ಕನ್ನಡ ಸುದ್ದಿ  /  Photo Gallery  /  Cricket News My Wife One In A Billion Prasidh Krishna Post Share In Instagram About His Wife Rachana After Marriage Prs

Prasidh Krishna: ನನ್ನ ಹೆಂಡತಿಯಂತೂ ಕೋಟಿಗೊಬ್ಬಳು; ಪತ್ನಿಯನ್ನು ಕೊಂಡಾಡುತ್ತಾ ಮದುವೆಯ ಕ್ಯೂಟ್​ ಫೋಟೋಗಳನ್ನು ಹಂಚಿಕೊಂಡ ಪ್ರಸಿದ್ಧ್​ ಕೃಷ್ಣ

  • ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮದುವೆಯ ಫೋಟೋಗಳನ್ನು ವೇಗಿ ಪ್ರಸಿದ್ಧ್​ ಕೃಷ್ಣ ಹಂಚಿಕೊಂಡಿದ್ದಾರೆ. ತನ್ನ ಪತ್ನಿ ರಚನಾ ಅವರ ಕುರಿತು ಗುಣಗಾನ ಮಾಡಿದ್ದಾರೆ.

ಭಾರತ ಕ್ರಿಕೆಟ್​ ತಂಡ ಹಾಗೂ ಕರ್ನಾಟಕ ತಂಡದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರು ಬೆಂಗಳೂರಿನಲ್ಲಿ ತಮ್ಮ ದೀರ್ಘಕಾಲದ ಗೆಳತಿ ರಚನಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
icon

(1 / 9)

ಭಾರತ ಕ್ರಿಕೆಟ್​ ತಂಡ ಹಾಗೂ ಕರ್ನಾಟಕ ತಂಡದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರು ಬೆಂಗಳೂರಿನಲ್ಲಿ ತಮ್ಮ ದೀರ್ಘಕಾಲದ ಗೆಳತಿ ರಚನಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮದುವೆಯ ಫೋಟೋಗಳನ್ನು ವೇಗಿ ಪ್ರಸಿದ್ಧ್​ ಕೃಷ್ಣ ಹಂಚಿಕೊಂಡಿದ್ದಾರೆ. ತನ್ನ ಪತ್ನಿಯ ಕುರಿತು ಗುಣಗಾನ ಮಾಡಿದ್ದಾರೆ.
icon

(2 / 9)

ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮದುವೆಯ ಫೋಟೋಗಳನ್ನು ವೇಗಿ ಪ್ರಸಿದ್ಧ್​ ಕೃಷ್ಣ ಹಂಚಿಕೊಂಡಿದ್ದಾರೆ. ತನ್ನ ಪತ್ನಿಯ ಕುರಿತು ಗುಣಗಾನ ಮಾಡಿದ್ದಾರೆ.(Prasidh krishna/Instagram)

ಮದುವೆ ಫೋಟೋಗಳಿಗೆ ಕ್ಯಾಪ್ಶನ್​ ಬರೆದಿರುವ ಪ್ರಸಿದ್ಧ್​, ನನ್ನ ಹೆಂಡತಿಯಂತೂ ಕೋಟಿಗೊಬ್ಬಳು ಎಂದು ಬರೆದು ಹಾರ್ಟ್‌ ಎಮೋಜಿಯೊಂದಿಗೆ ಹಾಕಿದ್ದಾರೆ.
icon

(3 / 9)

ಮದುವೆ ಫೋಟೋಗಳಿಗೆ ಕ್ಯಾಪ್ಶನ್​ ಬರೆದಿರುವ ಪ್ರಸಿದ್ಧ್​, ನನ್ನ ಹೆಂಡತಿಯಂತೂ ಕೋಟಿಗೊಬ್ಬಳು ಎಂದು ಬರೆದು ಹಾರ್ಟ್‌ ಎಮೋಜಿಯೊಂದಿಗೆ ಹಾಕಿದ್ದಾರೆ.(Prasidh krishna/Instagram)

ಪ್ರಸಿದ್ಧ್ ಕೃಷ್ಣ ಹಾಗೂ ರಚನಾ ಜೋಡಿಯ ಮದುವೆ ದಿ ಪಿಕಾಕ್ ಗ್ರೋವ್ ಎಂಬ ರೆಸಾರ್ಟ್‌ನಲ್ಲಿ ನಡೆಯಿತು.
icon

(4 / 9)

ಪ್ರಸಿದ್ಧ್ ಕೃಷ್ಣ ಹಾಗೂ ರಚನಾ ಜೋಡಿಯ ಮದುವೆ ದಿ ಪಿಕಾಕ್ ಗ್ರೋವ್ ಎಂಬ ರೆಸಾರ್ಟ್‌ನಲ್ಲಿ ನಡೆಯಿತು.(Prasidh krishna/Instagram)

ದಕ್ಷಿಣ ಭಾರತ ಸಂಪ್ರದಾಯದಲ್ಲಿ ಪ್ರಸಿದ್ದ್ ಕೃಷ್ಣ ಹಾಗೂ ರಚನಾ ಜೋಡಿ ಸರಳ ವಿವಾಹವಾಗಿದ್ದಾರೆ. ಕೆಎಲ್‌ ರಾಹುಲ್, ಆರ್ ಅಶ್ವಿನ್​, ದೀಪಕ್​ ಚಹರ್ ಸೇರಿದಂತೆ ಮಾಜಿ ಹಾಲಿ ಕ್ರಿಕೆಟಿಗರು ಶುಭ ಕೋರುತ್ತಿದ್ದಾರೆ.
icon

(5 / 9)

ದಕ್ಷಿಣ ಭಾರತ ಸಂಪ್ರದಾಯದಲ್ಲಿ ಪ್ರಸಿದ್ದ್ ಕೃಷ್ಣ ಹಾಗೂ ರಚನಾ ಜೋಡಿ ಸರಳ ವಿವಾಹವಾಗಿದ್ದಾರೆ. ಕೆಎಲ್‌ ರಾಹುಲ್, ಆರ್ ಅಶ್ವಿನ್​, ದೀಪಕ್​ ಚಹರ್ ಸೇರಿದಂತೆ ಮಾಜಿ ಹಾಲಿ ಕ್ರಿಕೆಟಿಗರು ಶುಭ ಕೋರುತ್ತಿದ್ದಾರೆ.

ಮಯಾಂಕ್ ಅಗರ್ವಾಲ್, ಜಸ್​ಪ್ರೀತ್​ ಬೂಮ್ರಾ, ಶ್ರೇಯಸ್ ಅಯ್ಯರ್, ಕೃಷ್ಣಪ್ಪ ಗೌತಮ್ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಮದುವೆಯಲ್ಲಿ ಹಾಜರಿದ್ದರು.
icon

(6 / 9)

ಮಯಾಂಕ್ ಅಗರ್ವಾಲ್, ಜಸ್​ಪ್ರೀತ್​ ಬೂಮ್ರಾ, ಶ್ರೇಯಸ್ ಅಯ್ಯರ್, ಕೃಷ್ಣಪ್ಪ ಗೌತಮ್ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಮದುವೆಯಲ್ಲಿ ಹಾಜರಿದ್ದರು.

ಸ್ಟ್ರೆಸ್‌ ಫ್ಯಾಕ್ಚರ್‌ ಕಾರಣದಿಂದ ಪ್ರಸಿದ್ಧ್‌ ಕೃಷ್ಣ, ಶಸ್ತ್ರಚಿಕಿತ್ಸೆಗೆ ಒಳಗಾಗಿ ಕೆಲವು ತಿಂಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಹಾಗಾಗಿ 16ನೇ ಆವೃತ್ತಿಯ ಐಪಿಎಲ್​ನಿಂದ ಹೊರಗುಳಿದಿದ್ದರು.
icon

(7 / 9)

ಸ್ಟ್ರೆಸ್‌ ಫ್ಯಾಕ್ಚರ್‌ ಕಾರಣದಿಂದ ಪ್ರಸಿದ್ಧ್‌ ಕೃಷ್ಣ, ಶಸ್ತ್ರಚಿಕಿತ್ಸೆಗೆ ಒಳಗಾಗಿ ಕೆಲವು ತಿಂಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಹಾಗಾಗಿ 16ನೇ ಆವೃತ್ತಿಯ ಐಪಿಎಲ್​ನಿಂದ ಹೊರಗುಳಿದಿದ್ದರು.

ಏಕದಿನ ವಿಶ್ವಕಪ್​​ಗೂ ಮುನ್ನ ಫಿಟ್​ನೆಸ್​ ಮರಳಿ ಪಡೆಯುವ ಲೆಕ್ಕಾಚಾರದಲ್ಲಿರುವ ಪ್ರಸಿದ್ಧ ಕೃಷ್ಣ, 14 ಏಕದಿನ ಪಂದ್ಯಗಳಲ್ಲಿ 25 ವಿಕೆಟ್‌ ಪಡೆದಿದ್ದಾರೆ.
icon

(8 / 9)

ಏಕದಿನ ವಿಶ್ವಕಪ್​​ಗೂ ಮುನ್ನ ಫಿಟ್​ನೆಸ್​ ಮರಳಿ ಪಡೆಯುವ ಲೆಕ್ಕಾಚಾರದಲ್ಲಿರುವ ಪ್ರಸಿದ್ಧ ಕೃಷ್ಣ, 14 ಏಕದಿನ ಪಂದ್ಯಗಳಲ್ಲಿ 25 ವಿಕೆಟ್‌ ಪಡೆದಿದ್ದಾರೆ.

ರಚನಾ ಅವರು ಸಹ ಕರ್ನಾಟಕದವರೇ. ಟೆಕ್ಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪದವಿ ಮಾಡಿದ್ದಾರೆ. ರಚನಾ ಅವರು ಅಮೆರಿಕಗೆ ಸೇರಿದ ಪ್ರಸಿದ್ಧ ಟೆಕ್ಸಾಸ್‌ನ ಡೆಲ್ ಕಂಪನಿಯಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಕೆ ಉದ್ಯಮಿ ಕೂಡ ಹೌದು.
icon

(9 / 9)

ಇತರ ಗ್ಯಾಲರಿಗಳು