Karnataka famous Food: ಕರ್ನಾಟಕದ 10 ಜನಪ್ರಿಯ ಆಹಾರಗಳಿವು; ಪ್ರವಾಸಕ್ಕೆ ಹೊರಟಿದ್ದರೆ ಇವುಗಳನ್ನು ಖಂಡಿತ ಟೇಸ್ಟ್‌ ಮಾಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Famous Food: ಕರ್ನಾಟಕದ 10 ಜನಪ್ರಿಯ ಆಹಾರಗಳಿವು; ಪ್ರವಾಸಕ್ಕೆ ಹೊರಟಿದ್ದರೆ ಇವುಗಳನ್ನು ಖಂಡಿತ ಟೇಸ್ಟ್‌ ಮಾಡಿ

Karnataka famous Food: ಕರ್ನಾಟಕದ 10 ಜನಪ್ರಿಯ ಆಹಾರಗಳಿವು; ಪ್ರವಾಸಕ್ಕೆ ಹೊರಟಿದ್ದರೆ ಇವುಗಳನ್ನು ಖಂಡಿತ ಟೇಸ್ಟ್‌ ಮಾಡಿ

  • Top 10 Dishes of Karnataka: ಕರ್ನಾಟಕದ ಪ್ರವಾಸದಲ್ಲಿ ನೀವಿದ್ದರೆ, ಅಲ್ಲಿನ ಸ್ಥಳೀಯ ಆಹಾರಗಳ ರುಚಿ ನೋಡಿ. ಅವು ಆ ಊರುಗಳಿಗಷ್ಟೇ ಸೀಮಿತವಾಗಿರದೇ ರುಚಿ, ಪರಿಮಳದಿಂದಲೇ ಜನಪ್ರಿಯವಾಗಿವೆ. ಕರ್ನಾಟಕದ ಅಂತಹ 10 ಜನಪ್ರಿಯ ಆಹಾರಗಳು ಇಲ್ಲಿವೆ.

ಕರ್ನಾಟಕ, ಇತಿಹಾಸ ಮತ್ತು ಸಂಸ್ಕೃತಿಗೆ ಎಷ್ಟು ಜನಪ್ರಿಯವೋ ಹಾಗೆಯೇ ಇಲ್ಲಿನ ಪಾಕ ವೈವಿಧ್ಯಗಳಿಗೂ ಅಷ್ಟೇ ಹೆಸರುವಾಸಿಯಾಗಿದೆ. ಮೊದಲಿನಿಂದಲೂ ನಮ್ಮ ರಾಜ್ಯ  ಅಡುಗೆಗೆ ಬಳಕೆಯಾಗುವ ವಿಶೇಷ ಸಾಂಬಾರ ಪದಾರ್ಥಗಳಿಗೂ ಹೆಸರುವಾಸಿ. ಒಂದೊಂದು ಪ್ರದೇಶಗಳನ್ನು ಬಿಂಬಿಸುವ ಒಂದೊಂದು ವಿಶೇಷ ಅಡುಗೆಗಳನ್ನು ಇಲ್ಲಿ ಕಾಣಬಹುದು. ಮೈಸೂರು ಪಾಕ್‌, ಮದ್ದೂರ ವಡೆ, ದಾವಣಗೆರೆ ಬೆಣ್ಣೆ ದೋಸೆ, ಮಂಗಳೂರು ಮೀನುಸಾರು ಹೀಗೆ ಕರ್ನಾಟಕ ಊರುಗಳ ಜೊತೆ ಅಲ್ಲಿಯ ವಿಶೇಷ ಅಡುಗೆಗಳು ಹೆಸರು ಪಡೆದುಕೊಂಡಿವೆ. ಕರಾವಳಿಯು ಮಸಾಲೆಯುಕ್ತ ಸಮುದ್ರಾಹಾರಗಳಿಗೆ ವಿಶೇಷವಾದರೆ, ಉತ್ತರ ಕರ್ನಾಟಕ ಜೋಳದ ರೊಟ್ಟಿ, ಸೊಪ್ಪಿನ ಖಾದ್ಯಗಳಿಗೆ. ಮಧ್ಯ ಮತ್ತು ದಕ್ಷಿಣ ಕರ್ನಾಟಕ ತಿಂಡಿಗಳಿಗೆ ಫೇಮಸ್‌ ಆಗಿದೆ. ಕರ್ನಾಟಕದ ಊರುಗಳಿಗೆ ಪ್ರವಾಸ ಹೊರಟಿದ್ದರೆ ಅಲ್ಲಿಯ ಸ್ಥಳೀಯ ಅಡುಗೆಗಳ ರುಚಿ ನೋಡಲೇಬೇಕು. ನೀವು ಒಮ್ಮೆಯಾದರೂ ಸವಿಯಲೇಬೇಕಾದ ಕರ್ನಾಟಕದ ಜನಪ್ರಿಯ ಆಹಾರಗಳು ಇಲ್ಲಿವೆ. (PC: Pinterest)
icon

(1 / 11)

ಮೈಸೂರು ಪಾಕ್‌: ಕರ್ನಾಟಕದ ಸಾಂಸ್ಕೃತಿಕ ನಗರಿಯ ಹೆಸರಿನ ಜೊತೆ ಸೇರಿರುವ ವಿಶೇಷ ಖಾದ್ಯ ಮೈಸೂರ್‌ ಪಾಕ್‌. ತುಪ್ಪ, ಸಕ್ಕರೆ ಮತ್ತು ಕಡ್ಲೆಹಿಟ್ಟಿನಿಂದ ತಯಾರಿಸುವ ಇದು ಸಿಹಿ ಪ್ರಿಯರ ನೆಚ್ಚಿನ ತಿಂಡಿ. (PC: HT File Photo)
icon

(2 / 11)

ಬಿಸಿ ಬೇಳೆ ಬಾತ್‌: ಕರ್ನಾಟಕದ ಜನಪ್ರಿಯ ಆಹಾರ ಎಂದೇ ಖ್ಯಾತಿ ಪಡೆದಿದೆ. ಅಕ್ಕಿ, ಬೇಳೆ, ತರಕಾರಿ ಮತ್ತು ಮಸಾಲೆಗಳನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. (PC: Pinterest)
icon

(3 / 11)

ಹಾಲುಬಾಯಿ: ಕರ್ನಾಟಕದ ಸಿಹಿ ತಿಂಡಿಗಳ ಪಟ್ಟಿಯಲ್ಲಿ ಹಾಲುಬಾಯಿಯೂ ಸೇರಿದೆ. ತೆಂಗಿನ ಕಾಯಿ, ಬೆಲ್ಲ, ಅಕ್ಕಿ ಹಿಟ್ಟು ಸೇರಿಸಿ ತಯಾರಿಸುವ ಈ ಖಾದ್ಯ ಬಾಯಲ್ಲಿ ನೀರೂರಿಸುತ್ತದೆ. (PC: Pinterest)
icon

(4 / 11)

ನೀರ್‌ ದೋಸೆ: ಇದು ಜನಪ್ರಿಯ ಬೆಳಗ್ಗಿನ ತಿಂಡಿಯಾಗಿದೆ. ಅಕ್ಕಿಯಿಂದ ತಯಾರಿಸುವ ಈ ದೋಸೆಗೆ ತೆಂಗಿನ ಕಾಯಿಯ ಚಟ್ನಿ ಬೆಸ್ಟ್‌ ಕಾಂಬಿನೇಷನ್‌. ಮಂಗಳೂರಿನಲ್ಲಿ ಇದು ಬಹಳ ಫೇಮಸ್‌. (PC: HT File Photo)
icon

(5 / 11)

ಜೋಳದ ರೊಟ್ಟಿ: ಉತ್ತರ ಕರ್ನಾಟಕ ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದೇ ಈ ಜೋಳದ ರೊಟ್ಟಿ. ಜೋಳದ ಹಿಟ್ಟಿನಿಂದ ತಯಾರಿಸುವ ಇದನ್ನು ವಿವಿಧ ಚಟ್ನಿ ಪುಡಿ, ಸೊಪ್ಪಿನ ಪಲ್ಯ, ಎಣಗಾಯಿಯೊಂದಿಗೆ ತಿನ್ನುತ್ತಾರೆ. (PC: Pinterest)
icon

(6 / 11)

ಗೊಜ್ಜುಗಳು: ಬಾಯಲ್ಲಿ ನೀರೂರಿಸುವ ಗೊಜ್ಜುಗಳಿಗೆ ಕರ್ನಾಟಕ ಹೆಸರುವಾಸಿ. ಟೊಮೆಟೋ, ಬದನೆಕಾಯಿ, ಹಾಗಲಕಾಯಿ ಹೀಗೆ ಇಲ್ಲಿ ಅನೇಕ ವಿಧಧ ಗೊಜ್ಜುಗಳನ್ನು ತಯಾರಿಸಲಾಗುತ್ತದೆ.  ಉಪ್ಪು, ಹುಳಿ, ಖಾರದಿಂದ ಹದವಾಗಿ ಬೆರೆತ ಗೊಜ್ಜು ಎಂಥವರ ಬಾಯಿಯಲ್ಲೂ ನೀರೂರಿಸುತ್ತದೆ. (PC: Pinterest)
icon

(7 / 11)

ಉಡುಪಿ ಸಾಂಬಾರ್: ತರಕಾರಿ, ಬೇಳೆ, ತೆಂಗಿನಕಾಯಿ ಮತ್ತು ಮಸಾಲೆಗಳನ್ನು ಹಾಕಿ ತಯಾರಿಸುವ ಉಡುಪಿ ಸಾಂಬಾರ್‌  ಹೆಸರು ಗಳಿಸಿದೆ. ಅನ್ನ, ಇಡ್ಲಿ, ಚಪಾತಿಗೂ ಒಳ್ಳೆಯ ಕಾಂಬಿನೇಷನ್‌ ಆಗಿದೆ. (PC: Pinterest)
icon

(8 / 11)

ಮದ್ದೂರ ವಡಾ: ಕರಿದ ತಿಂಡಿಗಳನ್ನು ಪ್ರೀತಿಸುವ ಜನರು ಒಮ್ಮೆಯಾದರೂ ಇದನ್ನು ಸವಿಯಲೇ ಬೇಕು. ಊರಿನ ಹೆಸರಿನೊಂದಿಗೆ ಜನಪ್ರಿಯವಾಗಿರುವ ಈ ಕರಿದ ತಿಂಡಿ ಬಾಯಲ್ಲಿ ನೀರೂರಿಸುವಂತೆ ಮಾಡುತ್ತದೆ. (PC: HT File Photo)
icon

(9 / 11)

ಪಂದಿ ಕರಿ: ಕರ್ನಾಟಕದ ಸ್ವಿಟ್ಜರ್ಲೆಂಡ್‌ ಎಂದೇ ಕರೆಯುವ ಕೊಡಗಿನ ಫೇಮಸ್‌ ಆಹಾರ ಇದು ಇದು. ಮಾಂಸಹಾರ ಪ್ರಿಯರ ನೆಚ್ಚಿನ ಖಾದ್ಯವಾಗಿದೆ. ಕೊಡಗಿಗೆ ಭೇಟಿ ನೀಡುವವರು ಮರೆಯದೇ ಸವಿಯಲೇಬೇಕಾದ ಆಹಾರ. (PC: HT File Photo)
icon

(10 / 11)

ದಾವಣಗೆರೆ ಬೆಣ್ಣೆ ದೋಸೆ: ಬೆಳಗಿನ ಉಪಹಾರಕ್ಕೆ ತಿನ್ನುವ ಈ ದೋಸೆ, ಸ್ವಾದಿಷ್ಟ ರುಚಿಯಿಂದಲೇ ಖ್ಯಾತಿ ಪಡೆದುಕೊಂಡಿದೆ. ದೋಸೆಗೆ ಬೆಣ್ಣೆ ಸವರಿ ಬೇಯಿಸಿ, ಅದನ್ನು ಆಲೂಗಡ್ಡೆ ಪಲ್ಯದ ಜೊತೆ ಸವಿಯಲಾಗುತ್ತದೆ. (PC: Pinterest)
icon

(11 / 11)

ಇತರ ಗ್ಯಾಲರಿಗಳು