IND vs NZ 1st Test: ನ್ಯೂಜಿಲೆಂಡ್ ವಿರುದ್ಧ 134 ರನ್​ಗಳ ಹಿನ್ನಡೆಗೆ ಭಾರತ ತಂಡ ಮಾಡಿದ ಐದು ತಪ್ಪುಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ind Vs Nz 1st Test: ನ್ಯೂಜಿಲೆಂಡ್ ವಿರುದ್ಧ 134 ರನ್​ಗಳ ಹಿನ್ನಡೆಗೆ ಭಾರತ ತಂಡ ಮಾಡಿದ ಐದು ತಪ್ಪುಗಳಿವು

IND vs NZ 1st Test: ನ್ಯೂಜಿಲೆಂಡ್ ವಿರುದ್ಧ 134 ರನ್​ಗಳ ಹಿನ್ನಡೆಗೆ ಭಾರತ ತಂಡ ಮಾಡಿದ ಐದು ತಪ್ಪುಗಳಿವು

  • IND vs NZ 1st Test: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 46 ರನ್​​ಗಳಿಗೆ ಆಲೌಟ್ ಆಗಿದೆ. ಇದಕ್ಕೆ ಉತ್ತರವಾಗಿ ಕಿವೀಸ್ 2ನೇ ದಿನದ ಅಂತ್ಯಕ್ಕೆ 3 ವಿಕೆಟ್​​ ನಷ್ಟಕ್ಕೆ 180 ರನ್​ ಗಳಿಸಿದ್ದು, 134 ರನ್​ಗಳ ಮುನ್ನಡೆ ಕಂಡಿದೆ.

ತವರಿನ ಮೈದಾನಗಳಲ್ಲಿ ಹುಲಿಗಳೆಂದು ಮೆರೆಯುತ್ತಿದ್ದ ಭಾರತ ತಂಡ ಕೇವಲ 46 ರನ್​ಗೆ ಆಲೌಟ್ ಆಗುವ ಮೂಲಕ ಅವಮಾನಕರ ದಾಖಲೆ ಬರೆಯಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, 134 ರನ್​ಗಳ ಮುನ್ನಡೆಯಲ್ಲಿದೆ. ಈ ಟೆಸ್ಟ್​​ನಲ್ಲಿ ಹೀನಾಯ ಪ್ರದರ್ಶನ ನೀಡಿದ ಭಾರತ ತಂಡ ಮಾಡಿದ 5 ತಪ್ಪುಗಳೇನು? ಇಲ್ಲಿದೆ ವಿವರ.
icon

(1 / 7)

ಭಾರತ ತಂಡವು ಮೊದಲು ತಪ್ಪು ಮಾಡಿದ್ದು ಟಾಸ್ ಗೆದ್ದರೂ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು. ಬೆಂಗಳೂರಿನಲ್ಲಿ ಮಳೆ ಮತ್ತು ಮೋಡ ಕವಿದ ವಾತಾವರಣ ಕಾರಣ ಪಿಚ್ ಕಂಡೀಷನ್​ಗೆ ತಕ್ಕಂತೆ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೀಗಾಗಿ ತನ್ನ ಸಮಸ್ಯೆಯನ್ನು ತಾನೇ ಸೃಷ್ಟಿಸಿಕೊಂಡಿದೆ ಎಂಬುದು ತಜ್ಞರ ವಾದ.
icon

(2 / 7)

ಪಿಚ್​​​ ಸ್ವರೂಪ ಅರ್ಥಮಾಡಿಕೊಳ್ಳದ ಗೌತಮ್ ಗಂಭೀರ್-ರೋಹಿತ್ ಶರ್ಮಾ ಪ್ಲಾನ್​​ಗಳನ್ನು ದೂಷಿಸಿದ್ದಾರೆ. ಪಂದ್ಯ ಪ್ರಾರಂಭವಾಗುವ ಮೊದಲು ಇಬ್ಬರೂ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದ ಪಿಚ್ ಬಗ್ಗೆ ಚೆನ್ನಾಗಿ ಅರಿತಿದ್ದರು. ಆದರೂ ಟಾಸ್ ಗೆದ್ದ ನಂತರ ಅವರು ಹೇಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು ಎಂಬ ಪ್ರಶ್ನೆಯೂ ಎದ್ದಿದೆ.
icon

(3 / 7)

ಪಿಚ್​​ ಸ್ವರೂಪ ಅರ್ಥಮಾಡಿಕೊಳ್ಳದ ಕಾರಣ ಭಾರತ ತಂಡದಲ್ಲಿ ಮೂವರು ಸ್ಪಿನ್ನರ್​​ಗಳಿಗೆ ಅವಕಾಶ ನೀಡಿದ್ದೇಕೆ? ನ್ಯೂಜಿಲೆಂಡ್ ವೇಗಿಗಳು ಹೇಗೆ ಅಬ್ಬರಿಸಿದರು ಎಂಬುದನ್ನು ಭಾರತೀಯ ವೇಗಿಗಳು ನೋಡಿ ಕಲಿಯಬೇಕು. ಆಕಾಶ್ ದೀಪ್ ಕೂಡ ತಂಡದಲ್ಲಿದ್ದಿದ್ದರೆ ಕಿವೀಸ್ ಮೇಲೆ ಒತ್ತಡ ಹಾಕಲು ನೆರವಾಗುತ್ತಿದ್ದರು.
icon

(4 / 7)

ವಿರಾಟ್ ಕೊಹ್ಲಿಯನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವ ಮೂಲಕ ಟೀಮ್ ಮ್ಯಾನೇಜ್ಮೆಂಟ್ ದೊಡ್ಡ ತಪ್ಪು ಮಾಡಿತು. 8 ವರ್ಷಗಳ ನಂತರ ಈ ಕ್ರಮಾಂಕದಲ್ಲಿ ಆಡಿದ ವಿರಾಟ್, ಮತ್ತೊಮ್ಮೆ ಕೆಟ್ಟ ಪ್ರದರ್ಶನ ನೀಡಿದರು. ಗಿಲ್ ಅಲಭ್ಯತೆಯಲ್ಲಿ ಕಣಕ್ಕಿಳಿದ ವಿರಾಟ್, 9 ಎಸೆತಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದು ರೋಹಿತ್-ಗಂಭೀರ್ ಅವರ ವಿಫಲ ನಿರ್ಧಾರ ಎಂದು ಸಾಬೀತಾಯಿತು.
icon

(5 / 7)

ನ್ಯೂಜಿಲೆಂಡ್ ವೇಗಿಗಳ ವಿರುದ್ಧ ಸುಲಭವಾಗಿ ರನ್ ಗಳಿಸುತ್ತೇವೆ ಎನ್ನುವ ಆತ್ಮವಿಶ್ವಾಸದಲ್ಲಿದ್ದ ಭಾರತೀಯ ಬ್ಯಾಟರ್ಸ್, ಹಳಿ ತಪ್ಪಿದರು. ಮೊದಲ ಸೆಷನ್​ನಲ್ಲಿ 6 ವಿಕೆಟ್​ಗಳನ್ನು ಕಳೆದುಕೊಂಡಿತು. 2ನೇ ಸೆಷನ್​​ ಆರಂಭದಲ್ಲೇ ಉಳಿದ 4 ವಿಕೆಟ್​ಗಳನ್ನು ಕಳೆದುಕೊಂಡಿತು. ಹಗುರವಾಗಿ ಪರಿಗಣಿಸಿದ್ದ ಕಾರಣ ಅಲ್ಪಮೊತ್ತಕ್ಕೆ ಭಾರತ ಕುಸಿಯಿತು.
icon

(6 / 7)

ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿದ ಭಾರತ ತಂಡವು, ಫೀಲ್ಡಿಂಗ್​​​ನಲ್ಲೂ ಕಳಪೆ ಪ್ರದರ್ಶನ ನೀಡಿತು. ರೋಹಿತ್​ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಹಲವರು ಕ್ಯಾಚ್​ ಕೈ ಚೆಲ್ಲಿದರು. ನ್ಯೂಜಿಲೆಂಡ್ ಫೀಲ್ಡಿಂಗ್ ಮಾಡಿದಂತೆ ಭಾರತ ಫೀಲ್ಡಿಂಗ್ ಮಾಡದ ಹಿನ್ನೆಲೆ ಕಿವೀಸ್ ಮುನ್ನಡೆ ಸಾಧಿಸಲು ಸಾಧ್ಯವಾಯಿತು.
icon

(7 / 7)

ಇತರ ಗ್ಯಾಲರಿಗಳು