ಪಂತ್‌ ಮಾತ್ರವಲ್ಲ; ಕಳೆದ ಋತುವಿನಲ್ಲಿ ಆಡದೆ ಈ ಬಾರಿ ಐಪಿಎಲ್ ಅಖಾಡಕ್ಕೆ ಮರಳುತ್ತಿರುವ ಆಟಗಾರರಿವರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಂತ್‌ ಮಾತ್ರವಲ್ಲ; ಕಳೆದ ಋತುವಿನಲ್ಲಿ ಆಡದೆ ಈ ಬಾರಿ ಐಪಿಎಲ್ ಅಖಾಡಕ್ಕೆ ಮರಳುತ್ತಿರುವ ಆಟಗಾರರಿವರು

ಪಂತ್‌ ಮಾತ್ರವಲ್ಲ; ಕಳೆದ ಋತುವಿನಲ್ಲಿ ಆಡದೆ ಈ ಬಾರಿ ಐಪಿಎಲ್ ಅಖಾಡಕ್ಕೆ ಮರಳುತ್ತಿರುವ ಆಟಗಾರರಿವರು

  • ಐಪಿಎಲ್ 2024ರ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಹಲವು ಬಲಿಷ್ಠ ಆಟಗಾರರು ಆಡಿರಲಿಲ್ಲ. ಈ ಬಾರಿ ಹೆಚ್ಚಿನ ಆಟಗಾರರು ಐಪಿಎಲ್‌ ಅಖಾಡಕ್ಕೆ ಇಳಿಯಲಿದ್ದಾರೆ. ಗಾಯ ಸೇರಿದಂತೆ ವಿವಿಧ ಕಾರಣಗಳಿಂದ ಟೂರ್ನಿಯಿಂದ ತಪ್ಪಿಸಿಕೊಂಡಿದ್ದ ಆಟಗಾರರು, ಮತ್ತೆ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಸಜ್ಜಾಗಿದ್ದಾರೆ.

2022ರ ಡಿಸೆಂಬರ್‌ ತಿಂಗಳಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಿಂದ ರಿಷಭ್ ಪಂತ್ ಗಾಯಗೊಂಡರು. ಅಂದಿನಿಂದ ಅವರು ಮೈದಾನಕ್ಕಿಳಿದಿಲ್ಲ. ಅವರ ಅನುಪಸ್ಥಿತಿಯಲ್ಲಿ ಕಳೆದ ಬಾರಿಯ ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು.‌ ಇದೀಗ ಗಾಯದಿಂದ ಚೇತರಿಸಿಕೊಂಡ ನಂತರ ಪಂತ್ ಅಂತಿಮವಾಗಿ ಮೈದಾನಕ್ಕೆ ಮರಳುತ್ತಿದ್ದಾರೆ. ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ನೇರವಾಗಿ ಐಪಿಎಲ್ ಅಖಾಡಕ್ಕೆ ಮರಳಿದ್ದಾರೆ. ಈ ಬಾರಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಆಡಲಿದ್ದಾರೆ.
icon

(1 / 7)

2022ರ ಡಿಸೆಂಬರ್‌ ತಿಂಗಳಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಿಂದ ರಿಷಭ್ ಪಂತ್ ಗಾಯಗೊಂಡರು. ಅಂದಿನಿಂದ ಅವರು ಮೈದಾನಕ್ಕಿಳಿದಿಲ್ಲ. ಅವರ ಅನುಪಸ್ಥಿತಿಯಲ್ಲಿ ಕಳೆದ ಬಾರಿಯ ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು.‌ ಇದೀಗ ಗಾಯದಿಂದ ಚೇತರಿಸಿಕೊಂಡ ನಂತರ ಪಂತ್ ಅಂತಿಮವಾಗಿ ಮೈದಾನಕ್ಕೆ ಮರಳುತ್ತಿದ್ದಾರೆ. ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ನೇರವಾಗಿ ಐಪಿಎಲ್ ಅಖಾಡಕ್ಕೆ ಮರಳಿದ್ದಾರೆ. ಈ ಬಾರಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಆಡಲಿದ್ದಾರೆ.(PTI)

ಗಾಯದ ಸಮಸ್ಯೆಯಿಂದಾಗಿ ಜಸ್ಪ್ರೀತ್ ಬುಮ್ರಾ 2023ರ ಐಪಿಎಲ್‌ನಿಂದ ಹೊರಗುಳಿದಿದ್ದರು. ಕಳೆದ ವರ್ಷದ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಅವರು ಮೈದಾನಕ್ಕೆ ಮರಳಿದರು. ಟೀಮ್ ಇಂಡಿಯಾದ ಸ್ಟಾರ್ ವೇಗಿ ಪ್ರಸ್ತುತ ಉತ್ತಮ ಲಯದಲ್ಲಿದ್ದಾರೆ. ಈ ಬಾರಿ ಅವರು ಮತ್ತೆ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ ಆಡಲಿದ್ದಾರೆ.
icon

(2 / 7)

ಗಾಯದ ಸಮಸ್ಯೆಯಿಂದಾಗಿ ಜಸ್ಪ್ರೀತ್ ಬುಮ್ರಾ 2023ರ ಐಪಿಎಲ್‌ನಿಂದ ಹೊರಗುಳಿದಿದ್ದರು. ಕಳೆದ ವರ್ಷದ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಅವರು ಮೈದಾನಕ್ಕೆ ಮರಳಿದರು. ಟೀಮ್ ಇಂಡಿಯಾದ ಸ್ಟಾರ್ ವೇಗಿ ಪ್ರಸ್ತುತ ಉತ್ತಮ ಲಯದಲ್ಲಿದ್ದಾರೆ. ಈ ಬಾರಿ ಅವರು ಮತ್ತೆ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ ಆಡಲಿದ್ದಾರೆ.(PTI)

ಬೆನ್ನುನೋವಿನಿಂದಾಗಿ ಶ್ರೇಯಸ್ ಅಯ್ಯರ್ 2023ರ ಐಪಿಎಲ್ ಆವೃತ್ತಿಯಿಂದ ಹೊರಗುಳಿದಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾದ ಅವರ ಬದಲಿಗೆ ಕಳೆದ ಐಪಿಎಲ್‌ನಲ್ಲಿ ನಿತೀಶ್ ರಾಣಾ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದರು. ಶ್ರೇಯಸ್ ಈಗಾಗಲೇ ಶಸ್ತ್ರಚಿಕಿತ್ಸೆಯ ನಂತರ ಮೈದಾನಕ್ಕೆ ಮರಳಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದ ಅಯ್ಯರ್‌, ಈ ವರ್ಷ ಮತ್ತೆ ಕೆಕೆಆರ್ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ. ಆದಾಗ್ಯೂ, ಅವರು ಹಳೆಯ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತದೆ.
icon

(3 / 7)

ಬೆನ್ನುನೋವಿನಿಂದಾಗಿ ಶ್ರೇಯಸ್ ಅಯ್ಯರ್ 2023ರ ಐಪಿಎಲ್ ಆವೃತ್ತಿಯಿಂದ ಹೊರಗುಳಿದಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾದ ಅವರ ಬದಲಿಗೆ ಕಳೆದ ಐಪಿಎಲ್‌ನಲ್ಲಿ ನಿತೀಶ್ ರಾಣಾ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದರು. ಶ್ರೇಯಸ್ ಈಗಾಗಲೇ ಶಸ್ತ್ರಚಿಕಿತ್ಸೆಯ ನಂತರ ಮೈದಾನಕ್ಕೆ ಮರಳಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದ ಅಯ್ಯರ್‌, ಈ ವರ್ಷ ಮತ್ತೆ ಕೆಕೆಆರ್ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ. ಆದಾಗ್ಯೂ, ಅವರು ಹಳೆಯ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತದೆ.(PTI)

‌ಆಸೀಸ್‌ ನಾಯಕ ಪ್ಯಾಟ್ ಕಮಿನ್ಸ್ ಕಳೆದ ವರ್ಷ ಐಪಿಎಲ್‌ನಿಂದ ಹಿಂದೆ ಸರಿದು ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಗಮನ ಹರಿಸಿದ್ದರು. ಅವರು ಕೆಕೆಆರ್‌ ತಂಡದಿಂದ ಹೊರಗುಳಿದರು. ಈ ವರ್ಷದ ಹರಾಜಿಗೆ ಮುಂಚಿತವಾಗಿ ಕೆಕೆಆರ್ ಕಮಿನ್ಸ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವು ಆಸೀಸ್ ನಾಯಕನನ್ನು ದಾಖಲೆಯ 20.50  ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿಸಿತು. ಈ ಬಾರಿ ಕಮಿನ್ಸ್ ಎಸ್‌ಆರ್‌ಎಚ್‌ ಜೆರ್ಸಿಯಲ್ಲಿ ಆಡಲಿದ್ದಾರೆ.  
icon

(4 / 7)

‌ಆಸೀಸ್‌ ನಾಯಕ ಪ್ಯಾಟ್ ಕಮಿನ್ಸ್ ಕಳೆದ ವರ್ಷ ಐಪಿಎಲ್‌ನಿಂದ ಹಿಂದೆ ಸರಿದು ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಗಮನ ಹರಿಸಿದ್ದರು. ಅವರು ಕೆಕೆಆರ್‌ ತಂಡದಿಂದ ಹೊರಗುಳಿದರು. ಈ ವರ್ಷದ ಹರಾಜಿಗೆ ಮುಂಚಿತವಾಗಿ ಕೆಕೆಆರ್ ಕಮಿನ್ಸ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವು ಆಸೀಸ್ ನಾಯಕನನ್ನು ದಾಖಲೆಯ 20.50  ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿಸಿತು. ಈ ಬಾರಿ ಕಮಿನ್ಸ್ ಎಸ್‌ಆರ್‌ಎಚ್‌ ಜೆರ್ಸಿಯಲ್ಲಿ ಆಡಲಿದ್ದಾರೆ.  (AFP)

ಮಿಚೆಲ್ ಸ್ಟಾರ್ಕ್ ಕಳೆದ ಎಂಟು ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿದಿದ್ದಾರೆ. ಅಂತಿಮವಾಗಿ, ಆಸೀಸ್ ವೇಗಿ ಈ ವರ್ಷ ಐಪಿಎಲ್ ಆಡಲು ನಿರ್ಧರಿಸಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸ್ಟಾರ್ಕ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡವು ದಾಖಲೆಯ 24.75 ಕೋಟಿ ರೂಪಾಯಿಗೆ ಖರೀದಿಸಿದೆ.
icon

(5 / 7)

ಮಿಚೆಲ್ ಸ್ಟಾರ್ಕ್ ಕಳೆದ ಎಂಟು ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿದಿದ್ದಾರೆ. ಅಂತಿಮವಾಗಿ, ಆಸೀಸ್ ವೇಗಿ ಈ ವರ್ಷ ಐಪಿಎಲ್ ಆಡಲು ನಿರ್ಧರಿಸಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸ್ಟಾರ್ಕ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡವು ದಾಖಲೆಯ 24.75 ಕೋಟಿ ರೂಪಾಯಿಗೆ ಖರೀದಿಸಿದೆ.(AFP)

ಗಾಯದ ಸಮಸ್ಯೆಯಿಂದಾಗಿ ಕೇನ್ ವಿಲಿಯಮ್ಸನ್ ಕಳೆದ ವರ್ಷದ ಐಪಿಎಲ್‌ನಿಂದ ಹೊರಗುಳಿದಿದ್ದರು. ಗುಜರಾತ್ ಟೈಟಾನ್ಸ್ ತಂಡವು ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆದ ನಂತರ, ವಿಲಿಯಮ್ಸನ್‌ಗೆ ನಾಯಕತ್ವ ನೀಡಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಗುಜರಾತ್ ತಂಡವು ನಾಯಕತ್ವವನ್ನು ಶುಬ್ಮನ್ ಗಿಲ್‌ಗೆ ಹಸ್ತಾಂತರಿಸಿದೆ. ಕೇನ್ ವಿಲಿಯಮ್ಸನ್ ಗಾಯದಿಂದ ಚೇತರಿಸಿಕೊಂಡ ನಂತರ ಮೈದಾನಕ್ಕೆ ಮರಳಿದ್ದಾರೆ. ಹೀಗಾಗಿ ಐಪಿಎಲ್ 2024ರಲ್ಲಿ ಅವರು ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ.
icon

(6 / 7)

ಗಾಯದ ಸಮಸ್ಯೆಯಿಂದಾಗಿ ಕೇನ್ ವಿಲಿಯಮ್ಸನ್ ಕಳೆದ ವರ್ಷದ ಐಪಿಎಲ್‌ನಿಂದ ಹೊರಗುಳಿದಿದ್ದರು. ಗುಜರಾತ್ ಟೈಟಾನ್ಸ್ ತಂಡವು ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆದ ನಂತರ, ವಿಲಿಯಮ್ಸನ್‌ಗೆ ನಾಯಕತ್ವ ನೀಡಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಗುಜರಾತ್ ತಂಡವು ನಾಯಕತ್ವವನ್ನು ಶುಬ್ಮನ್ ಗಿಲ್‌ಗೆ ಹಸ್ತಾಂತರಿಸಿದೆ. ಕೇನ್ ವಿಲಿಯಮ್ಸನ್ ಗಾಯದಿಂದ ಚೇತರಿಸಿಕೊಂಡ ನಂತರ ಮೈದಾನಕ್ಕೆ ಮರಳಿದ್ದಾರೆ. ಹೀಗಾಗಿ ಐಪಿಎಲ್ 2024ರಲ್ಲಿ ಅವರು ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ.(AFP)

ಜಾನಿ ಬೈರ್‌ಸ್ಟೋ 2022 ಸೆಪ್ಟೆಂಬರ್ ತಿಂಗಳಲ್ಲಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ನಂತರ ದೀರ್ಘಕಾಲದವರೆಗೆ ಮೈದಾನದಿಂದ ಹೊರಗುಳಿದಿದ್ದರು. ಹೀಗಾಗಿ ಅವರು ಐಪಿಎಲ್ 2023ರಲ್ಲಿ ಮೈದಾನಕ್ಕಿಳಿಯಲು ಸಾಧ್ಯವಾಗಲಿಲ್ಲ. ಈಗ ಐಪಿಎಲ್‌ನಲ್ಲಿ ಅವರು ಪಂಜಾಬ್ ಕಿಂಗ್ಸ್ ಪರ ಆಡಲು ಸಜ್ಜಾಗಿದ್ದಾರೆ.
icon

(7 / 7)

ಜಾನಿ ಬೈರ್‌ಸ್ಟೋ 2022 ಸೆಪ್ಟೆಂಬರ್ ತಿಂಗಳಲ್ಲಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ನಂತರ ದೀರ್ಘಕಾಲದವರೆಗೆ ಮೈದಾನದಿಂದ ಹೊರಗುಳಿದಿದ್ದರು. ಹೀಗಾಗಿ ಅವರು ಐಪಿಎಲ್ 2023ರಲ್ಲಿ ಮೈದಾನಕ್ಕಿಳಿಯಲು ಸಾಧ್ಯವಾಗಲಿಲ್ಲ. ಈಗ ಐಪಿಎಲ್‌ನಲ್ಲಿ ಅವರು ಪಂಜಾಬ್ ಕಿಂಗ್ಸ್ ಪರ ಆಡಲು ಸಜ್ಜಾಗಿದ್ದಾರೆ.(AFP)


ಇತರ ಗ್ಯಾಲರಿಗಳು