6000 ರನ್, 200 ವಿಕೆಟ್; ಜಾಕ್ ಕಾಲಿಸ್-ಗ್ಯಾರಿ ಸೋಬರ್ಸ್ ಕ್ಲಬ್ ಸೇರಿದ ಬೆನ್ಸ್ಟೋಕ್ಸ್
- Ben Stokes Record: ವೆಸ್ಟ್ ಇಂಡೀಸ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಉತ್ತಮ ವೈಯಕ್ತಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
- Ben Stokes Record: ವೆಸ್ಟ್ ಇಂಡೀಸ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಉತ್ತಮ ವೈಯಕ್ತಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
(1 / 5)
ವೆಸ್ಟ್ ಇಂಡೀಸ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನತ್ತ ಹೆಜ್ಜೆ ಹಾಕಿದೆ. ಪಂದ್ಯದ 2ನೇ ದಿನದಂದು ನಾಯಕ ಬೆನ್ ಸ್ಟೋಕ್ಸ್ ವಿಶೇಷ ಮೈಲಿಗಲ್ಲು ನಿರ್ಮಿಸಿದ್ದಾರೆ. ಈ ದಾಖಲೆ ಬರೆದ ಇಂಗ್ಲೆಂಡ್ನ ಮೊದಲ ಕ್ರಿಕೆಟಿಗ ಹಾಗೂ ವಿಶ್ವದ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(2 / 5)
ಮೊದಲ ಇನ್ನಿಂಗ್ಸ್ನಲ್ಲಿ 8 ಓವರ್ಗಳಲ್ಲಿ 14 ರನ್ ನೀಡಿ 1 ವಿಕೆಟ್ ಪಡೆದ ಬೆನ್ ಸ್ಟೋಕ್ಸ್, ವಿಂಡೀಸ್ 2ನೇ ಇನ್ನಿಂಗ್ಸ್ನಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ ಕಿರ್ಕ್ ಮೆಕೆಂಜಿ ಅವರನ್ನು ಔಟ್ ಮಾಡಿದರು. ಇದರೊಂದಿಗೆ ಸ್ಟೋಕ್ಸ್ ವೈಯಕ್ತಿಕ ಮೈಲಿಗಲ್ಲನ್ನು ಮುಟ್ಟಿದರು.
(3 / 5)
ಎರಡು ಇನ್ನಿಂಗ್ಸ್ನಲ್ಲಿ 2 ವಿಕೆಟ್ ಪಡೆದ ಬೆನ್ ಸ್ಟೋಕ್ಸ್ ಟೆಸ್ಟ್ ವೃತ್ತಿಜೀವನದಲ್ಲಿ 200 ವಿಕೆಟ್ಗಳ ಸಾಧನೆಗೈದರು. 103 ಟೆಸ್ಟ್ ಪಂದ್ಯಗಳ ಪೈಕಿ 149 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡುವ ಮೂಲಕ ಈ ದಾಖಲೆ ಬರೆದರು. 186 ಇನ್ನಿಂಗ್ಸ್ಗಳಲ್ಲಿ 6320 ರನ್ ಗಳಿಸಿದ್ದಾರೆ.
(4 / 5)
ಸ್ಟೋಕ್ಸ್ 200 ವಿಕೆಟ್ಗಳ ಸಾಧನೆ ಮಾಡಿದ ಇಂಗ್ಲೆಂಡ್ನ ಎರಡನೇ ಟೆಸ್ಟ್ ಆಲ್ರೌಂಡರ್ ಎನಿಸಿದ್ದಾರೆ. ಮೊದಲು ಇಯಾನ್ ಬೋಥಮ್ ಈ ಸಾಧನೆ ಮಾಡಿದ್ದಾರೆ. ಟೆಸ್ಟ್ನಲ್ಲಿ 4,000ಕ್ಕೂ ಹೆಚ್ಚು ರನ್ ಮತ್ತು 200 ವಿಕೆಟ್ ಪಡೆದ 2ನೇ ಇಂಗ್ಲೆಂಡ್ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಸ್ಟೋಕ್ಸ್ ಪಾತ್ರರಾಗಿದ್ದಾರೆ. ಇಯಾನ್ ಬೋಥಮ್ 102 ಟೆಸ್ಟ್ ಪಂದ್ಯಗಳಲ್ಲಿ 5,200 ರನ್ ಗಳಿಸಿದ್ದು, 168 ಇನ್ನಿಂಗ್ಸ್ಗಳಲ್ಲಿ 383 ವಿಕೆಟ್ ಪಡೆದಿದ್ದಾರೆ.
(5 / 5)
ಇದೇ ವೇಳೆ ಸ್ಟೋಕ್ಸ್ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಗ್ಯಾರಿ ಸೋಬರ್ಸ್ ಮತ್ತು ಜಾಕ್ ಕಾಲಿಸ್ ನಂತರ ಟೆಸ್ಟ್ನಲ್ಲಿ 6000ಕ್ಕೂ ಹೆಚ್ಚು ರನ್ ಮತ್ತು 200ಕ್ಕೂ ಅಧಿಕ ವಿಕೆಟ್ ಕಬಳಿಸಿದ ವಿಶ್ವದ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಸ್ಟೋಕ್ಸ್ ಪಾತ್ರರಾಗಿದ್ದಾರೆ. 93 ಟೆಸ್ಟ್ನಲ್ಲಿ 8032 ರನ್ ಗಳಿಸಿದ್ದು, 235 ವಿಕೆಟ್ ಪಡೆದಿದ್ದಾರೆ. ಕಾಲಿಸ್ 166 ಟೆಸ್ಟ್ಗಳಲ್ಲಿ 13289 ರನ್, 292 ವಿಕೆಟ್ ಪಡೆದಿದ್ದಾರೆ.
ಇತರ ಗ್ಯಾಲರಿಗಳು