ಭಾರತ ವಿರುದ್ಧ ಅಫ್ಘಾನಿಸ್ತಾನದ ಎಲ್ಲಾ 10 ಬ್ಯಾಟರ್‌ಗಳು ಕ್ಯಾಚ್ ಔಟ್; ಟಿ20 ವಿಶ್ವಕಪ್‌ನಲ್ಲಿ ಎರಡನೇ ನಿದರ್ಶನ
- ಗುರುವಾರ ನಡೆದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಎಲ್ಲಾ 10 ಬ್ಯಾಟರ್‌ಗಳು ಬ್ಯಾಟರ್‌ಗಳು ಕೂಡಾ ಕ್ಯಾಚ್ ನೀಡಿ ಔಟಾದರು. ಭಾರತದ ಬೌಲರ್‌ಗಳು ಎದುರಾಳಿ ತಂಡದ ಎಲ್ಲಾ ಆಟಗಾರರ ಕ್ಯಾಚ್ ಪಡೆದು ವಿಕೆಟ್ ಕಬಳಿಸಿದ್ದು ವಿಶೇಷ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇಂಥ ನಿದರ್ಶನ ನಿರ್ಮಾಣವಾಗಿದ್ದು ಕೇವಲ ಎರಡನೇ ಬಾರಿ.
- ಗುರುವಾರ ನಡೆದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಎಲ್ಲಾ 10 ಬ್ಯಾಟರ್‌ಗಳು ಬ್ಯಾಟರ್‌ಗಳು ಕೂಡಾ ಕ್ಯಾಚ್ ನೀಡಿ ಔಟಾದರು. ಭಾರತದ ಬೌಲರ್‌ಗಳು ಎದುರಾಳಿ ತಂಡದ ಎಲ್ಲಾ ಆಟಗಾರರ ಕ್ಯಾಚ್ ಪಡೆದು ವಿಕೆಟ್ ಕಬಳಿಸಿದ್ದು ವಿಶೇಷ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇಂಥ ನಿದರ್ಶನ ನಿರ್ಮಾಣವಾಗಿದ್ದು ಕೇವಲ ಎರಡನೇ ಬಾರಿ.
(1 / 5)
ಅಫ್ಘಾನಿಸ್ತಾನ ವಿರುದ್ಧ ಟಿ20 ಸ್ವರೂಪದಲ್ಲಿ ಭಾರತ ಶೇ.100ರಷ್ಟು ಗೆಲುವಿನ ಓಟವನ್ನು ಮುಂದುವರೆಸಿದೆ. ಗುರುವಾರ ನಡೆದ ಟಿ20 ವಿಶ್ವಕಪ್ ಸೂಪರ್ ಎಂಟರ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ಅಫ್ಘಾನಿಸ್ತಾನವನ್ನು ಸೋಲಿಸಿತು. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಏಕಪಕ್ಷೀಯ ಗೆಲುವು ಸಾಧಿಸಿತು. 47 ರನ್‌ಗಳಿಂದ ಗೆದ್ದು ರನ್‌ರೇಟ್ ಹೆಚ್ಚಿಸಿಕೊಂಡಿತು.(PTI)
(2 / 5)
ಗೆಲ್ಲಲು 182 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನದ ಬ್ಯಾಟರ್‌ಗಳು ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಹೋದರು. ರಹಮಾನುಲ್ಲಾ ಗುರ್ಬಾಜ್ (11), ಹಜರತುಲ್ಲಾ ಝಜೈ (2) ಮತ್ತು ಇಬ್ರಾಹಿಂ ಜದ್ರನ್ (8) ಬೇಗನೆ ವಿಕೆಟ್ ಒಪ್ಪಿಸಿದರು. ಜಸ್ಪ್ರೀತ್ ಬುಮ್ರಾ ಎರಡನೇ ಓವರ್‌ನಲ್ಲಿ ಮೊದಲ ವಿಕೆಟ್ ಪಡೆದರು. ನಾಲ್ಕನೇ ಓವರ್‌ನಲ್ಲಿ ಅಕ್ಷರ್ ಯಶಸ್ವಿಯಾದರು. ಐದನೇ ಓವರ್‌ನಲ್ಲಿ ಮತ್ತೊಮ್ಮೆ ಬುಮ್ರಾ ಇನ್ನಿಂಗ್ಸ್‌ನ ಮೂರನೇ ವಿಕೆಟ್ ಪಡೆದರು.(PTI)
(3 / 5)
ಅಫ್ಘಾನಿಸ್ತಾನ 10 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 66 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂದೆ ಗೆಲುವಿಗೆ 10 ಓವರ್‌ಗಳಲ್ಲಿ 116 ರನ್‌ಗಳ ಅವಶ್ಯಕತೆಯಿತ್ತು. ಈ ವೇಳೆ ನೈಬ್ (17) ಮತ್ತು ಒಮರ್ಜೈ (26) ರನ್ ಗಳಿಸಿದರು.(PTI)
(4 / 5)
ಅಂತಿಮವಾಗಿ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 134 ರನ್ ಗಳಿಸಿ ಎಲ್ಲಾ 10 ವಿಕೆಟ್ ಕಳೆದುಕೊಂಡಿತು. ಕುತೂಹಲಕಾರಿ ಸಂಗತಿಯೆಂದರೆ, ಈ ಎಲ್ಲಾ 10 ಬ್ಯಾಟರ್‌ಗಳು ಕ್ಯಾಚ್ ನೀಡಿಯೇ ಔಟಾಗಿದ್ದು. ಭಾರತದ ಬೌಲರ್‌ಗಳು ಬೇರೆ ರೀತಿಯಲ್ಲಿ ವಿಕೆಟ್ ಪಡೆಯಲಿಲ್ಲ. ಬೌಲ್ಡ್, ಎಲ್‌ಬಿಡಬ್ಲ್ಯೂ, ಸ್ಟಂಪಿಂಗ್ ಆಗಿಲ್ಲ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಎಲ್ಲಾ ಹತ್ತು ಬ್ಯಾಟರ್‌ಗಳು ಕ್ಯಾಚ್ ಔಟ್ ಆಗಿದ್ದು ಇದು ಕೇವಲ ಎರಡನೇ ಬಾರಿ.(ANI)
ಇತರ ಗ್ಯಾಲರಿಗಳು