ಮನೆಯೊಳಗೆ ಜಿರಳೆಗಳದ್ದೇ ರಾಜ್ಯಭಾರವಾಗಿದ್ಯಾ, ಏನೇ ಮಾಡಿದ್ರು ಜಿರಳೆ ಕಡಿಮೆ ಆಗ್ತಿಲ್ವಾ, ಈ ಸಿಂಪಲ್‌ ಟ್ರಿಕ್ಸ್‌ ಟ್ರೈ ಮಾಡಿ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮನೆಯೊಳಗೆ ಜಿರಳೆಗಳದ್ದೇ ರಾಜ್ಯಭಾರವಾಗಿದ್ಯಾ, ಏನೇ ಮಾಡಿದ್ರು ಜಿರಳೆ ಕಡಿಮೆ ಆಗ್ತಿಲ್ವಾ, ಈ ಸಿಂಪಲ್‌ ಟ್ರಿಕ್ಸ್‌ ಟ್ರೈ ಮಾಡಿ ನೋಡಿ

ಮನೆಯೊಳಗೆ ಜಿರಳೆಗಳದ್ದೇ ರಾಜ್ಯಭಾರವಾಗಿದ್ಯಾ, ಏನೇ ಮಾಡಿದ್ರು ಜಿರಳೆ ಕಡಿಮೆ ಆಗ್ತಿಲ್ವಾ, ಈ ಸಿಂಪಲ್‌ ಟ್ರಿಕ್ಸ್‌ ಟ್ರೈ ಮಾಡಿ ನೋಡಿ

  • ಜಿರಳೆಗಳು ಒಮ್ಮೆ ಮನೆಯೊಳಗೆ ಕಾಲಿಟ್ಟರೆ ಅವುಗಳನ್ನು ಮನೆಯಿಂದ ಹೊರ ಕಳುಹಿಸುವುದು ಭಾರಿ ಕಷ್ಟ. ಅದರಲ್ಲೂ ಅಡುಗೆಮನೆಯಲ್ಲಿ ಸಾಮಗ್ರಿಗಳು ಹೆಚ್ಚು ತುಂಬಿರುವ ಕಾರಣ ಅಲ್ಲಲ್ಲಿ ರಾಶಿಗಳು ಮನೆ ಮಾಡಿಕೊಂಡಿರುತ್ತವೆ. ಕೆಲವೊಮ್ಮೆ ಹಿಟ್‌, ಕಾಯಿಲ್‌ ಏನೇ ಬಳಸಿದ್ರೂ ಜಿರಳೆ ಕಾಟ ಕಡಿಮೆಯಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಸಿಂಪಲ್‌ ಟ್ರಿಕ್ಸ್‌ ಟ್ರೈ ಮಾಡಿ ನೋಡಿ. 

ಮನೆಯೊಳಗೆ ಎಷ್ಟೇ ಸ್ವಚ್ಛವಿದ್ದರೂ ಒಮ್ಮೆ ಒಂದು ಜಿರಳೆ ಬಂದು ಸೇರಿಕೊಂಡರೆ ಸಾಕು ನಮಗೆ ತಿಳಿಯದಂತೆ ಜಿರಳೆ ಸಾಮ್ರಾಜ್ಯವೇ ಅಲ್ಲಿ ಕಟ್ಟಿ ಬಿಡುತ್ತದೆ. ಜಿರಳೆಗಳು ಮನೆಯಲ್ಲಿರುವ ಸಾಮಗ್ರಿಗಳನ್ನು ಹಾಳು ಮಾಡುವುದು ಮಾತ್ರವಲ್ಲ, ಆರೋಗ್ಯಕ್ಕೂ ಹಾನಿ ಮಾಡುತ್ತವೆ. ಪಾತ್ರೆ, ಆಹಾರಗಳ ಮೇಲೆ ಜಿರಳೆ ಕುಳಿತರೆ ಅದರಿಂದ ಆರೋಗ್ಯ ಕೆಡುವುದು ಖಂಡಿತ. 
icon

(1 / 9)

ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದೇ ಹೋದಲ್ಲಿ ಜಿರಳೆಗಳು ಬೇಗನೇ ಅಡುಗೆಮನೆ ತುಂಬಾ ಹರಡುತ್ತವೆ. ಹೀಗಾಗಿ ಜಿರಳೆಗಳನ್ನು ತಡೆಗಟ್ಟಲು ನೀವು ಮೊದಲನೆಯದಾಗಿ ಅಡುಗೆಮನೆಯ ಕಪಾಟುಗಳು, ಡ್ರಾಯರ್‌ಗಳು, ಕ್ಯಾಬಿನೇಟ್‌ಗಳು ಹಾಗೂ ಅಡುಗೆಮನೆಯ ಎಲ್ಲಾ ಮೂಲೆ ಮೂಲೆಗಳನ್ನು ಸ್ವಚ್ಛಗೊಳಿಸಬೇಕು. ಅಡುಗೆಮನೆಯಲ್ಲಿ ಅವಧಿ ಮೀರಿದ ಯಾವುದೇ ಪದಾರ್ಥಗಳಿದ್ದರೆ ಅವುಗಳನ್ನು ಹೊರಗೆ ಎಸೆಯಬೇಕು. ಗಾಳಿಯಾಡದ ಬಾಟಲಿಗಳಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಇಡಬೇಕು. ಈ ಎಲ್ಲಾ ಕ್ರಮಗಳ ಜೊತೆಗೆ ಈ ಕೆಲವು ಸರಳ ಟ್ರಿಕ್ಸ್‌ಗಳ ಮೂಲಕ ಜಿರಳೆ ಬಾರದಂತೆ ತಡೆಯಬಹುದು.
icon

(2 / 9)

ಅಡುಗೆಮನೆ ಕ್ಲೀನ್‌ ಮಾಡಿ: ಅಡುಗೆಮನೆಯಲ್ಲಿ ಜಿರಳೆಗಳ ಕಾಟ ಮಿತಿ ಮೀರಿದ್ದರೆ ನೀವು ಮಾಡಬೇಕಾದ ಮೊಟ್ಟ ಮೊದಲ ಕೆಲಸವೆಂದರೆ ಅಡುಗೆಮನೆಯನ್ನು ಗಾಢವಾಗಿ ಸ್ವಚ್ಛಗೊಳಿಸುವುದಾಗಿದೆ. ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಸಣ್ಣ ಕೊಳಕಿಗೂ ಜಾಗವಿದರಂತೆ ಮೂಲೆ ಮೂಲೆಯನ್ನು ಶುಚಿಗೊಳಿಸಬೇಕು. ಆಹಾರ ಚೆಲ್ಲಿದ್ದರೆ, ಬ್ರೆಡ್‌ನಂತಹ ಪದಾರ್ಥಗಳು ಅಲ್ಲಲ್ಲಿಯೇ ಬಿದ್ದಿದ್ದರೆ ಯಾವುದನ್ನೂ ಬಿಡದೇ ಪ್ರತಿಯೊಂದನ್ನೂ ಶುಚಿಗೊಳಿಸಬೇಕು. ಅಡುಗೆ ಮನೆಯ ಶುಚಿತ್ವ ಕಾಪಾಡಿಕೊಂಡಲ್ಲಿ ಮಾತ್ರ ಜಿರಳೆಯಿಂದ ಮುಕ್ತಿ ಹೊಂದಲು ಸಾಧ್ಯವಿದೆ.
icon

(3 / 9)

ನೈಸರ್ಗಿಕ ಕೀಟನಾಶಕಗಳ ಬಳಕೆ: ಜಿರಳೆಗಳ ಕಾಟಗಳಿಂದ ಪಾರಾಗಲು ನೈಸರ್ಗಿಕ ಕೀಟನಾಶಕಗಳನ್ನು ಬಳಕೆ ಮಾಡಬಹುದು. ಪುದೀನಾ ಎಣ್ಣೆ ಹಾಗೂ ಬೇವಿನ ಎಣ್ಣೆಗಳಲ್ಲಿ ಹತ್ತಿಯನ್ನು ಅದ್ದಿ ಅಡುಗೆ ಕೋಣೆಯ ಮೂಲೆ ಮೂಲೆಗಳಲ್ಲಿ ಇಡುವ ಮೂಲಕ ಜಿರಳೆ ಬಾರದಂತೆ ತಡೆಯಬಹುದು. 
icon

(4 / 9)

ಜಿರಳೆಗಳು ಎಂಟ್ರಿ ಕೊಡುವ ಜಾಗಗಳನ್ನು ಮುಚ್ಚಿ: ಪೈಪ್, ಬಾಗಿಲು, ಕಿಟಕಿಗಳು ಹೀಗೆ ಮನೆಯ ಯಾವುದೇ ಜಾಗದಲ್ಲಿ ರಂಧ್ರಗಳಿದ್ದರೂ ಸಹ ಅವುಗಳನ್ನು ಮುಚ್ಚಿಬಿಡಿ. ಜಿರಳೆಗಳಿಗೆ ನಿಮ್ಮ ಮನೆಗೆ ಬರಲು ಜಾಗವೇ ನೀಡಿಲ್ಲವೆಂದರೆ ಅವುಗಳು ಹಾವಳಿ ನಡೆಸಲು ಸಾಧ್ಯವಿಲ್ಲ. ಸಿಂಕ್‌ಗಳನ್ನು ಪ್ರತಿನಿತ್ಯ ತೊಳೆಯಬೇಕು. ಸಿಂಕ್‌ಗಳ ಒಳಗೆ ಜಿರಳೆಗಳು ಮನೆ ಮಾಡಿಕೊಂಡಿರಬಹುದು. ಹಾಗಾಗಿ ಸಿಂಕ್‌ಗಳ ಬಳಿಯೂ ಜಿರಳೆ ನಿವಾರಕಗಳನ್ನು ಇಡಿ. 
icon

(5 / 9)

ಅಡುಗೆಮನೆಯ ಕಸವನ್ನು ನಿತ್ಯ ತೆರವು ಮಾಡಿ: ಅಡುಗೆಮನೆಯಲ್ಲಿ ಪ್ರತಿನಿತ್ಯ ಏನಿಲ್ಲವೆಂದರೂ ತರಕಾರಿ ಹಾಗೂ ಹಣ್ಣಿನ ಸಿಪ್ಪೆಗಳು, ಚಾ ಪುಡಿ, ಹಳಸಿದ ಆಹಾರ ಕಸದ ಬುಟ್ಟಿ ಸೇರುತ್ತದೆ. ಈ ಕಸವನ್ನು ನೀವು ಪ್ರತಿದಿನ ವಿಲೇವಾರಿ ಮಾಡಬೇಕು. ಕಸದಬುಟ್ಟಿಯನ್ನು ಶುಚಿಗೊಳಿಸದೇ ಮಲಗುವಂತಿಲ್ಲ. ಜಿರಳೆಗಳು ಕಸದಬುಟ್ಟಿಯ ದುರ್ವಾಸನೆಯಿಂದಲೂ ಆಕರ್ಷಿತಗೊಳ್ಳುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ. 
icon

(6 / 9)

ನೀರು ನಿಲ್ಲಲು ಬಿಡಬೇಡಿ: ನಿಂತ ನೀರಿನಲ್ಲಿ ಸೊಳ್ಳೆಗಳು ಹಾಗೂ ಕೀಟಗಳು ಸಂತಾನೋತ್ಪತ್ತಿ ನಡೆಸುತ್ತವೆ ಎಂಬುದು ತಿಳಿದಿರುವ ವಿಚಾರ. ಅಡುಗೆಮನೆಯ ಸಿಂಕ್‌ ಪೈಪ್‌ಗಳಲ್ಲಿ ಸಣ್ಣ ಸೋರಿಕೆ ಇದ್ದರೂ ಸಹ ಅವುಗಳನ್ನು ಕೂಡಲೇ ಸರಿಪಡಿಸಬೇಕು. ಸಿಂಕ್‌ನಲ್ಲಿ ಕಲುಷಿತ ನೀರಿದ್ದರೆ ತಕ್ಷಣವೇ ಅದನ್ನು ಶುಚಿಗೊಳಿಸಿ. ಜಿರಳೆಗಳು ನೀರಿನಲ್ಲಿ ಸಂತಾನೋತ್ಪತ್ತಿ ನಡೆಸುವುದು ಕಡಿಮೆಯಾದರೂ ಇತರ ಕ್ರಿಮಿ, ಕೀಟಗಳು ಉತ್ಪತ್ತಿಯಾಗಲು ನಿಂತ ನೀರು ಕಾರಣವಾಗುತ್ತದೆ. 
icon

(7 / 9)

ಆಹಾರ ಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿ: ಆಹಾರ ಪದಾರ್ಥಗಳನ್ನು ಎಂದಿಗೂ ಗಾಳಿಯಾಡದ ಕಂಟೇನರ್‌ಗಳಲ್ಲಿಯೇ ಸಂಗ್ರಹಿಸಿ ಇಡಬೇಕು. ಗಾಜಿನ ಕಂಟೇನರ್‌ಗಳನ್ನು ನೀವು ಇದಕ್ಕಾಗಿ ಬಳಕೆ ಮಾಡಿಕೊಳ್ಳಬಹುದು. ಆಗ ಜಿರಳೆಗಳಿಗೆ ಆಹಾರ ಪದಾರ್ಥಗಳನ್ನು ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ. ಈ ರೀತಿಯಲ್ಲಿ ನೀವು ನಿಮ್ಮ ಆಹಾರ ಪದಾರ್ಥಗಳು ಜಿರಳೆ ಪಾಲಾಗುವುದನ್ನು ತಪ್ಪಿಸಬಹುದಾಗಿದೆ. 
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

ಇತರ ಗ್ಯಾಲರಿಗಳು