ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sambar History: ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದ ಸಾಂಬಾರ್‌ ಮೊದಲು ತಯಾರಾಗಿದ್ದು ಈ ರಾಜ್ಯದಲ್ಲಿ, ಸಾಂಬಾರ್‌ ಇತಿಹಾಸ ಹೀಗಿದೆ

Sambar History: ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದ ಸಾಂಬಾರ್‌ ಮೊದಲು ತಯಾರಾಗಿದ್ದು ಈ ರಾಜ್ಯದಲ್ಲಿ, ಸಾಂಬಾರ್‌ ಇತಿಹಾಸ ಹೀಗಿದೆ

  • ಭಿನ್ನ ರುಚಿ, ಸ್ವಾದ ಹಾಗೂ ಮಸಾಲೆ ಪದಾರ್ಥಗಳ ಸುಗಂಧದ ಕಾರಣದಿಂದ ದಕ್ಷಿಣ ಭಾರತದ ಪಾಕಪದ್ಧತಿಯು ಪ್ರಪಂಚದಾದ್ಯಂತ ಹೆಸರು ಮಾಡಿದೆ. ಅದರಲ್ಲೂ ಊಟ, ತಿಂಡಿಗೆ ಜೊತೆಯಾಗುವ ಸಾಂಬಾರ್‌ಗೆ ವಿಶೇಷ ಸ್ಥಾನವಿದೆ. ದಕ್ಷಿಣ ಭಾರತದಲ್ಲಿ ಮೊದಲು ತಯಾರಾದ ಈ ಸಾಂಬಾರ್‌ ಅನ್ನು ತಯಾರಿಸಿದ್ದು ಯಾರು, ಇದರ ಹಿಂದಿನ ಇತಿಹಾಸವೇನು? ಇಲ್ಲಿದೆ ವಿವರ. 

ದಕ್ಷಿಣ ಭಾರತದ ಪಾಕಪದ್ಧತಿಗೆ ಪ್ರಪಂಚದಾದ್ಯಂತದ ಜನರು ಮಾರುಹೋಗಿದ್ದಾರೆ. ಭಿನ್ನ ಪರಿಮಳ, ರುಚಿ ಹೊಂದಿರುವ ಇಲ್ಲಿನ ಖಾದ್ಯಗಳು ಒಂದಕ್ಕಿಂತ ಒಂದು ವಿಭಿನ್ನ. ದಕ್ಷಿಣದಲ್ಲಿ ಬಾಯಲ್ಲಿ ನೀರೂರಿಸುವ ಹಲವು ಬಗೆ ಬಗೆಯ ಪದಾರ್ಥಗಳನ್ನು ತಯಾರಿಸುತ್ತಾರೆ. ಅವುಗಳಲ್ಲಿ ಸಾಂಬಾರ್‌ ಕೂಡ ಒಂದು. ವಿವಿಧ ಬಗೆಯ ಮಸಾಲೆಗಳನ್ನು ಸೇರಿಸಿ ತಯಾರಿಸುವ ಸಾಂಬಾರ್‌ ಅನ್ನು ಹೆಚ್ಚಾಗಿ ಊಟ, ತಿಂಡಿಯೊಂದಿಗೆ ಬಳಸುತ್ತಾರೆ.
icon

(1 / 9)

ಪ್ರಪಂಚದಾದ್ಯಂತ ಜನರು ಇಷ್ಟಪಟ್ಟು ತಿನ್ನುವ ಸಾಂಬಾರ್‌ ಹಿಂದೆ ಆಸಕ್ತಿದಾಯಕ ಇತಿಹಾಸವಿದೆ. ಒಣಮೆಣಸು, ಬೇಳೆ, ಹುಣಸೆಹಣ್ಣು, ಜೀರಿಗೆ, ಕೊತ್ತಂಬರಿ, ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಪದಾರ್ಥಗಳನ್ನು ಸೇರಿಸಿ ತಯಾರಿಸುವ ಈ ಖಾದ್ಯವನ್ನು ಮೊದಲ ಬಾರಿ ತಯಾರಿಸಿದ್ದು ದಕ್ಷಿಣ ಭಾರತದಲ್ಲೇ ಎನ್ನುವುದು ಸುಳ್ಳಲ್ಲ. ಸಾಂಬಾರ್‌ ಆವಿಷ್ಕಾರದ ಹಿಂದಿನ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ. 
icon

(2 / 9)

ಬಲ್ಲ ಮೂಲಗಳ ಪ್ರಕಾರ ಸಾಂಬಾರ್‌ ಮೊದಲು ತಯಾರಾಗಿದ್ದು ಮಹಾರಾಷ್ಟ್ರದಲ್ಲಿ ಎಂದು ಹೇಳಲಾಗುತ್ತದೆ. ದಂತಕಥೆಗಳ ಪ್ರಕಾರ ತಂಜಾವೂರಿನಲ್ಲಿ ಮರಾಠಾ ಆಳ್ವಿಕೆಯನ್ನು ಸ್ಥಾಪಿಸಿದ ಏಕೋಜಿಯ ಮಗ ಶಹಾಜಿ 1 ಅವರ ರಾಜಮನೆತನದ ಅಡುಗೆಮನೆಯಲ್ಲಿ ಮೊದಲ ಬಾರಿಗೆ ಸಾಂಬಾರ್‌ ತಯಾರು ಮಾಡಲಾಗಿತ್ತು. 
icon

(3 / 9)

ಛತ್ರಪತಿ ಶಿವಾಜಿಯ ಹಿರಿಯ ಮಗ ಮತ್ತು ಉತ್ತರಾಧಿಕಾರಿಯಾದ ಸಾಂಬಾ ಅಥವಾ ಸಂಭಾಜಿ ತಂಜಾವೂರಿಗೆ ಭೇಟಿ ನೀಡಿದಾಗ, ರಾಜಮನೆತನದ ಬಾಣಸಿಗ ಸ್ವತಃ ಕಂಡುಹಿಡಿದ ಹೊಸ ಭಕ್ಷ್ಯವನ್ನು ಬಡಿಸಲಾಗುತ್ತದೆ ಎಂದು ಕಥೆ ಹೇಳುತ್ತದೆ. ಆ ಭಕ್ಷ್ಯವೇ ಸಾಂಬಾರ್‌. ಇದನ್ನು ಗೌರವಾನ್ವಿತ ಅತಿಥಿಗಳಿಗೆ ಗೌರವಾರ್ಥವಾಗಿ ಬಡಿಸುವ ಭಕ್ಷ್ಯ ಎಂದು ಕರೆಯಲಾಗಿತ್ತು. 
icon

(4 / 9)

ಇನ್ನೊಂದು ಕಥೆಯ ಪ್ರಕಾರ ಷಾಜಿ ಎಂಬ ಖ್ಯಾತ ಬಾಣಸಿಗ ಇದ್ದ. ಅವನು ಯಾವಾಗಲೂ ಸಾಂಪ್ರದಾಯಿಕ ಆಮ್ತಿ ದಾಲ್‌ ತಯಾರಿಸುತ್ತಿದ್ದ. ಅದಕ್ಕೆ ಹುಳಿ ರುಚಿ ಬರಲು ಕೋಕಮ್‌ ಹಾಕುತ್ತಿದ್ದ. ಆದರೆ ಒಂದು ದಿನ ಅಡುಗೆಮನೆಯಲ್ಲಿ ಕೋಕಂ ಇರಲಿಲ್ಲ. ಅದಕ್ಕಾಗಿ ಅವನು ಕೋಕಂ ಬದಲು ಹುಣಸೆಹಣ್ಣು ಸೇರಿಸಿದ. ಜೊತೆಗೆ ಕೆಲವು ತರಕಾರಿಗಳನ್ನೂ ಹಾಕಿದ. ತನ್ನನ್ನು ಭೇಟಿಯಾದ ಶಿವಾಜಿಯ ಮಗ ಸಂಭಾಜಿಗೆ ಈ ಮೇಲೋಗರವನ್ನು ಬಡಿಸುತ್ತಾನೆ. ಇದನ್ನು ತಿಂದು ಸಾಂಬಾಜಿ ಖುಷಿಯಾಗುತ್ತಾರೆ. ಷಾಜಿ ಮಾಡಿದ ಸಾಂಬಾರ್‌ ಅನ್ನು ಮೆಚ್ಚಿದ ಸಾಂಭಾಜಿ ಹೆಸರನ್ನೇ ಆಮ್ತಿ ದಾಲ್‌ಗೆ ಸಾಂಬಾರ್‌ ಎಂದು ಇಡಲಾಯಿತು ಎನ್ನಲಾಗುತ್ತದೆ. 
icon

(5 / 9)

ಸಾಂಬಾರ್‌ ಊಟ ತಿಂಡಿಯ ರುಚಿಯ ಹೆಚ್ಚಿಸುವುದು ಮಾತ್ರವಲ್ಲ, ಇದು ಜೀರ್ಣಕ್ರಿಯೆಗೂ ಉತ್ತಮ. ಮನೆಯಲ್ಲಿ ಸುಲಭವಾಗಿ ರುಚಿಕರವಾದ ಸಾಂಬಾರ್‌ ಮಾಡಲು ಬಯಸುವವರಿಗೆ ಇಲ್ಲಿದೆ ರೆಸಿಪಿ. 
icon

(6 / 9)

ಬೇಕಾಗುವ ಸಾಮಗ್ರಿಗಳು: ಬೇಳೆ - 1 ಕಪ್‌, ವಿವಿಧ ಬಗೆಯ ತರಕಾರಿ - 2 ಕಪ್‌, ಈರುಳ್ಳಿ - 1 ಸಣ್ಣದು, ಟೊಮೆಟೊ - 2, ಸಾಂಬಾರ್‌ ಪುಡಿ - 2 ಚಮಚ, ಅರಿಸಿನ ಪುಡಿ - ಚಿಟಿಕೆ, ಹುಣಸೆರಸ - ನಿಂಬೆಹಣ್ಣಿನ ಗಾತ್ರದ ಹುಣಸೆಹಣ್ಣಿನದ್ದು, ನೀರು - 2 ರಿಂದ 3ಕಪ್‌, ಎಣ್ಣೆ - 2 ಚಮಚ, ಸಾಸಿವೆ - 1 ಚಮಚ, ಜೀರಿಗೆ - 1 ಚಮಚ, ಒಣಮೆಣಸು - 8 ರಿಂದ 10, ಕರಿಬೇವು - ಸ್ವಲ್ಪ
icon

(7 / 9)

ತಯಾರಿಸುವ ವಿಧಾನ: ತೊಗರಿಬೇಳೆಯನ್ನು ಚೆನ್ನಾಗಿ ತೊಳೆಯಿರಿ. ಅದನ್ನು ಕುಕ್ಕರ್‌ಗೆ ಹಾಕಿ ಸ್ವಲ್ಪ ನೀರು ಸೇರಿಸಿ 3 ವಿಶಲ್‌ ಕೂಗಿಸಿ. ಇನ್ನೊಂದು ಪಾತ್ರೆಯಲ್ಲಿ ಕತ್ತರಿಸಿದ ತರಕಾರಿಗಳು, ಈರುಳ್ಳಿ, ಟೊಮೆಟೊ, ಸಾಂಬಾರ್ ಪುಡಿ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ. ಅಗತ್ಯ ಇರುವಷ್ಟು ನೀರು ಸೇರಿಸಿ ಮತ್ತು ಅದನ್ನು ಕುದಿಸಿ. ತರಕಾರಿಗಳು ಮೃದುವಾಗುವವರೆಗೆ ಬೇಯಿಸಿ. ತರಕಾರಿಗಳು ಬೇಂದ ನಂತರ, ಬೇಯಿಸಿದ ಬೇಳೆಯನ್ನು ಪಾತ್ರೆಗೆ ಹಾಕಿ ಈ ಎಲ್ಲವ್ನೂ ಚೆನ್ನಾಗಿ ಮಿಶ್ರಣ ಮಾಡಿ, ಕುದಿಸಿ. ನಂತರ ಹುಣಸೆರಸ ಸೇರಿಸಿ, ಕುದಿಸಿ. ಕೊನೆಯಲ್ಲಿ ಒಂದು ಒಗ್ಗರಣೆ ಹಾಕಿದ್ರೆ ರುಚಿ ರುಚಿಯಾದ ಸಾಂಬಾರ್‌ ನಿಮ್ಮ ಮುಂದೆ ಸವಿಯಲು ಸಿದ್ಧ.
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

IPL_Entry_Point

ಇತರ ಗ್ಯಾಲರಿಗಳು