ತೂಕ ಇಳಿಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುವವರೆಗೆ; ಬೆಳಿಗ್ಗೆ ಎದ್ದ ತಕ್ಷಣ ಜೀರಿಗೆ ನೀರು ಕುಡಿದರೆ ಆರೋಗ್ಯಕ್ಕೆ ಇಷ್ಟೆಲ್ಲ ಲಾಭ
- ಭಾರತೀಯರ ಅಡುಗೆಮನೆಯ ಸಂಗಾತಿ ಜೀರಿಗೆ ಆಹಾರ ಖಾದ್ಯಗಳ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಇದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಪ್ರತಿದಿನ ಬೆಳಿಗ್ಗೆ ಎದ್ದಾಕ್ಷಣ ಜೀರಿಗೆ ನೀರು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
- ಭಾರತೀಯರ ಅಡುಗೆಮನೆಯ ಸಂಗಾತಿ ಜೀರಿಗೆ ಆಹಾರ ಖಾದ್ಯಗಳ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಇದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಪ್ರತಿದಿನ ಬೆಳಿಗ್ಗೆ ಎದ್ದಾಕ್ಷಣ ಜೀರಿಗೆ ನೀರು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
(1 / 9)
ಪ್ರತಿದಿನ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದರಿಂದ ದೇಹ ಹಾಗೂ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳಿವೆ. ಇದರ ಪ್ರಯೋಜನಗಳನ್ನು ನೀವೂ ಅರಿಯಿರಿ.
(2 / 9)
ಜೀರಿಗೆಯಲ್ಲಿ ಆಂಟಿಆಕ್ಸಿಡೆಂಟ್ ಅಂಶ ಸಮೃದ್ಧವಾಗಿರುವುದರಿಂದ ಇದು ತೂಕ ಇಳಿಕೆಗೆ ಸಹಕಾರಿ. ಆದರೆ ನಿರಂತರ ಸೇವನೆಯಿಂದ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.
(3 / 9)
ಬೆಚ್ಚಗಿನ ಜೀರಿಗೆ ನೀರನ್ನು ಕುಡಿಯುವುದರಿಂದ ದೇಹವು ಹೊಸ, ಆರೋಗ್ಯಕರ ಕೋಶಗಳನ್ನ ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಚಯಾಪಚಯ ದರವನ್ನೂ ಸುಧಾರಿಸುತ್ತದೆ.
(5 / 9)
ಜೀರಿಗೆ ನೀರಿನಲ್ಲಿ ಕ್ಯಾಲೊರಿ ಅಂಶ ಕಡಿಮೆ ಇರುತ್ತದೆ. ಇದರಿಂದ ದೇಹ ತೂಕ ಇಳಿಕೆ ಸೇರಿದಂತೆ ಸಾಕಷ್ಟು ಪ್ರಯೋಜನಗಳಿವೆ.
(6 / 9)
ಜೀರಿಗೆಯಲ್ಲಿ ಪಾಲಿಫಿನಾಲ್ ಅಂಶ ಸಮೃದ್ಧವಾಗಿರುತ್ತದೆ. ಜೀರಿಗೆ ನೀರು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಸಂಯುಕ್ತಗಳನ್ನು ಹೊಂದಿದ್ದು, ಇದು ವಿವಿಧ ರೀತಿಯ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.
(8 / 9)
ಟೈಪ್ 2 ಮಧುಮೇಹದಲ್ಲಿ ಜೀರಿಗೆಯು ರಕ್ತದಲ್ಲಿನ ಸಕ್ಕರೆಯಂಶ ಹಾಗೂ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀರಿಗೆಯಲ್ಲಿ ಕಬ್ಬಿಣಾಂಶ ಹಾಗೂ ನಾರಿನಾಂಶ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.
ಇತರ ಗ್ಯಾಲರಿಗಳು