Team India Troll: ಕಿತ್ತಳೆ ಜೆರ್ಸಿಯಲ್ಲಿ ಭಾರತ ತಂಡ; ಸ್ವಿಗ್ಗಿ ಡೆಲಿವರಿ ಬಾಯ್ಸ್ ಎಂದು ಕಾಲೆಳೆದ ನೆಟ್ಟಿಗರು
- Team India Troll: ಟೀಮ್ ಇಂಡಿಯಾದ ಆಟಗಾರರು ಧರಿಸಿರುವ ಕಿತ್ತಳೆ ಬಣ್ಣದ ಜೆರ್ಸಿಯನ್ನು ಕಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಸ್ವಿಗ್ಗಿ ಡೆಲಿವರಿ ಬಾಯ್ಸ್ ಎಂದು ಕಾಲೆಳೆಯುತ್ತಿದ್ದಾರೆ.
- Team India Troll: ಟೀಮ್ ಇಂಡಿಯಾದ ಆಟಗಾರರು ಧರಿಸಿರುವ ಕಿತ್ತಳೆ ಬಣ್ಣದ ಜೆರ್ಸಿಯನ್ನು ಕಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಸ್ವಿಗ್ಗಿ ಡೆಲಿವರಿ ಬಾಯ್ಸ್ ಎಂದು ಕಾಲೆಳೆಯುತ್ತಿದ್ದಾರೆ.
(1 / 13)
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ತನ್ನ ಮೊದಲ ಪಂದ್ಯಕ್ಕಾಗಿ ಭಾರತ ತಂಡವು ಚೆನ್ನೈಗೆ ಬಂದಿಳಿದಿದೆ.
(2 / 13)
ಇದಕ್ಕೂ ಮುನ್ನ ಟೀಮ್ ಇಂಡಿಯಾ ಗುವಾಹಟಿ ಮತ್ತು ತಿರುವನಂತಪುರಂನಲ್ಲಿ ಅಭ್ಯಾಸ ಪಂದ್ಯಗಳಿಗೆ ಪ್ರಯಾಣ ಬೆಳೆಸಿತ್ತು. ಆದರೆ ಎರಡೂ ಪಂದ್ಯಗಳು ಮಳೆಯಿಂದಾಗಿ ರದ್ದಾದ್ದವು.
(3 / 13)
ಆಸ್ಟ್ರೇಲಿಯಾ ಪಂದ್ಯಕ್ಕೂ ಮುನ್ನ ಮೆನ್ ಇನ್ ಬ್ಲೂ ತಂಡವು ಕಿತ್ತಳೆ ಬಣ್ಣದ ಜೆರ್ಸಿ ಕಿಟ್ನಲ್ಲಿ ಕಾಣಿಸಿಕೊಂಡಿದೆ.
(4 / 13)
ಭಾರತ ತಂಡವು ಈ ಹಿಂದೆ ಕೆಂಪು ಮತ್ತು ಬೂದು ಬಣ್ಣದ ವಿವಿಧ ಬಣ್ಣದ ಕಿಟ್ಗಳೊಂದಿಗೆ ಕಣಕ್ಕಿಳಿದಿದೆ. ನೀಲಿ ಬಣ್ಣದ ಪ್ರಾಕ್ಟೀಸ್ ಕಿಟ್ ಹೊಂದಿರುವ ಭಾರತ, ಇದೇ ಮೊದಲ ಬಾರಿಗೆ ಕಿತ್ತಳೆ ಕಿಟ್ ಧರಿಸಿದೆ.
(5 / 13)
2019ರ ವಿಶ್ವಕಪ್ನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ನೀಲಿ ಬಣ್ಣ ಧರಿಸಿದ್ದ ಕಾರಣ, ಭಾರತವು ಕೇಸರಿ ಛಾಯೆ ಟಿ-ಶರ್ಟ್ ಮತ್ತು ನೇವಿ ಬ್ಲೂ ಪ್ಯಾಂಟ್ ಧರಿಸಿ ಕಣಕ್ಕಿಳಿದಿತ್ತು.(AFP)
(6 / 13)
ಜೂನ್ನಲ್ಲಿ ಹೊಸ ಕಿಟ್ ಪಾಲುದಾರ ಅಡಿಡಾಸ್ ಮಂಡಳಿಗೆ ಬಂದ ಕ್ಷಣದಿಂದ ಭಾರತ ತಂಡವು, ತಿಳಿ ನೀಲಿ ಬಣ್ಣದ ಪ್ರಾಕ್ಟೀಸ್ ಕಿಟ್ಗಳನ್ನು ಧರಿಸುತ್ತಿದೆ. ಅಡಿಡಾಸ್ ವಿಶ್ವಕಪ್ಗಾಗಿ ಕಪ್ಪು ಬಣ್ಣದ ಟ್ರಾವೆಲಿಂಗ್ ಕಿಟ್ ಅನ್ನೂ ಅನಾವರಣ ಮಾಡಿತ್ತು.
(7 / 13)
ಕಪ್ಪು ಬಣ್ಣವು ತಿಳಿ ಬಣ್ಣಗಳಿಗಿಂತ ಹೆಚ್ಚಿನ ಶಾಖ ಹೀರಿಕೊಳ್ಳುತ್ತದೆ ಎಂದು ತಿಳಿದು ಈ ಕಿತ್ತಳೆ ಬಣ್ಣದ ಕಿಟ್ ಅನ್ನು ವಿಶ್ವಕಪ್ ಸಮಯದಲ್ಲಿ ಬಳಸುವ ಸಾಧ್ಯತೆ ಇದೆ. ಬಣ್ಣ ಬದಲಾವಣೆಗೆ ಇದೇ ಕಾರಣವಾಗಿರಬಹುದು.
(8 / 13)
ಆದರೆ ನೆಟ್ಟಿಗರು ಭಾರತ ತಂಡದ ಕಿತ್ತಳೆ ಬಣ್ಣದ ಕಿಟ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ. ಟೀಮ್ ಇಂಡಿಯಾ ಆಟಗಾರರು ಸ್ವಿಗ್ಗಿ ಡೆಲಿವರಿ ಬಾಯ್ಸ್ ರೀತಿ ಕಾಣುತ್ತಿದ್ದಾರೆ ಎಂದು ಅವರು ಕಾಲೆಳೆದಿದ್ದಾರೆ.
(9 / 13)
ಇದು ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿಗೂ ಪ್ರೇರಣೆ ನೀಡಿದೆ. ಸ್ವಿಗ್ಗಿ ತನ್ನ ಎಕ್ಸ್ ಖಾತೆಯಲ್ಲಿ ನಮ್ಮ ತಂಡ ವಿಶ್ವಕಪ್ನಲ್ಲಿ ಡೆಲಿವರಿ ಮಾಡಲು ರೆಡಿ ಎಂದು ಬರೆದುಕೊಂಡಿದೆ. ಕ್ರಿಕೆಟ್ನಲ್ಲಿ ಬೌಲಿಂಗ್ಗೆ ಡೆಲಿವರಿ ಎನ್ನುತ್ತಾರೆ. ಅತ್ಯುತ್ತಮ ಪ್ರದರ್ಶನಕ್ಕೂ ಡೆಲಿವರಿ ಎಂಬ ಪದ ಬಳಸುತ್ತಾರೆ. ಈ ಕಾರಣಕ್ಕೆ ಸ್ವಿಗ್ಗಿ ಪೋಸ್ಟ್ ಮಾಡಿದೆ.
(10 / 13)
ಕಿತ್ತಳೆ ಬಣ್ಣ ಕಿಟ್ ವೈಜ್ಞಾನಿಕ ಮಹತ್ವ ಹೊಂದಿದೆ. ಕಿತ್ತಳೆ ಕೆಂಪು ಶಕ್ತಿ ಮತ್ತು ಹಳದಿ ಸಂತೋಷ, ಆತ್ಮವಿಶ್ವಾಸದ ಬಣ್ಣವಾಗಿದೆ. ಈ ಬಣ್ಣವು ಮೆದುಳಿಗೆ ಆಮ್ಲಜನಕ ಹೆಚ್ಚು ಒದಗಿಸುತ್ತದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
(11 / 13)
ಈ ಜೆರ್ಸಿ ತೊಟ್ಟಿರುವುದು ವಿಶ್ವಕಪ್ಗೂ ಮುನ್ನ ಸಕಾರಾತ್ಮಕತೆ ಉಂಟು ಮಾಡುತ್ತದೆ. ವಿಶ್ವಕಪ್ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾರೆ ನೆಟ್ಟಿಗರೊಬ್ಬರು.
(12 / 13)
ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ತಂಡವು ಭರ್ಜರಿ ಪ್ರಾಕ್ಟೀಸ್ ನಡೆಸಿದೆ. ಆಸ್ಟ್ರೇಲಿಯಾ ಎದುರಿನ ಕದನಕ್ಕೂ ಮುನ್ನ ಅದೇ ತಂಡದ ವಿರುದ್ಧ ಏಕದಿನ ಸರಣಿ ಗೆದ್ದುಕೊಂಡ ಆತ್ಮವಿಶ್ವಾಸದಲ್ಲಿದೆ.
ಇತರ ಗ್ಯಾಲರಿಗಳು