Christmas Tree: ಮನೆಯಲ್ಲಿ ಕ್ರಿಸ್‌ಮಸ್ ಟ್ರೀಯನ್ನು ಎಲ್ಲಿ ಇಟ್ಟರೆ ಒಳ್ಳೆಯದು; ಸಿಗುವ ಶುಭಫಲ ತಿಳಿಯಿರಿ
ಕ್ರಿಸ್‌ಮಸ್ ಟ್ರೀ: ವಿಶ್ವದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಈ ಹಬ್ಬದಲ್ಲಿ ಕ್ರಿಸ್‌ಮಸ್ ಟ್ರೀಗೆ ವಿಶೇಷ ಸ್ಥಾನವಿದೆ. ಈ ಮರವನ್ನು ಮನೆಯಲ್ಲಿ ಎಲ್ಲಿ ಇಟ್ಟರೆ ಹೆಚ್ಚಿನ ಶುಭಫಲಗಳಿವೆ ಎಂಬುದನ್ನು ತಿಳಿಯೋಣ.
ಯೇಸು ಕ್ರಿಸ್ತನ ಜನನವನ್ನು ಪ್ರತಿ ವರ್ಷ ಡಿಸೆಂಬರ್ 25 ರಂದು ಜಗತ್ತಿನಾದ್ಯಂತ ಕ್ರಿಸ್‌ಮಸ್ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ಹಬ್ಬ ಕ್ರಿಶ್ಚಿಯನ್ನರಿಗೆ ಬಹಳ ಮುಖ್ಯವಾದ. ಇದು ವಿಶ್ವದ ಅತ್ಯಂತ ಜನಸಂದಣಿಯ ಹಬ್ಬಗಳಲ್ಲಿ ಒಂದಾಗಿದೆ. ಕ್ರಿಸ್‌ಮಸ್ ಸಮಯದಲ್ಲಿ ಕ್ರಿಶ್ಚಿಯನ್ನರು ತಮ್ಮ ಮನೆಗಳ ಮುಂದೆ ನಕ್ಷತ್ರಗಳನ್ನು ನೇತುಹಾಕುವುದು, ಕ್ರಿಸ್‌ಮಸ್ ಮರಗಳನ್ನು ಇಡುವುದು ಮತ್ತು ಅವುಗಳಿಗೆ ದೀಪಗಳಿಂದ ಅಲಂಕರಿಸುವುದು ಸಾಮಾನ್ಯವಾಗಿರುತ್ತದೆ. ಯೇಸು ಕ್ರಿಸ್ತ ನಮ್ಮ ಮನೆಯಲ್ಲಿ ಜನಿಸಿದ್ದಾನೆ ಎಂಬ ನಂಬಿಕೆಯಿಂದ ಪ್ರತಿಯೊಬ್ಬ ಕ್ರಿಶ್ಚಿಯನ್ನರು ಕ್ರಿಸ್‌ಮಸ್ ಸಮಯದಲ್ಲಿ ತಮ್ಮ ಮನೆಗಳ ನಕ್ಷತ್ರವನ್ನು ಕಟ್ಟುತ್ತಾರೆ.
ಇದೇ ವೇಳೆ ಕ್ರಿಸ್‌ಮಸ್ ವೃಕ್ಷಕ್ಕೆ ವಿಶೇಷ ಮಹತ್ವವಿದೆ. ಮನೆಯಲ್ಲಿ ಕ್ರಿಸ್‌ಮಸ್ ಟ್ರೀ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು, ಮನೆಯಲ್ಲಿರುವ ನೆಗೆಟಿವ್ ಎನರ್ಜಿಯನ್ನು ಹೋಗಲಾಡಿಸಿ ಪಾಸಿಟಿವ್ ಎನರ್ಜಿಯನ್ನು ತರುತ್ತದೆ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಅದೇ ಸಮಯದಲ್ಲಿ, ಕ್ರಿಸ್‌ಮಸ್ ಟ್ರೀ ಅನ್ನು ಮನೆಯಲ್ಲಿ ಇಡುವುದರಿಂದ ಮನೆಯ ವಾಸ್ತು ದೋಷವನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಲಾಗುತ್ತದೆ. ಕ್ರಿಸ್‌ಮಸ್ ಮರವನ್ನು ಏಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕುಟುಂಬಸ್ಥರು ಒಟ್ಟಾಗಿ ಮನೆಯನ್ನು ಅಲಂಕರಿಸಿದರೆ, ಕುಟುಂಬ ಸದಸ್ಯರ ನಡುವೆ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ನಂಬಲಾಗಿದೆ.
ಕ್ರಿಸ್‌ಮಸ್ ಟ್ರೀ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ ಮತ್ತು ಮನೆಯಲ್ಲಿ ಸಂಪತ್ತನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಕ್ರಿಸ್‌ಮಸ್ ಮರವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಮುಖ್ಯವಾಗಿ ಕ್ರಿಸ್‌ಮಸ್ ಮರವು ತ್ರಿಕೋನ ಆಕಾರದಲ್ಲಿರಬೇಕು. ವಾಸ್ತು ಪ್ರಕಾರ ತ್ರಿಕೋನವನ್ನು ಬೆಂಕಿಯ ಆಕಾರವೆಂದು ಪರಿಗಣಿಸಲಾಗುತ್ತದೆ.
ಕ್ರಿಸ್‌ಮಸ್ ಮರವನ್ನು ಮನೆಯ ದಕ್ಷಿಣ ಭಾಗದಲ್ಲಿ ಇಡಬಾರದು. ಏಕೆಂದರೆ ಕ್ರಿಸ್‌ಮಸ್ ಟ್ರೀಯನ್ನು ಮನೆಯ ದಕ್ಷಿಣ ಭಾಗದಲ್ಲಿ ಇರಿಸಿದರೆ ಅದು ಲಾಭದ ಬದಲು ನಷ್ಟವನ್ನು ತರುತ್ತದೆ. ನೀವು ಮನೆಯಲ್ಲಿ ಕ್ರಿಸ್‌ಮಸ್ ಇಟ್ಟಿದ್ದರೆ, ಅದರ ಸುತ್ತಲೂ ಮೇಣದಬತ್ತಿಗಳನ್ನು ಬೆಳಗಿಸಿ. ಮೇಣದಬತ್ತಿಯನ್ನು ಬೆಳಗಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಇದನ್ನು ಕೂಡ ಬಣ್ಣಬಣ್ಣದ ಮತ್ತು ಪರಿಮಳಯುಕ್ತ ಮೇಣದಬತ್ತಿಗಳಿಂದ ಬೆಳಗಿಸಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬುತ್ತದೆ.
ಕ್ರಿಸ್‌ಮಸ್ ಗಿಡವನ್ನು ದೀಪಗಳು ಮತ್ತು ರಿಬ್ಬನ್ ಗಳಿಂದ ಅಲಂಕರಿಸಬೇಕು. ಗಿಡಕ್ಕೆ ಅಲ್ಲಲ್ಲಿ ಗಂಟೆಗಳನ್ನು ತೂಗುಹಾಕಬೇಕು. ಗಂಟೆಯ ಶಬ್ದವು ಧನಾತ್ಮಕ ಶಕ್ತಿಯನ್ನು ತರುತ್ತದೆ. ಕ್ರಿಸ್‌ಮಸ್ ಟ್ರೀಯಲ್ಲಿ ಇಂತಹ ಗಂಟೆಯನ್ನು ಕಟ್ಟಿದಾಗ, ಅದು ಮನೆಯೊಳಗೆ ಮಾಡುವ ಶಬ್ದವು ಇಡೀ ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಅದೂ ಅಲ್ಲದೆ ಕ್ರಿಸ್‌ಮಸ್ ಟ್ರೀ ಮೇಲೆ 2 ನಾಣ್ಯಗಳನ್ನು ರೆಡ್ ರಿಬ್ಬನ್ ನಲ್ಲಿ ನೇತು ಹಾಕಿದರೆ ಮನೆಯಲ್ಲಿ ಹಣದ ತೊಂದರೆ ಇರುವುದಿಲ್ಲ ಎಂಬುದು ಕೆಲವರ ನಂಬಿಕೆಯಾಗಿದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)