ಅಮೆರಿಕದಲ್ಲಿ ಓದುವ ಕನಸು ನಿಮ್ಮದಾ; ಯುಎಸ್‌ನ ಟಾಪ್ 10 ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿ ಇಲ್ಲಿದೆ ನೋಡಿ
- US Best Colleges Rankings 2025: ಯುಎಸ್ ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್ ದೇಶದ ಅತ್ಯುತ್ತಮ ಕಾಲೇಜು ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದೆ. ಅಮೆರಿಕದಲ್ಲಿ ಓದುವ ಆಸೆ-ಕನಸು ಹೊಂದಿರುವವರು ಯುನೈಟೆಡ್ ಸ್ಟೇಟ್‌ನ ಈ ಟಾಪ್ 10 ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಅಡ್ಮಿಶನ್ ಪಡೆಯಬಹುದು. ಅಗ್ರ 10 ಶ್ರೇಯಾಂಕ ಹೀಗಿವೆ.
- US Best Colleges Rankings 2025: ಯುಎಸ್ ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್ ದೇಶದ ಅತ್ಯುತ್ತಮ ಕಾಲೇಜು ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದೆ. ಅಮೆರಿಕದಲ್ಲಿ ಓದುವ ಆಸೆ-ಕನಸು ಹೊಂದಿರುವವರು ಯುನೈಟೆಡ್ ಸ್ಟೇಟ್‌ನ ಈ ಟಾಪ್ 10 ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಅಡ್ಮಿಶನ್ ಪಡೆಯಬಹುದು. ಅಗ್ರ 10 ಶ್ರೇಯಾಂಕ ಹೀಗಿವೆ.
(1 / 10)
ಬೆಸ್ಟ್ ಕಾಲೇಜ್ ಶ್ರೇಯಾಂಕ್ 2025ರ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯ (Princeton University ಮೊದಲ ಸ್ಥಾನ ಪಡೆದುಕೊಂಡಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಗಾತ್ರವು 690 ಎಕರೆಗಳಾಗಿದ್ದು, ಸೆಮಿಸ್ಟರ್ ಆಧಾರಿತ ಶಿಕ್ಷಣ ನೀಡುತ್ತದೆ. ಇದನ್ನು 1746ರಲ್ಲಿ ಸ್ಥಾಪಿಸಲಾಯಿತು.(Coutesy/Princeton University)
(2 / 10)
ಅಮೆರಿಕದ ಕೇಂಬ್ರಿಡ್ಜ್‌ನಲ್ಲಿರುವ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (The Massachusetts Institute of Technology in Cambridge) ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕ್ಯಾಂಪಸ್ ಗಾತ್ರವು 168 ಎಕರೆಗಳು. ಈ ಸಂಸ್ಥೆಯು ಅರ್ಥಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಭೂ ವಿಜ್ಞಾನ, ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ ಕೋರ್ಸ್‌ಗಳಿಗೆ ಜನಪ್ರಿಯವಾಗಿದೆ.(Getty Images/File)
(3 / 10)
ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯವು ಮೂರನೇ ಸ್ಥಾನದಲ್ಲಿದೆ. ಇದು ಬರೋಬ್ಬರಿ 5,667 ಎಕರೆ ಕ್ಯಾಂಪಸ್ ಗಾತ್ರವನ್ನು ಹೊಂದಿದೆ. ವಿಶ್ವವಿದ್ಯಾಲಯವು ಸೆಮಿಸ್ಟರ್ ಆಧಾರಿತ ಶೈಕ್ಷಣಿಕ ಕ್ಯಾಲೆಂಡರ್ ಅನುಸರಿಸುತ್ತದೆ.(Unsplash )
(4 / 10)
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯವು (Stanford University) ನಾಲ್ಕನೇ ಅತ್ಯುತ್ತಮ ರಾಷ್ಟ್ರೀಯ ವಿಶ್ವವಿದ್ಯಾಲಯವಾಗಿ ಸ್ಥಾನ ಪಡೆದಿದೆ. ಇದು ಬರೋಬ್ಬರಿ 8,180 ಎಕರೆಗಳಷ್ಟು ವಿಸ್ತಾರವಾದ ಕ್ಯಾಂಪಸ್ ಹೊಂದಿದೆ. ವಿಶ್ವವಿದ್ಯಾಲಯವು ಕ್ವಾರ್ಟರ್ ಆಧಾರಿತ ಶೈಕ್ಷಣಿಕ ಕ್ಯಾಲೆಂಡರ್ ಒಳಗೊಂಡಿದೆ.(X)
(5 / 10)
ಯೇಲ್/ಯಾಲೆ ವಿಶ್ವವಿದ್ಯಾಲಯವು (Yale University) ಅಮೆರಿಕದ ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಗಾತ್ರವು 1,108 ಎಕರೆಗಳು.(AP)
(6 / 10)
ಅತ್ಯುತ್ತಮ ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಆರನೇ ಸ್ಥಾನದಲ್ಲಿ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (California Institute of Technology) ಇದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಗಾತ್ರವು 124 ಎಕರೆಗಳು.(Unsplash)
(7 / 10)
ಆರನೇ ಸ್ಥಾನದಲ್ಲಿರುವ ಡ್ಯೂಕ್ ವಿಶ್ವವಿದ್ಯಾಲಯವಿದೆ (Duke University. ಡರ್ಹಾಮ್‌ನಲ್ಲಿರುವ ಈ ಕ್ಯಾಂಪಸ್ 8,693 ಎಕರೆ ವ್ಯಾಪಿಸಿದೆ.(Shutterstock)
(8 / 10)
ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು (John Hopkins University) ಅತ್ಯುತ್ತಮ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಹಂಚಿಕೊಂಡಿದೆ. ಇದು 140 ಎಕರೆ ಕ್ಯಾಂಪಸ್ ಹೊಂದಿದೆ.(Twitter/@JohnsHopkins)
(9 / 10)
ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯ (Northwestern University) ಕೂಡಾ ಉನ್ನತ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಉನ್ನತ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕ್ಯಾಂಪಸ್ ಗಾತ್ರವು 231 ಎಕರೆಗಳಿಗೆ ವಿಸ್ತರಿಸಿದೆ.(northwestern.edu)
ಇತರ ಗ್ಯಾಲರಿಗಳು