವಕಾಶ ಸಿಕ್ಕಿಲ್ಲ.
(2 / 6)
ಋತುರಾಜ್ ಗಾಯಕ್ವಾಡ್: ಜಿಂಬಾಬ್ವೆ ನಾಡಿನಲ್ಲಿ ಋತುರಾಜ್ ಗಾಯಕ್ವಾಡ್ ಬ್ಯಾಟ್ ಮೂಲಕ ಉತ್ತಮ ಸ್ಕೋರ್ ಮಾಡಿದರು. ಕಣಕ್ಕಿಳಿದ 4 ಪಂದ್ಯಗಳ 3 ಇನ್ನಿಂಗ್ಸ್ಗಳಲ್ಲಿ ಮಾತ್ರ ಬ್ಯಾಟಿಂಗ್ ಮಾಡಿದ್ದರು. 66.50ರ ಬ್ಯಾಟಿಂಗ್ ಸರಾಸರಿಯಲ್ಲಿ 133 ರನ್ ಚಚ್ಚಿದ್ದರು. ಆದರೂ ಅವಕಾಶ ವಂಚಿತರಾಗಿದ್ದಾರೆ.(BCCI-X)
(3 / 6)
ಅಭಿಷೇಕ್ ಶರ್ಮಾ: ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ, ತನ್ನ ಡೆಬ್ಯೂ ಪಂದ್ಯದಲ್ಲಿ ಡಕೌಟ್ ಆದರೂ ಎರಡನೇ ಪಂದ್ಯದಲ್ಲಿ ಶತಕ ಸಿಡಿಸಿದರು. ಬಳಿಕ ಮೂರು ಪಂದ್ಯಗಳಿಂದ ಗಳಿಸಿದ್ದು 24 ರನ್ ಮಾತ್ರ. ಈ ಸರಣಿಯಲ್ಲಿ 124 ರನ್ ಗಳಿಸಿದ್ದ ಅಭಿಷೇಕ್, ಶ್ರೀಲಂಕಾ ಸರಣಿಗೂ ಅವಕಾಶದ ನಿರೀಕ್ಷೆಯಲ್ಲಿದ್ದರು. ಆದರೆ, ಸಾಧ್ಯವಾಗಿಲ್ಲ.(AFP)
(4 / 6)
ಆವೇಶ್ ಖಾನ್: ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆವೇಶ್ ಖಾನ್ ಮುಂದಿನ ಸರಣಿಗೆ ಅವಕಾಶ ಪಡೆಯಲು ವಿಫಲರಾಗಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ 3 ವಿಕೆಟ್ ಪಡೆದು 13.83 ಬೌಲಿಂಗ್ ಸರಾಸರಿ ಹೊಂದಿದ್ದರು. ಮಾಜಿ ಕ್ರಿಕೆಟರ್ಗಳು ಆವೇಶ್ಗೆ ಅವಕಾಶ ಕೊಡಬೇಕಿತ್ತು ಎಂದು ಕೇಳುತ್ತಿದ್ದಾರೆ.(AFP)
(5 / 6)
ಮುಕೇಶ್ ಕುಮಾರ್: ಜಿಂಬಾಬ್ವೆ ಬ್ಯಾಟರ್ಗಳಿಗೆ ಕಂಟಕವಾಗಿದ್ದ ಮುಕೇಶ್ಗೂ ಲಂಕಾ ಪ್ರವಾಸಕ್ಕೆ ಆಯ್ಕೆಯಾಗಿಲ್ಲ. ಇದು ಎಲ್ಲರನ್ನೂ ಅಚ್ಚರಿಗೊಳಿಸಿದೆ. 3 ಪಂದ್ಯಗಳಲ್ಲಿ 8 ವಿಕೆಟ್ ಕಿತ್ತಿದ್ದ ಮುಕೇಶ್ ಬೌಲಿಂಗ್ ಸರಾಸರಿ 9.38 ಇತ್ತು.(AP)
ಇತರ ಗ್ಯಾಲರಿಗಳು