ವಯಸ್ಸು 60 ಆದ್ರೂ 30ರ ಯುವಕನಂತೆ ಕಾಣುವ ನಟ ಸುನಿಲ್ ಶೆಟ್ಟಿ ಫಿಟ್‌ನೆಸ್ ಸೀಕ್ರೆಟ್ ಇಲ್ಲಿದೆ, ಈ ಟಿಪ್ಸ್ ನೀವೂ ಫಾಲೋ ಮಾಡಿ
- ಬಾಲಿವುಡ್ ನಟ, ಕರಾವಳಿ ಕುವರ ಸುನಿಲ್ ಶೆಟ್ಟಿಗೆ ಈಗ 63 ವರ್ಷ, ಆದ್ರೂ ಅವರನ್ನ ನೋಡಿದ್ರೆ ಈಗಷ್ಟೇ 30 ದಾಟಿರಬೇಕು ಅನ್ಸುತ್ತೆ. ಸಖತ್ ಫಿಟ್ ಅಂಡ್ ಸ್ಲಿಮ್ ಆಗಿ ಕಾಣುವ ಸುನಿಲ್ ಶೆಟ್ಟಿ ಫಿಟ್‌ನೆಸ್ ಸೀಕ್ರೆಟ್ ಹೀಗಿದೆ. ಶೆಟ್ಟಿಯವರ ಈ ತಂತ್ರವನ್ನು ನೀವೂ ಫಾಲೋ ಮಾಡಿ.
- ಬಾಲಿವುಡ್ ನಟ, ಕರಾವಳಿ ಕುವರ ಸುನಿಲ್ ಶೆಟ್ಟಿಗೆ ಈಗ 63 ವರ್ಷ, ಆದ್ರೂ ಅವರನ್ನ ನೋಡಿದ್ರೆ ಈಗಷ್ಟೇ 30 ದಾಟಿರಬೇಕು ಅನ್ಸುತ್ತೆ. ಸಖತ್ ಫಿಟ್ ಅಂಡ್ ಸ್ಲಿಮ್ ಆಗಿ ಕಾಣುವ ಸುನಿಲ್ ಶೆಟ್ಟಿ ಫಿಟ್‌ನೆಸ್ ಸೀಕ್ರೆಟ್ ಹೀಗಿದೆ. ಶೆಟ್ಟಿಯವರ ಈ ತಂತ್ರವನ್ನು ನೀವೂ ಫಾಲೋ ಮಾಡಿ.
(1 / 8)
63ರ ಹರೆಯದಲ್ಲೂ ಫಿಟ್ ಆಗಿ, ಯಂಗ್ ಹೀರೊನಂತೆ ಕಾಣುವ ಸುನಿಲ್ ಶೆಟ್ಟಿಗೆ ಅಭಿಮಾನಗಳ ಬಳಗವೇ ಇದೆ. 60 ದಾಟಿದ ನಂತರವೂ 30ರ ಯುವಕನಂತೆ ಫಿಟ್‌ನೆಸ್ ಕಾಯ್ದುಕೊಂಡಿರುವ ಸುನಿಲ್ ಶೆಟ್ಟಿ ತಮ್ಮ ಫಿಟ್‌ನೆಸ್ ರಹಸ್ಯವನ್ನು ಹಲವು ಬಾರಿ ಹೇಳಿದ್ದಾರೆ. ಇದೀಗ ಇತ್ತೀಗಷ್ಟೇ ಪಾಡಕಾಸ್ಟ್ ಸಂದರ್ಶನವೊಂದರಲ್ಲಿ ಮತ್ತೆ ನಮ್ಮ ಫಿಟ್‌ನೆಸ್ ಗುಟ್ಟನ್ನ ರಿವೀಲ್ ಮಾಡಿದ್ದಾರೆ. ಅವರಿಂದ ಕಲಿಯಬಹುದಾದ 5 ತಂತ್ರಗಳು ಇಲ್ಲಿವೆ ನೋಡಿ.
(2 / 8)
ಪುಡ್ಡಿ ಆಗಿರುವ ಸುನಿಲ್ ಶೆಟ್ಟಿ ರುಚಿಯ ಜೊತೆಗೆ ತಮ್ಮ ಆಹಾರದಲ್ಲಿ ಪೌಷ್ಟಿಕಾಂಶವೂ ಇರುವಂತೆ ನೋಡಿಕೊಳ್ಳುತ್ತಾರೆ. ಪ್ರೊಟೀನ್, ಕಾರ್ಬ್ಸ್ ಹಾಗೂ ಕೊಬ್ಬಿನ ಪದಾರ್ಥಗಳು ಇರುವಂತೆ ಅವರ ಫುಡ್ ಲಿಸ್ಟ್ ಇರುತ್ತದೆ. ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಲ್ಲಿ ಸುನಿಲ್ ಶೆಟ್ಟಿ ತಮ್ಮ ಫುಡ್ ಮೆನುನಲ್ಲಿ ಹೆಚ್ಚು ತರಕಾರಿ ಹಾಗೂ ಪ್ರೊಟೀನ್ ಇರುತ್ತೆ ಎಂದಿದ್ದಾರೆ.
(3 / 8)
ಇವರು ಪ್ರತಿದಿನ ಬೆಳಿಗ್ಗೆ ಸ್ವಲ್ಪ ಸಕ್ಕರೆ ಹಾಕಿದ ಚಹಾ ಕುಡಿಯುತ್ತಾರೆ. ಪ್ರತಿದಿನ ಬೆಳಿಗ್ಗೆ ಒಂದು ಕಪ್ ಹಾಗೂ ಮಧ್ಯಾಹ್ನ ಒಂದು ಕಪ್ ಚಹಾ ಕುಡಿಯುತ್ತಾರೆ. ಅದಕ್ಕಿಂತ ಹೆಚ್ಚಿಗೆ ಕುಡಿಯುವುದಿಲ್ಲ. ಅವರು ಕುಡಿಯುವ ಚಹಾದಲ್ಲಿ 5 ರಿಂದ 6 ಸಕ್ಕರೆ ಇರುತ್ತದೆ
(4 / 8)
ಸುನಿಲ್ ಶೆಟ್ಟಿ ವಾರಕ್ಕೆ 3 ಅಥವಾ 4 ಬಾರಿ ಪ್ರಾಣಾಯಾಮ ಖಂಡಿತ ಮಾಡುತ್ತಾರೆ. ಬೆಳಗ್ಗೆ ಅಥವಾ ಸಂಜೆ ಸಮಯ ಸಿಕ್ಕಾಗಲೆಲ್ಲ ಪ್ರಾಣಾಯಾಮ ಮಾಡಲು ಕುಳಿತುಕೊಳ್ಳುತ್ತಾರೆ. ಅವರು ಜಿಮ್‌ಗೆ ಹೋಗಿ ದೇಹದಂಡಿಸುತ್ತಾರೆ.
(5 / 8)
ಸುನಿಲ್ ಶೆಟ್ಟಿ ಅವರು ತಮ್ಮ ತೂಕ, ಸ್ನಾಯುಗಳು ಮತ್ತು ಇಂಚುಗಳನ್ನು ಪರೀಕ್ಷಿಸಲು ಪ್ರತಿ ವಾರ ಪೌಷ್ಟಿಕತಜ್ಞರನ್ನು ಸಂಪರ್ಕಿಸುತ್ತಾರೆ. ಊಟದ ನಂತರ ಅವರು ತಪ್ಪದೇ ವಾಕಿಂಗ್ ಮಾಡುತ್ತಾರೆ. ಅವರು ಕೆಲಸದ ಸಮಯದಲ್ಲಿ ಲಿಫ್ಟ್ ಅನ್ನು ಬಳಸುವುದಿಲ್ಲ. ಅವರು ಸೆಟ್‌ನಲ್ಲಿದ್ದಾಗ, ಅವರು ನಡೆಯುತ್ತಲೇ ಇರುತ್ತಾರೆ ಮತ್ತು ಕುಳಿತುಕೊಳ್ಳುವುದಿಲ್ಲ ಎಂಬ ರಹಸ್ಯವನ್ನೂ ಅವರು ತಿಳಿಸಿದ್ದಾರೆ.
(6 / 8)
ಸುನಿಲ್ ಶೆಟ್ಟಿ ಅವರಿಗೆ ಆಗಾಗ ಸಂಜೆ ವೇಳೆಗೆ ತಲೆನೋವು ಬರುತ್ತಿತ್ತು. ವೈದ್ಯರ ಬಳಿಗೆ ಹೋದಾಗ ಅವರಿಗೆ ಆಹಾರದ ಅಲರ್ಜಿಯಿಂದ ತಲೆನೋವು ಬರುತ್ತಿದೆ ಎಂಬುದು ತಿಳಿಯುತ್ತದೆ. ಅದರ ನಂತರ ಅವರು ಆ ಆಹಾರಗಳನ್ನು ತಿನ್ನುವುದನ್ನು ಬಿಡುತ್ತಾರೆ. ಸುನಿಲ್ ಶೆಟ್ಟಿ ಫಿಟ್‌ನೆಸ್ ಜೊತೆಗೆ ಆರೋಗ್ಯದ ಮೇಲೂ ಗಮನ ಹರಿಸುತ್ತಾರೆ.
(7 / 8)
ಸುನಿಲ್ ಶೆಟ್ಟಿ ಮುಂಜಾನೆ ಬೇಗನೆ ಏಳುತ್ತಾರೆ ಮತ್ತು ರಾತ್ರಿ ಬೇಗನೆ ಮಲಗುತ್ತಾರೆ. ಇದು ಕೂಡ ಅವರ ಫಿಟ್‌ನೆಸ್ ಸೀಕ್ರೆಟ್‌ನಲ್ಲಿ ಒಂದು.
ಇತರ ಗ್ಯಾಲರಿಗಳು