Egg Side Effects; ದಿನಕ್ಕೆಷ್ಟು ಮೊಟ್ಟೆ ತಿಂತೀರಿ, ಐದು, ಆರು.., ಎಷ್ಟೋ ತಿಂತೀವಿ ಏನೀಗ ಅಂತೀರಾ, ಹಾಗಾದ್ರೆ ಈ ವಿಚಾರದ ಕಡೆಗೂ ಗಮನಕೊಡಿ-health news possible side effects of eating too many eggs in a day what you need to know uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Egg Side Effects; ದಿನಕ್ಕೆಷ್ಟು ಮೊಟ್ಟೆ ತಿಂತೀರಿ, ಐದು, ಆರು.., ಎಷ್ಟೋ ತಿಂತೀವಿ ಏನೀಗ ಅಂತೀರಾ, ಹಾಗಾದ್ರೆ ಈ ವಿಚಾರದ ಕಡೆಗೂ ಗಮನಕೊಡಿ

Egg Side Effects; ದಿನಕ್ಕೆಷ್ಟು ಮೊಟ್ಟೆ ತಿಂತೀರಿ, ಐದು, ಆರು.., ಎಷ್ಟೋ ತಿಂತೀವಿ ಏನೀಗ ಅಂತೀರಾ, ಹಾಗಾದ್ರೆ ಈ ವಿಚಾರದ ಕಡೆಗೂ ಗಮನಕೊಡಿ

Egg Side Effects; ಹೌದೂ.. ದಿನಕ್ಕೆಷ್ಟು ಮೊಟ್ಟೆ ತಿಂತೀರಿ.. ಐದು, ಆರು.. , ಇರಲಿ ಬಿಡಿ. ಎಷ್ಟೋ ತಿಂತೀವಿ ಏನಿವಾಗ ಎಂದು ನಿರ್ಲಕ್ಷ್ಯ ಧೋರಣೆ ತೋರಬೇಡಿ. ಮೊಟ್ಟೆಗಳು ಅತ್ಯಂತ ಪೌಷ್ಟಿಕ ಆಹಾರಗಳಲ್ಲಿ ಒಂದಾಗಿದ್ದರೂ, ಮೊಟ್ಟೆಗಳನ್ನು ಅತಿಯಾಗಿ ತಿಂದರೆ ಅಡ್ಡ ಪರಿಣಾಮ ಇದೆ ಎಂಬುದು ಗೊತ್ತಿದೆಯೇ? ಇಲ್ಲದೇ ಹೋದರೆ, ಹಾಗಾದ್ರೆ ಈ ವಿಚಾರದ ಕಡೆಗೂ ಗಮನಕೊಡಿ.

ನೀವು ಮೊಟ್ಟೆ ಪ್ರಿಯರಾ, ದಿನಕ್ಕೆಷ್ಟು ಮೊಟ್ಟೆ ತಿಂತೀರಿ- ಐದು, ಆರು…?! - ಎಷ್ಟೋ ತಿಂತೀವಿ ಬಿಡಿ, ಏನಿವಾಗ ಅಂತೀರಾ… ಮೊಟ್ಟೆ ಪೌಷ್ಟಿಕಾಹಾರ ಸರಿ. ಹಾಗಂತ ಅತಿಯಾಗಿ ಮೊಟ್ಟೆ ತಿಂದ್ರೆ ಸಮಸ್ಯೆ ಆಗಲ್ವಾ? ಸೈಡ್ ಎಫೆಕ್ಟ್‌ ಇರಲ್ವ, ಹೀಗೆ ಹತ್ತಾರು ಪ್ರಶ್ನೆಗಳು ಎದುರಾಗುವುದು ಸಹಜ. ಇಲ್ಲಿದೆ ಅಧ್ಯಯನ ವರದಿಯ ಕೆಲವು ಅಂಶಗಳು.
icon

(1 / 8)

ಅನೇಕರು ಉಪಾಹಾರಕ್ಕೆ ಬೇಯಿಸಿದ ಮೊಟ್ಟೆ, ಆಮ್ಲೆಟ್‌ನಿಂದ ಹಿಡಿದು ವೈವಿಧ್ಯಮಯ ರುಚಿಕರ ಮೊಟ್ಟೆ ಖಾದ್ಯಗಳನ್ನೇ ತಿನ್ನುತ್ತಾರೆ. ಹಲವರು ತಾವೇ ಸ್ವತಃ ಮೊಟ್ಟೆ ಖಾದ್ಯ ತಯಾರಿಸುವಲ್ಲಿ ಪರಿಣತರೂ ಇರಬಹುದು. ರುಚಿಕರ ಪಾಕವಿಧಾನಗಳನ್ನೂ ಬಲ್ಲವರೂ ಇರಬಹುದು. ಎಲ್ಲರೂ ತಿಳಿದುಕೊಂಡಿರುವಂತೆ ಮೊಟ್ಟೆಯಲ್ಲಿ ಪ್ರೊಟೀನ್ ಸಮೃದ್ಧವಾಗಿದೆ. ಬೆಳಿಗ್ಗೆ ಉಪಾಹಾರಕ್ಕೆ ಇದು ಉತ್ತಮ ಆಹಾರವೂ ಹೌದು. ಇದು ಉತ್ತಮ ಆರೋಗ್ಯವನ್ನು ಪೋಷಿಸಲು ಮತ್ತು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದಾಗ್ಯೂ, ಅತಿಯಾಗಿ ಮೊಟ್ಟೆ ಸೇವಿಸಿದರೆ ಅಡ್ಡ ಪರಿಣಾಮವೂ ಉಂಟು.
icon

(2 / 8)

ಅತಿಯಾಗಿ ಮೊಟ್ಟೆ ಸೇವಿಸಿದರೆ ಕೆಲವರಿಗೆ ಹೊಟ್ಟೆ ನೋವು, ಅಜೀರ್ಣದ ಸಮಸ್ಯೆ ಕಾಣಿಸಿಕೊಳ್ಳಬಹುದು. ಇನ್ನು ಕೆಲವರಿಗೆ ಅಜೀರ್ಣ, ಗ್ಯಾಸ್ಟಿಕ್‌ ಉಂಟಾಗಬಹುದಲ್ಲದೆ, ಹೊಟ್ಟೆ ಉಬ್ಬರಿಸಬಹುದು.  ಮೊಟ್ಟೆ ಅಸಹಿಷ್ಣುತೆ ಇಲ್ಲದವರಲ್ಲಿ ಜಠರ ಕರುಳಿನ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಅವರು ನಿತ್ಯವೂ ಹೆಚ್ಚು ಮೊಟ್ಟೆ ತಿನ್ನುವ ಅಭ್ಯಾಸವಿದ್ದರೆ ಅದನ್ನು ಕಡಿಮೆ ಮಾಡುವುದು ಒಳಿತು. ಅತಿಸಾರದಂತಹ ಕಿರಿಕಿರಿಯ ಕರುಳಿನ ಸಿಂಡ್ರೋಮ್ (ಐಬಿಎಸ್) ರೋಗಲಕ್ಷಣಗಳನ್ನು ಸಹ ಕಾಣಿಸಿಕೊಳ್ಳಬಹುದು. ಅಲ್ಲದೆ, ಇತರ ಹೆಚ್ಚಿನ ಕೊಬ್ಬಿನ ಆಹಾರಗಳೊಂದಿಗೆ ಮೊಟ್ಟೆಗಳನ್ನು ತಿನ್ನುವುದರಿಂದ ಮಲಬದ್ಧತೆ  ಉಂಟಾಗಬಹುದು.
icon

(3 / 8)

ಮೊಟ್ಟೆಗಳು ಅತ್ಯಂತ ಸಾಮಾನ್ಯ ಅಲರ್ಜಿಕಾರಕ ಆಹಾರಗಳಲ್ಲಿ ಒಂದಾಗಿದೆ.  ಇದು ತೀವ್ರ ಅನಾಫಿಲಾಕ್ಸಿಸ್ ಸೇರಿ ಅಲರ್ಜಿಗೆ ಕಾರಣವಾಗಬಹುದು. ಕಜ್ಜಿ, ಊತ, ದದ್ದು, ಎಸ್ಜಿಮಾ, ಜಠರ ಕರುಳಿನ ರೋಗಲಕ್ಷಣಗಳು, ಉಸಿರಾಟದ ತೊಂದರೆ, ಮೂಗು ಸೋರುವಿಕೆ, ಕಣ್ಣು ಕೆಂಪಾಗುವುದು ಅಥವಾ ಕಣ್ಣಲ್ಲಿ ನೀರು ಬರುವುದು, ಮೂಗು ಕಟ್ಟಿದಂತಾಗುವುದು, ತಲೆತಿರುಗುವಿಕೆ ಅಥವಾ ಎದೆ ಬಿಗಿತದಂತಹ ಯಾವುದೇ ರೋಗಲಕ್ಷಣಗಳನ್ನು ನೀವು ಅನುಭವಿಸಿದರೆ, ಕೂಡಲೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಮೊಟ್ಟೆಗಳನ್ನು ತಿಂದ ನಂತರ ನಿಮಗೆ ಅಲರ್ಜಿ ಉಂಟಾಗುವುದು ಗೊತ್ತಿದ್ದರೆ, ಮೊಟ್ಟೆಗಳನ್ನು ಸೇವಿಸಬೇಡಿ.
icon

(4 / 8)

ಕಚ್ಚಾ ಅಥವಾ ಬೇಯಿಸದ ಮೊಟ್ಟೆಗಳು ಸಾಲ್ಮೊನೆಲ್ಲಾ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಂದರೆ, ವಾಕರಿಕೆ, ವಾಂತಿ, ಅತಿಸಾರ ಮತ್ತು ಕಿಬ್ಬೊಟ್ಟೆ ನೋವಿನಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಈ ಬ್ಯಾಕ್ಟೀರಿಯಾವು ಸಾಮಾನ್ಯವಾಗಿ ಕೋಳಿಗಳಲ್ಲಿ ಕಂಡು ಬರುತ್ತವೆ. ಇತರ ಕೋಳಿಗಳ ಮೂಲಕ ಮೊಟ್ಟೆಗಳಿಗೆ ಹರಡುತ್ತದೆ. ಮೊಟ್ಟೆಗಳನ್ನು ಸರಿಯಾಗಿ ನಿರ್ವಹಿಸದಿದ್ದಾಗ, ಸಂಗ್ರಹಿಸದಿದ್ದಾಗ ಅಥವಾ ಬೇಯಿಸದಿದ್ದಾಗ ಇದು ಮನುಷ್ಯರ ಆರೋಗ್ಯವನ್ನೂ ಕಾಡುತ್ತದೆ. ಆದ್ದರಿಂದ, ಈ ಅಪಾಯವನ್ನು ಕಡಿಮೆ ಮಾಡಲು ಅಥವಾ ಮೊಟ್ಟೆಗಳನ್ನು ಚೆನ್ನಾಗಿ ಪಾಶ್ಚರೀಕರಿಸಿದ ಮೊಟ್ಟೆಗಳನ್ನು ಬಳಸಿ. ಸರಿಯಾಗಿ ಬೆಂದಿರುವ ಮೊಟ್ಟೆ ಎಂಬುದನ್ನು ಖಚಿತಪಡಿಸಿಕೊಂಡೇ ಸೇವಿಸಿ.
icon

(5 / 8)

ಮೊಟ್ಟೆಗಳು ಅನೇಕ ಜೀವಸತ್ತ್ವಗಳು, ಖನಿಜಗಳು ಮತ್ತು ಅಗತ್ಯ ಅಮಿನೋ ಆಮ್ಲಗಳನ್ನು ಒಳಗೊಂಡಿರುವ ಪೌಷ್ಟಿಕ ಆಹಾರ. ಆದರೂ, ಅವು ಬಯೋಟಿನ್ ಅನ್ನು ಹೊಂದಿರುತ್ತವೆ, ಇದು ಇನ್ಸುಲಿನ್ ಉತ್ಪಾದನೆಗೆ ಮುಖ್ಯವಾಗಿದೆ. ಮೊಟ್ಟೆಗಳನ್ನು ಮಿತವಾಗಿ ತಿನ್ನುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ, ಹೆಚ್ಚು ಮೊಟ್ಟೆ ಸೇವಿಸುವುದರಿಂದ ಮಧುಮೇಹ ಬರುವ ಅಪಾಯವನ್ನು ಹೆಚ್ಚಿಸುತ್ತದೆ. ಡಯಾಬಿಟಿಸ್ ಕೇರ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಾರಕ್ಕೆ ಏಳು ಅಥವಾ ಅದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ತಿನ್ನುವ ಪುರುಷರು ಟೈಪ್ 2 ಮಧುಮೇಹದ ಅಪಾಯವನ್ನು ಶೇಕಡಾ 58 ರಷ್ಟು ಹೆಚ್ಚು ಎದುರಿಸುತ್ತಾರೆ. ಮೊಟ್ಟೆಗಳನ್ನು ಸೇವಿಸದ ಜನರಿಗೆ ಹೋಲಿಸಿದರೆ ಮಹಿಳೆಯರಿಗೆ ಶೇಕಡಾ 77 ರಷ್ಟು ಹೆಚ್ಚಿನ ಅಪಾಯವಿದೆ ಎಂದು ಕಂಡುಬಂದಿದೆ.
icon

(6 / 8)

ಮೊಟ್ಟೆಗಳು ಆಹಾರದ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತವೆ, ಇದು ಕೆಲವು ಜನರಲ್ಲಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವುದಲ್ಲದೆ, ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಒಂದು ದೊಡ್ಡ ಮೊಟ್ಟೆಯಲ್ಲಿ 186 ಮಿಲಿಗ್ರಾಂ ಕೊಲೆಸ್ಟ್ರಾಲ್ ಇರುತ್ತದೆ ಎಂದು ಹೇಳಲಾಗುತ್ತದೆ. ಇದು ಮುಖ್ಯವಾಗಿ ಹಳದಿ ಲೋಳೆಯಲ್ಲಿರುತ್ತದೆ. ಆದಾಗ್ಯೂ, ಮೊಟ್ಟೆಗಳು ಎಲ್ಡಿಎಲ್, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದಿಲ್ಲ. ಆದರೆ ಎಚ್ಡಿಎಲ್ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಎಂಬುದನ್ನು ಸಂಶೋಧನೆ ದೃಢಪಡಿಸಿದೆ. ಆದ್ದರಿಂದ, ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವ ಜನರು ಹೆಚ್ಚು ಮೊಟ್ಟೆಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಆದಾಗ್ಯೂ, ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟ ಮತ್ತು ಹೃದ್ರೋಗದ ಅಪಾಯ ತಡೆಯಲು ಮಿತವಾಗಿ ಮೊಟ್ಟೆ ಸೇವಿಸಬೇಕು.
icon

(7 / 8)

ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ ಅಧ್ಯಯನದ ದತ್ತಾಂಶ ಪ್ರಕಾರ, ಆರೋಗ್ಯವಂತ ವ್ಯಕ್ತಿಯು ವಾರಕ್ಕೆ ಏಳು ಮೊಟ್ಟೆಗಳನ್ನು ಸೇವಿಸಿದರೆ ಯಾವುದೇ ಹಾನಿಯಿಲ್ಲ. ಆದಾಗ್ಯೂ, ಅಪಾಯಗಳನ್ನು ತಪ್ಪಿಸಲು ಕೆಲವರು ಹೆಚ್ಚು ಮೊಟ್ಟೆಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಅಧಿಕ ಕೊಲೆಸ್ಟ್ರಾಲ್ ಮಟ್ಟ ಇರುವವರು ವಾರಕ್ಕೆ 2-3 ಮೊಟ್ಟೆಗಳನ್ನು ಸೇವಿಸಬೇಕು, ಹೃದ್ರೋಗ ಇರುವವರು ವಾರಕ್ಕೆ 3-4 ಮೊಟ್ಟೆಗಳಿಗಿಂತ ಹೆಚ್ಚು ತಿನ್ನಬಾರದು. ಮಧುಮೇಹಿಗಳು ವಾರಕ್ಕೆ 5 ಮೊಟ್ಟೆಗಳನ್ನು ಸೇವಿಸಬೇಕು. ಆದಾಗ್ಯೂ, ನೀವು ಎಷ್ಟು ಮೊಟ್ಟೆಗಳನ್ನು ತಿನ್ನಬಹುದು ಎಂಬುದು ಬೇರೆ ಲೆಕ್ಕ. ಅದರಲ್ಲಿರುವ ಪೌಷ್ಟಿಕಾಂಶಗಳು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಅರಿವು ಇದ್ದರೆ, ಉತ್ತಮ ಆರೋಗ್ಯ ಕಾಪಾಡಬಹುದು. ಈ ಕುರಿತು ಸಲಹೆ, ಮಾರ್ಗದರ್ಶನಕ್ಕೆ ನಿಮ್ಮ ಡಾಕ್ಟರ್ ಜೊತೆಗೆ ಒಮ್ಮೆ ಸಮಾಲೋಚನೆ ನಡೆಸುವುದು ಉತ್ತಮ. 
icon

(8 / 8)

ಇತರ ಗ್ಯಾಲರಿಗಳು