ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಒದ್ದಾಡುತ್ತಿದ್ದೀರಾ: ನಿದ್ರಾಹೀನತೆ ತಡೆಗಟ್ಟಲು ಈ ಟಿಪ್ಸ್ ಫಾಲೋ ಮಾಡಿ
ಇತ್ತೀಚೆಗೆ ನಿದ್ರಾಹೀನತೆ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತಿದೆ. ನಿದ್ದೆಗಾಗಿ ಕೆಲವು ಗಂಟೆಗಳ ಕಾಲ ಒದ್ದಾಡಬೇಕಾಗುತ್ತದೆ. ಬಳಿಕ ಹಾಗೂ ಹೀಗೂ ನಿದ್ದೆ ತಡವಾಗಿ ಬರುತ್ತದೆ. ಅಷ್ಟರಲ್ಲಾಗಲೇ ಬೆಳಗ್ಗೆ ಎದ್ದೇಳಲು ಇನ್ನೇನು ಸ್ವಲ್ಪ ಸಮಯ ಬಾಕಿ ಇರುತ್ತದೆ. ಮಲಗಿದ ಕೂಡಲೇ ನಿದ್ದೆ ಮಾಡಲು ಇಲ್ಲಿವೆ ಟಿಪ್ಸ್.
(1 / 7)
ರಾತ್ರಿ ನಿದ್ದೆ ಸರಿಯಾಗಿ ಆಗಿಲ್ಲದಿದ್ದರೆ ಇದು ಭಾವನಾತ್ಮಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ ಋಣಾತ್ಮಕವಾಗಿ ಸ್ಮರಣೆ, ಏಕಾಗ್ರತೆ ಮತ್ತು ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ನಿದ್ರಾಹೀನತೆ ಸಮಸ್ಯೆಯು ಖಿನ್ನತೆ, ಬೊಜ್ಜು, ಟೈಪ್ 2 ಮಧುಮೇಹ, ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ಸಂತೋಷಕರವಾಗಿ, ಆರಾಮವಾಗಿ ನಿದ್ರಿಸಲು ನೈಸರ್ಗಿಕ ಪರಿಹಾರಗಳಿವೆ. ಇಲ್ಲಿವೆ ನಿಮಗಾಗಿ ಟಿಪ್ಸ್.(Pixabay)
(2 / 7)
ಪಾನೀಯ ಸೇವಿಸಿ: ಮಲಗುವ ಮುನ್ನ ಆದಷ್ಟು ಪಾನೀಯಗಳನ್ನು ಸೇವಿಸಬೇಕು. ಆದರೆ, ಆಲ್ಕೋಹಾಲ್ ಸೇವನೆ ಒಳ್ಳೆಯದಲ್ಲ. ಇದು ನಿದ್ದೆಗೆ ಅಡ್ಡಿಪಡಿಸುತ್ತದೆ. ಬೆಚ್ಚಗಿನ ಹಾಲು, ಗ್ರೀನ್ ಟೀ ಮತ್ತು ಚೆರ್ರಿ ರಸವನ್ನು ಸೇವಿಸಬಹುದು. ಇವು ಆರೋಗ್ಯಕರ ನಿದ್ದೆಯ ಚಕ್ರವನ್ನು ಉತ್ತೇಜಿಸುತ್ತದೆ.(freepik)
(3 / 7)
ಮೊಬೈಲ್, ಲ್ಯಾಪ್‍ಟಾಪ್ ಇತ್ಯಾದಿ ನೋಡದಿರಿ: ಮಲಗುವ ಮುನ್ನ ಮೊಬೈಲ್, ಲ್ಯಾಪ್‍ಟಾಪ್ ಇತ್ಯಾದಿ ನೋಡದಿರುವುದು ಉತ್ತಮ. ಮೆಲಟೋನಿನ್ ಎಂಬ ಹಾರ್ಮೋನ್ ಮೆದುಳಿನಲ್ಲಿ ನೈಸರ್ಗಿಕವಾಗಿ ಬಿಡುಗಡೆಯಾಗುತ್ತದೆ. ಫೋನ್, ಲ್ಯಾಪ್‌ಟಾಪ್ ಅಥವಾ ಟಿವಿಯಿಂದ ಅಸ್ವಾಭಾವಿಕ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮೆಲಟೋನಿನ್ ಬಿಡುಗಡೆಯನ್ನು ತಡೆಯುತ್ತದೆ, ಇದು ನಿದ್ರಿಸಲು ಕಷ್ಟವಾಗುತ್ತದೆ. (freepik)
(4 / 7)
ಮಲಗುವ ಕೋಣೆ ಹಿತವಾಗಿರಲಿ: ಮಲಗುವ ಕೋಣೆಯನ್ನು ಆದಷ್ಟು ತಂಪಾಗಿ ಇಟ್ಟುಕೊಳ್ಳಬೇಕು. ಕೋಣೆಯಲ್ಲಿ ಸಾಮಾನ್ಯವಾಗಿ ಬಿಸಿ ವಾತಾವರಣ ಇರುತ್ತದೆ. ಇದಕ್ಕಾಗಿ ಮಲಗುವ ಮುನ್ನ ಬಿಗಿಯಾದ ಉಡುಪುಗಳನ್ನು ಧರಿಸಬಾರದು. ಹತ್ತಿ ಬಟ್ಟೆಯನ್ನು ಧರಿಸಬಹುದು. ಹತ್ತಿಯ ಬೆಡ್‍ಶೀಟ್ ಇದ್ದರೆ ಉತ್ತಮ.(freepik)
(5 / 7)
ಬಲ್ಬ್ ಬೆಳಗಿಸದಿರಿ: ಸ್ಮಾರ್ಟ್‌ಫೋನ್‌ನ ಬೆಳಕು ನಿದ್ದೆಗೆ ಅಡ್ಡಿಪಡಿಸುತ್ತದೆ ಎಂಬುದು ತಿಳಿದಿದೆ. ರಾತ್ರಿ ಮಲಗಿದ ವೇಳೆ ಬಾತ್‌ರೂಮ್‌ಗೆ ಹೋಗಲು ಕೆಲವೊಮ್ಮೆ ಎದ್ದೇಳಬೇಕಾಗುತ್ತದೆ. ಹೀಗಾಗಿ ಬಹುತೇಕರು ಕೋಣೆಯ, ಬಾತ್‍ರೂಮ್ ಲೈಟ್ ಬೆಳಗಿಸುತ್ತಾರೆ. ಇದರಿಂದಲೂ ನಿದ್ದೆಗೆ ಅಡಚಣೆಯಾಗುತ್ತದೆ. ಹೀಗಾಗಿ ಬ್ಯಾಟರಿ ದೀಪವನ್ನು ಬಳಸುವುದು ಉತ್ತಮ.(freepik)
(6 / 7)
ವ್ಯಾಯಾಮ: ದೈಹಿಕ ಚಟುವಟಿಕೆಯು ನಿದ್ದೆಯನ್ನು ಸುಧಾರಿಸುತ್ತದೆ ಎನ್ನಲಾಗಿದೆ. ಮಧ್ಯಮ ಏರೋಬಿಕ್ ವ್ಯಾಯಾಮವು ಆಳವಾದ ನಿದ್ದೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಏರೋಬಿಕ್ ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. (freepik)
ಇತರ ಗ್ಯಾಲರಿಗಳು