2024ರ ಸೀಸನ್ ಬಳಿಕ ಈ ದಿಗ್ಗಜ ಕ್ರಿಕೆಟಿಗರಿಗೆ ಇದೇ ಕೊನೆಯ ಐಪಿಎಲ್​; ಅಗ್ರಸ್ಥಾನದಲ್ಲಿ ಎಂಎಸ್ ಧೋನಿ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2024ರ ಸೀಸನ್ ಬಳಿಕ ಈ ದಿಗ್ಗಜ ಕ್ರಿಕೆಟಿಗರಿಗೆ ಇದೇ ಕೊನೆಯ ಐಪಿಎಲ್​; ಅಗ್ರಸ್ಥಾನದಲ್ಲಿ ಎಂಎಸ್ ಧೋನಿ!

2024ರ ಸೀಸನ್ ಬಳಿಕ ಈ ದಿಗ್ಗಜ ಕ್ರಿಕೆಟಿಗರಿಗೆ ಇದೇ ಕೊನೆಯ ಐಪಿಎಲ್​; ಅಗ್ರಸ್ಥಾನದಲ್ಲಿ ಎಂಎಸ್ ಧೋನಿ!

  • MS Dhoni to Dinesh Karthik: ಎಂಎಸ್ ಧೋನಿ - ದಿನೇಶ್ ಕಾರ್ತಿಕ್ ಸೇರಿದಂತೆ ಪ್ರಮುಖ ಆಟಗಾರರು 2025ರ ಐಪಿಎಲ್​ನಲ್ಲಿ ಆಡುವುದು ಬಹುತೇಕ ಅನುಮಾನ ಎನ್ನಲಾಗಿದೆ. ಅಂತಹ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

2024ರ ಐಪಿಎಲ್​ನಲ್ಲಿ ಹಿರಿಯ ಆಟಗಾರರು, ಕಿರಿಯ ಆಟಗಾರರಿಗೆ ಸಮಾನವಾದ ಪೈಪೋಟಿ ನೀಡುತ್ತಾ ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ. ಎಷ್ಟೇ ಪ್ರದರ್ಶನ ನೀಡುತ್ತಿದ್ದರೂ ಹಲವು ಆಟಗಾರರಿಗೆ ಇದೇ ಕೊನೆಯ ಐಪಿಎಲ್ ಆಗಲಿದೆ. ಅಂತಹ ಆಟಗಾರರ ಪಟ್ಟಿ ಇಲ್ಲಿದೆ.
icon

(1 / 11)

ಎಂಎಸ್ ಧೋನಿ ಪ್ರಸಕ್ತ ಐಪಿಎಲ್​ನಲ್ಲಿ ಅಬ್ಬರಿಸುತ್ತಿದ್ದಾರೆ. ಕೊನೆಯಲ್ಲಿ ಕಣಕ್ಕಿಳಿದು 200+ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟಿಂಗ್ ನಡೆಸುವ ಮೂಲಕ ಎದುರಾಳಿಗಳನ್ನು ನಡುಗಿಸುತ್ತಿರುವ ಸಿಎಸ್​ಕೆ ಮಾಜಿ ನಾಯಕನಿಗೆ ಇದೇ ಕೊನೆಯ ಐಪಿಎಲ್. ಅದಕ್ಕೆ ಸಾಕ್ಷಿ ತನ್ನ ನಾಯಕತ್ವ ತ್ಯಜಿಸಿ ಋತುರಾಜ್​ ಗಾಯಕ್ವಾಡ್​ಗೆ ನೀಡಿರುವುದು. ಐಪಿಎಲ್ ಆರಂಭವಾದಾಗಿನಿಂದ ಸಿಎಸ್​ಕೆ ಪರವೇ ಆಡುತ್ತಿರುವ 43 ವರ್ಷದ ಮಾಹಿ, ಮುಂದಿನ ವರ್ಷದಿಂದ ಶ್ರೀಮಂತ ಲೀಗ್​ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಈವರೆಗೂ 257 ಐಪಿಎಲ್ ಪಂದ್ಯಗಳಲ್ಲಿ 5169 ರನ್ ಬಾರಿಸಿದ್ದು, ಇದರಲ್ಲಿ 24 ಅರ್ಧಶತಕ ಸೇರಿವೆ.
icon

(2 / 11)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರಿಗೆ ಪ್ರಸ್ತುತ 40 ವರ್ಷ. ಪ್ರಸ್ತುತ ಐಪಿಎಲ್​ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿ, ನಂತರ ಮಿಂಚಿದ ಪ್ಲೆಸಿಸ್​ಗೂ ಇದೇ ಕೊನೆಯ ಐಪಿಎಲ್. 2025ರ ಮೆಗಾ ಹರಾಜಿನಲ್ಲಿ ಆರ್​ಸಿಬಿ ಅವರನ್ನು ಕೈಬಿಡುವ ಸಾಧ್ಯತೆ ದಟ್ಟವಾಗಿದೆ. ಫ್ರಾಂಚೈಸಿಗಳು ಯುವಕರ ಮೇಲೆ ಗಮನ ಹರಿಸಿದ ಕಾರಣ ಪ್ಲೆಸಿಸ್​ರನ್ನು ಖರೀದಿ ಮಾಡುವುದು ಕಷ್ಟ. 137 ಐಪಿಎಲ್​ ಪಂದ್ಯಗಳಲ್ಲಿ 4365 ರನ್ ಬಾರಿಸಿದ್ದಾರೆ. 35 ಅರ್ಧಶತಕ ಸಿಡಿಸಿದ್ದಾರೆ. ಆರ್​ಸಿಬಿಗೂ ಮುನ್ನ ಸಿಎಸ್​ಕೆ, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದರು.
icon

(3 / 11)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರಿಗೆ ಪ್ರಸ್ತುತ 40 ವರ್ಷ. ಪ್ರಸ್ತುತ ಐಪಿಎಲ್​ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿ, ನಂತರ ಮಿಂಚಿದ ಪ್ಲೆಸಿಸ್​ಗೂ ಇದೇ ಕೊನೆಯ ಐಪಿಎಲ್. 2025ರ ಮೆಗಾ ಹರಾಜಿನಲ್ಲಿ ಆರ್​ಸಿಬಿ ಅವರನ್ನು ಕೈಬಿಡುವ ಸಾಧ್ಯತೆ ದಟ್ಟವಾಗಿದೆ. ಫ್ರಾಂಚೈಸಿಗಳು ಯುವಕರ ಮೇಲೆ ಗಮನ ಹರಿಸಿದ ಕಾರಣ ಪ್ಲೆಸಿಸ್​ರನ್ನು ಖರೀದಿ ಮಾಡುವುದು ಕಷ್ಟ. 137 ಐಪಿಎಲ್​ ಪಂದ್ಯಗಳಲ್ಲಿ 4365 ರನ್ ಬಾರಿಸಿದ್ದಾರೆ. 35 ಅರ್ಧಶತಕ ಸಿಡಿಸಿದ್ದಾರೆ. ಆರ್​ಸಿಬಿಗೂ ಮುನ್ನ ಸಿಎಸ್​ಕೆ, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದರು.(ANI )

ದಿನೇಶ್ ಕಾರ್ತಿಕ್ ಈ ವರ್ಷ 39ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ವಯಸ್ಸಲ್ಲೂ ತಮ್ಮ ಬ್ಯಾಟಿಂಗ್ ಖದರ್ ತೋರಿಸುತ್ತಿದ್ದಾರೆ. ಬೆಂಕಿ ಬಿರುಗಾಳಿ ನಡೆಸುತ್ತಿರುವ ಡಿಕೆಗೆ ಇದೇ ಲಾಸ್ಟ್ ಐಪಿಎಲ್. ಈಗಾಗಲೇ ಈ ಬಗ್ಗೆ ಅವರೇ ಸುಳಿವು ನೀಡಿದ್ದಾರೆ. 249 ಐಪಿಎಲ್ ಪಂದ್ಯಗಳಲ್ಲಿ ಕಣಕ್ಕಿಳಿದು 4742     ರನ್ ಗಳಿಸಿದ್ದಾರೆ. 22 ಅರ್ಧಶತಕ ಸಿಡಿಸಿದ್ದಾರೆ. ಡೆಲ್ಲಿ ಡೇರ್​ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್), ಕಿಂಗ್ಸ್ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್), ಮುಂಬೈ ಇಂಡಿಯನ್ಸ್, ಆರ್​ಸಿಬಿ, ಗುಜರಾತ್ ಲಯನ್ಸ್, ಕೆಕೆಆರ್ ತಂಡಗಳ ಪರ ಆಡಿದ್ದಾರೆ.
icon

(4 / 11)

ದಿನೇಶ್ ಕಾರ್ತಿಕ್ ಈ ವರ್ಷ 39ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ವಯಸ್ಸಲ್ಲೂ ತಮ್ಮ ಬ್ಯಾಟಿಂಗ್ ಖದರ್ ತೋರಿಸುತ್ತಿದ್ದಾರೆ. ಬೆಂಕಿ ಬಿರುಗಾಳಿ ನಡೆಸುತ್ತಿರುವ ಡಿಕೆಗೆ ಇದೇ ಲಾಸ್ಟ್ ಐಪಿಎಲ್. ಈಗಾಗಲೇ ಈ ಬಗ್ಗೆ ಅವರೇ ಸುಳಿವು ನೀಡಿದ್ದಾರೆ. 249 ಐಪಿಎಲ್ ಪಂದ್ಯಗಳಲ್ಲಿ ಕಣಕ್ಕಿಳಿದು 4742     ರನ್ ಗಳಿಸಿದ್ದಾರೆ. 22 ಅರ್ಧಶತಕ ಸಿಡಿಸಿದ್ದಾರೆ. ಡೆಲ್ಲಿ ಡೇರ್​ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್), ಕಿಂಗ್ಸ್ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್), ಮುಂಬೈ ಇಂಡಿಯನ್ಸ್, ಆರ್​ಸಿಬಿ, ಗುಜರಾತ್ ಲಯನ್ಸ್, ಕೆಕೆಆರ್ ತಂಡಗಳ ಪರ ಆಡಿದ್ದಾರೆ.(AFP)

37 ವರ್ಷದ ಡೇವಿಡ್ ವಾರ್ನರ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದು, ಈ ವರ್ಷ ಕಳಪೆ ಪ್ರದರ್ಶನ ನೀಡಿದ್ದಾರೆ. ಕಳೆದ ಎರಡು ಸೀಸನ್​ಗಳಿಂದ ಅವರ ಆಟ ಕುಂದಿದೆ. ಡೆಲ್ಲಿ (2 ಸಲ) ಮತ್ತು ಸನ್​ರೈಸರ್ಸ್ ಹೈದರಾಬಾದ್ ಪರ ಆಡಿರುವ ವಾರ್ನರ್, 182 ಐಪಿಎಲ್ ಪಂದ್ಯಗಳಲ್ಲಿ 6563 ರನ್ ಗಳಿಸಿದ್ದಾರೆ. 62 ಅರ್ಧಶತಕ, 4 ಶತಕ ಸಿಡಿಸಿದ್ದಾರೆ.    
icon

(5 / 11)

37 ವರ್ಷದ ಡೇವಿಡ್ ವಾರ್ನರ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದು, ಈ ವರ್ಷ ಕಳಪೆ ಪ್ರದರ್ಶನ ನೀಡಿದ್ದಾರೆ. ಕಳೆದ ಎರಡು ಸೀಸನ್​ಗಳಿಂದ ಅವರ ಆಟ ಕುಂದಿದೆ. ಡೆಲ್ಲಿ (2 ಸಲ) ಮತ್ತು ಸನ್​ರೈಸರ್ಸ್ ಹೈದರಾಬಾದ್ ಪರ ಆಡಿರುವ ವಾರ್ನರ್, 182 ಐಪಿಎಲ್ ಪಂದ್ಯಗಳಲ್ಲಿ 6563 ರನ್ ಗಳಿಸಿದ್ದಾರೆ. 62 ಅರ್ಧಶತಕ, 4 ಶತಕ ಸಿಡಿಸಿದ್ದಾರೆ.    (ANI)

39ರ ಹರೆಯದ ವೃದ್ಧಿಮಾನ್ ಸಾಹ ಈ ಬಾರಿ ವೈಫಲ್ಯ ಅನುಭವಿಸಿದ್ದು, 2025ರ ಐಪಿಎಲ್​ ಮೆಗಾ ಹರಾಜಿಗೆ ಬರುವುದು ಬಹುತೇಕ ಅನುಮಾನ. ಈ ಹಿಂದೆ ಪಂಜಾಬ್ ಕಿಂಗ್ಸ್, ಎಸ್​​ಆರ್​​ಹೆಚ್ ಪರ ಆಡಿದ್ದ ಗುಜರಾತ್ ಟೈಟಾನ್ಸ್ ಆಟಗಾರ, 166 ಐಪಿಎಲ್ ಪಂದ್ಯಗಳಲ್ಲಿ 2876 ರನ್ ಗಳಿಸಿದ್ದಾರೆ. 13 ಅರ್ಧಶತಕ, 1 ಶತಕ ಸಿಡಿಸಿದ್ದಾರೆ.
icon

(6 / 11)

39ರ ಹರೆಯದ ವೃದ್ಧಿಮಾನ್ ಸಾಹ ಈ ಬಾರಿ ವೈಫಲ್ಯ ಅನುಭವಿಸಿದ್ದು, 2025ರ ಐಪಿಎಲ್​ ಮೆಗಾ ಹರಾಜಿಗೆ ಬರುವುದು ಬಹುತೇಕ ಅನುಮಾನ. ಈ ಹಿಂದೆ ಪಂಜಾಬ್ ಕಿಂಗ್ಸ್, ಎಸ್​​ಆರ್​​ಹೆಚ್ ಪರ ಆಡಿದ್ದ ಗುಜರಾತ್ ಟೈಟಾನ್ಸ್ ಆಟಗಾರ, 166 ಐಪಿಎಲ್ ಪಂದ್ಯಗಳಲ್ಲಿ 2876 ರನ್ ಗಳಿಸಿದ್ದಾರೆ. 13 ಅರ್ಧಶತಕ, 1 ಶತಕ ಸಿಡಿಸಿದ್ದಾರೆ.(PTI)

ಪಂಜಾಬ್ ಕಿಂಗ್ಸ್ ನಾಯಕನಾಗಿರುವ ಶಿಖರ್ ಧವನ್, ಈ ವರ್ಷವೂ ನಿರಾಸೆ ಮೂಡಿಸಿದ್ದಾರೆ. ಅಲ್ಲದೆ, ಇಂಜುರಿ ಸಮಸ್ಯೆಗೂ ಸಿಲುಕಿದ್ದಾರೆ. 38 ವರ್ಷದ ಆಟಗಾರ ಎಸ್​ಆರ್​ಹೆಚ್, ಡೆಲ್ಲಿ ಮತ್ತು ಪಿಬಿಕೆಎಸ್ ಪರ ಆಡಿದ್ದು, 222 ಪಂದ್ಯಗಳಲ್ಲಿ 6768 ರನ್ ಗಳಿಸಿದ್ದಾರೆ. 51 ಅರ್ಧಶತಕ, 2 ಶತಕ ಸಿಡಿಸಿದ್ದಾರೆ.
icon

(7 / 11)

ಪಂಜಾಬ್ ಕಿಂಗ್ಸ್ ನಾಯಕನಾಗಿರುವ ಶಿಖರ್ ಧವನ್, ಈ ವರ್ಷವೂ ನಿರಾಸೆ ಮೂಡಿಸಿದ್ದಾರೆ. ಅಲ್ಲದೆ, ಇಂಜುರಿ ಸಮಸ್ಯೆಗೂ ಸಿಲುಕಿದ್ದಾರೆ. 38 ವರ್ಷದ ಆಟಗಾರ ಎಸ್​ಆರ್​ಹೆಚ್, ಡೆಲ್ಲಿ ಮತ್ತು ಪಿಬಿಕೆಎಸ್ ಪರ ಆಡಿದ್ದು, 222 ಪಂದ್ಯಗಳಲ್ಲಿ 6768 ರನ್ ಗಳಿಸಿದ್ದಾರೆ. 51 ಅರ್ಧಶತಕ, 2 ಶತಕ ಸಿಡಿಸಿದ್ದಾರೆ.(PTI)

ಅಫ್ಘಾನಿಸ್ತಾನ ತಂಡದ ಮೊಹಮ್ಮದ್ ನಬಿ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಕೇವಲ 21 ಪಂದ್ಯಗಳನ್ನಾಡಿದ್ದು, 184 ರನ್, 13 ವಿಕೆಟ್ ಪಡೆದಿದ್ದಾರೆ. 39 ವರ್ಷವಾಗಿದ್ದು, ಮುಂದಿನ ವರ್ಷ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ.
icon

(8 / 11)

ಅಫ್ಘಾನಿಸ್ತಾನ ತಂಡದ ಮೊಹಮ್ಮದ್ ನಬಿ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಕೇವಲ 21 ಪಂದ್ಯಗಳನ್ನಾಡಿದ್ದು, 184 ರನ್, 13 ವಿಕೆಟ್ ಪಡೆದಿದ್ದಾರೆ. 39 ವರ್ಷವಾಗಿದ್ದು, ಮುಂದಿನ ವರ್ಷ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ.(AFP)

ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿರುವ ಸ್ಪಿನ್ನರ್ ಅಮಿತ್ ಮಿಶ್ರಾ ಅವರಿಗೆ 41 ವರ್ಷ. 2024ರ ಐಪಿಎಲ್​ನಲ್ಲಿ ಇನ್ನೂ ಕಣಕ್ಕಿಳಿಯದ ಮಿಶ್ರಾ ಈ ಹಿಂದೆ ಡೆಲ್ಲಿ ಮತ್ತು ಎಸ್​ಆರ್​ಹೆಚ್ ತಂಡದ ಪರ ಆಡಿದ್ದಾರೆ. 161 ಪಂದ್ಯಗಳಲ್ಲಿ 173 ವಿಕೆಟ್ ಕಿತ್ತಿದ್ದಾರೆ.
icon

(9 / 11)

ಭಾರತದ ಮತ್ತೊಬ್ಬ ಸ್ಪಿನ್ನರ್ ಪಿಯೂಷ್ ಚಾವ್ಲಾಗೆ ಇನ್ನೂ 35 ವರ್ಷ. ಇದರ ನಡುವೆಯೂ ಅವರು ಮುಂದಿನ ವರ್ಷ ಮೆಗಾ ಹರಾಜಿಗೆ ಬಂದರೂ ಖರೀದಯಾಗುವುದು ಬಹುತೇಕ ಅನುಮಾನ. ಪ್ರಸ್ತುತ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಚಾವ್ಲಾ, ಈ ಹಿಂದೆ ಕೆಕೆಆರ್, ಸಿಎಸ್​ಕೆ ಪರವೂ ಆಡಿದ್ದಾರೆ. 185 ಪಂದ್ಯಗಳಲ್ಲಿ 181 ವಿಕೆಟ್ ಪಡೆದಿದ್ದಾರೆ.
icon

(10 / 11)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(11 / 11)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

ಇತರ ಗ್ಯಾಲರಿಗಳು