Lakshmi Baramma Serial: ಕಾವೇರಿ ಫೋಟೋ ಕಂಡು ವಿಚಿತ್ರವಾಗಿ ವರ್ತಿಸಿದ ಕೀರ್ತಿ; ಮನೆಯವರಿಗೆಲ್ಲ ಆಶ್ಚರ್ಯ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಕಾವೇರಿ ಫೋಟೋ ಕಂಡು ವಿಚಿತ್ರವಾಗಿ ವರ್ತಿಸಿದ ಕೀರ್ತಿ; ಮನೆಯವರಿಗೆಲ್ಲ ಆಶ್ಚರ್ಯ

Lakshmi Baramma Serial: ಕಾವೇರಿ ಫೋಟೋ ಕಂಡು ವಿಚಿತ್ರವಾಗಿ ವರ್ತಿಸಿದ ಕೀರ್ತಿ; ಮನೆಯವರಿಗೆಲ್ಲ ಆಶ್ಚರ್ಯ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸತ್ತೇ ಹೋಗಿದ್ದಳು ಎಂದು ಅಂದುಕೊಂಡಿದ್ದ ಕೀರ್ತಿ ಮರಳಿ ಬಂದಿದ್ದಾಳೆ. ಆದರೆ ಅವಳಲ್ಲಿ ಕೀರ್ತಿಯ ಲಕ್ಷಣಗಳು ಕಾಣುತ್ತಿಲ್ಲ. ಹೀಗಿರುವಾ ಅವಳ ಹಿಂದಿನಿಂದ ಯಾರಿದ್ದಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕೀರ್ತಿಯ ವಿಚಿತ್ರ ವರ್ತನೆ
ಕೀರ್ತಿಯ ವಿಚಿತ್ರ ವರ್ತನೆ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಎಲ್ಲ ಉಪಾಯ ಮಾಡಿದ್ದಾಳೆ. ಆದರೆ ಈ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ. ಕೀರ್ತಿಗೆ ಎಲ್ಲ ನೆನಪಿದೆ ಎನ್ನುವ ರೀತಿಯಲ್ಲೇ ಬಿಂಬಿಸಿದ್ದಾಳೆ. ಕೀರ್ತಿ ಆಡುವ ಎಲ್ಲ ಮಾತುಗಳು ಸಹ ಲಕ್ಷ್ಮೀಯದೇ ಆಗಿತ್ತು ಎನ್ನುವುದು ಸತ್ಯ ವಿಚಾರ. ಈಗ ಲಕ್ಷ್ಮೀ ಇಲ್ಲದೇ ಇರುವ ಸಮಯದಲ್ಲಿ ಎಡವಟ್ಟಾಗಿದೆ. ಲಕ್ಷ್ಮೀ ಎಲ್ಲಿಂದಲೂ ಮಾತಾಡುತ್ತಿದ್ದರೆ ಅದನ್ನು ಕೇಳಿಸಿಕೊಂಡು ಕೀರ್ತಿ ಮಾತಾಡುತ್ತಿದ್ದಳು. ಆದರೆ ಈಗ ಹಾಗಿಲ್ಲ. ಕೀರ್ತಿ ನಿದ್ದೆ ಮಾಡಿದ್ದಾಳೆ ಎಂದು ನಂಬಿ ಕೀರ್ತಿ ತಾಯಿ ಮತ್ತು ಸುಪ್ರಿತಾ ಪಾರ್ಟಿ ಮಾಡುತ್ತಿದ್ದಾರೆ.

ಗಂಗಕ್ಕನ ಮಜ

ಗಂಗಕ್ಕ ಒಂದು ಕೆಲಸ ಮಾಡಿದ್ದಾಳೆ. ಪಾರ್ಟಿಯಲ್ಲಿ ಇನ್ನಷ್ಟು ಮಜ ಬರಲಿ ಎಂಬ ಕಾರಣಕ್ಕಾಗಿ ಕಾವೇರಿಯ ಫೋಟೋವನ್ನು ಎದುರಿಗೆ ಇಟ್ಟಿದ್ದಾಳೆ. ನಾನು ಸೂಜಿ ತಂದಿದ್ದೇನೆ. ನೀವು ಇದನ್ನು ದೂರದಿಂದಲೇ ಅವರ ಫೋಟೋಗೆ ಗುರಿ ಇಟ್ಟು ಚುಚ್ಚಿ ಎಂದು ಹೇಳುತ್ತಾಳೆ. ಆಗ ಅವರಿಬ್ಬರೂ ಅದು ಸೂಜಿ ಅಲ್ಲ ಎಂದು ಹೇಳುತ್ತಾ ನಗುತ್ತಾರೆ. ಕಾವೇರಿ ಜೈಲಿಗೆ ಹೋದ ಖುಷಿಯಲ್ಲಿ ಕೀರ್ತಿ ಅಮ್ಮ ಇರ್ತಾರೆ. ಸುಪ್ರಿತಾ ಕೂಡ ಕೀರ್ತಿ ಮನೆಗೆ ಹೋಗಿರ್ತಾರೆ. ಅಲ್ಲಿ ಸುಪ್ರಿತಾ, ಗಂಗಕ್ಕ ಮತ್ತು ಕೀರ್ತಿ ತಾಯಿ ಕೂತು ಮಾತಾಡ್ತಾ ಇರ್ತಾರೆ. ಅವರೆಲ್ಲ ಹಾಗೆ ಮಾತಾಡ್ತಾ ಇರುವ ಸಂದರ್ಭದಲ್ಲಿ ನಾವು ಇದೇ ಖುಷಿಗೆ ಪಾರ್ಟಿ ಮಾಡೋನ ಎಂದು ಕೀರ್ತಿ ಅಮ್ಮ ಹೇಳುತ್ತಾರೆ. ಇಂತಹ ಖುಷಿ ವಿಚಾರ ಇರುವಾಗ ನಾವಷ್ಟೇ ಪಾರ್ಟಿ ಮಾಡೋದು ಸರಿ ಅಲ್ಲ. ನಮ್ಮ ಜೊತೆ ಲಕ್ಷ್ಮೀ ಕೂಡ ಇದ್ರೆ ಚೆನ್ನಾಗಿರುತ್ತದೆ ಎಂದು ಸುಪ್ರಿತಾ ಹೇಳುತ್ತಾಳೆ.

ಕೀರ್ತಿ ವರ್ತನೆಯಲ್ಲಿ ಬದಲಾವಣೆ

ಹೀಗೆ ಅವರೆಲ್ಲ ಕಾವೇರಿ ಬಗ್ಗೆ ಮಾತಾಡುತ್ತಾ ಕುಡಿಯುತ್ತಾರೆ. ಅಷ್ಟೇ ಅಲ್ಲ ಅವಳು ಮಾಡಿದ ಕೆಲಸಕ್ಕೆ ಅವಳು ಜೈಲು ಸೇರಿದ್ದೇ ಒಳ್ಳೆದಾಯ್ತು ಎನ್ನುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಕೀರ್ತಿ ಬರುತ್ತಾಳೆ. ಕೀರ್ತಿ ನಿದ್ದೆ ಮಾಡಿದ್ದಾಳೆ ಎಂದು ಅಂದುಕೊಂಡು ಅವರೆಲ್ಲ ಅಲ್ಲಿ ಕೂತು ಪಾರ್ಟಿ ಮಾಡುತ್ತಿರುತ್ತಾರೆ. ಆದರೆ ಅಲ್ಲಿ ನಡೆದದ್ದೇ ಬೇರೆ. ಕೀರ್ತಿ ಬಂದವಳೇ ಕೋಪ ಮಾಡಿಕೊಳ್ಳುತ್ತಾಳೆ. ಕಾವೇರಿಯ ಫೋಟೋ ನಾಶ ಮಾಡುತ್ತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner