HD Devegowda: 93ರ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ದೇವೇಗೌಡರೇ ಚನ್ನಪಟ್ಟಣ ಚುನಾವಣೆ ರಣ ಕಲಿ: ಹೇಗಿದೆ ಅವರ ಪ್ರಚಾರ ವೈಖರಿ
- Hd Devegowda Politics: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೇ ಈಗಲೂ ರಾಜಕೀಯ ಎಂದರೆ ವಯಸ್ಸು ಮೀರಿದ ಉತ್ಸಾಹ. 93ರ ವಯಸ್ಸಿನಲ್ಲೂ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಅಖಾಡದಲ್ಲಿ ಅವರೇ ಸ್ಟಾರ್ ಕ್ಯಾಂಪೇನರ್. ಹೀಗಿದೆ ದೇವೇಗೌಡರ ಪ್ರಚಾರದ ಕ್ಷಣಗಳು.
- Hd Devegowda Politics: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೇ ಈಗಲೂ ರಾಜಕೀಯ ಎಂದರೆ ವಯಸ್ಸು ಮೀರಿದ ಉತ್ಸಾಹ. 93ರ ವಯಸ್ಸಿನಲ್ಲೂ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಅಖಾಡದಲ್ಲಿ ಅವರೇ ಸ್ಟಾರ್ ಕ್ಯಾಂಪೇನರ್. ಹೀಗಿದೆ ದೇವೇಗೌಡರ ಪ್ರಚಾರದ ಕ್ಷಣಗಳು.
(1 / 9)
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಆರು ದಶಕಗಳ ಸುಧೀರ್ಘ ರಾಜಕೀಯ ಪಯಣ ಹೊಂದಿದ್ದರೂ ಈಗಲೂ ಅವರಿಗೆ ಪ್ರಚಾರದ ಅಖಾಡಕ್ಕೆ ಇಳಿಯುವುದು ಎಂದರೆ ಎಲ್ಲಿಲ್ಲದ ಉಮೇದು.
(2 / 9)
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರ್ ಪರ ಪ್ರಚಾರಕ್ಕೆ ಬಂದಾಗ ಹಿರಿಯರು ಪ್ರೀತಿಯಿಂದ ದೇವೇಗೌಡರನ್ನು ಅಭಿನಂದಿಸಿದರು. ಇದಕ್ಕೆ ಗೌಡರದ್ದು ನಗುವಿನ ಸ್ವಾಗತ.
(3 / 9)
ದೇವೇಗೌಡರು ಈ ವಯಸ್ಸಿನಲ್ಲೂ ಉತ್ಸಾಹ ಕಳೆದುಕೊಳ್ಳದೇ ಊರಿಗೆ ಬಂದಾಗ ಚನ್ನಪಟ್ಟಣದ ಮಹಿಳೆಯರು ಪ್ರೀತಿಯಿಂದ ಹಿರಿಯ ನಾಯಕನನ್ನು ಬರ ಮಾಡಿಕೊಂಡು ಆರತಿ ಮಾಡುವುದು ಎಲ್ಲೆಡೆ ಕಂಡು ಬರುತ್ತಿದೆ.
(4 / 9)
ಆರೋಗ್ಯ ಅಷ್ಟಾಗಿ ಸರಿಯಿಲ್ಲ. ದೈಹಿಕವಾಗಿ ಹಿಂದಿನಂತೆ ಗಟ್ಟಿ ಇಲ್ಲದೇ ಇದ್ದರೂ ಅವರ ಮಾತು, ರಾಜಕೀಯದ ನೆನಪುಗಳು ಗಟ್ಟಿಯಾಗಿವೆ. ಎದುರಾಳಿಗಳನ್ನು ಹಿಂದಿನ ಶೈಲಿಯ ಮಾತುಗಳಿಂದಲೇ ತಿವಿಯುತ್ತಿದ್ದಾರೆ ದೇವೇಗೌಡರು.
(5 / 9)
ದೇವೇಗೌಡರನ್ನು ಕಂಡರೆ ಹಿರಿಯರಿಗೆ ಅಭಿಮಾನ, ಚನ್ನಪಟ್ಟಣ ಕ್ಷೇತ್ರದ ಹಳ್ಳಿ ಹಳ್ಳಿಯಲ್ಲೂ ದೇವೇಗೌಡರು ಬಂದ ತಕ್ಷಣ ಕಂಡು ನಮಸ್ಕರಿಸುವವರ ಸಂಖ್ಯೆ ಅಧಿಕವಾಗಿದೆ.
(6 / 9)
ಯುವ ಸಮೂಹವೂ ದೇವೇಗೌಡರನ್ನು ಪ್ರೀತಿಸುವುದು ಬಿಟ್ಟಿಲ್ಲ.ಚನ್ನಪಟ್ಟಣ ಕೇತ್ರದ ಪ್ರಚಾರಕ್ಕೆ ಗೌಡರು ಬಂದಾಗ ಅಭಿಮಾನದಿಂದ ಆರತಿ ಎತ್ತಿ ಬರ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.
(7 / 9)
ನನ್ನ ರಾಜಕೀಯ ಜೀವನದಲ್ಲಿ ಏನೆಲ್ಲಾ ನೋಡಿದ್ದೇನೆ ಎಂದು ಹಳೆಯ ನೆನಪುಗಳೊಂದಿಗೆ ಈಗಿನ ರಾಜಕೀಯ ಸ್ಥಿತಿಗತಿ, ನಾಯಕರನ್ನು ಪ್ರಸ್ತಾಪಿಸುತ್ತಲೇ ಚನ್ನಪಟ್ಟಣ ಚುನಾವಣೆ ಕಣದಲ್ಲಿ ರಣೋತ್ಸಾಹ ತಂದಿದ್ದಾರೆ ದೇವೇಗೌಡರು.
(8 / 9)
ದೇವೇಗೌಡರು ಪ್ರತಿ ಹಳ್ಳಿಗೂ ಬಂದಾಗ ಉತ್ಸಾಹದಿಂದಲೇ ಪ್ರಚಾರ ಭಾಷಣ ಮಾಡುತ್ತಾರೆ. ರಾಜಕೀಯದಲ್ಲಿ ವಯಸ್ಸಿಗಿಂತ ಬೇಕಿರುವುದು ಉತ್ಸಾಹ ಎನ್ನುವುದನ್ನು ಅವರು ತೋರುತ್ತಿದ್ದಾರೆ.
ಇತರ ಗ್ಯಾಲರಿಗಳು