ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಮನವಮಿಯ ಶುಭಾಶಯಗಳು; ಎಲ್ಲರಿಗೂ ಶುಭ ಹಾರೈಸುವ ಶ್ರೀ ರಾಮನವಮಿಯ 9 ಸರಳ ಶುಭ ಸಂದೇಶಗಳು, ಫೋಟೋಗಳು

ರಾಮನವಮಿಯ ಶುಭಾಶಯಗಳು; ಎಲ್ಲರಿಗೂ ಶುಭ ಹಾರೈಸುವ ಶ್ರೀ ರಾಮನವಮಿಯ 9 ಸರಳ ಶುಭ ಸಂದೇಶಗಳು, ಫೋಟೋಗಳು

ಇಂದು ಶ್ರೀ ರಾಮನವಮಿ. ಚೈತ್ರಮಾಸದ ಒಂಬತ್ತನೇ ದಿನ. ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಬಾಲರಾಮ ವಿರಾಜಮಾನನಾದ ಬಳಿಕ ನಡೆಯುತ್ತಿರುವ ಮೊದಲ ರಾಮನವಮಿ. ಹೀಗಾಗಿ ಸಂಭ್ರಮ ಹೆಚ್ಚು. ಬಂಧು ಮಿತ್ರರಿಗೆ ಶುಭ ಹಾರೈಸುವುದಕ್ಕೆ ರಾಮನವಮಿಯ ಶುಭಾಶಯಗಳು ಎಲ್ಲಿವೆ ಅಂತ ಹುಡುಕೋದು ಸಹಜ. ಇಲ್ಲಿವೆ ನೋಡಿ ಎಲ್ಲರಿಗೂ ಶುಭ ಹಾರೈಸುವ ಶ್ರೀ ರಾಮನವಮಿಯ 9 ಸರಳ ಶುಭ ಸಂದೇಶಗಳು, ಫೋಟೋಗಳು.  

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು 
icon

(1 / 9)

ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ||ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು 
icon

(2 / 9)

ಒಳಿತಿನೆಡೆ ಮುನ್ನೆಡೆವ ಮನವ ಕೊಡು ರಾಮ|ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು 
icon

(3 / 9)

ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|ಕಣ್ಣು ಕಳೆದರೂ ನಿನ್ನ ಕನಸು ಕೊಡು ರಾಮ|ನನ್ನ ಹರಣಕೆ ನಿನ್ನ ಚರಣ ಕೊಡು ರಾಮ|ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು 
icon

(4 / 9)

ಕೌಸಲ್ಯೆಯಾಗುವೆನು ಮಡಿಲಲಿರು ರಾಮ|ವೈದೇಹಿಯಾಗುವೆನು ಒಡನಾಡು ರಾಮ|ಪಾದುಕೆಯ ತಲೆಯಲಿಡು ಭರತನಾಗುವೆ ರಾಮ|ಸಹವಾಸ ಕೊಡು ನಾನು ಸೌಮಿತ್ರಿ ರಾಮ|ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು 
icon

(5 / 9)

ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು 
icon

(6 / 9)

ಮಡಿಲಲ್ಲಿ ಮರಣಕೊಡು ನಾ ಜಟಾಯುವು ರಾಮ|ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|ನಾ ವಿಭೀಷಣ ಶರಣುಭಾವ ಕೊಡು ರಾಮ|ನನ್ನೊಳಿಹ ರಾವಣಗೆ ಸಾವ ಕೊಡು ರಾಮ|ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು 
icon

(7 / 9)

ಕಣ್ಣೀರು ಕರೆಯುವೆನು ನನ್ನತನ ಕಳೆ ರಾಮ|ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|ಋತ ನೀನೆ ಋತು ನೀನೆ ಶೃತಿ ನೀನೆ ರಾಮ|ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು 
icon

(8 / 9)

ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|ಪೂರ್ಣ ನೀ ಪ್ರಕಟ ನೀ ಆನಂದ ರಾಮ|ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|ಗುರಿ ನೀನೆ ಗುರು ನೀನೆ ಅರಿವು ನೀ ರಾಮ|ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು 
icon

(9 / 9)

IPL_Entry_Point

ಇತರ ಗ್ಯಾಲರಿಗಳು