Hassan News: ಹಾಸನಾಂಬ ದೇಗುಲ ಬಂದ್: ಮುಂದಿನ ವರ್ಷದ ಅಕ್ಟೋಬರ್ 24ರಿಂದ ದರ್ಶನ, 9 ದಿನ ಭಕ್ತರಿಗೆ ಅವಕಾಶ
- ಪ್ರಸಿದ್ದ ಹಾಸನದ ಹಾಸನಾಂಬ ದೇಗುಲ ದರ್ಶನ ಬಂದ್ ಆಗಿದೆ. ಸತತ 14 ದಿನಗಳ ದರ್ಶನ ನಂತರ ಬುಧವಾರ ದೇಗುಲಕ್ಕೆ ಬೀಗ ಹಾಕಲಾಯಿತು. ಮುಂದಿನ ವರ್ಷದ ದರ್ಶನ ದಿನಾಂಕವನ್ನೂ ಇದೇ ವೇಳೆ ಪ್ರಕಟಿಸಲಾಯಿತು. ಹೇಗಿತ್ತು ಈ ಬಾರಿ ದೇವಿ ದರ್ಶನ ಎನ್ನುವ ಚಿತ್ರ ನೋಟ ಇಲ್ಲಿದೆ.
- ಪ್ರಸಿದ್ದ ಹಾಸನದ ಹಾಸನಾಂಬ ದೇಗುಲ ದರ್ಶನ ಬಂದ್ ಆಗಿದೆ. ಸತತ 14 ದಿನಗಳ ದರ್ಶನ ನಂತರ ಬುಧವಾರ ದೇಗುಲಕ್ಕೆ ಬೀಗ ಹಾಕಲಾಯಿತು. ಮುಂದಿನ ವರ್ಷದ ದರ್ಶನ ದಿನಾಂಕವನ್ನೂ ಇದೇ ವೇಳೆ ಪ್ರಕಟಿಸಲಾಯಿತು. ಹೇಗಿತ್ತು ಈ ಬಾರಿ ದೇವಿ ದರ್ಶನ ಎನ್ನುವ ಚಿತ್ರ ನೋಟ ಇಲ್ಲಿದೆ.
(1 / 7)
ಹಾಸನದ ಪ್ರಸಿದ್ದ ಹಾಸನಾಂಬ ದೇಗುಲವನ್ನು ಈ ಬಾರಿ ನವೆಂಬರ್ 2 ರಂದು ತೆಗೆಯಲಾಗಿತ್ತು. ಮರು ದಿನದಿಂದ ಒಟ್ಟು 14 ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
(2 / 7)
ಹಿಂದಿನ ವರ್ಷವೇ ನಿಗದಿಪಡಿಸಿದಂತೆ ಈ ಬಾರಿಯ ದರ್ಶನ ದಿನಾಂಕಕ್ಕೂ ಮುನ್ನವೇ ದೇಗುಲದ ಅಲಂಕಾರದ ಜತೆಗೆ ದೀಪಾಲಂಕಾರದೊಂದಿಗೆ ಹಾಸನಾಂಬ ದರ್ಶನ ಮಾಡಲಾಗಿತ್ತು.
(3 / 7)
ಈ ಬಾರಿ ನಡುವೆ ಒಂದು ವಿದ್ಯುತ್ ಶಾಕ್‌ನಿಂದ ಕಾಲ್ತುಳಿತದಂತಹ ಸಣ್ಣ ದುರ್ಘಟನೆ ಬಿಟ್ಟರೆ ಎಲ್ಲವೂ ಸುಸೂತ್ರವಾಗಿಯೇ ಹಾಸನಾಂಬೆ ದರ್ಶನವನ್ನು ಲಕ್ಷಾಂತರ ಭಕ್ತರು ಪಡೆದರು.
(4 / 7)
ಹಾಸನಾಂಬೆ ವಿಶೇಷ ದರ್ಶನದ ಜತೆಗೆ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವೂ ಇದೇ ವೇಳೆ ನಡೆಯಿತು, ಈ ಸಮಯದಲ್ಲಿ ಪ್ರತಿನಿತ್ಯ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕಗಳು ಜರುಗಿದವು.
(5 / 7)
ಹಾಸನಾಂಬ ಜಾತ್ರಾ ಮಹೋತ್ಸವದ ವೇಳೆ ಹಲವರು ವಿಭಿನ್ನ ಸೇವೆ ನೀಡಿದರು. ಹಾಸನದ ಅಕ್ಷಯ್ ಹಾಗೂ ಎಂ.ಎಸ್ಾಶೋಕ್ ಎಂಬುವವರು ಉಚಿತವಾಗಿ ಭಕ್ತರಿಗೆ ಆಟೋಸೇವೆ ಕಲ್ಪಿಸಿದ್ದರು.
(6 / 7)
ಈ ಬಾರಿಯ ದರ್ಶನದ ದಿನಗಳನ್ನು ಮುಗಿಸಿದ ನಂತರ ಕೊನೆಯ ದಿನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಸ್ಥಳೀಯ ಶಾಸಕ ಸ್ವರೂಪ್ ಹಾಗೂ ಅಧಿಕಾರಿಗಳು ಬುಧವಾರ ಕೊನೆಯ ಪೂಜೆ ಸ್ಲಲಿಸಿದರು.
ಇತರ ಗ್ಯಾಲರಿಗಳು