Friendship Day Wishes: ಫ್ರೆಂಡ್‌ಶಿಪ್ ಡೇಗೆ ನಿಮ್ಮ ಗೆಳೆಯ-ಗೆಳತಿಗೆ ಏನೆಂದು ಸಂದೇಶ ಕಳುಹಿಸುವಿರಿ? ಇಲ್ಲಿದೆ ಸ್ನೇಹ ಸಂದೇಶಗಳ ಗುಚ್ಛ
- ಸ್ನೇಹವನ್ನು ಗೌರವಿಸುವ, ಸ್ನೇಹಿತರನ್ನು ಪ್ರೀತಿಸುವ ಪ್ರತಿ ಜೀವಕ್ಕೂ ಸ್ನೇಹಿತರ ದಿನಾಚರಣೆ ವಿಶೇಷ. ಪ್ರತಿವರ್ಷದಂತೆ ಈ ವರ್ಷವೂ ಸ್ನೇಹಿತರ ದಿನಾಚರಣೆ ಬಂದಿದೆ. ಇಂದು (ಆಗಸ್ಟ್ 4) ನಿಮ್ಮ ಆಪ್ತ ಗೆಳೆಯ/ಗೆಳತಿಗೆ ವಾಟ್ಸ್‌ಆಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷವಾಗಿ ಶುಭಾಶಯ ಕೋರಬೇಕು ಅಂತಿದ್ರೆ ನಿಮಗಾಗಿ ಇಲ್ಲಿವೆ ಒಂದಿಷ್ಟು ಐಡಿಯಾಗಳು.
- ಸ್ನೇಹವನ್ನು ಗೌರವಿಸುವ, ಸ್ನೇಹಿತರನ್ನು ಪ್ರೀತಿಸುವ ಪ್ರತಿ ಜೀವಕ್ಕೂ ಸ್ನೇಹಿತರ ದಿನಾಚರಣೆ ವಿಶೇಷ. ಪ್ರತಿವರ್ಷದಂತೆ ಈ ವರ್ಷವೂ ಸ್ನೇಹಿತರ ದಿನಾಚರಣೆ ಬಂದಿದೆ. ಇಂದು (ಆಗಸ್ಟ್ 4) ನಿಮ್ಮ ಆಪ್ತ ಗೆಳೆಯ/ಗೆಳತಿಗೆ ವಾಟ್ಸ್‌ಆಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷವಾಗಿ ಶುಭಾಶಯ ಕೋರಬೇಕು ಅಂತಿದ್ರೆ ನಿಮಗಾಗಿ ಇಲ್ಲಿವೆ ಒಂದಿಷ್ಟು ಐಡಿಯಾಗಳು.
(1 / 9)
ಸ್ನೇಹ ಎಂಬ ಸುಂದರ ಸಂಬಂಧಕ್ಕೆ ನಾನು, ನನ್ನದು ಎಂಬ ಸ್ವಾರ್ಥವಿಲ್ಲ. ಸ್ನೇಹಿತರೆಂಬ ಬಳಗ ನಮ್ಮೊಂದಿಗಿದ್ದರೆ ಜಗವನ್ನೇ ಗೆಲ್ಲುವ ಹಂಬಲ ನಮ್ಮಲ್ಲಿ. ನಾವು ನಮಗಾಗಿ ಆರಿಸಿಕೊಂಡ ಕುಟುಂಬ ಸ್ನೇಹ. ಕಷ್ಟ ಎಂದಾಗ ಓಡೋಡಿ ಬರುವ, ನೋವು ಎಂದಾಗ ಜೊತೆಗೆ ಕೂತು ಕಣ್ಣೀರು ಹಾಕುವ, ಖುಷಿ ಎಂದಾಗ ನಮಗಿಂತ ಹೆಚ್ಚು ಸಂತೋಷಪಡುವ ಜೀವ ಎಂದಿದ್ದರೆ ಅದು ಸ್ನೇಹಿತ/ಸ್ನೇಹಿತೆ ಮಾತ್ರ. ಇಂತಹ ಅದ್ಭುತ ಜೀವಕ್ಕೆ ಸ್ನೇಹಿತರ ದಿನದಂದು ವಿಶೇಷವಾಗಿ ವಿಶ್ ಮಾಡಬೇಕು ಅಂತಿದ್ರೆ ಈ ಕೋಟ್ಸ್‌ಗಳು ನಿಮಗೆ ಇಷ್ಟವಾಗಬಹುದು ನೋಡಿ.
(2 / 9)
ಹೃದಯಗಳ ನಡುವೆ ಸೇತುವೆಯಾಗಿ ಬಂಧ ಬೆಸೆವ ಸುಮಧುರ ಸಂಬಂಧ ಸ್ನೇಹ. ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿರುವ ಗೆಳೆಯ/ಗೆಳತಿಯರಿಗೆ ಸ್ನೇಹಿತರ ದಿನದ ಶುಭಾಶಯ.
(3 / 9)
ನನ್ನ ಜೀವನದ ಬಹುಮುಖ್ಯ ಪಾತ್ರ ನೀನು. ನನ್ನ ಲೈಫ್‌ಗೆ ಬಂದಿದ್ದಕ್ಕೆ ಥ್ಯಾಂಕ್ ಯು. ನನ್ನೊಲವಿನ ಜೀವಕ್ಕೆ ಸ್ನೇಹಿತರ ದಿನದ ಶುಭಾಶಯ.
(4 / 9)
ನಿನ್ನ ಅದ್ಭುತ ಸ್ನೇಹಕ್ಕೆ ನಾನೆಂದೂ ಚಿರಋಣಿ. ನನ್ನ ನೋವು, ದುಃಖದಲ್ಲಿ ಸದಾ ಜೊತೆ ನಿಲ್ಲುವ ನಿನಗೆ ಸ್ನೇಹಿತರ ದಿನದ ಶುಭಾಶಯಗಳು.
(5 / 9)
ನಿನ್ನಂಥ ಸ್ನೇಹಿತರು ಜೊತೆಗಿದ್ದರೆ ಜೀವನದ ಪ್ರತಿಕ್ಷಣವೂ ಹೋಳಿಹಬ್ಬದಂತೆ ರಂಗಾಗಿರುತ್ತದೆ. ಬದುಕಿನ ಮುಂದಿನ ಕ್ಷಣಗಳನ್ನು ಜೊತೆಯಾಗಿ ಇನ್ನಷ್ಟು ಎಂಜಾಯ್ ಮಾಡೋಣ. ಹ್ಯಾಪಿ ಫ್ರೆಂಡ್‌ಶಿಪ್ ಡೇ.
(6 / 9)
ಪ್ರತಿದಿನವೂ ವೃದ್ಧಿಯಾಗುವ ಸಂಪತ್ತು ನಿನ್ನ ಸ್ನೇಹ. ನೀನು ನಾನಾಗಿ ನನ್ನೊಂದಿಗೆ ಇರುವುದಕ್ಕೆ ನಾನೆಂದು ನಿನಗೆ ಚಿರಋಣಿ. ಬೆಲೆ ಕಟ್ಟಲಾಗದ ನಿನ್ನ ಸ್ನೇಹಕ್ಕೆ ನನ್ನ ವಂದನೆ, ಸ್ನೇಹಿತರ ದಿನದ ಶುಭಾಶಯ.
(8 / 9)
ಹ್ಯಾಪಿ ಫ್ರೆಂಡ್‌ಶಿಪ್ ಡೇ ಮೈ ಡಿಯರ್ ಬೆಸ್ಟ್ ಫ್ರೆಂಡ್. ನನ್ನ ಜೀವನದಲ್ಲಿ ನೀನು ಬಂದಿದ್ದಕ್ಕೆ ಆ ದೇವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಅವಿನಾಭಾವ ಸಂಬಂಧಕ್ಕೆ ಅಭಿನಂದನೆ.
ಇತರ ಗ್ಯಾಲರಿಗಳು