Health Tips: ಇವುಗಳನ್ನು ಹಗಲು ಹೊತ್ತು ಮಾತ್ರ ತಿನ್ನಿ, ರಾತ್ರಿ ತಿಂದರೆ ಆರೋಗ್ಯಕ್ಕೆ ಸಮಸ್ಯೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Health Tips: ಇವುಗಳನ್ನು ಹಗಲು ಹೊತ್ತು ಮಾತ್ರ ತಿನ್ನಿ, ರಾತ್ರಿ ತಿಂದರೆ ಆರೋಗ್ಯಕ್ಕೆ ಸಮಸ್ಯೆ

Health Tips: ಇವುಗಳನ್ನು ಹಗಲು ಹೊತ್ತು ಮಾತ್ರ ತಿನ್ನಿ, ರಾತ್ರಿ ತಿಂದರೆ ಆರೋಗ್ಯಕ್ಕೆ ಸಮಸ್ಯೆ

ನಮ್ಮ ದೈನಂದಿನ ಆಹಾರದಲ್ಲಿ ಬಾಳೆಹಣ್ಣು, ಸೇಬು, ನಟ್ಸ್‌, ಕಿತ್ತಳೆ, ಟೊಮ್ಯಾಟೊ, ಮೊಸರು ಸೇರಿದಂತೆ ವಿವಿಧ ಆಹಾರ ತಿನ್ನುತ್ತೇವೆ. ಆದರೆ ಅವುಗಳನ್ನು ಸರಿಯಾದ ಸಮಯದಲ್ಲಿ ಮಾತ್ರ ತಿನ್ನಬೇಕು. ಸೂಕ್ತ ಸಮಯದಲ್ಲಿ ಮಾತ್ರ ತಿಂದರೆ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎನ್ನುತ್ತಾರೆ ತಜ್ಞರು.

ಕೆಲವು ಹಣ್ಣುಗಳು ಹಗಲಿನಲ್ಲಿ ತಿಂದರೆ ದೇಹಕ್ಕೆ ಎಷ್ಟು ಒಳ್ಳೆಯದೋ, ರಾತ್ರಿ ತಿಂದರೆ ಅಷ್ಟೇ ಹಾನಿಕರವೂ ಹೌದು. ಆರೋಗ್ಯಕ್ಕೆ ಒಳ್ಳೆಯದು. ಅಷ್ಟೇ ಅಲ್ಲ ಬಾಳೆಹಣ್ಣು, ಸೇಬು, ಮೊಸರು, ಕಿತ್ತಳೆ, ಹಾಗೂ ಡ್ರೈ ಫ್ರೂಟ್‌ ತಿನ್ನಲು ಸರಿಯಾದ ಸಮಯ ಯಾವುದು? ಇಲ್ಲಿ ನೋಡಿ.
icon

(1 / 7)

ಬಾಳೆಹಣ್ಣನ್ನು ಆರೋಗ್ಯಕರ ಆಹಾರ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದನ್ನು ತಿಂದರೆ ಹೊಟ್ಟೆಯೂ ತುಂಬುತ್ತದೆ. ಅಲ್ಲದೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚರ್ಮಕ್ಕೆ ಕೂಡಾ ಇದು ತುಂಬಾ ಒಳ್ಳೆಯದು. ಆದರೆ ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನದ ಊಟಕ್ಕೆ ಬಾಳೆಹಣ್ಣು ತಿನ್ನಿ. ಆದರೆ ರಾತ್ರಿಯಲ್ಲಿ ಇದನ್ನು ತಿನ್ನುವುದರಿಂದ ಲೋಳೆ ಉಂಟಾಗುತ್ತದೆ. ಅಲ್ಲದೆ ಅಜೀರ್ಣವೂ ಆಗುತ್ತದೆ.
icon

(2 / 7)

ಆಪಲ್ ಸಹ ಬೆಳಗ್ಗೆ ಬೇಗನೆ ತಿನ್ನಬೇಕು. ಇದರಲ್ಲಿರುವ ಪೆಕ್ಟಿನ್ ರಕ್ತದ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಈ ಪೆಕ್ಟಿನ್ ರಾತ್ರಿ ವೇಳೆ ಸುಲಭವಾಗಿ ಜೀರ್ಣವಾಗುವುದಿಲ್ಲ. ಪರಿಣಾಮವಾಗಿ ಅದು ಹೊಟ್ಟೆಯಲ್ಲಿ ಆಮ್ಲವನ್ನು ಉತ್ಪಾದಿಸುತ್ತದೆ.
icon

(3 / 7)

ಡ್ರೈ ಫ್ರೂಟ್ಸ್‌ ತಿಂದರೆ ಒಳ್ಳೆಯದು. ಆಗ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಆದರೆ ರಾತ್ರಿಯಲ್ಲಿ ಕೊಬ್ಬು ಮತ್ತು ಕ್ಯಾಲರಿಗಳನ್ನು ಹೊಂದಿರುವ ಬೀಜಗಳನ್ನು ತಿನ್ನುವುದು ತೂಕ ಹೆಚ್ಚಾಗಲು ಕಾರಣವಾಗಬಹುದು.
icon

(4 / 7)

ಮಧ್ಯಾಹ್ನದ ವೇಳೆ ಕಿತ್ತಳೆ ಹಣ್ಣನ್ನು ಸೇವಿಸಿ. ಇದರಲ್ಲಿರುವ ವಿಟಮಿನ್ ಸಿ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದರೆ ರಾತ್ರಿ ಕಿತ್ತಳೆ ತಿನ್ನುವುದು ಗ್ಯಾಸ್ಟ್ರಿಕ್ ಸೇರಿದಂತೆ ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡಬಹುದು.
icon

(5 / 7)

ರಾತ್ರಿಯ ಊಟಕ್ಕೆ ಮೊಸರು ತಿನ್ನದಿದ್ದರೆ ಉತ್ತಮ. ನಿಮ್ಮ ರಾತ್ರಿಯ ಭೋಜನವನ್ನು ಜೀರ್ಣಿಸಿಕೊಳ್ಳಲು ಇದು ಸಹಾಯ ಮಾಡುವುದರಿಂದ ಇದನ್ನು ಮಧ್ಯಾಹ್ನ ತಿನ್ನಿ. ಆದರೆ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿಂದರೆ ತುಂಬಾ ಒಳ್ಳೆಯದು.
icon

(6 / 7)

ಬೆಳಗಿನ ಉಪಾಹಾರಕ್ಕೆ ಟೊಮ್ಯಾಟೊ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಟೊಮೆಟೊದಲ್ಲಿ ಪೆಕ್ಟಿನ್ ಮತ್ತು ಆಕ್ಸಾಲಿಕ್ ಆಮ್ಲವಿದೆ. ಹಾಗಾಗಿ ರಾತ್ರಿ ವೇಳೆ ಇವುಗಳನ್ನು ತಿಂದರೆ ಹೊಟ್ಟೆಯ ಸಮಸ್ಯೆ ಉಂಟಾಗುತ್ತದೆ.
icon

(7 / 7)

ಇತರ ಗ್ಯಾಲರಿಗಳು