Flying Ants: ರೆಕ್ಕೆ ಇರುವೆಗಳು, ಕೀಟಗಳಿಂದ ಭಾರತ vs ಸೌತ್ ಆಫ್ರಿಕಾ 3ನೇ ಟಿ20 ಸ್ಥಗಿತ, ಇಲ್ಲಿವೆ ಪ್ಲೇಯಿಂಗ್ ಆಂಟ್ಸ್ ಫೋಟೋಸ್
- ನವೆಂಬರ್ 13ರ ಬುಧವಾರ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ 3ನೇ ಟಿ20ಐ ಸಮಯದಲ್ಲಿ ರೆಕ್ಕೆ ಇರುವೆಗಳು ಬೃಹತ್ ಪ್ರಮಾಣದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲವೊತ್ತು ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
- ನವೆಂಬರ್ 13ರ ಬುಧವಾರ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ 3ನೇ ಟಿ20ಐ ಸಮಯದಲ್ಲಿ ರೆಕ್ಕೆ ಇರುವೆಗಳು ಬೃಹತ್ ಪ್ರಮಾಣದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲವೊತ್ತು ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
(1 / 8)
ನವೆಂಬರ್ 13ರಂದು ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್‌ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೂರನೇ ಟಿ20ಐ ಪಂದ್ಯವು ಕೆಲಹೊತ್ತು ಸ್ಥಗಿತಗೊಂಡಿತ್ತು. ಹೌದು, ರೆಕ್ಕೆ ಇರುವೆಗಳು ಮತ್ತು ಕೀಟಗಳಿಂದ ಪಂದ್ಯವನ್ನು ಅರ್ಧಗಂಟೆ ಕಾಲ ಸ್ಥಗಿತ ಮಾಡಲಾಗಿತ್ತು.(AFP)
(2 / 8)
ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ನ ಮೊದಲ ಓವರ್‌ನ ರೆಕ್ಕೆ ಇರುವೆಗಳು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡ ಕಾರಣ ಆಟ ನಿಲ್ಲಿಸಲಾಗಿತ್ತು. ಅರ್ಷದೀಪ್ ಸಿಂಗ್ ಮೊದಲ ಓವರ್ ಬೌಲಿಂಗ್ ಮಾಡುವ ವೇಳೆ ರೆಕ್ಕೆ ಇರುವೆಗಳು ಅಡ್ಡಿಪಡಿಸಿದವು. ಆದರೂ ಓವರ್ ಮುಗಿಸಿದರು.(REUTERS)
(3 / 8)
ಆ ಬಳಿಕ ಎರಡನೇ ಓವರ್ ಎಸೆಯಲು ಒಂದ ಹಾರ್ದಿಕ್ ಬೌಲಿಂಗ್ ಮಾಡಲು ವಿಚಲಿತರಾದರು. ರೆಕ್ಕೆ ಇರುವೆಗಳ ಪ್ರಮಾಣ ವಿಪರೀತವಾದ ಕಾರಣ ಅಂಪೈರ್ಗಳು ಪಂದ್ಯ ಸ್ಥಗಿತದ ನಿರ್ಧಾರಕ್ಕೆ ಬಂದರು. 220 ರನ್‌ಗಳ ಗುರಿ ಬೆನ್ನಟ್ಟಿದ ಆಫ್ರಿಕಾ ಆ ಸಮಯದಲ್ಲಿ 7 ರನ್ ಗಳಿಸಿತ್ತು.(REUTERS)
(4 / 8)
ರೆಕ್ಕೆ ಇರುವೆಗಳನ್ನು ಮತ್ತು ಕೀಟಗಳನ್ನು ಓಡಿಸಲು ಗ್ರೌಂಡ್‌ಸ್ಟಾಫ್ ವ್ಯಾಕ್ಯೂಮ್ ಕ್ಲೀನರ್‌ಗಳನ್ನು ಬಳಸಬೇಕಾಯಿತು. ಸುಮಾರು ಅರ್ಧಗಂಟೆ ಸ್ಥಗಿತದ ನಂತರ ಆಟಗಾರರು ಮೈದಾನಕ್ಕೆ ಮರಳಿದರು. ಆ ಬಳಿಕ ಯಾವುದೇ ತೊಂದರೆ ಆಗಲಿಲ್ಲ.(AFP)
(5 / 8)
ಸೌತ್ ಆಫ್ರಿಕಾದಲ್ಲಿ ಕೀಟಗಳ ಕಾರಣದಿಂದ ಪಂದ್ಯ ನಿಂತಿದ್ದು ಇದೇ ಮೊದಲಲ್ಲ. 2017ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಸುಮಾರು ಒಂದು ಗಂಟೆ ಆಟ ನಿಂತಿತ್ತು. (REUTERS)
(6 / 8)
ಸೌತ್ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ 11 ರನ್ಗಳಿಂದ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದಿದೆ. ಅಂತಿಮ ಹಾಗೂ ಕೊನೆಯ ಟಿ20ಐ ಪಂದ್ಯ ನವೆಂಬರ್ 15ರಂದು ನಡೆಯಲಿದೆ.(AFP)
(7 / 8)
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತನ್ನ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಪೇರಿಸಿತು. ತಿಲಕ್ ವರ್ಮಾ 56 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ ಸಹಿತ ಅಜೇಯ 107 ರನ್ ಬಾರಿಸಿದರು. ಅಭಿಷೇಕ್ ಶರ್ಮಾ 50 ರನ್ ಸಿಡಿಸಿದರು.(ANI)
ಇತರ ಗ್ಯಾಲರಿಗಳು