Liver Health: ಸಮಸ್ಯೆಗಳ ಮೂಲವಾಗುತ್ತಿದೆ ಫ್ಯಾಟಿ ಲಿವರ್; ಯಕೃತ್ತಿನ ಆರೋಗ್ಯ ಸುಧಾರಣೆಗೆ ಈ 5 ಆಹಾರಗಳನ್ನು ನಿಯಮಿತವಾಗಿ ಸೇವಿಸಿ
- Healthy Food for Liver: ಯಕೃತ್ತು ದೇಹದ ಪ್ರಮುಖ ಅಂಗ. ಇದು ಆಹಾರದ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದಲ್ಲಿನ ಸಕ್ಕರೆಮಟ್ಟವನ್ನು ನಿಯಂತ್ರಿಸುವುದು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಆದ್ದರಿಂದ ಸರಿಯಾದ ಪೋಷಣೆಯೊಂದಿಗೆ ಯಕೃತ್ತಿನ ಆರೈಕೆ ಮಾಡುವುದು ಬಹಳ ಮುಖ್ಯ.
- Healthy Food for Liver: ಯಕೃತ್ತು ದೇಹದ ಪ್ರಮುಖ ಅಂಗ. ಇದು ಆಹಾರದ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದಲ್ಲಿನ ಸಕ್ಕರೆಮಟ್ಟವನ್ನು ನಿಯಂತ್ರಿಸುವುದು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಆದ್ದರಿಂದ ಸರಿಯಾದ ಪೋಷಣೆಯೊಂದಿಗೆ ಯಕೃತ್ತಿನ ಆರೈಕೆ ಮಾಡುವುದು ಬಹಳ ಮುಖ್ಯ.
(1 / 6)
ಯಕೃತ್ತು ಅಥವಾ ಲಿವರ್ ದೇಹದ ವಿವಿಧ ಅಗತ್ಯಗಳನ್ನು ಪೂರೈಸುವ ಶಕ್ತಿ ಕೇಂದ್ರವಾಗಿದೆ. ಯಕೃತ್ತಿನ ಆರೋಗ್ಯವನ್ನು ಸುಧಾರಿಸಲು ಪೌಷ್ಟಿಕತಜ್ಞರು 5 ರೀತಿಯ ಆಹಾರಗಳನ್ನು ಸೂಚಿಸುತ್ತಾರೆ. ನಿಮ್ಮ ಯಕೃತ್ತು ಆರೋಗ್ಯವಾಗಿರಲು ನಿಯಮಿತವಾಗಿ ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿಯಿರಿ.(File photo)
(2 / 6)
ಗೋಧಿಹುಲ್ಲು: ಇದು ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಗೋಧಿಹುಲ್ಲು ಸೇವನೆ ಯಕೃತ್ತಿನ ಆರೋಗ್ಯಕ್ಕೆ ಬಹಳ ಉತ್ತಮ. ಯಕೃತ್ತಿನ ಆರೋಗ್ಯ ಸದಾ ಚೆನ್ನಾಗಿರಲು ಇದರ ರಸವನ್ನು ಸೇವಿಸಬೇಕು. (Unsplash)
(3 / 6)
ಕ್ರೂಸಿಫೆರಸ್ ತರಕಾರಿಗಳು: ಬ್ರೊಕೊಲಿ ಮತ್ತು ಬ್ರಸಲ್ಸ್ ಮೊಗ್ಗುಗಳಂತಹ ಕ್ರೂಸಿಫೆರಸ್ ತರಕಾರಿಗಳನ್ನು ತಿನ್ನುವುದು ದೇಹದ ನೈಸರ್ಗಿಕ ನಿರ್ವಿಶೀಕರಣ ಕಿಣ್ವಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಷದ ಅಂಶಗಳು ಯಕೃತ್ತಿನ ಮೇಲೆ ಪರಿಣಾಮ ಬೀರುವುದನ್ನು ಇದು ತಡೆಯುತ್ತದೆ. ಯಕೃತ್ತಿನ ಕಿಣ್ವಗಳ ರಕ್ತದ ಮಟ್ಟವನ್ನು ಸುಧಾರಿಸುತ್ತದೆ.(Pixabay)
(4 / 6)
ವಾಲ್‌ನಟ್: ಯಕೃತ್ತಿನ ಕೊಬ್ಬು ಕಡಿಮೆ ಮಾಡಲು ವಾಲ್‌ನಟ್ ತುಂಬಾ ಪ್ರಯೋಜನಕಾರಿ. ವಾಲ್‌ನಟ್ಸ್‌ನಲ್ಲಿ ಒಮೆಗಾ 6 ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಪಾಲಿಫಿನಾಲ್ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಪರಿಣಾಮವಾಗಿ, ಇದನ್ನು ನಿಯಮಿತವಾಗಿ ತಿನ್ನುವುದರಿಂದ ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ.(Unsplash)
(5 / 6)
ದ್ರಾಕ್ಷಿಗಳು: ಕೆಂಪು ಮತ್ತು ಕಪ್ಪು ದ್ರಾಕ್ಷಿಗಳು ರೆಸ್ವೆರಾಟ್ರೊಲ್‌ನಂತಹ ಹಲವು ಪ್ರಯೋಜನಕಾರಿ ಸಸ್ಯ ಸಂಯುಕ್ತಗಳನ್ನು ಹೊಂದಿವೆ. ಅವು ದೇಹದಲ್ಲಿ ಉತ್ಕರ್ಷಣ ನಿರೋಧಕ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತವೆ. ಈ ದ್ರಾಕ್ಷಿಯನ್ನು ನಿಯಮಿತವಾಗಿ ತಿನ್ನುವುದರಿಂದ ಯಕೃತ್ತು ಆರೋಗ್ಯಕರವಾಗಿರುತ್ತದೆ.
ಇತರ ಗ್ಯಾಲರಿಗಳು