ಕೆಮ್ಮು, ಕಫ, ಗಂಟಲುನೋವು ತಕ್ಷಣಕ್ಕೆ ನಿವಾರಣೆಯಾಗಲು ಇಲ್ಲಿದೆ 5 ಸರಳ ಮನೆಮದ್ದು; ಮಳೆಗಾಲದಲ್ಲಿ ಖಂಡಿತ ಇವು ಅವಶ್ಯ
- ಮಳೆಗಾಲ ಆರಂಭವಾದಾಕ್ಷಣ ಕೆಮ್ಮು, ಕಫ, ಜ್ವರ ಕಾಣಿಸುವುದು ಸಾಮಾನ್ಯ. ಕೆಲವೊಮ್ಮೆ ಎಷ್ಟೇ ಮದ್ದು ಮಾಡಿದ್ರು ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕಾಗಿ ಇಲ್ಲಿರುವ ಮನೆಮದ್ದುಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
- ಮಳೆಗಾಲ ಆರಂಭವಾದಾಕ್ಷಣ ಕೆಮ್ಮು, ಕಫ, ಜ್ವರ ಕಾಣಿಸುವುದು ಸಾಮಾನ್ಯ. ಕೆಲವೊಮ್ಮೆ ಎಷ್ಟೇ ಮದ್ದು ಮಾಡಿದ್ರು ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕಾಗಿ ಇಲ್ಲಿರುವ ಮನೆಮದ್ದುಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
(1 / 7)
ಋತುಮಾನಗಳು ಬದಲಾದ ಕೂಡಲೇ ಕೆಮ್ಮು, ನೆಗಡಿ ಕಾಣಿಸುವುದು ಸಾಮಾನ್ಯ ಸಂಗತಿ. ಇದನ್ನು ಗುಣಪಡಿಸಲು ವೈದ್ಯರ ಬಳಿಗೇ ಹೋಗಬೇಕು ಎಂದೇನಿಲ್ಲ. ಮನೆಯಲ್ಲೇ ಇರುವ ವಸ್ತುಗಳಿಂದ ಔಷಧಿ ತಯಾರಿಸಿ ಗುಣ ಪಡಿಸಿಕೊಳ್ಳಬಹುದು. ಮನೆಯಲ್ಲೇ ಕೆಮ್ಮು, ನೆಗಡಿ ಗುಣಪಡಿಸುವ 5 ಸರಳ ವಿಧಾನಗಳು ಇಲ್ಲಿವೆ.
(2 / 7)
ಗಂಟಲು ಹಾಗೂ ಕೆಮ್ಮು ಗುಣಪಡಿಸಲು ಇರುವ ಸರಳ ವಿಧಾನ ಎಂದರೆ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಅರ್ಧ ಟೀ ಚಮಚ ಉಪ್ಪನ್ನು ಬೆರೆಸಿ. ಉಗುಳುವ ಮೊದಲು 15-30 ಸೆಕೆಂಡುಗಳ ಕಾಲ ದ್ರಾವಣದಿಂದ ಚೆನ್ನಾಗಿ ಬಾಯಿ ಮುಕ್ಕಳಿಸಿ. ಈ ದ್ರಾವಣ ಗಂಟಲಿಗೂ ತಾಕಲಿ. ಈ ಕ್ರಮವನ್ನು ದಿನದಲ್ಲಿ ಹಲವು ಬಾರಿ ಅನುಸರಿಸಬಹುದು. ಸಾಧ್ಯವಾಗದಿದ್ದರೆ ದಿನದಲ್ಲಿ ಎರಡು ಬಾರಿ ಮಾಡಿ.
(3 / 7)
ಜೇನುತುಪ್ಪವು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ತುಳಸಿ, ಹಿಪ್ಪಲಿ ಕೂಡ ಉರಿಯೂತ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿವೆ. ಜೇನುತುಪ್ಪ, ತುಳಸಿ ಎಲೆ ಹಾಗೂ ಹಿಪ್ಪಲಿಯನ್ನು ಬೆರೆಸಿ ಪೇಸ್ಟ್ ತಯಾರಿಸಿ. ಕೆಮ್ಮು ನಿವಾರಿಸಲು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಪೇಸ್ಟ್ ಅನ್ನು ದಿನದಲ್ಲಿ ಎರಡರಿಂದ ಮೂರು ಬಾರಿ ಸೇವಿಸಿ.
(4 / 7)
ಶುಂಠಿ, ದಾಲ್ಚಿನ್ನಿ ಹಾಗೂ ಅರಿಸಿನವು ಉರಿಯೂತ ವಿರೋಧಿ ಮತ್ತು ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವ ಗುಣಗಳನ್ನು ಹೊಂದಿವೆ. ನೀರಿನಲ್ಲಿ ಒಂದು ಚಿಟಿಕೆ ದಾಲ್ಚಿನ್ನಿ ಮತ್ತು ಅರಿಶಿನದೊಂದಿಗೆ ಶುಂಠಿಯ ಚೂರುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ಇದನ್ನು ಸೋಸಿ, ಬೇಕಿದ್ದರೆ ಜೇನುತುಪ್ಪ ಬೆರೆಸಿ. ಇದನ್ನು ಪರಿಣಾಮಕಾರಿಯಾಗಿ ಬಳಸಲು ಬಿಸಿ ಇರುವಾಗಲೇ ಕುಡಿಯಿರಿ.
(5 / 7)
ಚಿಕನ್ ಸೂಪ್: ಕೆಮ್ಮು ಗುಣಪಡಿಸಲು ಚಿಕನ್ ಸೂಪ್‌ನಿಂದ ಸಾಧ್ಯವೇ ಎಂದು ಮೂಗು ಮುರಿಯಬೇಡಿ. ಚಿಕನ್ ಸೂಪ್ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬೆಚ್ಚಗಿನ ಒಂದು ಕಪ್ ಚಿಕನ್ ಸೂಪ್ ಕುಡಿಯುವುದರಿಂದ ಗಂಟಲು ನೋವು, ಮೂಗು ಕಟ್ಟುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ.
(6 / 7)
ಎಸೆನ್ಷಿಯಲ್ ಎಣ್ಣೆ: ಯೂಕಲಿಪ್ಟಸ್ ಮತ್ತು ಪುದೀನಾ ಮುಂತಾದ ಕೆಲವು ಸಾರಭೂತ ತೈಲಗಳು ಕೆಮ್ಮು ಮತ್ತು ಶೀತ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುವ ಡಿಕೊಂಜೆಸ್ಟೆಂಟ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿವೆ. ಬಿಸಿನೀರಿನ ಬೌಲ್‌ಗೆ ನಿಮ್ಮ ಆದ್ಯತೆಯ ಸಾರಭೂತ ತೈಲದ ಕೆಲವು ಹನಿಗಳನ್ನು ಸೇರಿಸಿ ಮತ್ತು ನಿಮ್ಮ ತಲೆಯನ್ನು ಟವೆಲ್‌ನಿಂದ ಮುಚ್ಚುವ ಮೂಲಕ ಹಬೆಯನ್ನು ಉಸಿರಾಡಿ. ಬಾದಾಮಿ ಎಣ್ಣೆ ಹಾಗೂ ಹರಳೆಣ್ಣೆಯಿಂದ ಎದೆ ಹಾಗೂ ಗಂಟಲಿನ ಭಾಗಕ್ಕೆ ಮಸಾಜ್ ಮಾಡುವುದರಿಂದ ಕೂಡ ಸಮಸ್ಯೆ ಪರಿಹರಿಸಿಕೊಳ್ಳಬಹುದು.
ಇತರ ಗ್ಯಾಲರಿಗಳು