ವೆಸ್ಟ್‌ ಇಂಡೀಸ್‌‌ ವಿರುದ್ಧ ಅಲ್ಪ ಮೊತ್ತಕ್ಕೆ ಆಲೌಟ್; ಡಚ್ಚರ ಹೆಸರಲ್ಲಿದ್ದ ಅನಗತ್ಯ ದಾಖಲೆ ಸರಿಗಟ್ಟಿದ ಉಗಾಂಡಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವೆಸ್ಟ್‌ ಇಂಡೀಸ್‌‌ ವಿರುದ್ಧ ಅಲ್ಪ ಮೊತ್ತಕ್ಕೆ ಆಲೌಟ್; ಡಚ್ಚರ ಹೆಸರಲ್ಲಿದ್ದ ಅನಗತ್ಯ ದಾಖಲೆ ಸರಿಗಟ್ಟಿದ ಉಗಾಂಡಾ

ವೆಸ್ಟ್‌ ಇಂಡೀಸ್‌‌ ವಿರುದ್ಧ ಅಲ್ಪ ಮೊತ್ತಕ್ಕೆ ಆಲೌಟ್; ಡಚ್ಚರ ಹೆಸರಲ್ಲಿದ್ದ ಅನಗತ್ಯ ದಾಖಲೆ ಸರಿಗಟ್ಟಿದ ಉಗಾಂಡಾ

  • West Indies vs Uganda: 2024ರ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಉಗಾಂಡಾ ತಂಡವು ಕಳಪೆ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ದಶಕದ ಹಿಂದೆ ನೆದರ್ಲೆಂಡ್ಸ್ ನಿರ್ಮಿಸಿದ್ದ ಅನಗತ್ಯ ವಿಶ್ವ ದಾಖಲೆಯನ್ನು ಇದೀಗ ಉಗಾಂಡ ತನ್ನ ಹೆಸರಿಗೆ ಬರೆದಿದೆ.

ಮೊದಲ ಬಾರಿಗೆ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಉಗಾಂಡಾ, ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೇವಲ 58 ರನ್‌ಗಳಿಗೆ ಆಲೌಟ್ ಆಗಿತ್ತು. ಮುಂದಿನ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾವನ್ನು ಸೋಲಿಸಿ ವಿಶ್ವಕಪ್ ಇತಿಹಾಸದಲ್ಲಿ ತಮ್ಮ ಮೊದಲ ಗೆಲುವನ್ನು ಸಾಧಿಸಿತು. ಈ ಬಾರಿ, ವೆಸ್ಟ್ ಇಂಡೀಸ್ ವಿರುದ್ಧ ಮತ್ತೆ ಸೋಲುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸಾರ್ವಕಾಲಿಕ ನಿರಾಶಾದಾಯಕ ವಿಶ್ವದಾಖಲೆಗೆ ಕಾರಣವಾಗಿದೆ.
icon

(1 / 5)

ಮೊದಲ ಬಾರಿಗೆ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಉಗಾಂಡಾ, ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೇವಲ 58 ರನ್‌ಗಳಿಗೆ ಆಲೌಟ್ ಆಗಿತ್ತು. ಮುಂದಿನ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾವನ್ನು ಸೋಲಿಸಿ ವಿಶ್ವಕಪ್ ಇತಿಹಾಸದಲ್ಲಿ ತಮ್ಮ ಮೊದಲ ಗೆಲುವನ್ನು ಸಾಧಿಸಿತು. ಈ ಬಾರಿ, ವೆಸ್ಟ್ ಇಂಡೀಸ್ ವಿರುದ್ಧ ಮತ್ತೆ ಸೋಲುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸಾರ್ವಕಾಲಿಕ ನಿರಾಶಾದಾಯಕ ವಿಶ್ವದಾಖಲೆಗೆ ಕಾರಣವಾಗಿದೆ.(AP)

ಗಯಾನಾದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ 2024ರ ಗ್ರೂಪ್ ಸಿ ಪಂದ್ಯದಲ್ಲಿ ಉಗಾಂಡಾ 134 ರನ್‌ಗಳ ಬೃಹತ್ ಅಂತರದಿಂದ ಸೋತಿತು. ಉಗಾಂಡಾ ಕೇವಲ 39 ರನ್‌ಗಳಿಗೆ ಆಲೌಟ್ ಆಯ್ತು. ಒಂದು ದಶಕದ ಹಿಂದೆ ನೆದರ್ಲ್ಯಾಂಡ್ಸ್ ಕೂಡಾ ಇಷ್ಟೇ ಮೊತ್ತಕ್ಕೆ ಆಲೌಟ್‌ ಆಗಿತ್ತು
icon

(2 / 5)

ಗಯಾನಾದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ 2024ರ ಗ್ರೂಪ್ ಸಿ ಪಂದ್ಯದಲ್ಲಿ ಉಗಾಂಡಾ 134 ರನ್‌ಗಳ ಬೃಹತ್ ಅಂತರದಿಂದ ಸೋತಿತು. ಉಗಾಂಡಾ ಕೇವಲ 39 ರನ್‌ಗಳಿಗೆ ಆಲೌಟ್ ಆಯ್ತು. ಒಂದು ದಶಕದ ಹಿಂದೆ ನೆದರ್ಲ್ಯಾಂಡ್ಸ್ ಕೂಡಾ ಇಷ್ಟೇ ಮೊತ್ತಕ್ಕೆ ಆಲೌಟ್‌ ಆಗಿತ್ತು(PTI)

ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಜಂಟಿ ವಿಶ್ವ ದಾಖಲೆಯನ್ನು ಉಗಾಂಡಾ ನಿರ್ಮಿಸಿದೆ. ಇಲ್ಲಿಯವರೆಗೆ, ಈ ದಾಖಲೆಯು ನೆದರ್ಲ್ಯಾಂಡ್ಸ್ ಹೆಸರಿನಲ್ಲಿ ಇತ್ತು. 2014ರ ಟಿ20 ವಿಶ್ವಕಪ್‌ನಲ್ಲಿ ಡಚ್ಚರು ಅತಿ ಕಡಿಮೆ ಮೊತ್ತಕ್ಕೆ ಆಲೌಟ್‌ ಆಗಿದ್ದರು. ಚಿತ್ತಗಾಂಗ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನೆದರ್ಲೆಂಡ್ಸ್‌ 10.3 ಓವರ್‌ಗಳಲ್ಲಿ ಕೇವಲ 39 ರನ್‌ಗಳಿಗೆ ಆಲೌಟ್ ಆಗಿತ್ತು.
icon

(3 / 5)

ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಜಂಟಿ ವಿಶ್ವ ದಾಖಲೆಯನ್ನು ಉಗಾಂಡಾ ನಿರ್ಮಿಸಿದೆ. ಇಲ್ಲಿಯವರೆಗೆ, ಈ ದಾಖಲೆಯು ನೆದರ್ಲ್ಯಾಂಡ್ಸ್ ಹೆಸರಿನಲ್ಲಿ ಇತ್ತು. 2014ರ ಟಿ20 ವಿಶ್ವಕಪ್‌ನಲ್ಲಿ ಡಚ್ಚರು ಅತಿ ಕಡಿಮೆ ಮೊತ್ತಕ್ಕೆ ಆಲೌಟ್‌ ಆಗಿದ್ದರು. ಚಿತ್ತಗಾಂಗ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನೆದರ್ಲೆಂಡ್ಸ್‌ 10.3 ಓವರ್‌ಗಳಲ್ಲಿ ಕೇವಲ 39 ರನ್‌ಗಳಿಗೆ ಆಲೌಟ್ ಆಗಿತ್ತು.(AP)

ಗಯಾನಾದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಉಗಾಂಡಾ 12 ಓವರ್‌ಗಳಲ್ಲಿ ಕೇವಲ 39 ರನ್ ಗಳಿಸಿ ಆಲೌಟ್ ಆಯ್ತು. ಆ ಮೂಲಕ ಉಗಾಂಡಾ ತಂಡವು 10 ವರ್ಷಗಳ ಹಿಂದೆ ನೆದರ್ಲ್ಯಾಂಡ್ಸ್ ಸ್ಥಾಪಿಸಿದ್ದ‌ ಅನಗತ್ಯ ವಿಶ್ವದಾಖಲೆಯನ್ನು ಮುಟ್ಟಿತು. ಆಗ ನೆದರ್ಲ್ಯಾಂಡ್ಸ್ ಮೊದಲು ಬ್ಯಾಟಿಂಗ್ ಮಾಡಿ 39 ರನ್ ಗಳಿಸಿತ್ತು. ಈ ಬಾರಿ ಉಗಾಂಡಾ ಚೇಸಿಂಗ್‌ ವೇಳೆ 39 ರನ್ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಆತಿಥೇಯರ ವಿರುದ್ಧ 134 ರನ್‌ಗಳ ಭಾರಿ ಅಂತರದಿಂದ ಸೋತಿತು.
icon

(4 / 5)

ಗಯಾನಾದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಉಗಾಂಡಾ 12 ಓವರ್‌ಗಳಲ್ಲಿ ಕೇವಲ 39 ರನ್ ಗಳಿಸಿ ಆಲೌಟ್ ಆಯ್ತು. ಆ ಮೂಲಕ ಉಗಾಂಡಾ ತಂಡವು 10 ವರ್ಷಗಳ ಹಿಂದೆ ನೆದರ್ಲ್ಯಾಂಡ್ಸ್ ಸ್ಥಾಪಿಸಿದ್ದ‌ ಅನಗತ್ಯ ವಿಶ್ವದಾಖಲೆಯನ್ನು ಮುಟ್ಟಿತು. ಆಗ ನೆದರ್ಲ್ಯಾಂಡ್ಸ್ ಮೊದಲು ಬ್ಯಾಟಿಂಗ್ ಮಾಡಿ 39 ರನ್ ಗಳಿಸಿತ್ತು. ಈ ಬಾರಿ ಉಗಾಂಡಾ ಚೇಸಿಂಗ್‌ ವೇಳೆ 39 ರನ್ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಆತಿಥೇಯರ ವಿರುದ್ಧ 134 ರನ್‌ಗಳ ಭಾರಿ ಅಂತರದಿಂದ ಸೋತಿತು.(AP)

ಶಾರ್ಜಾದಲ್ಲಿ ನಡೆದ 2021ರ ಟಿ 20 ವಿಶ್ವಕಪ್ನಲ್ಲಿ ನೆದರ್ಲ್ಯಾಂಡ್ಸ್ ತಂಡವು ಮತ್ತೊಮ್ಮೆ ಶ್ರೀಲಂಕಾ ವಿರುದ್ಧ 44 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ಮೂರನೇ ಸ್ಥಾನದಲ್ಲಿದೆ. 2021ರಲ್ಲಿ ದುಬೈನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 55 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ನಾಲ್ಕನೇ ಸ್ಥಾನದಲ್ಲಿದೆ.
icon

(5 / 5)

ಶಾರ್ಜಾದಲ್ಲಿ ನಡೆದ 2021ರ ಟಿ 20 ವಿಶ್ವಕಪ್ನಲ್ಲಿ ನೆದರ್ಲ್ಯಾಂಡ್ಸ್ ತಂಡವು ಮತ್ತೊಮ್ಮೆ ಶ್ರೀಲಂಕಾ ವಿರುದ್ಧ 44 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ಮೂರನೇ ಸ್ಥಾನದಲ್ಲಿದೆ. 2021ರಲ್ಲಿ ದುಬೈನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 55 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ನಾಲ್ಕನೇ ಸ್ಥಾನದಲ್ಲಿದೆ.(AP)


ಇತರ ಗ್ಯಾಲರಿಗಳು