Hassan News: ಹಾಸನದಲ್ಲಿ 36 ದಿನದ ಬಳಿಕ ಕಾಡಾನೆ ಸೆರೆ ಕಾರ್ಯಾಚರಣೆ ಶುರು: ಸೆರೆ ಸಿಕ್ಕ ಸಾರಾ ಮಾರ್ಟಿನ್
- ಕಾಡಾನೆಗಳ ಉಪಟಳದಿಂದ ನಲುಗಿರುವ ಹಾಸನ ಜಿಲ್ಲೆಯಲ್ಲಿ ಅರ್ಜುನ ಆನೆ ಸಾವಿನ ನಂತರ ಸೆರೆ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಈಗ ಸೆರೆ ಹಿಡಿವ ಚಟುವಟಿಕೆ ಬೇಲೂರು ತಾಲ್ಲೂಕಿನಲ್ಲಿ ಶುರುವಾಗಿದೆ. ಅಭಿಮನ್ಯು ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರಾ ಮಾರ್ಟಿನ್ ಎಂಬ ಕಾಡಾನೆ ಸೆರೆ ಹಿಡಿದಿದ್ದಾರೆ. ಹೀಗಿತ್ತು ತಿಂಗಳ ನಂತರದ ಸೆರೆ ಕಾರ್ಯಾಚರಣೆ ನೋಟ..
- ಕಾಡಾನೆಗಳ ಉಪಟಳದಿಂದ ನಲುಗಿರುವ ಹಾಸನ ಜಿಲ್ಲೆಯಲ್ಲಿ ಅರ್ಜುನ ಆನೆ ಸಾವಿನ ನಂತರ ಸೆರೆ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಈಗ ಸೆರೆ ಹಿಡಿವ ಚಟುವಟಿಕೆ ಬೇಲೂರು ತಾಲ್ಲೂಕಿನಲ್ಲಿ ಶುರುವಾಗಿದೆ. ಅಭಿಮನ್ಯು ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರಾ ಮಾರ್ಟಿನ್ ಎಂಬ ಕಾಡಾನೆ ಸೆರೆ ಹಿಡಿದಿದ್ದಾರೆ. ಹೀಗಿತ್ತು ತಿಂಗಳ ನಂತರದ ಸೆರೆ ಕಾರ್ಯಾಚರಣೆ ನೋಟ..
(1 / 6)
ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಪಾಳ್ಯ ಮತ್ತು ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಭಯದ ವಾತಾವರಣ ನಿರ್ಮಿಸಿ ಜನರಿಗೆ ಉಪಟಳ ನೀಡುತ್ತಿದ್ದ ಸಾರಾ ಮಾರ್ಟಿನ್ ಎಂದೇ ಈ ಭಾಗದಲ್ಲಿ ಗುರುತಿಸುವ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು,.
(2 / 6)
ಕಾರ್ಯಾಚರಣೆ. ಶನಿವಾರ ಬೆಳಿಗ್ಗೆ ಅರಣ್ಯ ಇಲಾಖೆ ಡಿಸಿಎಫ್ ಸೌರಭ್‌ಕುಮಾರ್ ನೇತೃತ್ವದಲ್ಲಿ, ಬೇಲೂರು ತಾಲ್ಲೂಕಿನ ಪಾಳ್ಯ ಹೋಬಳಿ ನಲ್ಲೂರು ಹಾಗೂ ಮುದ್ದನಾಯ್ಕನಹಳ್ಳಿಪುರ ಗ್ರಾಮಕ್ಕೆ ಸೇರಿದ ಸಹರಾ ಎಸ್ಟೇಟ್‍ನಲ್ಲಿ ಪ್ರಾರಂಭಿಸಲಾಯಿತು. ಕೊಡಗು ಜಿಲ್ಲೆಯ ದುಬಾರೆ ಹಾಗೂ ಮತ್ತಿಗೋಡಿನಿಂದ ಬಂದಿದ್ದ ಅಭಿಮನ್ಯು, ಸುಗ್ರೀವ, ಧನಂಜಯ, ಪ್ರಶಾಂತ, ಭೀಮಾ, ಹರ್ಷ, ಅಶ್ವಥ್ಥಾಮ ಮತ್ತು ಮಹೇಂದ್ರ ಎಂಬ ಎಂಟು ಸಾಕಾನೆಗಳ ಸಹಕಾರದಿಂದ ಮಾರ್ಟಿನ್‌ನನ್ನು ಸೆರೆ ಹಿಡಿಯಲಾಯಿತು.
(3 / 6)
ಎಸ್ಟೇಟ್‍ನಲ್ಲಿ ಕಾಡಾನೆ ಬೀಡು ಬಿಟ್ಟಿದ್ದರಿಂದ ಸ್ಥಳೀಯರು ಇದನ್ನು ಸಾರಾ ಮಾರ್ಟೀನ್’ ಎಂದು ಕರೆಯುತ್ತಿದ್ದರು. ಈ ಆನೆ ಒಂಟಿಯಾಗಿ ಓಡಾಡಿಕೊಂಡಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಮಾಡಿದರೂ ಜನರಿಗೆ ತೊಂದರೆ ಆಗಿರಲಿಲ್ಲ. ಕೊನೆಗೂ ಈ ಆನೆಯನ್ನು ಸೆರೆ ಹಿಡಿಯಲಾಯಿತು ಎಂದು ಹಾಸನ ಸಿಸಿಎಫ್ ಆರ್.ರವಿಶಂಕರ್ ತಿಳಿಸಿದರು.
(4 / 6)
ಆನೆಗಳು ಮೊದಲು ಪುಂಡಾನೆಯನ್ನು ಸುತ್ತುವರೆಯುತ್ತವೆ. ಆನಂತರ ಪುಂಡಾನೆಯನ್ನು ತಿವಿದು ಅತ್ತಿತ್ತ ಹೋಗದಂತೆ ನೋಡಿಕೊಳ್ಳುತ್ತವೆ. ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ಆನೆಗಳ ಹಿಡಿತದಲ್ಲಿ ಸಿಗುವ ಪುಂಡಾನೆ ಮೆತ್ತಗಾಗುತ್ತಾ ಹೋಗುತ್ತದೆ.
(5 / 6)
ಸೆರೆ ಸಿಕ್ಕ ಆನೆ ಕತ್ತು, ಕಾಲುಗಳಿಗೆ ಹಗ್ಗ ಕಟ್ಟಿಕೊಂಡು ಇತರೆ ಆನೆಗಳ ಸಹಕಾರದಿಂದ ತಳ್ಳುತ್ತಲೇ ಲಾರಿಯನ್ನು ಹತ್ತಿಸಲಾಗುತ್ತದೆ. ಹಾಸನದಲ್ಲೂ ಇದೇ ರೀತಿ ಸಾರಾ ಮಾರ್ಟಿನ್ ಆನೆ ಸೆರೆ ಹಿಡಿಯಲಾಗಿದೆ.
ಇತರ ಗ್ಯಾಲರಿಗಳು