IPL Trade Window: ಐಪಿಎಲ್ ಟ್ರೇಡ್ ವಿಂಡೋ ಎಂದರೇನು, ಅದರ ನಿಯಮಗಳೇನು? ಇಲ್ಲಿದೆ ಮಾಹಿತಿ
- What is IPL Trade Window: ಐಪಿಎಲ್ನಲ್ಲಿ ಟ್ರೇಡ್ ವಿಂಡೋ ಎಂದರೇನು? ಇದರ ಸಹಾಯದಿಂದ ಆಟಗಾರರನ್ನು ವಿನಿಮಿಯ ಮಾಡಿಕೊಳ್ಳುವುದೇಗೆ? ನಿಯಮ ಏನು ಹೇಳುತ್ತದೆ ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
- What is IPL Trade Window: ಐಪಿಎಲ್ನಲ್ಲಿ ಟ್ರೇಡ್ ವಿಂಡೋ ಎಂದರೇನು? ಇದರ ಸಹಾಯದಿಂದ ಆಟಗಾರರನ್ನು ವಿನಿಮಿಯ ಮಾಡಿಕೊಳ್ಳುವುದೇಗೆ? ನಿಯಮ ಏನು ಹೇಳುತ್ತದೆ ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
(1 / 11)
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಐಪಿಎಲ್ ಮಿನಿ ಹರಾಜು ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಬಿಡ್ ವಾರ್‌ಗೂ ಮುನ್ನ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ನಿರ್ಮಿಸುತ್ತಿವೆ.
(2 / 11)
ಎಲ್ಲಾ 10 ಐಪಿಎಲ್ ತಂಡಗಳು ಹರಾಜಿಗೂ ಮುನ್ನ ಮುಂಚೆಯೇ ಬಿಡುಗಡೆ ಮತ್ತು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಸಲ್ಲಿಸುವ ನವೆಂಬರ್ 26 ಕೊನೆಯ ದಿನಾಂಕವಾಗಿದೆ.
(3 / 11)
ಅದಕ್ಕೂ ಮುನ್ನ ಹರಾಜಿನಲ್ಲಿ ಆಟಗಾರರನ್ನು ಖರೀದಿಸುವ ಪರ್ಸ್ ಮೊತ್ತವನ್ನು ಹೆಚ್ಚಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಕೆಲ ಫ್ರಾಂಚೈಸಿಗಳು ಹರಾಜಿಗೂ ಮೊದಲೇ ಟ್ರೇಡ್ ವಿಂಡೋದ ಆಟಗಾರರನ್ನು ವಿನಿಮಯ ಮಾಡಿಕೊಂಡಿವೆ.
(4 / 11)
ಹಾಗಿದ್ದರೆ, ಟ್ರೇಡ್ ವಿಂಡೋ ಎಂದರೇನು? ಇದರ ಸಹಾಯದಿಂದ ಆಟಗಾರರನ್ನು ವಿನಿಮಿಯ ಮಾಡಿಕೊಳ್ಳುವುದೇಗೆ? ನಿಯಮ ಏನು ಹೇಳುತ್ತದೆ ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
(5 / 11)
ಐಪಿಎಲ್ ಟ್ರೇಡ್ ವಿಂಡೋವು ಪರಸ್ಪರ ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ. ಅಥವಾ ಹರಾಜಿನ ಮೊದಲು ನಗದು ವ್ಯವಹಾರ ನಡೆಸಿಯೂ ಆಟಗಾರರನ್ನು ಬುಟ್ಟಿಗೆ ಹಾಕಿಕೊಳ್ಳಬಹುದು. ಈ ವಿಚಾರಕ್ಕೆ ಸಂಬಂಧಿಸಿ ಐಪಿಎಲ್ ಆಡಳಿತ ಮಂಡಳಿ ಸಂಪೂರ್ಣ ಅಧಿಕಾರ ನೀಡಿದೆ.
(6 / 11)
ಫ್ರಾಂಚೈಸಿಗಳು ಪ್ರಸ್ತುತ ಕ್ರಿಕೆಟಿಗರು ಸೇರಿರುವ ಫ್ರಾಂಚೈಸಿಗೆ ಹಣವನ್ನು ನೀಡುವ ಮೂಲಕ ಆಟಗಾರರನ್ನು ವ್ಯಾಪಾರ (ಟ್ರೇಡ್) ಮಾಡಬಹುದು.
(7 / 11)
ಆದರೆ ವ್ಯಾಪಾರ ಅಥವಾ ವರ್ಗಾವಣೆ ಪೂರ್ಣಗೊಳಿಸಲು ನಿರ್ದಿಷ್ಟ ಆಟಗಾರನ ಒಪ್ಪಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ.
(8 / 11)
ಒಂದು ವೇಳೆ ಆಟಗಾರನು ವ್ಯಾಪಾರ ಅಥವಾ ವಿನಿಮಯಕ್ಕೆ ಒಪ್ಪಿಗೆ ಸೂಚಿಸದಿದ್ದರೆ, ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ.
(9 / 11)
ಒಂದಕ್ಕಿಂತ ಹೆಚ್ಚು ಫ್ರಾಂಚೈಸ್‌ಗಳು ಒಂದೇ ಆಟಗಾರನನ್ನು ಖರೀದಿಸಲು ಬಯಸಿದರೆ, ಈ ವೇಳೆ ಫ್ರಾಂಚೈಸಿ ತನ್ನ ಆಟಗಾರ ಯಾವ ತಂಡಕ್ಕೆ ಹೋಗಬೇಕೆಂದು ನಿರ್ಧರಿಸುವ ಅಧಿಕಾರ ಹೊಂದಿರುತ್ತದೆ.
ಇತರ ಗ್ಯಾಲರಿಗಳು