Top 10 ott: ಭಾರತದಲ್ಲಿ ಇಂದಿನ ಟಾಪ್ 10 ಒಟಿಟಿ ಸಿನಿಮಾಗಳು ಯಾವುವು? ಪ್ರೈಮ್ ವಿಡಿಯೋದಲ್ಲಿ 9ನೇ ಸ್ಥಾನಕ್ಕೆ ಸರಿದ ರಜನಿಕಾಂತ್ ಚಿತ್ರ
10 ott movies in india: ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸೋಮವಾರ (ಡಿಸೆಂಬರ್ 16) ಟಾಪ್ 10 ಸಿನಿಮಾಗಳ ಪಟ್ಟಿಯಲ್ಲಿ ಕ್ರಿಸ್ಮಸ್ ಸಂಭ್ರಮದ ರೆಡ್ ಒನ್, ಕಂಗುವಾ, ಮೆಕ್ಯಾನಿಕ್ ರಾಕಿ, ಅಗ್ನಿ, ಮಟ್ಕಾ, ಪುಷ್ಪ ದಿ ರೈಸ್, ಸರ್, ಸ್ತ್ರೀ 2, ವೆಟ್ಟೈಯನ್, ಬ್ಲಡಿ ಬೆಗ್ಗರ್ ಸಿನಿಮಾಗಳು ಸ್ಥಾನ ಪಡೆದಿವೆ.
10 ott movies in india: ಈ ಚಳಿಗಾಲದಲ್ಲಿ ಮನೆಯಲ್ಲಿಯೇ ಕುಳಿತು ಸಿನಿಮಾ ನೋಡುವವರಿಗೆ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜಿಯೋ ಸಿನಿಮಾ, ಜೀ5 ಮುಂತಾದ ಒಟಿಟಿಗಳಲ್ಲಿ ಹಲವು ಸಿನಿಮಾಗಳು ಇವೆ. ಈ ಲೇಖನದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈಗ ಟಾಪ್ 10ನಲ್ಲಿರುವ ಸಿನಿಮಾಗಳು ಯಾವುವು ಎಂದು ನೋಡೋಣ. ಅಚ್ಚರಿಯಿಂದರೆ ಭಾರತದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈಗ ಅಮೆರಿಕದ ರೆಡ್ ಒನ್ ಸಿನಿಮಾ ಟಾಪ್ 1ರಲ್ಲಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸೋಮವಾರ (ಡಿಸೆಂಬರ್ 16) ಟಾಪ್ 10 ಸಿನಿಮಾಗಳ ಪಟ್ಟಿಯಲ್ಲಿ ಕ್ರಿಸ್ಮಸ್ ಸಂಭ್ರಮದ ರೆಡ್ ಒನ್, ಕಂಗುವಾ, ಮೆಕ್ಯಾನಿಕ್ ರಾಕಿ, ಅಗ್ನಿ, ಮಟ್ಕಾ, ಪುಷ್ಪ ದಿ ರೈಸ್, ಸರ್, ಸ್ತ್ರೀ 2, ವೆಟ್ಟೈಯನ್, ಬ್ಲಡಿ ಬೆಗ್ಗರ್ ಸಿನಿಮಾಗಳು ಸ್ಥಾನ ಪಡೆದಿವೆ. ರಜನಿಕಾಂತ್ ನಟನೆಯ ವೆಟ್ಟೈಯನ್ ಸಿನಿಮಾ ಒಂಬತ್ತನೇ ಸ್ಥಾನಕ್ಕೆ ಸರಿದಿದೆ.
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿರುವ ಟಾಪ್ 10 ಸಿನಿಮಾಗಳು
ರೆಡ್ ಒನ್
ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ "ರೆಡ್ ಒನ್" ಸಿನಿಮಾವು ಟಾಪ್ 1ರಲ್ಲಿ ಸ್ಥಾನ ಪಡದಿದೆ. ಡ್ವೇನ್ ಜಾನ್ಸನ್ ನಟನೆಯ ಈ ಸಿನಿಮಾವನ್ನು ಹೆಚ್ಚು ಜನರು ದೇಶದಲ್ಲೀಗ ನೋಡುತ್ತಿದ್ದಾರೆ. . ನವೆಂಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಒಂದು ತಿಂಗಳೊಳಗೆ ಒಟಿಟಿಗೆ ಆಗಮಿಸಿತ್ತು. ಡ್ವೇನ್ ಜಾನ್ಸನ್ ಎಂಬ ನಟನನ್ನು ಮಕ್ಕಳು ಮಾತ್ರವಲ್ಲದೆ ದೊಡ್ಡವರೂ ಇಷ್ಟಪಡುವುದರಿಂದ ಆತನ ಅಭಿಮಾನಿಗಳಿಗೆ ಈ ಸಿನಿಮಾದಲ್ಲಿ ಸಾಕಷ್ಟು ಸಾಹಸ ದೃಶ್ಯಗಳು ಕಾದಿವೆ. ಮಕ್ಕಳು ಮಾತ್ರವಲ್ಲದೆ ದೊಡ್ಡವರೂ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಬಹುದು. ಹೀಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಈ ಸಿನಿಮಾದ ವಿಮರ್ಶೆ ಪ್ರಕಟವಾಗಿದೆ. ಸಿನಿಮಾ ನೋಡುವ ಮುನ್ನ ವಿಮರ್ಶೆ ಓದಿ.
ಕಂಗುವಾ
ತಮಿಳಿನ ಸ್ಟಾರ್ ಹೀರೋ ಸೂರ್ಯ ಅವರ ಫ್ಯಾಂಟಸಿ ಆ್ಯಕ್ಷನ್ ಸಿನಿಮಾ 'ಕಂಗುವಾ' ನವೆಂಬರ್ 14 ರಂದು ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ, ಇಂಗ್ಲಿಷ್, ಫ್ರೆಂಚ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾವೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದೀಗ ಅಗ್ರ ಎರಡನೇ ಸ್ಥಾನದಲ್ಲಿದೆ.
ಮೆಕ್ಯಾನಿಕ್ ರಾಕಿ
ವಿಶ್ವಕ್ ಸೇನ್ ಅವರ ಇತ್ತೀಚಿನ ಚಿತ್ರ ಮೆಕ್ಯಾನಿಕ್ ರಾಕಿ. ಮೀನಾಕ್ಷಿ ಚೌಧರಿ ಮತ್ತು ಶ್ರದ್ಧಾ ಶ್ರೀನಾಥ್ ಈ ಸಿನಿಮಾದಲ್ಲಿ ನಾಯಕಿಯರು. ರವಿತೇಜ ಮುಳ್ಳಪುಡಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಕೆಲವೇ ವಾರಗಳಲ್ಲಿ ಒಟಿಟಿಗೆ ಆಗಮಿಸಿತ್ತು. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಅಗ್ರ 3ನೇ ಸ್ಥಾನದಲ್ಲಿದೆ.
ಅಗ್ನಿ
ಅಗ್ನಿ ಎಂಬ ಥ್ರಿಲ್ಲರ್ ಸಿನಿಮಾವು ಈ ತಿಂಗಳ ಮೊದಲ ವಾರದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ರಅಹುಲ್ ದೋಲ್‌ಕಿಯಾ ನಿರ್ದೇಶನದ, ಪ್ರತೀಕ್ ಗಾಂಧಿ, ದಿವ್ಯೇಂದು ಮುಂತಾದವರು ನಟಿಸಿರುವ ಈ ಸಿನಿಮಾ ಒಟಿಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಮಟ್ಕಾ
ವರುಣ್ ತೇಜ್, ಮೀನಾಕ್ಷಿ ಚೌಧರಿ, ನೊರಾ ಫತೇಹಿ ಮುಂತಾದವರು ನಟಿಸಿರುವ, ಕರುಣಾ ಕುಮಾರ್ ನಿರ್ದೇಶನದ ಮಟ್ಕಾ ಸಿನಿಮಾವು ಟಾಪ್ 5ನಲ್ಲಿದೆ.
ಪುಷ್ಪ: ದಿ ರೈಸ್
ಅಲ್ಲು ಅರ್ಜುನ್ ನಟನೆಯ ಪುಷ್ಪ ದಿ ರೂಲ್ ಸಿನಿಮಾವು ಒಂದೆಡೆ ಚಿತ್ರಮಂದಿರಗಳಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತಿದೆ. ಇದೇ ಸಮಯದಲ್ಲಿ ಈ ಸಿನಿಮಾದ ಮೊದಲ ಭಾಗವು ಒಟಿಟಿಯಲ್ಲಿ ಟಾಪ್ 6ರಲ್ಲಿದೆ.
ಸರ್
ಈ ಚಿತ್ರದಲ್ಲಿ ವಿಮಲ್ ನಾಯಕನಾಗಿ ನಟಿಸಿದ್ದಾರೆ. ತಮಿಳು ಚಲನಚಿತ್ರ ನಟ ಬೋಸ್ ವೆಂಕಟ್ ನಿರ್ದೇಶಿಸಿದ್ದಾರೆ. ಈ ತಮಿಳು ಸಿನಿಮಾ ಕನ್ನಡ, ತೆಲುಗು, ಹಿಂದಿ, ಮಲಯಾಳಂನಲ್ಲೂ ಲಭ್ಯವಿದೆ.
ಸ್ತ್ರೀ 2
ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸ್ತ್ರೀ ಸಿನಿಮಾವು ಅಮೆಜಾನ್ ಪ್ರೈಮ್ ವಿಡಿಯೋದ ಟಾಪ್ 10 ಲಿಸ್ಟ್‌ನಲ್ಲಿದೆ.
ನಂತರದ ಸ್ಥಾನಗಳನ್ನು ವೆಟ್ಟೈಯನ್, ಬ್ಲಡಿ ಬೆಗ್ಗರ್ ಸಿನಿಮಾಗಳು ಪಡದಿವೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನೋಡುವ ಸಿನಿಮಾಗಳು ಟಾಪ್ 10ರಲ್ಲಿ ಸ್ಥಾನ ಪಡೆಯುತ್ತವೆ.
ವಿಭಾಗ