Upendra UI bookings: ಉಪೇಂದ್ರ ಯುಐ ಸಿನಿಮಾದ ಟಿಕೆಟ್‌ಗಳಿಗೆ ಇದೆಂಥ ಬೇಡಿಕೆ, ಶುಕ್ರವಾರದ ಫಸ್ಟ್‌ ಶೋ ಹೌಸ್‌ಫುಲ್‌
ಕನ್ನಡ ಸುದ್ದಿ  /  ಮನರಂಜನೆ  /  Upendra Ui Bookings: ಉಪೇಂದ್ರ ಯುಐ ಸಿನಿಮಾದ ಟಿಕೆಟ್‌ಗಳಿಗೆ ಇದೆಂಥ ಬೇಡಿಕೆ, ಶುಕ್ರವಾರದ ಫಸ್ಟ್‌ ಶೋ ಹೌಸ್‌ಫುಲ್‌

Upendra UI bookings: ಉಪೇಂದ್ರ ಯುಐ ಸಿನಿಮಾದ ಟಿಕೆಟ್‌ಗಳಿಗೆ ಇದೆಂಥ ಬೇಡಿಕೆ, ಶುಕ್ರವಾರದ ಫಸ್ಟ್‌ ಶೋ ಹೌಸ್‌ಫುಲ್‌

Upendra UI bookings: ಉಪೇಂದ್ರ ನಟಿಸಿ ನಿರ್ದೇಶಿಸಿದ ಯುಐ ಸಿನಿಮಾ ಡಿಸೆಂಬರ್‌ 20ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ. ಕೆಲವು ಥಿಯೇಟರ್‌ಗಳಲ್ಲಿ ಫಾಸ್ಟ್‌ ಫಿಲ್ಲಿಂಗ್‌ ಎಂದು ಕಂಡರೆ, ಇನ್ನು ಕೆಲವು ಥಿಯೇಟರ್‌ಗಳಲ್ಲಿ ಟಿಕೆಟ್‌ ಖಾಲಿ ಇಲ್ಲ ಸೂಚನೆಗಳು ಕಾಣಿಸಿವೆ

Upendra UI bookings: ಉಪೇಂದ್ರ ಯುಐ ಸಿನಿಮಾದ ಟಿಕೆಟ್‌ ಬುಕ್ಕಿಂಗ್‌ ವಿವರ
Upendra UI bookings: ಉಪೇಂದ್ರ ಯುಐ ಸಿನಿಮಾದ ಟಿಕೆಟ್‌ ಬುಕ್ಕಿಂಗ್‌ ವಿವರ

Upendra UI bookings: ಉಪೇಂದ್ರ ನಟಿಸಿ ನಿರ್ದೇಶಿಸಿದ ಯುಐ ಸಿನಿಮಾ ಡಿಸೆಂಬರ್‌ 20ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ. ಮೊದಲ ದಿನದ ಮೊದಲ ಶೋ ವೇಗವಾಗಿ ಫುಲ್‌ ಆಗುತ್ತಿದೆ. ಕೆಲವು ಥಿಯೇಟರ್‌ಗಳಲ್ಲಿ ಫಾಸ್ಟ್‌ ಫಿಲ್ಲಿಂಗ್‌ ಎಂದು ಕಂಡರೆ, ಇನ್ನು ಕೆಲವು ಥಿಯೇಟರ್‌ಗಳಲ್ಲಿ ಟಿಕೆಟ್‌ ಖಾಲಿ ಇಲ್ಲ ಸೂಚನೆಗಳು ಕಾಣಿಸಿವೆ. ಇದು ಬೆಳಗ್ಗಿನ 6 ಗಂಟೆ ನಂತರದ ಮೊದಲ ಶೋ ಕಥೆಯಾಗಿದೆ. ಉಳಿದ ಶೋಗಳ ಟಿಕೆಟ್‌ಗಳೂ ಬೇಡಿಕೆ ಹೆಚ್ಚಿಸಿಕೊಳ್ಳತ್ತಿವೆ. ಒಟ್ಟಾರೆ, ಶುಕ್ರವಾರ ಬೆಳಗ್ಗಿನ ಮೊದಲ ಶೋಗೆ ಬೇಡಿಕೆ ಹೆಚ್ಚಾಗಿರುವುದು ಕಂಡುಬಂದಿದೆ.

ಯುಐ ಸಿನಿಮಾವು ಕನ್ನಡ ಮಾತ್ರವಲ್ಲದೆ ಪ್ಯಾನ್‌ ಇಂಡಿಯಾದಲ್ಲಿ ಬಿಡುಗಡೆಯಾಗುತ್ತಿದೆ. ಯುಐ ಸಿನಿಮಾ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿಯೂ ಬಿಡುಗಡೆಯಾಗುತ್ತಿದೆ. ಕೆಲವು ಕಡೆ ಶುಕ್ರವಾರ ಬೆಳಗ್ಗೆ 6.15 ಗಂಟೆಗೆ ಶೋ ಆರಂಭವಾಗುತ್ತಿದೆ. ಇನ್ನು ಕೆಲವು ಕಡೆ ಬೆಳಗ್ಗೆ 6.30 ಗಂಟೆಗೆ ಶೋ ಆರಂಭವಾಗುತ್ತದೆ.

ಬೆಂಗಳೂರು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌

ಬೆಂಗಳೂರಿನ ವಿವಿಧ ಥಿಯೇಟರ್‌ಗಳಲ್ಲಿ ಬುಕ್ಕಿಂಗ್‌ ಹೇಗಿದೆ ಎಂದು ನೋಡೋಣ. ಈ ಲೇಖನ ಬರೆಯುವ ಹೊತ್ತಿಗೆ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಕಾಮಾಕ್ಯ ಥಿಯೇಟರ್‌ನಲ್ಲಿ ಬೆಳಗ್ಗೆ 6.30 ಗಂಟೆಯ ಡೈಮಾಂಡ್‌ಕ್ಲಾಸ್‌ ಟಿಕೆಟ್‌ಗಳು ಸೋಲ್ಡೌಟ್‌ ಆಗಿದೆ. ಸ್ಕ್ರೀನ್‌ ಸಮೀಪದ ಮೊದಲ ಸಾಲಿನ ಕೆಲವು ಟಿಕೆಟ್‌ಗಳಷ್ಟೇ ಬಾಕಿ ಉಳಿದಿವೆ. ಗಿರಿನಗರದ ವೆಂಕಟೇಶ್ವರ ಥಿಯೇಟರ್‌ನಲ್ಲೂ ಬೆಳಗ್ಗಿನ 6 ಗಂಟೆಯ ಶೋಗೆ ಮೊದಲ ಸಾಲಿನಲ್ಲಿ ಕೆಲವು ಸೀಟುಗಳಷ್ಟೇ ಉಳಿದಿವೆ.

ಬೆಂಗಳೂರಿನ ಊರ್ವಶಿ ಥಿಯೇಟರ್‌ನಲ್ಲಿ ಬೆಳಗ್ಗೆ 6.30 ಗಂಟೆಯ ಶೋಗೆ ಸೀಟುಗಳು ಖಾಲಿ ಇಲ್ಲ. ಬೆಳಗ್ಗೆ 10.45 ಶೋ ಕೂಡ ಆಲ್‌ಮೋಸ್ಟ್‌ ಫುಲ್‌ ಪರಿಸ್ಥಿತಿ ಹೊಂದಿದೆ. ಸಿನಿಫಿಲಿ ಎಚ್‌ಎಸ್‌ಆರ್‌ ಬಡಾವಣೆಯ ಥಿಯೇಟರ್‌ನಲ್ಲಿ ಕೆಲವು ಸೀಟುಗಳು ಇವೆ. ಜಯನಗರದ ಐನಾಕ್ಸ್‌ ಗರುಡಾ ಮಾಲ್‌ನಲ್ಲಿ ಬೆಳಗ್ಗೆ 10 ಗಂಟೆ ನಂತರದ ಶೋಗಳಿಗೆ ಸೀಟುಗಳಿವೆ. ಬೃಂದಾ ಆರ್‌ಜಿ ಲೇಸರ್‌ ಹೊಂಗಸಂದ್ರದ ಥಿಯೇಟರ್‌ನಲ್ಲಿ ಬೆಳಗ್ಗಿನ ಶೋಗೆ ಕೆಲವೇ ಸೀಟುಗಳು ಬಾಕಿ ಇವೆ.

ಗಾಂಧಿನಗರದ ಸಂತೋಷ್‌ ಥಿಯೇಟರ್‌ನಲ್ಲಿ ಮಾರ್ನಿಂಗ್ ಶೋ ಫುಲ್‌ ಆಗಿದೆ. ಓರಿಯನ್‌ ಮಾಲ್‌ನಲ್ಲಿ ಕೆಲವು ಸೀಟುಗಳು ಖಾಲಿ ಉಳಿದಿವೆ. ಕಾಡುಗುಡಿಯ ಶ್ರೀನಿವಾಸ್‌ ಥಿಯೇಟರ್‌ನಲ್ಲಿ ಮುಂಭಾಗದ ಸಾಲಿನ ಕೆಲವು ಸೀಟುಗಳು ಮಾತ್ರ ಬಾಕಿ ಉಳಿದಿವೆ. ಎಂಎಸ್‌ ನಗರ್‌ ಮುಕುಂದ ಥಿಯೇಟರ್‌ನಲ್ಲೂ ಪರಿಸ್ಥಿತಿ ಇದೇ ರೀತಿ ಇದೆ. ಮಾಗಡಿ ರಸ್ತೆಯ ವೀರೇಶ್‌ ಥಿಯೇಟರ್‌ನಲ್ಲಿ ಮಾರ್ನಿಂಗ್‌ ಶೋ ಹೌಸ್‌ಫುಲ್‌ ಆಗಿದೆ. ಹೀಗೆ ಬೆಂಗಳೂರಿನ ಬಹುತೇಕ ಥಿಯೇಟರ್‌ಗಳಲ್ಲಿ ಶುಕ್ರವಾರದ ಮಾರ್ನಿಂಗ್‌ ಶೋ ಫಿಲ್ಲಿಂಗ್‌ ಫಾಸ್ಟ್‌ ಅಥವಾ ಸೋಲ್ಡೌಟ್‌ ಸ್ಥಿತಿಯಲ್ಲಿವೆ.

ಒಟ್ಟಾರೆ ಉಪೇಂದ್ರ ನಿರ್ದೇಶನದ ಕ್ಯಾಪ್‌ ತೊಟ್ಟು ನಟಿಸಿರುವ ಯುಐ ಸಿನಿಮಾದ ಕುರಿತು ದೇಶದಲ್ಲಿ ಕ್ರೇಜ್‌ ಉಂಟಾಗಿರುವುದು ಸುಳ್ಳಲ್ಲ. ಸಿನಿಮಾ ಬಿಡುಗಡೆಯಾದ ಬಳಿಕ ನಿಜವಾಗಿಯೂ ಈ ಸಿನಿಮಾ ಹೇಗಿದೆ ಎಂದು ವೀಕ್ಷಕರಿಗೆ ತಿಳಿಯಲಿದೆ. ಸಿನಿಮಾ ಅತ್ಯುತ್ತಮವಾಗಿದ್ದರೆ ಬಾಯ್ಮಾತಿನ ಪ್ರಚಾರದಿಂದಲೇ ಚಿತ್ರದ ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಲಿದೆ. ಸಿನಿಮಾ ವಿಮರ್ಶೆ ಚೆನ್ನಾಗಿಲ್ಲ ಎಂದು ಬಂದರೆ ಈ ವೀಕೆಂಡ್‌ನಲ್ಲಿ ಯುಐ ಕಲೆಕ್ಷನ್‌ ಸಾಧಾರಣ ಇರಲಿದೆ. ಈಗಾಗಲೇ ಯುಐ ಸಿನಿಮಾದ ಕೆಲವು ಝಲಕ್‌ಗಳು ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಸಮ್‌ಥಿಂಗ್‌ ಏನೋ ಇರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ. ಎಲ್ಲಾದರೂ ಇದು ಉತ್ತಮ ಸಿನಿಮಾವೆಂಬ ವಿಮರ್ಶೆ ಪಡೆದರೆ ಈ ವರ್ಷಾಂತ್ಯದಲ್ಲಿ ಬ್ಲಾಕ್‌ಬಸ್ಟರ್‌ ಆಗಲಿದೆ.

Whats_app_banner