ತೂಕ ಇಳಿಕೆಯಿಂದ ಮಧುಮೇಹ ನಿಯಂತ್ರಣದವರೆಗೆ, ಆರೋಗ್ಯದ ಮೇಲೆ ಮ್ಯಾಜಿಕ್ ಮಾಡುತ್ತೆ ಕರಿಬೇವಿನ ನೀರು, ಇದರ ಇನ್ನಿತರ ಪ್ರಯೋಜನಗಳು ಹೀಗಿವೆ
ಭಾರತೀಯ ಅಡುಗೆಮನೆಯಲ್ಲಿ ಕರಿಬೇವಿನ ಎಲೆಗೆ ವಿಶೇಷ ಮಹತ್ವವಿದೆ. ಬಹುತೇಕ ಅಡುಗೆಗಳು ಕರಿಬೇವಿನ ಎಲೆ ಇಲ್ಲ ಎಂದಾದರೆ ಪರಿಪೂರ್ಣ ಎನ್ನಿಸುವುದಿಲ್ಲ. ಒಗ್ಗರಣೆಗಂತೂ ಇದು ಬೇಕೇ ಬೇಕು. ಆದರೆ ಕರಿಬೇವು ನೆನೆಸಿದ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ತೂಕ ಇಳಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಮ್ಯಾಜಿಕ್ ಮಾಡುವುದು ಸುಳ್ಳಲ್ಲ.
(1 / 9)
ಕರಿಬೇವಿನ ಎಲೆಯು ನಾವು ತಯಾರಿಸುವ ಸಾಂಬಾರ್, ರಸಂ, ಚಟ್ನಿಗೆ ವಿಶೇಷ ರುಚಿ ಹಾಗೂ ಪರಿಮಳ ನೀಡುತ್ತದೆ. ಇದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತವೆ. ಕರಿಬೇವಿನ ಎಲೆಯಲ್ಲಿ ನೀರಿನಲ್ಲಿ ನೆನೆಸಿ ಆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ತೂಕ ಇಳಿಯುವುದರಿಂದ ಮಧುಮೇಹಿ ನಿಯಂತ್ರಣದವರೆಗೆ ಕರಿಬೇವಿನ ಎಲೆ ನೆನೆಸಿದ ನೀರು ಆರೋಗ್ಯದ ಮೇಲೆ ಹೇಗೆಲ್ಲಾ ಮ್ಯಾಜಿಕ್ ಮಾಡಲಿದೆ ನೋಡಿ. (shutterstock)
(2 / 9)
ಕರಿಬೇವಿನ ಎಲೆಯಲ್ಲಿ ವಿಟಮಿನ್ ಎ, ಬಿ, ಸಿ, ಇ ಮತ್ತು ನಾರಿನಾಂಶ, ಕಬ್ಬಿಣ, ಪ್ರೊಟೀನ್, ಕ್ಯಾಲ್ಸಿಯಂ, ರಂಜಕದಂತಹ ಖನಿಜಾಂಶಗಳಿವೆ. ಜೊತೆಗೆ ಇದು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಮತ್ತು ಆಂಟಿಡಯಾಬಿಟಿಕ್ ಗುಣಗಳನ್ನು ಹೊಂದಿವೆ. ಇದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಕರಿಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ತಿಳಿಯಿರಿ. (shutterstock)
(3 / 9)
ಕರಿಬೇವಿನ ಎಲೆಗಳಲ್ಲಿರುವ ಹೈಪೊಗ್ಲಿಸಿಮಿಕ್ ಗುಣವು ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ಕುದಿಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಇದಲ್ಲದೆ, ಕೊಲೆಸ್ಟ್ರಾಲ್ ಮತ್ತು ಅಧಿಕ ಬಿಪಿಯನ್ನು ನಿಯಂತ್ರಿಸುವ ಮೂಲಕ ಹೃದ್ರೋಗಗಳನ್ನು ದೂರವಿಡಲು ಇದು ಸಹಕಾರಿಯಾಗಿದೆ.(shutterstock)
(4 / 9)
ಕರಿಬೇವಿನ ಎಲೆಯ ನೀರಿನಲ್ಲಿ ಆ್ಯಂಟಿಆಕ್ಸಿಡೆಂಟ್, ಉರಿಯೂತ ನಿವಾರಕ ಮತ್ತು ಆ್ಯಂಟಿಬಯೋಟಿಕ್ ಗುಣಗಳು ಹೇರಳವಾಗಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶೀತ ಮತ್ತು ಕೆಮ್ಮಿನಂತಹ ಋತುಮಾನದ ಕಾಯಿಲೆಗಳಿಂದ ವ್ಯಕ್ತಿಯನ್ನು ದೂರವಿರಿಸುತ್ತದೆ.(shutterstock)
(5 / 9)
ನಿಮ್ಮ ಹೆಚ್ಚುತ್ತಿರುವ ತೂಕದಿಂದ ನೀವು ತೊಂದರೆಗೊಳಗಾಗಿದ್ದರೆ ಮತ್ತು ತ್ವರಿತವಾಗಿ ತೂಕವನ್ನು ಕಳೆದುಕೊಳ್ಳುವ ಮಾರ್ಗವನ್ನು ಹುಡುಕುತ್ತಿದ್ದರೆ, ಕರಿಬೇವಿನ ಎಲೆಯ ನೀರು ನಿಮ್ಮ ಸಮಸ್ಯೆಯನ್ನು ನಿವಾರಿಸುತ್ತದೆ. ಕರಿಬೇವಿನ ಎಲೆಯಲ್ಲಿ ಕ್ಯಾಲೋರಿ ಕಡಿಮೆ ಮತ್ತು ನಾರಿನಂಶ ಹೆಚ್ಚಿರುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗದಂತೆ ತಡೆಯುತ್ತದೆ. ಕರಿಬೇವಿನ ಎಲೆಗಳಲ್ಲಿ ಕಾರ್ಬಜೋಲ್ ಆಲ್ಕಲಾಯ್ಡ್‌ಗಳ ಉಪಸ್ಥಿತಿಯು ತೂಕ ಹೆಚ್ಚಾಗುವುದನ್ನು ತಡೆಯುತ್ತದೆ ಮತ್ತು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರ ನೀರು ದೇಹದಿಂದ ಹಾನಿಕಾರಕ ವಿಷವನ್ನು ತೆಗೆದುಹಾಕುವ ಮೂಲಕ ಹೆಚ್ಚುವರಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.(shutterstock)
(6 / 9)
ಕರಿಬೇವಿನ ಎಲೆಯ ನೀರು ಕಬ್ಬಿಣದ ಅಂಶದಿಂದ ಸಮೃದ್ಧವಾಗಿರುವುದರಿಂದ ರಕ್ತಹೀನತೆಯ ನಿವಾರಣೆಗೂ ಸಹಾಯ ಮಾಡುತ್ತದೆ. ಇದರಲ್ಲಿರುವ ಫೋಲಿಕ್ ಆಮ್ಲವು ರಕ್ತದಲ್ಲಿ ಉತ್ತಮ ಆಮ್ಲಜನಕ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.(shutterstock)
(7 / 9)
ಕರಿಬೇವಿನ ಎಲೆಗಳು ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಕರಿಬೇವಿನ ಎಲೆಗಳಲ್ಲಿನ ಉತ್ತಮ ಪ್ರಮಾಣದ ನಾರಿನಾಂಶ ಜಠರಗರುಳಿನ ಅನೇಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದರ ಎಲೆಗಳಲ್ಲಿರುವ ಪೋಷಕಾಂಶಗಳು ಮಲಬದ್ಧತೆ, ಅತಿಸಾರ, ಭೇದಿ, ಪೈಲ್ಸ್, ವಾಕರಿಕೆ, ಊತ ಇತ್ಯಾದಿಗಳನ್ನು ತಡೆಯಲು ಸಹಾಯ ಮಾಡುತ್ತದೆ.(shutterstock)
(8 / 9)
ಕರಿಬೇವಿನ ಎಲೆಯ ನೀರನ್ನು ತಯಾರಿಸಲು, ಸುಮಾರು 250 ಮಿಲಿ ನೀರಿಗೆ 30 ಕರಿಬೇವಿನ ಎಲೆಗಳನ್ನು ಸೇರಿಸಿ, ಅದನ್ನು ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ. ಈಗ ಈ ನೀರನ್ನು ಫಿಲ್ಟರ್ ಮಾಡಿ ಮತ್ತು ಅದನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಸ್ವಲ್ಪ ತಣ್ಣಗಾಗಲು ಇರಿಸಿ. ನಿಮಗೆ ಬೇಕಾದರೆ, ನೀವು ಬೆಲ್ಲ ಅಥವಾ ಜೇನುತುಪ್ಪವನ್ನು ಸಹ ಅದಕ್ಕೆ ಸೇರಿಸಬಹುದು.(shutterstock)
ಇತರ ಗ್ಯಾಲರಿಗಳು