Deepavali 2024: ದೀಪಾವಳಿ ಮೊದಲ ದಿನ ನರಕಚತುರ್ದಶಿ ಸಡಗರ; ಗಣ್ಯರ ಮನೆಯಲ್ಲೂ ಪೂಜೆ, ದೀಪ, ಪಟಾಕಿ ಖುಷಿ ಹೀಗಿತ್ತು
- ಕರ್ನಾಟಕದಲ್ಲಿ ದೀಪಾವಳಿ ಸಡಗರ ಜೋರಾಗಿದೆ. ಮೊದಲ ದಿನವಾದ ನರಕಚತುರ್ದಶಿಯಂದು ಹಲವೆಡೆ ವಿಭಿನ್ನವಾಗಿ ಹಬ್ಬ ಆಚರಿಸಲಾಯಿತು. ಡಿಸಿಎಂ ಡಿಕೆಶಿ ಪತ್ನಿ ಉಷಾ ಜತೆಗೆ ದೀಪಾವಳಿ ಆಚರಿಸಿದರು. ಇದರ ಚಿತ್ರ ನೋಟ ಇಲ್ಲಿದೆ.
- ಕರ್ನಾಟಕದಲ್ಲಿ ದೀಪಾವಳಿ ಸಡಗರ ಜೋರಾಗಿದೆ. ಮೊದಲ ದಿನವಾದ ನರಕಚತುರ್ದಶಿಯಂದು ಹಲವೆಡೆ ವಿಭಿನ್ನವಾಗಿ ಹಬ್ಬ ಆಚರಿಸಲಾಯಿತು. ಡಿಸಿಎಂ ಡಿಕೆಶಿ ಪತ್ನಿ ಉಷಾ ಜತೆಗೆ ದೀಪಾವಳಿ ಆಚರಿಸಿದರು. ಇದರ ಚಿತ್ರ ನೋಟ ಇಲ್ಲಿದೆ.
(2 / 9)
ರಾಜಕೀಯ ಜಂಝಡಗಳ ನಡುವೆಯೂ ದೀಪಾವಳಿ ದಿನ ಮನೆಯಲ್ಲಿಯೇ ಕಳೆದ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ದೀಪ ಹಚ್ಚಿ ಹಬ್ಬ ಆಚರಿಸಿದರು.
(3 / 9)
ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಪತ್ನಿ ಉಷಾ ಅವರೊಂದಿಗೆ ದೀಪಗಳ ಹಬ್ಬ ದೀಪಾವಳಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಆಚರಿಸಿದರು.
(4 / 9)
ಸಚಿವ ಶಿವಾನಂದ್ ಪಾಟೀಲ್ ಅವರು ವಿಜಯಪುರದಲ್ಲಿರುವ ತಮ್ಮ ಕಚೇರಿಯಲ್ಲಿ ಕುಟುಂದವರೊಂದಿಗೆ ಪೂಜೆ ನೆರವೇರಿಸಿದರು.
(5 / 9)
ಉಡುಪಿಯಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಪುತ್ತಿಗೆ ಶ್ರೀ ಅವರಿಂದ ಆಶಿರ್ವಾದ ಪಡೆದರು.
(6 / 9)
ಬಾಗಲಕೋಟದಲ್ಲಿ ದೀಪಾವಳಿ ಅಂಗವಾಗಿ ಪೂಜೆ ಸಡಗರ. ಮನೆಯಲ್ಲಿ ಹಿರಿಯರಿಗೆ ಮಕ್ಕಳು ಆರತಿ ಬೆಳಗಿ ಬೆಳಕಿನ ಹಬ್ಬ ಆಚರಿಸಿದರು.
(8 / 9)
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ತಿರುಮಲ ಹಟ್ಟಿಯಲ್ಲಿ ದೀಪಾವಳಿ ಹಬ್ಬದ ಸಡಗರ ವಿಭಿನ್ನ ಆಚರಣೆಯೊಂದಿಗೆ ಶುರುವಾಯಿತು.
ಇತರ ಗ್ಯಾಲರಿಗಳು