Ghee vs Butter: ತುಪ್ಪನಾ, ಬೆಣ್ಣೆನಾ ಆರೋಗ್ಯಕ್ಕೆ ಯಾವುದು ಉತ್ತಮ; ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ-health tips ghee vs butter which is better for health benefits of butter and ghee which is good for heart health rst ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ghee Vs Butter: ತುಪ್ಪನಾ, ಬೆಣ್ಣೆನಾ ಆರೋಗ್ಯಕ್ಕೆ ಯಾವುದು ಉತ್ತಮ; ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

Ghee vs Butter: ತುಪ್ಪನಾ, ಬೆಣ್ಣೆನಾ ಆರೋಗ್ಯಕ್ಕೆ ಯಾವುದು ಉತ್ತಮ; ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

  • ಬೆಣ್ಣೆvs ತುಪ್ಪ ಅಂತ ಬಂದಾಗ ಯಾವುದು ಆರೋಗ್ಯಕ್ಕೆ ಉತ್ತಮ ಎಂಬ ಗೊಂದಲ ಬಹಳಷ್ಟು ಮಂದಿಯಲ್ಲಿದೆ. ಈ ಎರಡಲ್ಲೂ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಿರುವ ಕಾರಣಕ್ಕೆ ಇದನ್ನು ಸೇವಿಸಲು ಜನ ಹಿಂದೇಟು ಹಾಕುತ್ತಾರೆ. ಹಾಗಾದರೆ ಆರೋಗ್ಯಕ್ಕೆ ಬೆಣ್ಣೆ ಉತ್ತಮವೋ, ತುಪ್ಪ ಉತ್ತಮವೋ? ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ. 

ಇತ್ತೀಚಿನ ದಿನಗಳಲ್ಲಿ ಆಹಾರ ಸೇವನೆಯ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿರುವುದು ಸಹಜ. ಯಾವುದು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬುದರ ಜಿಜ್ಞಾಸೆಯಲ್ಲೇ ಬದುಕುತ್ತಿರುತ್ತೇವೆ. ಇನ್ನೂ ಬೆಣ್ಣೆ, ತುಪ್ಪದ ವಿಚಾರಕ್ಕೆ ಬಂದ್ರೆ ಇದರಲ್ಲಿ ಕೊಲೆಸ್ಟ್ರಾಲ್‌ ಅಂಶ ಹೆಚ್ಚಿರುವ ಕಾರಣಕ್ಕೆ ವೈದ್ಯರು ಕೂಡ ಇದರ ಸೇವನೆ ಉತ್ತಮವಲ್ಲ ಎನ್ನುತ್ತಾರೆ. ಬೆಣ್ಣೆ ಹಾಗೂ ತುಪ್ಪದ ಅತಿಯಾದ ಸೇವನೆಯು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಜವಾದರೂ ಇವು ನಾವು ಊಹಿಸಿದಷ್ಟು ಕೆಟ್ಟದ್ದಲ್ಲ. ಆದರೂ ಆರೋಗ್ಯದ ವಿಚಾರಕ್ಕೆ ಬಂದಾಗ ಬೆಣ್ಣೆ ಉತ್ತಮನೋ, ತುಪ್ಪ ಉತ್ತಮನೋ ಎಂಬ ಚರ್ಚೆಗಳು ಆಗಾಗ ನಡೆಯುತ್ತಿರುತ್ತದೆ. ಇವುಗಳು ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರದೇ ಹೋದರು, ಪಾಕಪದ್ಧತಿಯಲ್ಲಿ ಇವುಗಳ ಬಳಕೆ ಭಿನ್ನವಾಗಿರುತ್ತದೆ. ಹಾಗಾದ್ರೆ ಬೆಣ್ಣೆನೋ ತುಪ್ಪನೋ ಎಂಬುದನ್ನು ಈ ಕೆಳಗಿನ ಅಂಶಗಳ ಆಧಾರದ ಮೇಲೆ ನೀವೇ ನಿರ್ಧಾರ ಮಾಡಿ 
icon

(1 / 7)

ಪೌಷ್ಟಿಕಾಂಶದ ಮೌಲ್ಯಗಳು:  ತುಪ್ಪ ಹಾಗೂ ಬೆಣ್ಣೆ ಎರಡೂ ಪೌಷ್ಟಿಕಾಂಶಗಳ ಆಗರವಾಗಿದೆ. ವಿಟಮಿನ್‌ ಎ, ವಿಟಮಿನ್‌ ಇ, ಆಂಟಿಆಕ್ಸಿಡೆಂಟ್‌, ರೈಬೊಫ್ಲಾವಿನ್‌, ಫಾಸ್ಪರಸ್‌ ಹಾಗೂ ಕ್ಯಾಲಿಯಂ ಅಂಶಗಳು ಬೆಣ್ಣೆ ಹಾಗೂ ತುಪ್ಪ ಎರಡಲ್ಲೂ ಸಮೃದ್ಧವಾಗಿದೆ. 
icon

(2 / 7)

ಬೆಣ್ಣೆಯು ಜೀವಕೋಶಗಳನ್ನು ಫ್ರಿ ರಾಡಿಕಲ್ಸ್‌ಗಳಿಂದ ರಕ್ಷಿಸುತ್ತದೆ. ಇದು ನಮ್ಮ ದೃಷ್ಟಿಯನ್ನೂ ಚುರುಕಾಗಿಸುತ್ತದೆ. ಸ್ತನ ಹಾಗೂ ಹೊಟ್ಟೆಯ ಕ್ಯಾನ್ಸರ್‌ ತಡೆಯಲು ಕೂಡ ಸಹಕಾರಿ. ಹಾಗೆಯೇ ತುಪ್ಪದಲ್ಲಿ ಕ್ಯಾನ್ಸರ್‌ ವಿರುದ್ಧ ಹೋರಾಡುವ ಸಿಎಲ್‌ಎ ಆಮ್ಲವಿದೆ. ಇದು ಹೃದಯರಕ್ತನಾಳದ ಕಾಯಿಲೆಗಳು ಹಾಗೂ ಕ್ಯಾನ್ಸರ್‌ ಎದುರಿಸಲು ಸಹಾಯ ಮಾಡುತ್ತದೆ. 
icon

(3 / 7)

ಕ್ಯಾಲೊರಿ ಅಂಶ: ತುಪ್ಪವು ಬೆಣ್ಣೆಗಿಂತ ಸ್ಪಲ್ವ ಹೆಚ್ಚಿನ ಕೊಬ್ಬಿನಾಂಶ ಹಾಗೂ ಕ್ಯಾಲೊರಿಯನ್ನು ಹೊಂದಿರುತ್ತದೆ. ಒಂದು ಚಮಚ ತುಪ್ಪದಲ್ಲಿ ಸುಮಾರು 120 ಕ್ಯಾಲೊರಿ ಅಂಶವಿದ್ದರೆ, ಒಂದು ಚಮಚ ಬೆಣ್ಣೆಯಲ್ಲಿ 102 ರಷ್ಟು ಕ್ಯಾಲೊರಿ ಅಂಶಗಳಿರುತ್ತದೆ. 
icon

(4 / 7)

ಲ್ಯಾಕ್ಟೋಸ್‌ ಅಂಶ: ತುಪ್ಪಕ್ಕಿಂತ ಬೆಣ್ಣೆಯಲ್ಲಿ ಹಾಲಿನ ಪ್ರೋಟಿನ್‌ ಅಂಶ ಕಡಿಮೆ ಇರುತ್ತದೆ. ಆ ಕಾರಣಕ್ಕೆ ಹಾಲಿನ ಅಲರ್ಜಿ ಹಾಗೂ ಲ್ಯಾಕ್ಟೋಸ್‌ ಅಸಹಿಷ್ಣುತೆ ಹೊಂದಿರುವ ಜನರು ಇದನ್ನು ಆರಿಸಿಕೊಳ್ಳುವುದು ಉತ್ತಮ. ದೈನಂದಿನ ಪ್ರೊಟೀನ್‌ ಸೇವನೆಗಾಗಿ ಡೈರಿ ಉತ್ಪನ್ನಗಳನ್ನು ಅವಲಂಬಿಸಿದ್ದರೆ, ಬೆಣ್ಣೆಯು ಖಂಡಿತ ಉತ್ತಮ. 
icon

(5 / 7)

ಈ ಮೇಲಿನ ಅಂಶಗಳನ್ನು ಗಮನಿಸಿ ನಿಮಗೆ ಆರೋಗ್ಯಕ್ಕೆ ಬೆಣ್ಣೆ ಉತ್ತಮನೋ ತುಪ್ಪ ಉತ್ತಮನೋ ಎಂಬುದನ್ನು ನೀವೇ ನಿರ್ಧರಿಸಿ. ಆದರೆ ಒಂದು ವಿಚಾರ ನೆನೆಪಿರಲಿ ಬೆಣ್ಣೆ ಆಗ್ಲಿ, ತುಪ್ಪ ಆಗಿ ಅತಿಯಾಗಿ ಸೇವಿಸೋದ್ರಿಂದ ಅಪಾಯ ತಪ್ಪಿದ್ದಲ್ಲ. 
icon

(6 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(7 / 7)

ಇತರ ಗ್ಯಾಲರಿಗಳು