Dasara Wishes: ಪ್ರೀತಿಪಾತ್ರರಿಗೆ ದಸರಾ, ಆಯುಧ ಪೂಜೆ, ವಿಜಯದಶಮಿ ಹಬ್ಬದ ಶುಭಾಶಯಗಳು ಹೇಳೋದಕ್ಕೆ ಬೇಕಾದ ವಾಟ್ಸ್ಆಪ್, ಫೇಸ್ಬುಕ್ ಸ್ಟೇಟಸ್
ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬ ಇನ್ನೇನು ಬಂದೇ ಬಿಡ್ತು. ಎಲ್ಲರಿಗೂ ಶುಭ ಹಾರೈಸಬೇಕು. ಸ್ಟೇಟಸ್, ಮೆಸೇಜ್ ಕಳುಹಿಸೋದಕ್ಕೆ ಸಂದೇಶಗಳು ಬೇಕಲ್ಲ ಅಂತ ಅಲ್ಲಿ ಇಲ್ಲಿ ಹುಡಕಾಡಬೇಡಿ. ಇಲ್ಲೇ ಇವೆ. ಡೌನ್ಲೋಡ್ ಮಾಡಿ ಶೇರ್ ಮಾಡಿ.
(1 / 10)
ನವರಾತ್ರಿಯ ದುರ್ಗಾ ಆರಾಧನೆಯ ನಡುವೆ ಆಯುಧ ಪೂಜೆ ವಿಜಯದಶಮಿಯ ಹಬ್ಬದ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಯು ನಿಮಗೂ ನಿಮ್ಮ ಮನೆಯ ಎಲ್ಲ ಸದಸ್ಯರಿಗೂ ಸನ್ಮಂಗಲವನ್ನು ಉಂಟುಮಾಡಲಿ. ಉತ್ತರೋತ್ತರ ಶ್ರೇಯೋಭಿವೃದ್ಧಿ ನಿಮ್ಮದಾಗಲಿ. ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.
(2 / 10)
ಒಳ್ಳೆಯದಕ್ಕೆ ಯಾವತ್ತೂ ಗೆಲುವು. ಇದರ ಸಂಕೇತವೇ ವಿಜಯದಶಮಿ ಆಚರಣೆ. ಶ್ರೀರಾಮ ರಾವಣನನ್ನು ಕೊಂದ ಹಾಗೆ, ತಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನು ಕೊಂದ ಹಾಗೆ, ನಮ್ಮ ನಿಮ್ಮೊಳಗಿನ ದುಷ್ಟಭಾವ ನಾಶವಾಗಿ ಎಲ್ಲರಿಗೂ ಒಳಿತಾಗಲಿ. ನಿಮಗೂ ನಿಮ್ಮ ಕುಟುಂಬ ಸದಸ್ಯರಿಗೆಲ್ಲರಿಗೂ ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.
(3 / 10)
ತಾಯಿ ಚಾಮುಂಡೇಶ್ವರಿ ದೇವಿಯು ನಿಮ್ಮೆಲ್ಲ ಕಷ್ಟಗಳನ್ನು ಕರಗಿಸಲಿ, ಜೀವನದಲ್ಲಿ ಆರೋಗ್ಯ, ಸುಖ, ಶಾಂತಿ, ಸಂಪತ್ತು ಸಮೃದ್ಧಿಯನ್ನು ಕರುಣಿಸಲಿ. ನಿಮಗೆಲ್ಲರಿಗೂ ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.
(4 / 10)
ಎಲ್ಲ ಸಂಕಷ್ಟಗಳನ್ನು ಎದುರಿಸುತ್ತ ಜೀವನದಲ್ಲಿ ಮುನ್ನಡೆಯಲು ಬೇಕಾದ ಶಕ್ತಿ ಸಾಮರ್ಥ್ಯವನ್ನು ನವದುರ್ಗೆಯರು ಕರುಣಿಸಲಿ. ಆರೋಗ್ಯ, ಸುಖ, ಶಾಂತಿ, ಸಂಪತ್ತು ಸಮೃದ್ಧಿಯನ್ನೂ ಒದಗಿಸಲಿ.. ನಿಮಗೂ ನಿಮ್ಮ ಕುಟುಂಬ ಸದಸ್ಯರಿಗೆಲ್ಲರಿಗೂ ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು
(5 / 10)
ತಾಯಿ ಚಾಮುಂಡೇಶ್ವರಿ ದೇವಿ ನಿಮಗೆ ಐಶ್ವರ್ಯ, ಆರೋಗ್ಯ ನೀಡಿ ಅನುಗ್ರಹಿಸಲಿ. ನಿಮಗೂ ನಿಮ್ಮ ಕುಟುಂಬದವರಿಗೆಲ್ಲರಿಗೂ ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.
(6 / 10)
ದುಷ್ಟಶಕ್ತಿಯ ಪ್ರತೀಕವಾದ ರಾವಣನ ಸಂಹರಿಸಿದ ಶ್ರೀರಾಮನ ನಡೆಯನ್ನು ಸ್ಮರಿಸುತ್ತ ಮನದೊಳಗಿನ ದುಷ್ಟ ಭಾವ ನಶಿಸಿ ಉತ್ತಮ ಭಾವ ಬೆಳಗುವಂತಾಗಲಿ. ನಿಮಗೂ ನಿಮ್ಮ ಮನೆಯ ಎಲ್ಲ ಸದಸ್ಯರಿಗೂ ಉತ್ತರೋತ್ತರ ಶ್ರೇಯೋಭಿವೃದ್ಧಿಯಾಗಲಿ. ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.
(7 / 10)
ಜೀವನದ ಸಂಕಷ್ಟಗಳು, ತಾಪತ್ರಯಗಳೆಲ್ಲವೂ ದೂರಾಗಲಿ. ಮನೆ ಮನಗಳಲ್ಲಿ ಸಂತೋಷ, ನೆಮ್ಮದಿ ನೆಲೆಸಲಿ. ದುರ್ಗಾ ದೇವಿ ಸದಾ ಒಳಿತನ್ನೇ ಕರುಣಿಸಲಿ. ನಿಮ್ಮೆಲ್ಲರಿಗೂ ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.
(8 / 10)
ಜೀವನದ ಸಂಕಷ್ಟಗಳು, ತಾಪತ್ರಯಗಳೆಲ್ಲವೂ ದೂರಾಗಲಿ. ಮನೆ ಮನಗಳಲ್ಲಿ ಸಂತೋಷ, ನೆಮ್ಮದಿ ನೆಲೆಸಲಿ. ದುರ್ಗಾ ದೇವಿ ಸದಾ ಒಳಿತನ್ನೇ ಕರುಣಿಸಲಿ. ನಿಮ್ಮೆಲ್ಲರಿಗೂ ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.
(9 / 10)
ನಿಮ್ಮ ಕುಟುಂಬವನ್ನು ಕೆಟ್ಟ ಶಕ್ತಿಗಳಿಂದ ದೇವಿ ದುರ್ಗೆ ರಕ್ಷಿಸಲಿ. ಒಳಿತನ್ನೇ ಕರುಣಿಸಲಿ. ನಿಮ್ಮ ಆಸೆ, ಆಕಾಂಕ್ಷೆಗಳು ಈಡೇರಲಿ, ಯಶಸ್ಸು ನಿಮ್ಮದಾಗಲಿ. ವೃತ್ತಿ ಬದುಕಿನಲ್ಲೂ ಉತ್ತುಂಗಕ್ಕೇರುವಂತೆ ಆರೋಗ್ಯ, ಶಕ್ತಿ, ಸಂಪತ್ತು, ನೆಮ್ಮದಿಯನ್ನೂ ಕರುಣಿಸಲಿ. ನಿಮಗೂ ನಿಮ್ಮ ಕುಟುಂಬ ಸದಸ್ಯರಿಗೆಲ್ಲರಿಗೂ ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು
ಇತರ ಗ್ಯಾಲರಿಗಳು