ತುಳಸಿ ಎಲೆ ಜತೆ ಈ ವಸ್ತು ಬೆರೆಸಿ ತಿಂದ್ರೆ ಚಳಿಗಾಲದಲ್ಲಿ ಕಾಡುವ ಹಲವು ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗುತ್ತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತುಳಸಿ ಎಲೆ ಜತೆ ಈ ವಸ್ತು ಬೆರೆಸಿ ತಿಂದ್ರೆ ಚಳಿಗಾಲದಲ್ಲಿ ಕಾಡುವ ಹಲವು ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗುತ್ತೆ

ತುಳಸಿ ಎಲೆ ಜತೆ ಈ ವಸ್ತು ಬೆರೆಸಿ ತಿಂದ್ರೆ ಚಳಿಗಾಲದಲ್ಲಿ ಕಾಡುವ ಹಲವು ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗುತ್ತೆ

ಕಳೆದ ಕೆಲ ದಿನಗಳಿಂದ ಚಳಿ ಹಾಗೂ ಮಳೆ ಎರಡೂ ಒಟ್ಟಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹವಾಮಾನ ಬದಲಾವಣೆಯ ಸಂದರ್ಭ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ತುಳಸಿ ಎಲೆ ಜೊತೆ ಈ ವಸ್ತುವನ್ನು ಬೆರೆಸಿ ತಿನ್ನುವುದೇ ಮದ್ದು, ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ.

ತುಳಸಿಯು ಧಾರ್ಮಿಕವಾಗಿ ಮಾತ್ರ ವಿಶೇಷವಲ್ಲ, ಇದು ಆರೋಗ್ಯದ ವಿಚಾರದಲ್ಲೂ ಬಹಳ ಮಹತ್ವವನ್ನು ಹೊಂದಿದೆ. ತುಳಸಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಯುರ್ವೇದದಲ್ಲಿ ತುಳಸಿಗೆ ಬಹಳ ಪ್ರಾಶಸ್ತ್ಯವಿದೆ. ಇದನ್ನು ತಿನ್ನುವುದರಿಂದ ಅನೇಕ ರೋಗಗಳಿಂದ ಮುಕ್ತಿ ದೊರೆಯುತ್ತದೆ. ಅದರಲ್ಲೂ ಬದಲಾಗುವ ವಾತಾವರಣದಲ್ಲಿ ಉಂಟಾಗುವ ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುಳಸಿ ಎಲೆ ಜೊತೆ ಕರಿಮೆಣಸವನ್ನು ಸೇರಿಸಿ ತಿನ್ನಬೇಕು. ಇದನ್ನು ತಿನ್ನುವುದರಿಂದ ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ನೋಡಿ.
icon

(1 / 7)

ಪದೇ ಪದೇ ಜ್ವರ ಬರುತ್ತಿದ್ದರೆ, ನೆಗಡಿ ಮತ್ತು ಕೆಮ್ಮ ಬಿಡದೇ ಕಾಡುತ್ತಿದ್ದರೆ ತುಳಸಿ ಎಲೆಗಳೊಂದಿಗೆ ಕರಿಮೆಣಸು ಮತ್ತು 10 ಗ್ರಾಂ ಕಲ್ಲು ಸಕ್ಕರೆಯನ್ನು ರುಬ್ಬಿಕೊಂಡು ದ್ರಾವಣ ತಯಾರಿಸಿ ಕುಡಿಯಿರಿ. ಇದರಿಂದ ಶೀಘ್ರ ಪರಿಹಾರ ದೊರೆಯುತ್ತದೆ. 
icon

(2 / 7)

ಬದಲಾಗುತ್ತಿರುವ ಋತುವಿನಲ್ಲಿ ಶೀತ ಮತ್ತು ಕೆಮ್ಮಿನ ಸಮಸ್ಯೆ ಕಾಡುವುದು ಸಹಜ. ಈ ಸಮಸ್ಯೆಯನ್ನು ನಿಭಾಯಿಸಲು, ಪ್ರತಿದಿನ ತುಳಸಿ ಎಲೆಗಳೊಂದಿಗೆ ಕರಿಮೆಣಸು ಸೇರಿಸಿ ತಿನ್ನಿ. ಇದು ಕೆಮ್ಮಿನಿಂದ ಮಾತ್ರವಲ್ಲದೆ ಶೀತ ಮತ್ತು ನೆಗಡಿಯಿಂದಲೂ ಪರಿಹಾರ ನೀಡುತ್ತದೆ. 
icon

(3 / 7)

ಮಾಲಿನ್ಯ ಮತ್ತು ಧೂಳಿನಿಂದ ಉಂಟಾಗುವ ಅಲರ್ಜಿಯಿಂದ ಬಳಲುತ್ತಿದ್ದರೆ ಅಂಥವರು ತುಳಸಿ ಎಲೆಗಳೊಂದಿಗೆ ಕರಿಮೆಣಸಿನ ಪಾನೀಯವನ್ನು ಕುಡಿಯುವುದರಿಂದ ಪರಿಹಾರವನ್ನು ಪಡೆಯಬಹುದು. ಇದು ಶ್ವಾಸಕೋಶದಲ್ಲಿ ಉಂಟಾಗುವ ಅಲರ್ಜಿಯಿಂದ ರಕ್ಷಿಸುತ್ತದೆ.
icon

(4 / 7)

ಹೊಟ್ಟೆನೋವು, ಗ್ಯಾಸ್ಟ್ರಿಕ್‌, ಆ್ಯಸಿಡಿಟಿ ಸಮಸ್ಯೆ ಇದ್ದರೆ ತುಳಸಿ ಎಲೆಗಳೊಂದಿಗೆ ಕರಿಮೆಣಸು ತಿನ್ನುವುದರಿಂದ ಪರಿಹಾರ ಕಂಡುಕೊಳ್ಳಬಹುದು.
icon

(5 / 7)

ತುಳಸಿ ಎಲೆಗಳನ್ನು ಕರಿಮೆಣಸಿನೊಂದಿಗೆ ಬೆರೆಸಿ ಪ್ರತಿದಿನ ಜಗಿಯುವುದರಿಂದ  ದೇಹದಲ್ಲಿ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಇದರಿಂದ ಹಲವು ಸಮಸ್ಯೆಗಳು ಹತ್ತಿರಕ್ಕೂ ಸುಳಿಯುವುದಿಲ್ಲ 
icon

(6 / 7)

ತುಳಸಿ ಎಲೆಗಳು ಮತ್ತು ಕರಿಮೆಣಸನ್ನು ಬೆರೆಸಿ ಔಷಧವನ್ನು ತಯಾರಿಸಿದರೆ, ಅದು ದೇಹದಲ್ಲಿ ಇರುವ ವಿಷಾಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ.
icon

(7 / 7)

ಇತರ ಗ್ಯಾಲರಿಗಳು