Monsoon Tourism: ಮಳೆಯ ಸಂಭ್ರಮದ ನಡುವೆ ಹಾಸನ ಪ್ರವಾಸದ ಸೊಬಗು, ಬಿಸ್ಲೆ ಘಾಟ್‌, ಗೋರೂರು ಅಣೆಕಟ್ಟೆ, ಮತ್ತೇನು ನೋಡಬಹುದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Monsoon Tourism: ಮಳೆಯ ಸಂಭ್ರಮದ ನಡುವೆ ಹಾಸನ ಪ್ರವಾಸದ ಸೊಬಗು, ಬಿಸ್ಲೆ ಘಾಟ್‌, ಗೋರೂರು ಅಣೆಕಟ್ಟೆ, ಮತ್ತೇನು ನೋಡಬಹುದು

Monsoon Tourism: ಮಳೆಯ ಸಂಭ್ರಮದ ನಡುವೆ ಹಾಸನ ಪ್ರವಾಸದ ಸೊಬಗು, ಬಿಸ್ಲೆ ಘಾಟ್‌, ಗೋರೂರು ಅಣೆಕಟ್ಟೆ, ಮತ್ತೇನು ನೋಡಬಹುದು

  • Hassan tour ಹಾಸನ ಜಿಲ್ಲೆ ಮಲೆನಾಡು, ಬಯಲು ಸೀಮೆ ಸಂಗಮ. ಇಲ್ಲಿ ಹಸಿರು, ಜಲಪಾತ, ಜಲಾಶಯವಿದೆ. ದೇಗುಲಗಳ ಸಂಗಮವೇ ಇದೆ. 

ಬಿಸ್ಲೆ ಘಾಟ್‌// ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ, ಬಿಸ್ಲೆಯಲ್ಲಿ 40 ಹೆಕ್ಟೇರುಗಳಷ್ಟು ಮೀಸಲು ಅರಣ್ಯವು ಹರಡಿಕೊಂಡಿದೆ.  ಏಷ್ಯಾದಲ್ಲಿ ಪ್ರಮುಖ ಅರಣ್ಯವೆಂದು ಗುರುತಿಸಲಾಗಿದ್ದು, ಈ ಅರಣ್ಯವು ಹಾಸನ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹರಡಿದೆ.  ಈ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಪುಷ್ಪಗಿರಿ, ಕುಮಾರ ಪರ್ವತ, ಎಣ್ಣೆಕಲ್ಲು, ಪಟ್ಲ, ದೊಡ್ಡಬೆಟ್ಟ ಮತ್ತು ಕನ್ನಡಿಕಲ್ಲು ಎಂದು ಹೆಸರಿಸಲಾದ ಅನೇಕ ಬೆಟ್ಟಗುಡ್ಡಗಳಿವೆ.  ಬಿಸಲೆ ಅರಣ್ಯ ಪ್ರದೇಶದಲ್ಲಿ ತೇಗ, ಬೀಟೆ, ಅಲೆಕ್ಸಾಂಡ್ರಿಯ ಲಾರೆಲ್, ಭಾರತೀಯ ಧೂಪದ ಮರ, ಟ್ಯೂಲಿಪ್, ಮಲಬಾರ್ ಕಿನೋ, ಇನ್ನಿತರೆ ಬಹಳಷ್ಟು ಜಾತಿಯ ಬೆಲೆಬಾಳುವ ಮರಗಳು ಹೇರಳವಾಗಿ ಇವೆ.  ಆನೆಗಳು, ಕಾಡುಕೋಣಗಳು, ಜಿಂಕೆ, ಕಡವೆ, ಕಾಡುಹಂದಿ, ಇನ್ನಿತರೆ ಕಾಡುಪ್ರಾಣಿಗಳು ಹೇರಳವಾಗಿ ಸಿಗುತ್ತವೆ.  ಬಿಸ್ಲೆ ಘಾಟ್‌ರಸ್ತೆ ಮೂಲಕ ಸಕಲೇಶಪುರದಿಂದ 35 ಕಿಲೋಮೀಟರು.
icon

(1 / 9)

ಮಂಜೇಹಳ್ಳಿ ಜಲಪಾತ//ಸಕಲೇಶಪುರ ತಾಲ್ಲೂಕು ಹಸಿರು ಶ್ರೇಣಿಯ ಜತೆಗೆ ಜಲಪಾತಕ್ಕೂ ಹೆಸರುವಾಸಿ. ಮಂಜೇಹಳ್ಳಿ ಜಲಪಾತವು 20 ಅಡಿ ಉದ್ದದ ಜಲಪಾತವಾಗಿದ್ದು, ಸಕಲೇಶಪುರದಿಂದ 8 ಕಿಮೀ ದೂರದಲ್ಲಿ ಹಚ್ಚ ಹಸಿರಿನ ಬೆಟ್ಟಗಳ ನಡುವೆ ನೆಲೆಗೊಂಡಿದೆ. ಸ್ಥಳೀಯವಾಗಿ 20 ಅಡಿ ಎತ್ತರದಿಂದ ಧುಮ್ಮಿಕ್ಕುವ ಅಬ್ಬಿ ಜಲಪಾತವು ಮಳೆಗಾಲದಲ್ಲಿ ಭೇಟಿ ನೀಡಲು ಉತ್ತಮವಾಗಿದೆ. ಇದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಮಂಜೇಹಳ್ಳಿ ಜಲಪಾತಕ್ಕೆ ಪ್ರವಾಸಿಗರು ಬರುತ್ತಾರೆ. ಮಂಜೇಹಳ್ಳಿ ಜಲಪಾತವು ಸಕಲೇಶಪುರದ ಅತ್ಯಂತ ಸುಂದರವಾದ ಪ್ರವಾಸಿ ಸ್ಥಳಗಳಲ್ಲಿ ಒಂದು. ಸ್ವಂತ ವಾಹನದಲ್ಲಿ ಬಂದರೆ ಒಳ್ಳೆಯದು.
icon

(2 / 9)

ಗೊರೂರು ಅಣೆಕಟ್ಟುಕಾವೇರಿ ನದಿಯ ಪ್ರಮುಖ ಉಪನದಿಯಾದ ಹೇಮಾವತಿ ನದಿಗೆ ಅಡ್ಡಲಾಗಿ ಒಂದು ಅಣೆಕಟ್ಟನ್ನು ಕಟ್ಟಲಾಗಿದೆ. ಈ ಅಣೆಕಟ್ಟು ಕರ್ನಾಟಕ ರಾಜ್ಯದ ಹಾಸನದ ಸಮೀಪವಿರುವ ಗೊರೂರಿನಲ್ಲಿದೆ. 1979ರಲ್ಲಿ ಕಟ್ಟಲ್ಪಟ್ಟ ಜಲಾಶಯವು ಹಾಸನ ಜಿಲ್ಲೆಯ ಜನಗಳಿಗೆ ಕುಡಿಯುವ ನೀರಿನ ಹಾಗೂ ನೀರಾವರಿಯ ಉದ್ದೇಶಗಳನ್ನು ಪೂರ್ಣಗೊಳಿಸುತ್ತದೆ. ಹೇಮಾವತಿ ಅಣೆಕಟ್ಟು ಬಹಳ ವಿಶಾಲವಾಗಿದ್ದು, 2810 ಚದರ ಕಿ.ಮೀ. ವಿಸ್ತೀರ್ಣದ ಜಲಾನಯನ ಪ್ರದೇಶವನ್ನು ಆಕ್ರಮಿಸಿದೆ. ಈ ಅಣೆಕಟ್ಟು 4692 ಮೀಟರ್ ಉದ್ದ, 58.5 ಮೀ. ಎತ್ತರವಿದೆ. ಜಲಾಶಯವು 6 ದೊಡ್ಡ ರೇಡಿಯಲ್ ಸ್ಪಿಲ್ ವೇ ತೂಬುಗಳನ್ನು ಹೊಂದಿದೆ. ಹೇಮಾವತಿ ಅಣೆಕಟ್ಟು ನೋಡುಗರಿಗೆ ಅದರಲ್ಲೂ ಮಳೆಗಾಲದಲ್ಲಿ ಹರಿದು ಬರುವ ಪ್ರವಾಹದ ನೀರು ತೂಬು ಗೇಟುಗಳನ್ನು ತೆರೆದಾಗ ಧುಮ್ಮಿಕ್ಕಿ ಹಾಲ್ನೊರೆಯಂತೆ ಕಂಗೊಳಿಸುತ್ತದೆ. ಅಣೆಕಟ್ಟಿನ ಪಕ್ಕದಲ್ಲೇ ಇರುವ ಹಸಿರು ಹಾಸಿನ ಉಪವನ ವಾತಾವರಣದ ಹಾಗೂ ಸ್ಥಳದ ಸೌಂದರ್ಯವನ್ನು ವೃದ್ಧಿಸುತ್ತದೆ.   
icon

(3 / 9)

ಮಂಜರಾಬಾದ್ ಕೋಟೆ//ಹಾಸನ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿ ಒಂದಾಗಿರುವ ಸಕಲೇಶಪುರವು ಬಹಳಷ್ಟು ಪ್ರಾಕೃತಿಕ ಸ್ಥಳಗಳು ಮತ್ತು ಕಣ್ಣಿಗೆ ಕಟ್ಟುವಂತಹ ನೈಸರ್ಗಿಕ ದೃಶ್ಯಗಳಿಂದ ಮತ್ತು ಮನೋಹರವಾದ ಕಲೆ ಮತ್ತು ವಾಸ್ತುಶಿಲ್ಪಗಳಿಂದ ಕೂಡಿದ ಜನಪ್ರಿಯ ಪ್ರವಾಸಿ ತಾಣಗಳಿಂದ ಕೂಡಿದೆ.  ಈ ಪ್ರದೇಶವು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ, ಆರಾಧಿಸುವ ರಸಿಕರ ಚಿತ್ತವನ್ನು ಆಕರ್ಷಿಸುವ ದಟ್ಟ ಅರಣ್ಯಗಳಿಂದಲೂ, ಬೆಟ್ಟಗುಡ್ಡಗಳಿಂದಲೂ, ನದಿಗಳಿಂದಲೂ, ಜಲಪಾತಗಳಿಂದಲೂ, ನೀರಿನ ಝರಿಗಳಿಂದಲೂ ಮತ್ತು ಗಿರಿಕಂದರಗಳಿಂದಲೂ ಕೂಡಿದೆ.  ಪಶ್ಚಿಮ ಘಟ್ಟಗಳಲ್ಲಿರುವ ಪುಷ್ಪಗಿರಿ, ಬಿಸಲೆ ಅರಣ್ಯ ಶ್ರೇಣಿ, ಹಿರೇಕಲ್ ಗಿರಿ ಶ್ರೇಣಿ, ಮತ್ತು ನಿತ್ಯ ಹರಿದ್ವರ್ಣ ಕಾಡುಗಳು ಪ್ರತಿಯೊಬ್ಬರ ಗಮನವನ್ನು ಸೆಳೆಯುತ್ತವೆ. ಮಂಜರಾಬಾದ್ ಕೋಟೆಯು ಹಾಸನದಿಂದ 40 ಕಿ.ಮೀ.ದೂರದಲ್ಲಿದೆ. ಹಳೆಯ ಕಾಲದ ಕೋಟೆ ಈಗಲೂ ಗಟ್ಟಿಯಾಗಿದ್ದು, ಹಸುರಿನಿಂದ ಕೂಡಿದೆ. 
icon

(4 / 9)

ಶ್ರವಣಬೆಳಗೊಳ//ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು 150 ಕಿ.ಮೀ ದೂರದಲ್ಲಿ, ಚನ್ನರಾಯಪಟ್ಟಣದಿಂದ ಸ್ವಲ್ಪವೇ ದೂರದಲ್ಲಿ ಪಶ್ಚಿಮೋತ್ತರಕ್ಕೆ ಶ್ರವಣಬೆಳಗೊಳವಿದೆ. ಎರಡು ಬೆಟ್ಟಗಳಲ್ಲೊಂದಾದ ಇಂದ್ರಗಿರಿಯ ಮೇಲೆ 18 ಮೀಟರ್ ಎತ್ತರದ ಜೈನ ತಪಸ್ವಿಯಾದ ಗೊಮ್ಮಟೇಶ್ವರಸ್ವಾಮಿಯ ಏಕಶಿಲಾವಿಗ್ರಹವು ಶತಮಾನಗಳಿಂದಲೂ ಪೂಜಾ ಮಾಧ್ಯಮವಾಗಿ ನಿಂತಿದೆ.  ಮತ್ತು ಇದು ಪ್ರಪಂಚದಲ್ಲೇ ಇದು ಅತಿ ಎತ್ತರದ ಹಾಗೂ ಅತ್ಯಂತ ಸುಂದರವಾದ ಏಕಶಿಲಾವಿಗ್ರಹಗಳಲ್ಲೊಂದು ಎಂದು ಹೇಳಲಾಗುತ್ತದೆ. ಈ ಪಟ್ಟಣವು ಸುಮಾರು 2 ಸಹಸ್ರ ವರ್ಷಗಳಿಗೂ ಮೇಲ್ಪಟ್ಟು ಜೈನರ ಕಲೆ, ವಾಸ್ತುಶಿಲ್ಪ, ಧರ್ಮ, ಮತ್ತು ಸಂಸ್ಕೃತಿ ಇವುಗಳ ಪ್ರಮುಖ ಕೇಂದ್ರವಾಗಿದೆ.  ಸುಮಾರು 2 ಸಹಸ್ರ ವರ್ಷಗಳ ಹಿಂದೆ ಜೈನರ ಮಹಾನ್ ಆಚಾರ್ಯರುಗಳಲ್ಲಿ ಅತ್ಯಂತ ಪೂರ್ವಿಕರಾದ ಭಗವಾನ್ ಭದ್ರಬಾಹು ಮುನಿಗಳು ಮಧ್ಯಪ್ರದೇಶದ ಉಜ್ಜಯಿನಿಯಿಂದ ಶ್ರವಣಬೆಳಗೊಳಕ್ಕೆ ತಮ್ಮ ಶಿಷ್ಯರೊಂದಿಗೆ ಬಂದರು.  ಈ ತಪಸ್ವಿಯಿಂದ ಪ್ರಭಾವಿತನಾದ ಭಾರತದ ಬಹುಭಾಗಗಳನ್ನು ಆಳಿದ ಚಕ್ರವರ್ತಿ ಚಂದ್ರಗುಪ್ತ ಮೌರ್ಯನು ತನ್ನ ಮಗನಿಗೆ ರಾಜ್ಯಭಾರವನ್ನು ವಹಿಸಿಕೊಟ್ಟು ಈ ಭಾಗದಲ್ಲಿ ನೆಲೆಸಿದನು ಎನ್ನುತ್ತದೆ ಇತಿಹಾಸ. ಮಳೆಗಾಲದಲ್ಲಿ ಈ ಭಾಗವೂ ಹಸಿರಾಗಿರುವುದಿಂದ ನೋಡಲು ಚೆನ್ನಾಗಿರುತ್ತದೆ.
icon

(5 / 9)

ಹಾಸನಾಂಬ ದೇವಾಲಯ//ಹಾಸನ ನಗರದಲ್ಲಿ ಇರುವ ಹಾಸನಾಂಬ ದೇಗುಲಕ್ಕೆ ಭೇಟಿ ಮಾಡಬಹುದು, ಆದರೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ವರ್ಷಕ್ಕೆ ಒಮ್ಮೆ ಮಾತ್ರ ಈ ದೇಗುಲ ತೆರೆಯುವುದು ವಿಶೇಷ.ಇಲ್ಲಿನ ರಾಜಗೋಪುರವನ್ನು ಹೊಸದಾಗಿ ನಿರ್ಮಾಣಮಾಡಲಾಗಿದೆ.ಈ ದೇವಾಲಯದ ಪ್ರಾಂಗಣದಲ್ಲಿ ಮುಖ್ಯವಾಗಿ ಮೂರು ದೇವಾಲಯಗಳಿವೆ ಅವುಗಳೆಂದರೆ ದರ್ಬಾರ್ ಗಣಪತಿ ದೇವಾಲಯ, ಹಾಸನಾಂಭ ದೇವಾಲಯ ಹಾಗೂ ಸಿದ್ಧೇಶ್ವರ ದೇವಾಲಯ. ಇಲ್ಲಿ ಇನ್ನೊಂದು ಮುಖ್ಯವಾದ ಸ್ಥಳವೆಂದರೆ ಕಳ್ಳಪ್ಪನ ಗುಡಿ. ಇಲ್ಲಿ 3 ವಿಗ್ರಹಗಳಿದ್ದು ಅವುಗಳು ದೇವಾಲಯವನ್ನು ಕಳ್ಳತನ ಮಾಡಲು ಬಂದು ದೇವಿಯ ಅವಕೃಪೆಗೆ ಒಳಗಾದ ಕಳ್ಳರದ್ದು ಎಂದು ಹೇಳುತ್ತಾರೆ. ಇಲ್ಲಿ ದೀಪಾವಳಿಯ ಸಂದರ್ಭದಲ್ಲಿ 12 ದಿನಗಳಕಾಲ ಮಾತ್ರ ದೇವಾಲಯವನ್ನು ತೆರೆಯಲಾಗುತ್ತದೆ. ಇಲ್ಲಿನ ದೇವಾಲಯವನ್ನು ತೆರೆಯಬೇಕಾದರೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಇಲ್ಲಿನ ವಿಷೇಶತೆಯೆಂದರೆ ಇಲ್ಲಿ ಈ ಬಾರಿ ಹಚ್ಚಿದ ದೀಪ ಮುಂದಿನ ವರ್ಷದವರೆಗೂ ಬೆಳಗುತ್ತಿರುತ್ತದೆ ಹಾಗೂ ಹೂವುಗಳೂ ಕೂಡ ತಾಜಾವಾಗಿರುತ್ತದೆ. ಇಲ್ಲಿಗೆ ದಕ್ಷಿಣ ಭಾರತ ಹಾಗೂ ಮಹಾರಾಷ್ಟ್ರದಿಂದ ಭಕ್ತಾದಿಗಳು ಬರುತ್ತಾರೆ. 
icon

(6 / 9)

ಹೊಯ್ಸಳೇಶ್ವರ ದೇವಸ್ಥಾನ, ಹಳೇಬೀಡು//ಹಳೇಬೀಡು ದೇವಸ್ಥಾನವು ಹಳೇಬೀಡಿನಲ್ಲಿ ವಿಷ್ಣುವರ್ಧನ ಮತ್ತು ಎರಡನೇ ಬಲ್ಲಾಳ ಇವರುಗಳಿಂದ ನಿರ್ಮಿಸಲ್ಪಟ್ಟಿರುವ ಹೊಯ್ಸಳೇಶ್ವರ ಮತ್ತು ಕೇದಾರೇಶ್ವರ ಜೋಡಿದೇವಸ್ಥಾನಗಳು, ದೇಗುಲ ವಾಸ್ತು ಶಿಲ್ಪಕ್ಕೆ ಇನ್ನೊಂದು ಅತ್ಯುತ್ತಮ ಉದಾಹರಣೆಯಾಗಿದೆ.  ರಾಮಾಯಣ, ಮಹಾಭಾರತ, ಭಾಗವತಗಳಲ್ಲಿನ ದೃಷ್ಟಾಂತಗಳನ್ನು ಈ ದೇಗುಲಗಳ ಹೊರಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಇಲ್ಲಿ ಕಲ್ಲಿನ ಮೇಲೆ ಕೊರೆದಿರುವ ದೃಷ್ಟಾಂತ ಕಥೆಗಳು ಶಿಲ್ಪಕಲೆಯ ದಕ್ಷತೆ, ನೈಪುಣ್ಯತೆ ಎಂಥವರನ್ನೂ ಮರುಳುಗೊಳಿಸುವಂತಿವೆ. ಹಳೇಬಬೀಡು ಬೇಲೂರಿನಿಂದ 17 ಕಿ.ಮೀ. ಮತ್ತು ಹಾಸನದಿಂದ 30 ಕಿ.ಮೀ.ದೂರದಲ್ಲಿದೆ. ಹಾಸನ ಮತ್ತು ಬೇಲೂರಿನಿಂದ ವ್ಯವಸ್ಥಿತವಾದ ಬಸ್ ಸೇವೆ ಹಾಗೂ ಟ್ಯಾಕ್ಸಿಗಳು ದೊರೆಯುತ್ತವೆ
icon

(7 / 9)

ಚನ್ನಕೇಶವ ದೇವಸ್ಥಾನ, ಬೇಲೂರು ಹಾಸನದಿಂದ 38 ಕಿ.ಮೀ.ದೂರದಲ್ಲಿ ಯಗಚಿ ನದಿಯ ದಂಡೆಯ ಮೇಲಿರುವ ಬೇಲೂರು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ.  ಬೇಲೂರು ಹಿಂದೆ ಹೊಯ್ಸಳರ ರಾಜಧಾನಿಯಾಗಿದ್ದಿತು.  ಇತಿಹಾಸದ ಬೇರೆ ಬೇರೆ ಕಾಲದಲ್ಲಿ ವೇಲಾಪುರ, ವೇಲೂರು ಮತ್ತು ಬೇಲಾಪುರವೆಂಬ ಹೆಸರುಗಳಿಂದ ಕರೆಯಲ್ಪಡುತ್ತಿತ್ತು.  ಹೊಯ್ಸಳ ಶಿಲ್ಪಕಲೆಯ ಅತ್ಯಂತ ಸುಂದರ ಉದಾಹರಣೆಗಳಲ್ಲೊಂದಾದ ಚೆನ್ನಕೇಶವ ದೇವಸ್ಥಾನದಿಂದಾಗಿ ಈ ಪಟ್ಟಣವು ಪ್ರಸಿದ್ಧವಾಗಿದೆ.  ಕ್ರಿ.ಶ.1116ರಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನು ಚೋಳರ ವಿರುದ್ಧ ಸಾಧಿಸಿದ ವಿಜಯದ ದ್ಯೋತಕವಾಗಿ ಈ ದೇಗುಲವನ್ನು ನಿರ್ಮಿಸಿ, ವಿಜಯ ನಾರಾಯಣ ಎಂದು ಕರೆದನು. ಹಾಸನದಿಂದ ಸುಮಾರು 38 ಕಿ.ಮೀ.ದೂರದಲ್ಲಿದೆ. ಬಸ್ ಸೇವೆಗಳು ಮತ್ತು ಟ್ಯಾಕ್ಸಿಗಳು ಹಾಸನದಿಂದ ಲಭ್ಯವಿವೆ.
icon

(8 / 9)

ಜೇನುಕಲ್ಲುಬೆಟ್ಟ//ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಸ್ಥಾನವು ಕರ್ನಾಟಕದ ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಯಾದಪುರ ಗ್ರಾಮದಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಯಾದಪುರವು ಅರಸಿಕೆರೆಯಿಂದ 8 ಕಿಲೋ ಮೀಟರ್ ದೂರದಲ್ಲಿದೆ. ಈ ದೇವಾಲಯವು ಬೆಟ್ಟದ ಮೇಲಿದ್ದು ಶಿವನಿಗೆ ಸಮರ್ಪಿತವಾಗಿದೆ. 1101 ಮೆಟ್ಟಿಲುಗಳನ್ನು ಹೊಂದಿರುವ ಬೆಟ್ಟವನ್ನು ಉತ್ತರ ದಕ್ಷಿಣವಾಗಿ ಎರಡು ಕಡೆಯಿಂದ ಹತ್ತಬಹುದು. ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿಯ ಪಾದವನ್ನು ಕಾಣಬಹುದು. ಈ ಬೆಟ್ಟದ ತುದಿಯಲ್ಲಿ ಒಂದು ಗೋಪುರವಿದೆ. ಅಲ್ಲೇ ಪಕ್ಕದಲ್ಲಿ ಗಂಗಮ್ಮ ಕೊಳ ಇದೆ. ಬೆಟ್ಟದ ಕೆಳಗೆ ಒಂದು ಬಸವಣ್ಣನ ಗುಡಿ ಇಲ್ಲಿನ ಆಕರ್ಷಣೆ. 
icon

(9 / 9)

ಇತರ ಗ್ಯಾಲರಿಗಳು