Lungs Detox: ಉಸಿರಾಟದ ಸಮಸ್ಯೆಯೇ; ಶ್ವಾಸಕೋಶದ ಆರೋಗ್ಯ ಸುಧಾರಣೆಗೆ ನೆರವಾಗುವ ಆಹಾರ ಪದಾರ್ಥಗಳು ಇಲ್ಲಿವೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lungs Detox: ಉಸಿರಾಟದ ಸಮಸ್ಯೆಯೇ; ಶ್ವಾಸಕೋಶದ ಆರೋಗ್ಯ ಸುಧಾರಣೆಗೆ ನೆರವಾಗುವ ಆಹಾರ ಪದಾರ್ಥಗಳು ಇಲ್ಲಿವೆ ನೋಡಿ

Lungs Detox: ಉಸಿರಾಟದ ಸಮಸ್ಯೆಯೇ; ಶ್ವಾಸಕೋಶದ ಆರೋಗ್ಯ ಸುಧಾರಣೆಗೆ ನೆರವಾಗುವ ಆಹಾರ ಪದಾರ್ಥಗಳು ಇಲ್ಲಿವೆ ನೋಡಿ

  • Amazing Foods Good for Lungs Health: ಧೂಳು, ಕಲುಷಿತ ವಾತಾವರಣ ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಶ್ವಾಸಕೋಶದ ಸಮಸ್ಯೆ ಉಂಟಾಗಬಹುದು. ಶ್ವಾಸಕೋಶವನ್ನು ನಿರ್ವಿಷಗೊಳಿಸಲು ಕೆಲವು ಆಹಾರ ಪದಾರ್ಥಗಳು ನೆರವಾಗುತ್ತವೆ. ಇವು ನಿರ್ವಿಷಗೊಳಿಸುವುದು ಮಾತ್ರವಲ್ಲ ಶ್ವಾಸಕೋಶದ ಆರೋಗ್ಯ ಸುಧಾರಣೆಗೂ ನೆರವಾಗುತ್ತವೆ.

ವಾಯುಮಾಲಿನ್ಯ, ತಂಬಾಕು, ಧೂಮಪಾನ, ಅಲರ್ಜಿ ಮತ್ತು ಇತರ ಹಲವು ಅಂಶಗಳು ನಮ್ಮ ಶ್ವಾಸಕೋಶಕ್ಕೆ ಹಾನಿ ಮಾಡಬಹುದು. ಇದರಿಂದ ಶ್ವಾಸಕೋಶದಲ್ಲಿ ವಿಷಕಾರಿ ಅಂಶಗಳು ಸೇರಬಹುದು. ಇದು ಆಸ್ತಮಾ, ಸಿಓಪಿಡಿ, ಉಸಿರುಗಟ್ಟುವುದು ಹಾಗೂ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ಶ್ವಾಸಕೋಶವನ್ನು ನಿರ್ವಿಷಗೊಳಿಸಬಹುದು. ಅಂತಹ ಆಹಾರ ಬಗ್ಗೆ ತಿಳಿಸಿದ್ದಾರೆ ಪೌಷ್ಟಿಕ ತಜ್ಞೆ ಕರಿಶ್ಮಾ ಶಾ. 
icon

(1 / 7)

ವಾಯುಮಾಲಿನ್ಯ, ತಂಬಾಕು, ಧೂಮಪಾನ, ಅಲರ್ಜಿ ಮತ್ತು ಇತರ ಹಲವು ಅಂಶಗಳು ನಮ್ಮ ಶ್ವಾಸಕೋಶಕ್ಕೆ ಹಾನಿ ಮಾಡಬಹುದು. ಇದರಿಂದ ಶ್ವಾಸಕೋಶದಲ್ಲಿ ವಿಷಕಾರಿ ಅಂಶಗಳು ಸೇರಬಹುದು. ಇದು ಆಸ್ತಮಾ, ಸಿಓಪಿಡಿ, ಉಸಿರುಗಟ್ಟುವುದು ಹಾಗೂ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ಶ್ವಾಸಕೋಶವನ್ನು ನಿರ್ವಿಷಗೊಳಿಸಬಹುದು. ಅಂತಹ ಆಹಾರ ಬಗ್ಗೆ ತಿಳಿಸಿದ್ದಾರೆ ಪೌಷ್ಟಿಕ ತಜ್ಞೆ ಕರಿಶ್ಮಾ ಶಾ. (Pinterest, Freepik)

ನಿಂಬೆಹಣ್ಣು ಹಾಗೂ ಬಿಸಿನೀರು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿನೀರಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿ ಮಿಶ್ರಣ ಮಾಡಿಕೊಂಡು ಕುಡಿಯುವುದರಿಂದ ಶ್ವಾಸಕೋಶದ ವಿಷ ಹೊರ ಹೋಗಲು ಸಹಕಾರಿ. 
icon

(2 / 7)

ನಿಂಬೆಹಣ್ಣು ಹಾಗೂ ಬಿಸಿನೀರು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿನೀರಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿ ಮಿಶ್ರಣ ಮಾಡಿಕೊಂಡು ಕುಡಿಯುವುದರಿಂದ ಶ್ವಾಸಕೋಶದ ವಿಷ ಹೊರ ಹೋಗಲು ಸಹಕಾರಿ. (Pixabay)

ನವಣೆ ಅಕ್ಕಿ ಸಲಾಡ್: ಬೇಯಿಸಿದ ನವಣೆ ಅಕ್ಕಿ, ಹಸಿರು ತರಕಾರಿಗಳು, ಟೊಮೆಟೊ, ಸೌತೆಕಾಯಿ, ಬೆಣ್ಣೆಹಣ್ಣು, ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ, ಅದರ ಮೇಲೆ ನಿಂಬೆ ರಸದ ಚಿಮುಕಿಸಿ ಸಲಾಡ್ ಮಾಡಿ ತಿನ್ನಿ. ಇದು ಶ್ವಾಸಕೋಶದ ಆರೋಗ್ಯ ಸುಧಾರಣೆಗೆ ಸಹಕಾರಿ. 
icon

(3 / 7)

ನವಣೆ ಅಕ್ಕಿ ಸಲಾಡ್: ಬೇಯಿಸಿದ ನವಣೆ ಅಕ್ಕಿ, ಹಸಿರು ತರಕಾರಿಗಳು, ಟೊಮೆಟೊ, ಸೌತೆಕಾಯಿ, ಬೆಣ್ಣೆಹಣ್ಣು, ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ, ಅದರ ಮೇಲೆ ನಿಂಬೆ ರಸದ ಚಿಮುಕಿಸಿ ಸಲಾಡ್ ಮಾಡಿ ತಿನ್ನಿ. ಇದು ಶ್ವಾಸಕೋಶದ ಆರೋಗ್ಯ ಸುಧಾರಣೆಗೆ ಸಹಕಾರಿ. (Pinterest)

ಓಟ್ಸ್ ಮತ್ತು ಹಣ್ಣುಗಳು: ಓಟ್ಸ್ ಅನ್ನು ನೀರು ಅಥವಾ ಸಸ್ಯಜನ್ಯ ಹಾಲಿನೊಂದಿಗೆ ಬೆರಿಸಿ. ಅದರ ಜೊತೆ ಬೆರಿಹಣ್ಣುಗಳು ಅಥವಾ ಸ್ಟ್ರಾಬೆರಿಗಳಂತಹ ಕೆಲವು ಹಣ್ಣುಗಳನ್ನು ಸೇರಿಸಿ ಸೇವಿಸಿ, ಇದು ಕೂಡ ಶ್ವಾಸಕೋಶಕ್ಕೆ ಉತ್ತಮ. 
icon

(4 / 7)

ಓಟ್ಸ್ ಮತ್ತು ಹಣ್ಣುಗಳು: ಓಟ್ಸ್ ಅನ್ನು ನೀರು ಅಥವಾ ಸಸ್ಯಜನ್ಯ ಹಾಲಿನೊಂದಿಗೆ ಬೆರಿಸಿ. ಅದರ ಜೊತೆ ಬೆರಿಹಣ್ಣುಗಳು ಅಥವಾ ಸ್ಟ್ರಾಬೆರಿಗಳಂತಹ ಕೆಲವು ಹಣ್ಣುಗಳನ್ನು ಸೇರಿಸಿ ಸೇವಿಸಿ, ಇದು ಕೂಡ ಶ್ವಾಸಕೋಶಕ್ಕೆ ಉತ್ತಮ. (Pixabay)

ಸ್ಮೂಥಿ: ಶ್ವಾಸಕೋಶದ ತಾಜಾ ಅನುಭವ ಹಾಗೂ ಶ್ವಾಸಕೋಶವನ್ನು ನಿರ್ವಿಷಗೊಳಿಸಲು ಪಾಲಕ್‌, ಸೌತೆಕಾಯಿ, ಸೇಬು ಹಾಗೂ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ ಸ್ಮೂಥಿ ತಯಾರಿಸಿ ಅದನ್ನು ಕುಡಿಯಿರಿ. 
icon

(5 / 7)

ಸ್ಮೂಥಿ: ಶ್ವಾಸಕೋಶದ ತಾಜಾ ಅನುಭವ ಹಾಗೂ ಶ್ವಾಸಕೋಶವನ್ನು ನಿರ್ವಿಷಗೊಳಿಸಲು ಪಾಲಕ್‌, ಸೌತೆಕಾಯಿ, ಸೇಬು ಹಾಗೂ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ ಸ್ಮೂಥಿ ತಯಾರಿಸಿ ಅದನ್ನು ಕುಡಿಯಿರಿ. (Pixabay)

ತರಕಾರಿ ಸೂಪ್: ವಿವಿಧ ತರಕಾರಿಗಳಿಂದ ತಯಾರಿಸಿದ ಸೂಪ್ ಕುಡಿಯುವುದರಿಂದಲೂ ಶ್ವಾಸಕೋಶವನ್ನು ಡಿಕಾಟ್ಸ್‌ ಮಾಡಬಹುದು. ಕ್ಯಾರೆಟ್, ಸೆಲರಿ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಅರಿಶಿನದಂತಹ ಶ್ವಾಸಕೋಶ ಸ್ನೇಹಿ ಪದಾರ್ಥಗಳನ್ನು ಸೇರಿಸಿ ಸೂಪ್‌ ತಯಾರಿಸಿ ಕುಡಿಯಬೇಕು. 
icon

(6 / 7)

ತರಕಾರಿ ಸೂಪ್: ವಿವಿಧ ತರಕಾರಿಗಳಿಂದ ತಯಾರಿಸಿದ ಸೂಪ್ ಕುಡಿಯುವುದರಿಂದಲೂ ಶ್ವಾಸಕೋಶವನ್ನು ಡಿಕಾಟ್ಸ್‌ ಮಾಡಬಹುದು. ಕ್ಯಾರೆಟ್, ಸೆಲರಿ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಅರಿಶಿನದಂತಹ ಶ್ವಾಸಕೋಶ ಸ್ನೇಹಿ ಪದಾರ್ಥಗಳನ್ನು ಸೇರಿಸಿ ಸೂಪ್‌ ತಯಾರಿಸಿ ಕುಡಿಯಬೇಕು. 

ತರಕಾರಿ ಸಲಾಡ್‌: ದೊಣ್ಣೆ ಮೆಣಸಿನ ಕಾಯಿ, ಬ್ರಕೋಲಿ, ಬಟಾಣಿ ಇವುಗಳನ್ನೆಲ್ಲಾ ಸೇರಿಸಿ ತರಕಾರಿ ಸಲಾಡ್‌ ತಯಾರಿಸಿ ತಿನ್ನುವುದರಿಂದ ಕೂಡ ಶ್ವಾಸಕೋಶ ನಿರ್ವಿಷಗೊಳಿಸಲು ನೆರವಾಗುತ್ತವೆ. ಇವುಗಳ ಜೊತೆ ಬೆಳ್ಳುಳ್ಳಿ, ಶುಂಠಿ ಮತ್ತು ತಮರಿ ಸಾಸ್‌ನೊಂದಿಗೆ ಮಸಾಲೆ ಹಾಕಿ.
icon

(7 / 7)

ತರಕಾರಿ ಸಲಾಡ್‌: ದೊಣ್ಣೆ ಮೆಣಸಿನ ಕಾಯಿ, ಬ್ರಕೋಲಿ, ಬಟಾಣಿ ಇವುಗಳನ್ನೆಲ್ಲಾ ಸೇರಿಸಿ ತರಕಾರಿ ಸಲಾಡ್‌ ತಯಾರಿಸಿ ತಿನ್ನುವುದರಿಂದ ಕೂಡ ಶ್ವಾಸಕೋಶ ನಿರ್ವಿಷಗೊಳಿಸಲು ನೆರವಾಗುತ್ತವೆ. ಇವುಗಳ ಜೊತೆ ಬೆಳ್ಳುಳ್ಳಿ, ಶುಂಠಿ ಮತ್ತು ತಮರಿ ಸಾಸ್‌ನೊಂದಿಗೆ ಮಸಾಲೆ ಹಾಕಿ.(Chef Shankar Devnath )


ಇತರ ಗ್ಯಾಲರಿಗಳು