Dry Fruits; ಡ್ರೈಫ್ರುಟ್ಸ್ ನೆನೆಸಿಡಬೇಕಾ ಅಥವಾ ನೇರ ತಿನ್ನೋದಾ, ಬೆಸ್ಟ್ ಪ್ರಾಕ್ಟೀಸ್ ಇದುವೇ ನೋಡಿ-how to best consume different dry fruits to soak or not to soak best practices check photo story uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dry Fruits; ಡ್ರೈಫ್ರುಟ್ಸ್ ನೆನೆಸಿಡಬೇಕಾ ಅಥವಾ ನೇರ ತಿನ್ನೋದಾ, ಬೆಸ್ಟ್ ಪ್ರಾಕ್ಟೀಸ್ ಇದುವೇ ನೋಡಿ

Dry Fruits; ಡ್ರೈಫ್ರುಟ್ಸ್ ನೆನೆಸಿಡಬೇಕಾ ಅಥವಾ ನೇರ ತಿನ್ನೋದಾ, ಬೆಸ್ಟ್ ಪ್ರಾಕ್ಟೀಸ್ ಇದುವೇ ನೋಡಿ

Dry Fruits Soaked vs Raw; ಒಣ ಹಣ್ಣು ಅಥವಾ ಡ್ರೈಫ್ರುಟ್ಸ್ ತಿನ್ನೋದು ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಎಲ್ಲ ಒಣಹಣ್ಣುಗಳನ್ನು ಹಾಗೆಯೇ ನೇರವಾಗಿ ತಿನ್ನೋದಕ್ಕಾಗುತ್ತ? ಖಂಡಿತ ಇಲ್ಲ. ಕೆಲವು ಒಣ ಹಣ್ಣುಗಳನ್ನು ನೆನೆಸಿ ತಿನ್ನಬೇಕು, ಉಳಿದವನ್ನು ನೇರವಾಗಿ ತಿನ್ನಬೇಕು. 

ಒಣ ಹಣ್ಣುಗಳು ಅಥವಾ ಡ್ರೈಫ್ರುಟ್ಸ್‌ ಯಾರಿಗೆ ಇಷ್ಟ ಇಲ್ಲ ಹೇಳಿ. ಒಣಹಣ್ಣುಗಳು ಯಾವುದೇ ಆದರೂ ಅವು ಪೌಷ್ಟಿಕ ಮತ್ತು ರುಚಿಕರವಾಗಿದ್ದು, ವಿಟಮಿನ್‌ಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ತುಂಬಿರುತ್ತದೆ. ಅವುಗಳನ್ನು ತಿನ್ನುವುದಕ್ಕೂ ಕೆಲವು ಕ್ರಮಗಳಿವೆ.  
icon

(1 / 9)

ಒಣ ಹಣ್ಣುಗಳು ಅಥವಾ ಡ್ರೈಫ್ರುಟ್ಸ್‌ ಯಾರಿಗೆ ಇಷ್ಟ ಇಲ್ಲ ಹೇಳಿ. ಒಣಹಣ್ಣುಗಳು ಯಾವುದೇ ಆದರೂ ಅವು ಪೌಷ್ಟಿಕ ಮತ್ತು ರುಚಿಕರವಾಗಿದ್ದು, ವಿಟಮಿನ್‌ಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ತುಂಬಿರುತ್ತದೆ. ಅವುಗಳನ್ನು ತಿನ್ನುವುದಕ್ಕೂ ಕೆಲವು ಕ್ರಮಗಳಿವೆ.  

ಒಣ ಹಣ್ಣುಗಳನ್ನು ನೆನೆಸಿ ತಿನ್ನಿ ಅಂತ ಮನೆಯಲ್ಲಿ ಹಿರಿಯರು ಪದೇಪದೆ ಹೇಳುತ್ತಿರುವುದನ್ನು ಗಮನಿಸರಬಹುದು. ಆದರೆ ಎಲ್ಲ ಒಣಹಣ್ಣುಗಳನ್ನು ನೆನೆಸಿ ತಿನ್ನಬಾರದು. ಕೆಲವು ರೀತಿಯ ಒಣ ಹಣ್ಣುಗಳನ್ನು ನೀರಿನಲ್ಲಿ ನೆನೆಸುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ನೀರಿನಲ್ಲಿ ಕರಗುತ್ತವೆ. ಯಾವ ಒಣ ಹಣ್ಣುಗಳನ್ನು ನೆನೆಸಬೇಕು ಮತ್ತು ಯಾವುದನ್ನು ನೆನೆಸಬಾರದು ಎಂಬುದನ್ನು ತಿಳಿದುಕೊಳ್ಳೋಣ.
icon

(2 / 9)

ಒಣ ಹಣ್ಣುಗಳನ್ನು ನೆನೆಸಿ ತಿನ್ನಿ ಅಂತ ಮನೆಯಲ್ಲಿ ಹಿರಿಯರು ಪದೇಪದೆ ಹೇಳುತ್ತಿರುವುದನ್ನು ಗಮನಿಸರಬಹುದು. ಆದರೆ ಎಲ್ಲ ಒಣಹಣ್ಣುಗಳನ್ನು ನೆನೆಸಿ ತಿನ್ನಬಾರದು. ಕೆಲವು ರೀತಿಯ ಒಣ ಹಣ್ಣುಗಳನ್ನು ನೀರಿನಲ್ಲಿ ನೆನೆಸುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ನೀರಿನಲ್ಲಿ ಕರಗುತ್ತವೆ. ಯಾವ ಒಣ ಹಣ್ಣುಗಳನ್ನು ನೆನೆಸಬೇಕು ಮತ್ತು ಯಾವುದನ್ನು ನೆನೆಸಬಾರದು ಎಂಬುದನ್ನು ತಿಳಿದುಕೊಳ್ಳೋಣ.(shutterstock)

ಒಣ ಹಣ್ಣುಗಳು ಜೀವಸತ್ವಗಳು, ಖನಿಜಗಳು, ಕಬ್ಬಿಣ, ವಿಟಮಿನ್ ಬಿ 12, ವಿಟಮಿನ್ ಡಿ, ವಿಟಮಿನ್ ಇ ಮುಂತಾದ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅದೇ ರೀತಿ ದೊಡ್ಡ ಪ್ರಮಾಣದ ಉತ್ಕರ್ಷಣ ನಿರೋಧಕ (ಆಂಟಿಆಕ್ಸಿಡೆಂಟ್) ಗಳೂ ಇವೆ.
icon

(3 / 9)

ಒಣ ಹಣ್ಣುಗಳು ಜೀವಸತ್ವಗಳು, ಖನಿಜಗಳು, ಕಬ್ಬಿಣ, ವಿಟಮಿನ್ ಬಿ 12, ವಿಟಮಿನ್ ಡಿ, ವಿಟಮಿನ್ ಇ ಮುಂತಾದ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅದೇ ರೀತಿ ದೊಡ್ಡ ಪ್ರಮಾಣದ ಉತ್ಕರ್ಷಣ ನಿರೋಧಕ (ಆಂಟಿಆಕ್ಸಿಡೆಂಟ್) ಗಳೂ ಇವೆ.(shutterstock)

ಬಾದಾಮಿಯನ್ನು ನೆನೆಸಿಟ್ಟು ತಿನ್ನಬೇಕು. ಇವುಗಳಲ್ಲಿ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕ (ಆಂಟಿ-ಆಕ್ಸಿಡೆಂಟ್) ಗಳು ಸಮೃದ್ಧವಾಗಿವೆ. ಬಾದಾಮಿ ಸಿಪ್ಪೆಯಲ್ಲಿ ಟ್ಯಾನಿನ್ ಇದ್ದು, ಇದರಿಂದ ಜೀರ್ಣ ಕ್ರಿಯ ಸಮಸ್ಯೆ ಆಗಬಹುದು. ಆದ್ದರಿಂದ ಬಾದಾಮಿ ನೆನೆಸಿಟ್ಟು ತಿನ್ನಬೇಕು.
icon

(4 / 9)

ಬಾದಾಮಿಯನ್ನು ನೆನೆಸಿಟ್ಟು ತಿನ್ನಬೇಕು. ಇವುಗಳಲ್ಲಿ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕ (ಆಂಟಿ-ಆಕ್ಸಿಡೆಂಟ್) ಗಳು ಸಮೃದ್ಧವಾಗಿವೆ. ಬಾದಾಮಿ ಸಿಪ್ಪೆಯಲ್ಲಿ ಟ್ಯಾನಿನ್ ಇದ್ದು, ಇದರಿಂದ ಜೀರ್ಣ ಕ್ರಿಯ ಸಮಸ್ಯೆ ಆಗಬಹುದು. ಆದ್ದರಿಂದ ಬಾದಾಮಿ ನೆನೆಸಿಟ್ಟು ತಿನ್ನಬೇಕು.(shutterstock)

ಬಾದಾಮಿಯಂತೆಯೇ, ವಾಲ್ನಟ್‌ಗಳನ್ನು ಕೂಡ ನೆನೆಸಿಟ್ಟು ತಿನ್ನಬೇಕು. ಇದು ತೂಕ ನಷ್ಟಕ್ಕೆ ಸಹಾಯ ಮಾಡುವ ವಿವಿಧ ಕೊಬ್ಬಿನಾಮ್ಲಗಳು, ಪ್ರೊಟೀನ್‌ಗಳು ಹಾಗೂ ಖನಿಜಾಂಶವನ್ನು ಹೊಂದಿದೆ. ವಾಲ್ನಟ್‌ ನೆನೆಸಲು ಹಾಲು ಅಥವಾ ನೀರು ಉಪಯೋಗಿಸಬಹುದು.
icon

(5 / 9)

ಬಾದಾಮಿಯಂತೆಯೇ, ವಾಲ್ನಟ್‌ಗಳನ್ನು ಕೂಡ ನೆನೆಸಿಟ್ಟು ತಿನ್ನಬೇಕು. ಇದು ತೂಕ ನಷ್ಟಕ್ಕೆ ಸಹಾಯ ಮಾಡುವ ವಿವಿಧ ಕೊಬ್ಬಿನಾಮ್ಲಗಳು, ಪ್ರೊಟೀನ್‌ಗಳು ಹಾಗೂ ಖನಿಜಾಂಶವನ್ನು ಹೊಂದಿದೆ. ವಾಲ್ನಟ್‌ ನೆನೆಸಲು ಹಾಲು ಅಥವಾ ನೀರು ಉಪಯೋಗಿಸಬಹುದು.(shutterstock)

ಅಂಜೂರ ನೇರವಾಗಿ ಒಣಹಣ್ಣುಗಳ ಪಟ್ಟಿಗೆ ಬರುವುದಿಲ್ಲ. ಇದು ಒಣಗಿಸಿದ ಹಣ್ಣು. ಹಾಗಾಗಿ ಇದನ್ನು  ನೇರವಾಗಿಯೂ ತಿನ್ನಬಹುದು. ಒಣಗಿಸಿದ ಹಣ್ಣು ತಿನ್ನುವುದು ಕಷ್ಟವೆನಿಸಿದರೆ 4 ರಿಂದ 6 ಗಂಟೆ ಕಾಲ ನೆನೆಸಿಟ್ಟು ಇನ್ನಷ್ಟು ಮೃದುವಾದ ಬಳಿಕ ತಿನ್ನಬಹುದು,
icon

(6 / 9)

ಅಂಜೂರ ನೇರವಾಗಿ ಒಣಹಣ್ಣುಗಳ ಪಟ್ಟಿಗೆ ಬರುವುದಿಲ್ಲ. ಇದು ಒಣಗಿಸಿದ ಹಣ್ಣು. ಹಾಗಾಗಿ ಇದನ್ನು  ನೇರವಾಗಿಯೂ ತಿನ್ನಬಹುದು. ಒಣಗಿಸಿದ ಹಣ್ಣು ತಿನ್ನುವುದು ಕಷ್ಟವೆನಿಸಿದರೆ 4 ರಿಂದ 6 ಗಂಟೆ ಕಾಲ ನೆನೆಸಿಟ್ಟು ಇನ್ನಷ್ಟು ಮೃದುವಾದ ಬಳಿಕ ತಿನ್ನಬಹುದು,(shutterstock)

ಒಣದ್ರಾಕ್ಷಿಯನ್ನು ನೆನೆಸಬಾರದು. ನೆನೆಸಿಟ್ಟರೆ, ಅವುಗಳಲ್ಲಿರುವ ಪೋಷಕಾಂಶಗಳು ಕಳೆದುಹೋಗುತ್ತವೆ, ಆದ್ದರಿಂದ ಅವುಗಳನ್ನು ನೇರವಾಗಿ ತಿನ್ನಬೇಕು. ನೈಸರ್ಗಿಕವಾಗಿ ಸಿಹಿ ಮತ್ತು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿ ಸಮೃದ್ಧವಾಗಿದೆ. ಇದನ್ನು ವಿವಿಧ ಸಿಹಿ ಖಾದ್ಯಗಳು, ಸಲಾಡ್‌ಗಳಲ್ಲಿ ನೇರವಾಗಿ ಬಳಸುತ್ತಾರೆ.  
icon

(7 / 9)

ಒಣದ್ರಾಕ್ಷಿಯನ್ನು ನೆನೆಸಬಾರದು. ನೆನೆಸಿಟ್ಟರೆ, ಅವುಗಳಲ್ಲಿರುವ ಪೋಷಕಾಂಶಗಳು ಕಳೆದುಹೋಗುತ್ತವೆ, ಆದ್ದರಿಂದ ಅವುಗಳನ್ನು ನೇರವಾಗಿ ತಿನ್ನಬೇಕು. ನೈಸರ್ಗಿಕವಾಗಿ ಸಿಹಿ ಮತ್ತು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿ ಸಮೃದ್ಧವಾಗಿದೆ. ಇದನ್ನು ವಿವಿಧ ಸಿಹಿ ಖಾದ್ಯಗಳು, ಸಲಾಡ್‌ಗಳಲ್ಲಿ ನೇರವಾಗಿ ಬಳಸುತ್ತಾರೆ.  (shutterstock)

ಅಗಸೆ ಬೀಜಗಳಲ್ಲಿ ಒಮೆಗಾ -3 ಕೊಬ್ಬು ಮತ್ತು ಫೈಬರ್ ಸಮೃದ್ಧವಾಗಿದೆ. ಅವು ಮೆದುಳು ಮತ್ತು ಕರುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಅಗಸೆ ಬೀಜಗಳನ್ನು ನೆನೆಸಿ ತಿನ್ನುವ ಬದಲು, ಅವುಗಳನ್ನು ಹುರಿದು ಒಣಗಿಸಿ ತಿನ್ನಬೇಕು
icon

(8 / 9)

ಅಗಸೆ ಬೀಜಗಳಲ್ಲಿ ಒಮೆಗಾ -3 ಕೊಬ್ಬು ಮತ್ತು ಫೈಬರ್ ಸಮೃದ್ಧವಾಗಿದೆ. ಅವು ಮೆದುಳು ಮತ್ತು ಕರುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಅಗಸೆ ಬೀಜಗಳನ್ನು ನೆನೆಸಿ ತಿನ್ನುವ ಬದಲು, ಅವುಗಳನ್ನು ಹುರಿದು ಒಣಗಿಸಿ ತಿನ್ನಬೇಕು(shutterstock)

ಖರ್ಜೂರದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಜೀವಸತ್ತ್ವಗಳು ಮತ್ತು ಫೈಬರ್ ಸಮೃದ್ಧವಾಗಿದೆ. ಅವುಗಳನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನಬಾರದು. ಖರ್ಜೂರವನ್ನು ನೆನೆಸುವುದರಿಂದ ಅವುಗಳಲ್ಲಿರುವ ಗುಣಲಕ್ಷಣಗಳನ್ನು ನೀರಿನಲ್ಲಿ ಕರಗಿಹೋಗುತ್ತವೆ. ಹೀಗಾಗಿ ನೇರವಾಗಿ ತಿನ್ನಬೇಕು. 
icon

(9 / 9)

ಖರ್ಜೂರದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಜೀವಸತ್ತ್ವಗಳು ಮತ್ತು ಫೈಬರ್ ಸಮೃದ್ಧವಾಗಿದೆ. ಅವುಗಳನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನಬಾರದು. ಖರ್ಜೂರವನ್ನು ನೆನೆಸುವುದರಿಂದ ಅವುಗಳಲ್ಲಿರುವ ಗುಣಲಕ್ಷಣಗಳನ್ನು ನೀರಿನಲ್ಲಿ ಕರಗಿಹೋಗುತ್ತವೆ. ಹೀಗಾಗಿ ನೇರವಾಗಿ ತಿನ್ನಬೇಕು. (shutterstock)


ಇತರ ಗ್ಯಾಲರಿಗಳು