ಸ್ಟಾರ್ಕ್, ರಚಿನ್, ಹಸರಂಗ; ಐಪಿಎಲ್ ಹರಾಜಿನಲ್ಲಿ ಈ ಐವರ ಖರೀದಿಗೆ ಫ್ರಾಂಚೈಸಿಗಳ ಪೈಪೋಟಿ ಖಚಿತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಟಾರ್ಕ್, ರಚಿನ್, ಹಸರಂಗ; ಐಪಿಎಲ್ ಹರಾಜಿನಲ್ಲಿ ಈ ಐವರ ಖರೀದಿಗೆ ಫ್ರಾಂಚೈಸಿಗಳ ಪೈಪೋಟಿ ಖಚಿತ

ಸ್ಟಾರ್ಕ್, ರಚಿನ್, ಹಸರಂಗ; ಐಪಿಎಲ್ ಹರಾಜಿನಲ್ಲಿ ಈ ಐವರ ಖರೀದಿಗೆ ಫ್ರಾಂಚೈಸಿಗಳ ಪೈಪೋಟಿ ಖಚಿತ

  • IPL 2024 Auction: ಐಪಿಎಲ್‌ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಇತ್ತೀಚೆಗೆ ಮುಗಿದ ಏಕದಿನ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರರು ಭಾರಿ ಬೆಲೆ ಪಡೆಯುವ ನಿರೀಕ್ಷೆಯಿದೆ. ಅಲ್ಲದೆ ಈ ಹಿಂದಿನ ಆವೃತ್ತಿಗಳಲ್ಲಿ ಅಬ್ಬರಿಸಿದ್ದ ಮತ್ತು ಡೊಮೆಸ್ಟಿಕ್‌ ಕ್ರಿಕೆಟ್‌ನಲ್ಲಿ ಮಿಂಚಿದ್ದ ಪ್ಲೇಯರ್ಸ್‌ ಕೋಟಿ ಕೋಟಿ ಪಡೆಯುವ ಕಾತರದಲ್ಲಿದ್ದಾರೆ.

2024ರ ಐಪಿಎಲ್ ಪಂದ್ಯಾವಳಿಗೆ ಮಿನಿ ಹರಾಜು ಪ್ರಕ್ರಿಯೆಯು ಡಿಸೆಂಬರ್‌ 19ರ ಮಂಗಳವಾರ ದುಬೈನಲ್ಲಿ ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ತಂಡ ರಚನೆ ಕುರಿತು ತಂತ್ರ ರೂಪಿಸಿವೆ. ಮುಂದಿನ ಋತುವಿನಲ್ಲಿ ಈ ಐವರು ಕ್ರಿಕೆಟಿಗರು ಗೇಮ್ ಚೇಂಜರ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಐವರು ಪಂದ್ಯದ ದಿಕ್ಕನ್ನು ಯಾವುದೇ ಕ್ಷಣದಲ್ಲಿ ಬದಲಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
icon

(1 / 6)

2024ರ ಐಪಿಎಲ್ ಪಂದ್ಯಾವಳಿಗೆ ಮಿನಿ ಹರಾಜು ಪ್ರಕ್ರಿಯೆಯು ಡಿಸೆಂಬರ್‌ 19ರ ಮಂಗಳವಾರ ದುಬೈನಲ್ಲಿ ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ತಂಡ ರಚನೆ ಕುರಿತು ತಂತ್ರ ರೂಪಿಸಿವೆ. ಮುಂದಿನ ಋತುವಿನಲ್ಲಿ ಈ ಐವರು ಕ್ರಿಕೆಟಿಗರು ಗೇಮ್ ಚೇಂಜರ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಐವರು ಪಂದ್ಯದ ದಿಕ್ಕನ್ನು ಯಾವುದೇ ಕ್ಷಣದಲ್ಲಿ ಬದಲಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಶಾರುಖ್ ಖಾನ್: ದೇಶೀಯ ಕ್ರಿಕೆಟ್‌ನಲ್ಲಿ ಬ್ಯಾಟ್‌ನೊಂದಿಗೆ ಅದ್ಭುತ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್ ತಂಡವು ಶಾರುಖ್ ಖಾನ್ ಅವರನ್ನು ಬಿಡುಗಡೆ ಮಾಡಿದೆ. ಈ ಬಾರಿ ಅವರ ಮೂಲ ಬೆಲೆ 50 ಲಕ್ಷ ರೂಪಾಯಿ. ಹೈ ಸ್ಕೋರಿಂಗ್ ಪಂದ್ಯಗಳಲ್ಲಿ ಹೆಚ್ಚು ರನ್‌ ಕಲೆ ಹಾಕಿ ತಂಡವನ್ನು ಗೆಲ್ಲಿಸಲಬಲ್ಲ ಸಾಮರ್ಥ್ಯ ಇವರಿಗಿದೆ. ಹೀಗಾಗಿ ಹರಾಜಿನಲ್ಲಿ ಶಾರುಖ್ ಖರೀದಿಗೆ ಫ್ರಾಂಚೈಸಿಗಳ ನಡುವೆ ಭಾರಿ ಪೈಪೋಟಿ ನಡೆದರೂ ಅಚ್ಚರಿಯಿಲ್ಲ.
icon

(2 / 6)

ಶಾರುಖ್ ಖಾನ್: ದೇಶೀಯ ಕ್ರಿಕೆಟ್‌ನಲ್ಲಿ ಬ್ಯಾಟ್‌ನೊಂದಿಗೆ ಅದ್ಭುತ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಪಂಜಾಬ್ ಕಿಂಗ್ಸ್ ತಂಡವು ಶಾರುಖ್ ಖಾನ್ ಅವರನ್ನು ಬಿಡುಗಡೆ ಮಾಡಿದೆ. ಈ ಬಾರಿ ಅವರ ಮೂಲ ಬೆಲೆ 50 ಲಕ್ಷ ರೂಪಾಯಿ. ಹೈ ಸ್ಕೋರಿಂಗ್ ಪಂದ್ಯಗಳಲ್ಲಿ ಹೆಚ್ಚು ರನ್‌ ಕಲೆ ಹಾಕಿ ತಂಡವನ್ನು ಗೆಲ್ಲಿಸಲಬಲ್ಲ ಸಾಮರ್ಥ್ಯ ಇವರಿಗಿದೆ. ಹೀಗಾಗಿ ಹರಾಜಿನಲ್ಲಿ ಶಾರುಖ್ ಖರೀದಿಗೆ ಫ್ರಾಂಚೈಸಿಗಳ ನಡುವೆ ಭಾರಿ ಪೈಪೋಟಿ ನಡೆದರೂ ಅಚ್ಚರಿಯಿಲ್ಲ.(AFP)

ಮಿಚೆಲ್ ಸ್ಟಾರ್ಕ್: ಇವರ ಮೂಲ ಬೆಲೆ 2 ಕೋಟಿ ರೂಪಾಯಿ. ಮಿಚೆಲ್ ಸ್ಟಾರ್ಕ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹೊಸ ಚೆಂಡಿನೊಂದಿಗೆ ಮೋಡಿ ಮಾಡಬಲ್ಲ ಸಾಮರ್ಥ್ಯ ಇವರಿಗಿದೆ. ಆರಂಭದಲ್ಲಿಯೇ ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯ ಇವರಿಗಿದೆ. ಕೆಲವು ಆವೃತ್ತಿಗಳಿಂದ ಹಿಂದೆ ಸರಿದಿದ್ದ ಸ್ಟಾರ್ಕ್ ಈ ಬಾರಿ ದೊಡ್ಡ ಮೊತ್ತ ಪಡೆಯಬಹುದು ಎಂಬ ನಿರೀಕ್ಷೆಯಿದೆ.
icon

(3 / 6)

ಮಿಚೆಲ್ ಸ್ಟಾರ್ಕ್: ಇವರ ಮೂಲ ಬೆಲೆ 2 ಕೋಟಿ ರೂಪಾಯಿ. ಮಿಚೆಲ್ ಸ್ಟಾರ್ಕ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹೊಸ ಚೆಂಡಿನೊಂದಿಗೆ ಮೋಡಿ ಮಾಡಬಲ್ಲ ಸಾಮರ್ಥ್ಯ ಇವರಿಗಿದೆ. ಆರಂಭದಲ್ಲಿಯೇ ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯ ಇವರಿಗಿದೆ. ಕೆಲವು ಆವೃತ್ತಿಗಳಿಂದ ಹಿಂದೆ ಸರಿದಿದ್ದ ಸ್ಟಾರ್ಕ್ ಈ ಬಾರಿ ದೊಡ್ಡ ಮೊತ್ತ ಪಡೆಯಬಹುದು ಎಂಬ ನಿರೀಕ್ಷೆಯಿದೆ.

ವನಿಂದು ಹಸರಂಗ: ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ ಮೂಲ ಬೆಲೆ 1.5 ಕೋಟಿ ರೂಪಾಯಿ. ಹಸರಂಗ ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಕ್ರಿಕೆಟಿಗ ಎಂದು ಹೇಳಲಾಗುತ್ತದೆ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಆದರೆ ಆರ್‌ಸಿಬಿಯು ಅಚ್ಚರಿಯ ರೀತಿಯಲ್ಲಿ ಬಿಡುಗಡೆ ಮಾಡಿದೆ. ಅವರ ಸ್ಪಿನ್ ಮತ್ತು ಆಲ್-ರೌಂಡ್ ಕೌಶಲ್ಯವನ್ನು ಪರಿಗಣಿಸಿ ಹಸರಂಗ ಖರೀದಿಗೆ ಫ್ರಾಂಚೈಸಿಗಳು ಮುಗಿಬೀಳುವ ಸಾಧ್ಯತೆ ಇದೆ.
icon

(4 / 6)

ವನಿಂದು ಹಸರಂಗ: ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ ಮೂಲ ಬೆಲೆ 1.5 ಕೋಟಿ ರೂಪಾಯಿ. ಹಸರಂಗ ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಕ್ರಿಕೆಟಿಗ ಎಂದು ಹೇಳಲಾಗುತ್ತದೆ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಆದರೆ ಆರ್‌ಸಿಬಿಯು ಅಚ್ಚರಿಯ ರೀತಿಯಲ್ಲಿ ಬಿಡುಗಡೆ ಮಾಡಿದೆ. ಅವರ ಸ್ಪಿನ್ ಮತ್ತು ಆಲ್-ರೌಂಡ್ ಕೌಶಲ್ಯವನ್ನು ಪರಿಗಣಿಸಿ ಹಸರಂಗ ಖರೀದಿಗೆ ಫ್ರಾಂಚೈಸಿಗಳು ಮುಗಿಬೀಳುವ ಸಾಧ್ಯತೆ ಇದೆ.(PTI)

ಹರ್ಷಲ್ ಪಟೇಲ್: ಪರ್ಪಲ್‌ ಕ್ಯಾಪ್‌ ಗೆದ್ದ ಹರ್ಷಲ್‌ ಪಟೇಲ್ ಹಲವಾರು ಪಂದ್ಯಗಳಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಅನಿವಾರ್ಯ ಸಂದರ್ಭಗಳಲ್ಲಿ ತಂಡಕ್ಕೆ ಬ್ಯಾಟಿಂಗ್‌ನಲ್ಲೂ ನೆರವಾಗಿದ್ದಾರೆ. ಹೀಗಾಗಿ ಈ ಹರಾಜಿನಲ್ಲಿ ಅವರು ಪ್ರಭಾವ ಬೀರುವ ನಿರೀಕ್ಷೆಯಿದೆ. ಹರ್ಷಲ್‌ ಮೂಲ ಬೆಲೆ 2 ಕೋಟಿ ರೂಪಾಯಿ.
icon

(5 / 6)

ಹರ್ಷಲ್ ಪಟೇಲ್: ಪರ್ಪಲ್‌ ಕ್ಯಾಪ್‌ ಗೆದ್ದ ಹರ್ಷಲ್‌ ಪಟೇಲ್ ಹಲವಾರು ಪಂದ್ಯಗಳಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಅನಿವಾರ್ಯ ಸಂದರ್ಭಗಳಲ್ಲಿ ತಂಡಕ್ಕೆ ಬ್ಯಾಟಿಂಗ್‌ನಲ್ಲೂ ನೆರವಾಗಿದ್ದಾರೆ. ಹೀಗಾಗಿ ಈ ಹರಾಜಿನಲ್ಲಿ ಅವರು ಪ್ರಭಾವ ಬೀರುವ ನಿರೀಕ್ಷೆಯಿದೆ. ಹರ್ಷಲ್‌ ಮೂಲ ಬೆಲೆ 2 ಕೋಟಿ ರೂಪಾಯಿ.(AP)

ರಚಿನ್ ರವೀಂದ್ರ: ನ್ಯೂಜಿಲ್ಯಾಂಡ್‌ನ ಸ್ಟಾರ್ ಆಲ್‌ರೌಂಡರ್ ರಚಿನ್ ರವೀಂದ್ರ ಇತ್ತೀಚೆಗೆ ಮುಗಿದ ವಿಶ್ವಕಪ್‌ನಲ್ಲಿ ನೀಡಿದ ಪ್ರದರ್ಶನ ಎಲ್ಲರಿಗೂ ಗೊತ್ತೇ ಇದೆ. ಒಂದೇ ಆವೃತ್ತಿಯಲ್ಲಿ ಮೂರು ಶತಕಗಳನ್ನು ಸಿಡಿಸಿ ಅಬ್ಬರಿಸಿದ್ದ ರಚಿನ್‌, ಚೆಂಡಿನೊಂದಿಗೂ ಮೋಡಿ ಮಾಡಿದ್ದರು. ಹೀಗಾಗಿ ಈ ಹರಾಜಿನಲ್ಲಿ ರಚಿನ್ ರವೀಂದ್ರ ದೊಡ್ಡ ಮೊತ್ತ ಪಡೆಯುವುದು ಖಚಿತ. ಕಿವೀಸ್ ಕ್ರಿಕೆಟಿಗನ ಮೂಲ ಬೆಲೆ 50 ಲಕ್ಷ ರೂಪಾಯಿ.
icon

(6 / 6)

ರಚಿನ್ ರವೀಂದ್ರ: ನ್ಯೂಜಿಲ್ಯಾಂಡ್‌ನ ಸ್ಟಾರ್ ಆಲ್‌ರೌಂಡರ್ ರಚಿನ್ ರವೀಂದ್ರ ಇತ್ತೀಚೆಗೆ ಮುಗಿದ ವಿಶ್ವಕಪ್‌ನಲ್ಲಿ ನೀಡಿದ ಪ್ರದರ್ಶನ ಎಲ್ಲರಿಗೂ ಗೊತ್ತೇ ಇದೆ. ಒಂದೇ ಆವೃತ್ತಿಯಲ್ಲಿ ಮೂರು ಶತಕಗಳನ್ನು ಸಿಡಿಸಿ ಅಬ್ಬರಿಸಿದ್ದ ರಚಿನ್‌, ಚೆಂಡಿನೊಂದಿಗೂ ಮೋಡಿ ಮಾಡಿದ್ದರು. ಹೀಗಾಗಿ ಈ ಹರಾಜಿನಲ್ಲಿ ರಚಿನ್ ರವೀಂದ್ರ ದೊಡ್ಡ ಮೊತ್ತ ಪಡೆಯುವುದು ಖಚಿತ. ಕಿವೀಸ್ ಕ್ರಿಕೆಟಿಗನ ಮೂಲ ಬೆಲೆ 50 ಲಕ್ಷ ರೂಪಾಯಿ.(REUTERS)


ಇತರ ಗ್ಯಾಲರಿಗಳು