Bangalore Power Cut: ಬೆಂಗಳೂರಿನಲ್ಲಿ 2 ದಿನ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ, ಯಾವ ಬಡಾವಣೆಯಲ್ಲಿ ಇರೋಲ್ಲ ಕರೆಂಟ್
Bangalore Power Cut Updates: ಬೆಂಗಳೂರು ಪ್ರಮುಖ ಬಡಾವಣೆಗಳಲ್ಲಿ 2024 ರ ಡಿಸೆಂಬರ್19ರಿಂದ ಎರಡು ದಿನಗಳ ಕಾಲ ವಿದ್ಯುತ್ ಸರಬರಾಜಿನಲ್ಲ ವ್ಯತ್ಯಯ ಆಗಲಿದೆ.ವರದಿ:ಎಚ್.ಮಾರುತಿ.ಬೆಂಗಳೂರು
ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 66/11ಕೆ.ವಿ ಎಲ್.ಆರ್. ಬಂಡೆ ಕೇಂದ್ರದಲ್ಲಿನ ಹಲವು ಪ್ರದೇಶಗಳಲ್ಲಿ .2024ರ ಡಿಸೆಂಬರ್ 19 (ಗುರುವಾರ) ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 04:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅದೇ ರೀತಿ 66/11ಕೆವಿ ಮಾನ್ಯತಾ ಉಪಕೇಂದ್ರದಿಂದ ಶೋಭಾ ಸಿಟಿ ಉಪಕೇಂದ್ರದ ವರೆಗಿನ ವ್ಯಾಪ್ತಿಯ ಪ್ರದೇಶಗಳಲ್ಲಿ ಗುರುವಾರ ಬೆಳಗ್ಗೆ 08 ರಿಂದ ಮಧ್ಯಾಹ್ನ 06:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ಇದಲ್ಲದೇ 66/11 ಕೆವಿ ರಾಜನಕುಂಟೆ ಸಬ್‌ಸ್ಟೇಷನ್ ನ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ಶುಕ್ರವಾರ.2024 ರ ಡಿಸೆಂಬರ್ 20ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 04 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಗುರುವಾರದಂದು ಎ.ಕೆ.ಅಶ್ರಮ ರಸ್ತೆ, ದೇವೆಗೌಡ ರಸ್ತೆ, ಆರ್.ಟಿ.ನಗರ ೧ನೇ ಬ್ಲಾಕ್, ತಿಮ್ಮಯ್ಯ ಗಾರ್ಡನ್, ಮೋದಿ ಗಾರ್ಡನ್, ಮಿಲಿಟರಿ ಏರೀಯ, ವೀರಣ್ಣಪಾಳ್ಯ, ಲುಂಬಿನಿ ಗಾರ್ಡನ್, ಬಿ.ಡಬ್ಲ್ಯೂ.ಎಸ್.ಎಸ್.ಬಿ ಸೆವೇಜ್ ಪ್ಲಾಟ್, ಮರಿಯಣ್ಣಪಾಳ್ಯ, ಕಾಫೀ ಬೋರ್ಡ್ ಲೇಔಟ್ ಕೆಂಪಾಪುರ, ದಾಸರಹಳ್ಳಿ, ಮಾರುತಿ ಲೇಔಟ್ ಭುವನೇಶ್ವರಿನಗರ, ಬಿ.ಇ.ಎಲ್. ಕಾರ್ಪೋರೇಟ್ ಆಫೀಸ್ ಚಾಣಕ್ಯ ಲೇಔಟ್ ನಾಗವಾರ ಭಾಗದಲ್ಲಿ ವ್ಯತ್ಯಯ ಆಗಲಿದೆ.
ಎಂ.ಎಸ್. ರಾಮಯ್ಯ ಉತ್ತರ ಸಿಟಿ, ತನಿಸಂದ್ರ ಮುಖ್ಯ ರಸ್ತೆ, ಆಶಿರ್ವಾದ್ ನಗರ, ಅಮರಜ್ಯೋತಿ ಲೇಔಟ್ ರಾಚೇನಹಳ್ಳಿ ಮುಖ್ಯ ರಸ್ತೆ, ಮೇಸ್ತ್ರಿ ಪಾಳ್ಯ, ರಾಯಲ್ ಎನ್‌ಕ್ಲೇವ್, ಶ್ರೀರಾಂಪುರ ವಿಲೇಜ್, ವಿ.ಹೆಚ್.ಬಿ.ಸಿ.ಎಸ್ ಲೇಔಟ್ ವೀರಣ್ಣಪಾಳ್ಯ, ಜೋಜಪ್ಪ ಲೇಔಟ್, ೧೭ ನೇ ಕ್ರಾಸ್, ಗೋವಿಂದಪುರ, ವೀರಣ್ಣಪಾಳ್ಯ ಮುಖ್ಯ ರಸ್ತೆ, ಬೈರಪ್ಪ ಲೇಔಟ್ ಮತ್ತು ಸುತ್ತಲಿನ ಪ್ರದೇಶಗಳಲ್ಲೂ ಗುರುವಾರ ಕರೆಂಟ್ ಇರೋಲ್ಲ.
“ಮಾನ್ಯತಾ ಕಾಫಿ ಬೋರ್ಡ್ ಲೇಔಟ್, ಮರಿಯನಪಾಳ್ಯ, ಮಾನ್ಯತಾ ನಿವಾಸ, ಶ್ರೀ ಭಾಗ್ಯ ಶ್ರೀ ಲೇಔಟ್ ಮತ್ತು ರಾಚೇನಹಳ್ಳಿ ಐಬ್ರೋಕ್ಸ್ ಅಮರಜ್ಯೋತಿ ಲೇಔಟ್, ಫಾತಿಮಾ ಲೇಔಟ್, ಅಂಜನಾದ್ರಿ ಲೇಔಟ್ ಮಂತ್ರಿ ಲಿಥೋಸ್ ಮತ್ತು ಶೋಭಾ ಸಿಟಿ ಚೊಕ್ಕನಹಳ್ಳಿ ಡೊಮಿನೊ ಪಿಜ್ಜಾ ದೇವ್ ನಗರ್ ವೆಂಕಟ್ ಪ್ಯಾರಡೈಸ್ ನಗರ ಚೊಕ್ಕನಹಳ್ಳಿ ಡೊಮಿನೊ ಪಿಜ್ಜಾ ದೇವ್ ನಗರ್ ವೆಂಕಟ್ ಪ್ಯಾರಡೈಸ್ ನಗರ ಲೇಔಟ್ ಶೋಭಾ ಸಿಟಿ ಎಕ್ಸ್ ರ‍್ವಿಸ್ ಮೆನ್ ಲೇಔಟ್ ನಲ್ಲೂ ಅಡಚಣೆಯಾಗಲಿದೆ.
ಪೊಲೀಸ್ ಕ್ವಾರ್ಟರ್ಸ್, ಆರ್ ಕೆ ಹೆಗಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್, ಎಸ್ತರ್ ಹರ‍್ಮೋನಿಕ್ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿವೈಎಂ, ಸ್ಲಂ ಬೋರ್ಡ್ ಮತ್ತು ಬೆಂಚ್ ರಾಯಲ್ ವುಡ್ ನಗರ ಶೋಭಾನಗರ ಶೋಭಾನಗರ. ಲೇಔಟ್ ಥಣಿಸಂದ್ರ, ಆರ್ ಕೆ ಹೆಗ್ಡೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಕರೆಂಟ್ ಇರೋಲ್ಲ.
ಶುಕ್ರವಾರ ದಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 04:00 ಗಂಟೆವರೆಗೆ ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ದೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರ್ಲಾಪುರ, ಕೆಎಂಎಫ್, ಇಟಗಲ್‌ಪುರ, ಅರ್ಕೇರಿ, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಲು, ಸೊನ್ನೇನಹಳ್ಳಿ. ಸೆಂಚುರ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ:ಎಚ್.ಮಾರುತಿ.ಬೆಂಗಳೂರು