Haveri News: ಹಾವೇರಿಗೆ ಹೋದರೆ ವಿಶಾಲ ಗಾಂಧಿಭವನ ನೋಡಿ ಬನ್ನಿ, ಹೀಗಿದೆ ನೂತನ ಸ್ಮಾರಕ photos
- Gandhi Bhavan ಮಧ್ಯ ಕರ್ನಾಟಕದ ಹಾವೇರಿಗೂ ಮಹಾತ್ಮಗಾಂಧಿ ಭೇಟಿ ನೀಡಿದ ನೆನಪುಗಳ ಅಧಿಕ. ಇದರಿಂದಲೇ ಇಲ್ಲಿ ಗಾಂಧಿಭವನವನ್ನು ನಿರ್ಮಿಸಿ ಅವರ ಭೇಟಿ ಚಿರಸ್ಥಾಯಿಯಾಗಿಸಲಾಗಿದೆ. ಹಾವೇರಿ ರೈಲ್ವೆ ನಿಲ್ದಾಣ ಬಳಿ ಕರ್ನಾಟಕ ಸರ್ಕಾರ ಗಾಂಧಿಭವನ ನಿರ್ಮಿಸಿದೆ.
- Gandhi Bhavan ಮಧ್ಯ ಕರ್ನಾಟಕದ ಹಾವೇರಿಗೂ ಮಹಾತ್ಮಗಾಂಧಿ ಭೇಟಿ ನೀಡಿದ ನೆನಪುಗಳ ಅಧಿಕ. ಇದರಿಂದಲೇ ಇಲ್ಲಿ ಗಾಂಧಿಭವನವನ್ನು ನಿರ್ಮಿಸಿ ಅವರ ಭೇಟಿ ಚಿರಸ್ಥಾಯಿಯಾಗಿಸಲಾಗಿದೆ. ಹಾವೇರಿ ರೈಲ್ವೆ ನಿಲ್ದಾಣ ಬಳಿ ಕರ್ನಾಟಕ ಸರ್ಕಾರ ಗಾಂಧಿಭವನ ನಿರ್ಮಿಸಿದೆ.
(1 / 8)
ಮಹಾತ್ಮಗಾಂಧಿ ಸ್ವಾತಂತ್ರ್ಯ ಚಳವಳಿ ವೇಳೆ ನಿರಂತರ ಪ್ರವಾಸ ಕೈಗೊಂಡಿದ್ದರು. ಕರ್ನಾಟಕದ ಹಾವೇರಿಗೂ ಬಂದ ನೆನಪಿಗಾಗಿ ಕರ್ನಾಟಕ ಸರ್ಕಾರವು ವಾರ್ತಾ ಇಲಾಖೆ ಮೂಲಕ ಗಾಂಧಿ ಭವನವನ್ನು ಮೂರು ಕೋಟಿ ರೂ. ವೆಚ್ಚದಲ್ಲಿ ವಿಭಿನ್ನವಾಗಿ ರೂಪಿಸಲಾಗಿದೆ.
(2 / 8)
ಹಾವೇರಿ ನಗರದ ರೈಲು ನಿಲ್ದಾಣದ ಎದುರಿನ ಹಳೆಯ ಧರ್ಮಶಾಲಾ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಿರ್ಮಿಸಿರುವ ಗಾಂಧಿ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
(3 / 8)
ಗಾಂಧೀಜಿ ಅವರು ಹಾವೇರಿ ಭಾಗಕ್ಕೆ 1934ರಲ್ಲಿ ಬಂದಾಗ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರ ನೆನಪಿಗೆ ಗಾಂಧಿಭವನದಲ್ಲಿ ಕಲಾ ರೂಪ ನೀಡಲಾಗಿದೆ.
(4 / 8)
ಮಹಾತ್ಮ ಗಾಂಧೀಜಿ ಪ್ರತಿಮೆ, ಮೋಹನದಾಸ್ ಕುಟೀರ,ಕಸ್ತೂರಬಾ ಕುಟೀರ,ಸ್ವದೇಶಿ,ಚರಕ ,ಫೀನಿಕ್ಸ್,ಸಬರಮತಿ ಕುಟೀರಗಳು,ಸತ್ಯಾನ್ವಷಣೆ ಗ್ರಂಥಾಲಯ,ಸತ್ಯಶೋಧನೆ ಅಧ್ಯಯನ ಕೊಠಡಿ,ಹೃದಯಕುಂಜ್ ಪ್ರಾರ್ಥನಾ ಮಂದಿರ ಗಾಂಧಿಭವನದ ಆಕರ್ಷಣೆಗಳು.
(5 / 8)
ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನ ಮೈಲಾರ ಮಹದೇವಪ್ಪ ಅವರೊಂದಿಗಿದ್ದ ಸನ್ನಿವೇಶದ ಪ್ರತಿಕೃತಿ,ದಂಡಿ ಯಾತ್ರೆ ಕಲಾಕೃತಿಗಳನ್ನು ತಾಳ್ಮೆಯಿಂದ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಗಣ್ಯರು ಗಾಂಧಿ ಪ್ರತಿಮೆಗೆ ನಮಸ್ಕರಿಸಿದರು.
(6 / 8)
ಕರ್ನಾಟಕದಲ್ಲಿ ಗಾಂಧಿ ಬಂದು ಹೋಗಿರುವ ಸ್ಥಳ, ದಿನಾಂಕ ಹಾಗೂ ಮಹತ್ವ ಕುರಿತು ಹಾವೇರಿ ಗಾಂಧಿಭವನದಲ್ಲಿ ಮಾಹಿತಿ ಫಲಕವನ್ನು ಹಾಕಲಾಗಿದ್ದು, ಸಿಎಂ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ವೀಕ್ಷಿಸಿದರು.
(7 / 8)
ಹಾವೇರಿ ಗಾಂಧಿಭವನದಲ್ಲಿ ನಿರ್ಮಿಸಲಾಗಿರುವ ಸತ್ಯಾಗ್ರಹ ಸಭಾಂಗಣ, ರಂಗಚಟುವಟಿಕೆಗಳಿಗಾಗಿ ಬಾಪೂಜಿ ಬಯಲು ರಂಗಮಂದಿರನ್ನು ವೀಕ್ಷಿಸಿದ ಮುಖ್ಯಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿ,ಗಣ್ಯರ ಭೇಟಿಯ ಸಂದರ್ಶನ ಪುಸ್ತಕದಲ್ಲಿ ಅಭಿಪ್ರಾಯ ದಾಖಲಿಸಿದರು.
ಇತರ ಗ್ಯಾಲರಿಗಳು