Kohli Date With Ritika: ನಿಮಗಿದು ಗೊತ್ತಾ? ರೋಹಿತ್​ ಶರ್ಮಾ​ ಪತ್ನಿ ಜೊತೆ ಕೊಹ್ಲಿ ಡೇಟಿಂಗ್; ವಿರಾಟ್ ಮ್ಯಾನೇಜರ್​ ಆಗಿದ್ದ ರಿತಿಕಾ!-cricket news former skipper virat kohli s date with team india captain rohit sharma wife ritika sajdeh in 2013 prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kohli Date With Ritika: ನಿಮಗಿದು ಗೊತ್ತಾ? ರೋಹಿತ್​ ಶರ್ಮಾ​ ಪತ್ನಿ ಜೊತೆ ಕೊಹ್ಲಿ ಡೇಟಿಂಗ್; ವಿರಾಟ್ ಮ್ಯಾನೇಜರ್​ ಆಗಿದ್ದ ರಿತಿಕಾ!

Kohli Date With Ritika: ನಿಮಗಿದು ಗೊತ್ತಾ? ರೋಹಿತ್​ ಶರ್ಮಾ​ ಪತ್ನಿ ಜೊತೆ ಕೊಹ್ಲಿ ಡೇಟಿಂಗ್; ವಿರಾಟ್ ಮ್ಯಾನೇಜರ್​ ಆಗಿದ್ದ ರಿತಿಕಾ!

  • ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ 16ನೇ ಆವೃತ್ತಿಯ ಐಪಿಎಲ್​​ನಲ್ಲಿ ನಿರತರಾಗಿದ್ದಾರೆ. ಆದರೆ ರೋಹಿತ್​ ಅವರ ಪತ್ನಿ ರಿತಿಕಾ ಅವರೊಂದಿಗೆ, ಕೊಹ್ಲಿ ಡೇಟಿಂಗ್​ ನಡೆಸಿದ್ದರು ಎಂಬುದು ಯಾರಿಗಾದರೂ ಗೊತ್ತಾ? ಯಾವಾಗ? ಎಲ್ಲಿ ಎಂಬುದನ್ನು ಈ ಮುಂದೆ ನೋಡೋಣ.

ನಾಯಕ ರೋಹಿತ್​ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್​ ಕೊಹ್ಲಿ, ಟೀಮ್​ ಇಂಡಿಯಾದ ಎರಡು ಪಿಲ್ಲರ್​ಗಳಿದ್ದಂತೆ. ದಾಖಲೆಗಳ ಮೇಲೆ ದಾಖಲೆಗಳ ಬರೆಯುವ ಸರದಾರರು. ಭಾರತೀಯ ಕ್ರಿಕೆಟ್​ಗೆ ಅನನ್ಯ ಕೊಡುಗೆ ನೀಡುತ್ತಿರುವ ಆಧುನಿಕ ಕ್ರಿಕೆಟ್​ನ ದಿಗ್ಗಜರು.
icon

(1 / 7)

ರೋಹಿತ್​ ಶರ್ಮಾ ಮತ್ತು ಪತ್ನಿ ರಿತಿಕಾ ಸಜ್ದೇಹ್ ಅವರು ಭಾರತದ ಅತ್ಯಂತ ಸುಂದರ ಜೋಡಿಗಳಲ್ಲಿ ಒಂದು. ಈ ಜೋಡಿ 2015ರ ಡಿಸೆಂಬರ್​ 13ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಇವರಿಗೆ ಮುದ್ದಾದ ಮಗಳೂ ಇದ್ದಾಳೆ. ಹೆಸರು ಸಮೈರಾ ಶರ್ಮಾ.
icon

(2 / 7)

ಅದೇ ರೀತಿ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಅವರು ಮೋಸ್ಟ್​ ಬ್ಯೂಟಿಫುಲ್​ ಕಪಲ್ಸ್​. ಈ ಜೋಡಿ 2017ರ ಡಿಸೆಂಬರ್​​ 11ರಂದು ವಿವಾಹವಾದರು. ಈ ಜೋಡಿಗೂ ಮುದ್ದಾದ ಮಗಳಿದ್ದಾಳೆ. ಹೆಸರು ವಮಿಕಾ ಕೊಹ್ಲಿ.
icon

(3 / 7)

ಆದರೆ ಕೊಹ್ಲಿ ಮದುವೆ ಆಗುವುದಕ್ಕೂ ಮುನ್ನ 6 ಮಂದಿಯ ಜೊತೆ ಡೇಟಿಂಗ್​ ನಡೆಸಿದ್ದರು ಎಂದು ಈ ಹಿಂದೆ ವರದಿಯಾಗಿತ್ತು. ಅದರಲ್ಲಿ ಒಬ್ಬರು ರೋಹಿತ್​ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್. ರಿತಿಕಾ ಅವರು ಕೊಹ್ಲಿ ಸ್ಪೋರ್ಟ್ಸ್ ಮ್ಯಾನೇಜರ್ ಆಗಿ ಐಪಿಎಲ್ 2010 ರಿಂದ ಕಾರ್ಯ ನಿರ್ವಹಿಸುತ್ತಿದ್ದರು. 
icon

(4 / 7)

ಇಂಡಿಯನ್ ಎಕ್ಸ್‌ಪ್ರೆಸ್‌ನ ಲೇಖನದ ಪ್ರಕಾರ, ರಿತಿಕಾ ಸಜ್ದೇಹ್ 2013 ರಲ್ಲಿ ವಿರಾಟ್ ಕೊಹ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಆ ವರ್ಷ ಜಿಂಬಾಬ್ವೆಗೆ ಭೇಟಿ ನೀಡಿದ ನಂತರ ಕೊಹ್ಲಿ ಭಾರತಕ್ಕೆ ಹಿಂತಿರುಗಿದಾಗ ರಿತಿಕಾ ಜೊತೆ ಕಾಣಿಸಿಕೊಂಡಿದ್ದರು. 
icon

(5 / 7)

ಒಂದು ಬಾರಿ ಸಿನಿಮಾಗೆ ಹೋಗಿದ್ದಾಗ ಛಾಯಾಗ್ರಾಹಕರ ಕಣ್ಣಿಗೆ ಬಿದಿದ್ದ ಈ ಜೋಡಿ, ಕ್ಯಾಮೆರಾ ಕಣ್ತಪ್ಪಿಸಿ ಹೋಗಿದ್ದರು. ಅದಕ್ಕಾಗೇ ತಮ್ಮ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದರು. ಕೊನೆಗೆ ನಾವಿಬ್ಬರು ಉತ್ತಮ ಸ್ನೇಹಿತರು ಎಂದಿದ್ದರು ಎಂದು ಗೊಂದಲಗಳಿಗೆ ತೆರೆ ಎಳೆದಿದ್ದರು.
icon

(6 / 7)

ನಂತರ ರೋಹಿತ್​ಗೆ ರಿತಿಕಾ ಕ್ರೀಡಾ ಮ್ಯಾನೇಜರ್ ಆಗಿ ನೇಮಕವಾದರು. ಮ್ಯಾನೇಜರ್ ಆಗಿದ್ದ ರಿತಿಕಾ, ರೋಹಿತ್​ ನಡುವಿನ ಪರಿಚಯ ಸ್ನೇಹಕ್ಕೆ ತಿರುಗಿತು. ಬಳಿಕ ಸ್ನೇಹ ಪರಸ್ಪರ ಪ್ರೀತಿಗೆ ತಿರುಗಿತ್ತು. ಕೊನೆಗೂ ಇಬ್ಬರು ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ವಿವಾಹವಾದರು.
icon

(7 / 7)

ಇತರ ಗ್ಯಾಲರಿಗಳು