ಹುಬ್ಬಳ್ಳಿ: ಅಭಿವೃದ್ಧಿ ಹೆಸರಲ್ಲಿ ವಂಚನೆ; ರಿಯಲ್ ಎಸ್ಟೇಟ್ ಫ್ರಾಡ್‌ ಆರೋಪದ ಮೇಲೆ 6 ಮಂದಿ ವಿರುದ್ಧ ದೂರು
ಕನ್ನಡ ಸುದ್ದಿ  /  ಕರ್ನಾಟಕ  /  ಹುಬ್ಬಳ್ಳಿ: ಅಭಿವೃದ್ಧಿ ಹೆಸರಲ್ಲಿ ವಂಚನೆ; ರಿಯಲ್ ಎಸ್ಟೇಟ್ ಫ್ರಾಡ್‌ ಆರೋಪದ ಮೇಲೆ 6 ಮಂದಿ ವಿರುದ್ಧ ದೂರು

ಹುಬ್ಬಳ್ಳಿ: ಅಭಿವೃದ್ಧಿ ಹೆಸರಲ್ಲಿ ವಂಚನೆ; ರಿಯಲ್ ಎಸ್ಟೇಟ್ ಫ್ರಾಡ್‌ ಆರೋಪದ ಮೇಲೆ 6 ಮಂದಿ ವಿರುದ್ಧ ದೂರು

ಹೊಲವನ್ನು ಜಂಟಿಯಾಗಿ ಅಭಿವೃದ್ಧಿ ಪಡಿಸುವುದಾಗಿ ಸೇಲ್ ಡೀಡ್ ಮಾಡಿಸಿ ಹಣ ಕಟ್ಟಿಸಿಕೊಂಡು, ವಾಪಸ್ ಹೊಲ ಕೇಳಿದರೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಭಿವೃದ್ಧಿ ಹೆಸರಲ್ಲಿ ವಂಚನೆ; ರಿಯಲ್ ಎಸ್ಟೇಟ್ ಫ್ರಾಡ್‌ ಆರೋಪದ ಮೇಲೆ 6 ಮಂದಿ ವಿರುದ್ಧ ದೂರು (ಸಾಂದರ್ಭಿಕ ಚಿತ್ರ)
ಅಭಿವೃದ್ಧಿ ಹೆಸರಲ್ಲಿ ವಂಚನೆ; ರಿಯಲ್ ಎಸ್ಟೇಟ್ ಫ್ರಾಡ್‌ ಆರೋಪದ ಮೇಲೆ 6 ಮಂದಿ ವಿರುದ್ಧ ದೂರು (ಸಾಂದರ್ಭಿಕ ಚಿತ್ರ) (Canva)

ಹುಬ್ಬಳ್ಳಿ: ರಿಯಲ್‌ ಎಸ್ಟೇಟ್‌ ವಂಚನೆ ಆರೋಪದ ಮೇಲೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮೂರು ಎಕರೆ ಹೊಲವನ್ನು ಜಂಟಿಯಾಗಿ ಅಭಿವೃದ್ಧಿ ಪಡಿಸುವ ಮಾತುಕತೆಯಂತೆ ಸೇಲ್ ಡೀಡ್ ಮಾಡಿಸಿಕೊಂಡಿದ್ದಲ್ಲದೆ, 1 ಕೋಟಿ ಹಣಕ್ಕೆ 70 ಲಕ್ಷ ಬಡ್ಡಿ ಹಣ ಕಟ್ಟಿಸಿಕೊಂಡು, ವಾಪಸ್ ಹೊಲ ಕೇಳಿದರೆ ಜೀವ ಬೆದರಿಕೆ ಹಾಕಿದ ಆರೋಪ ಇವರ ಮೇಲಿದೆ.

ನಗರದ ಶ್ರೀಧರ್ ನರಗುಂದ ಎಂಬುವರಿಗೆ ಬೆದರಿಕೆ ಹಾಕಿ ವಂಚನೆ ಮಾಡಿದ ಆರೋಪವಿದೆ. ಈ ಸಂಬಂಧ ಸುಂದರಪಾಲ್ ಗೋಟಿಮುಕ್ಕಲಾ, ಚಂದ್ರಪಾಲ್ ಗೋಟಿಮುಕ್ಕಲಾ, ಫಿಲೋಮಿನ್ ಗೋಟಿಮುಕ್ಕಲಾ, ರಮೇಶ ಕೊಠಾರಿ, ಚೇತನ ಕೊಠಾರಿ, ಸಮೀರ್ ಚಾವೂಸ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.

ಶ್ರೀಧರ್ ಅವರ ಗೋಪನಕೊಪ್ಪದ 6 ಎಕರೆ ಹೊಲವನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಪಡೆದು ನಿಮಗೆ ಅದರಲ್ಲಿ ಅರ್ಧ ಫ್ಲಾಟು ಕೊಡುತ್ತೇವೆ ಎಂದು ಆರೋಪಿಗಳು ಹೇಳಿದ್ದಾರೆ. ಎಕರೆಗೆ 30 ಲಕ್ಷದಂತೆ ಕೊಡುವುದಾಗಿ ಹೇಳಿದ್ದಾರೆ. ಶ್ರೀಧರ್ ಹಣದ ಅಡಚಣೆ ಇದ್ದಾಗ ಜಾಯಿಂಟ್ ವೆಂಚರ್ ಮೂಲಕ ಅಭಿವೃದ್ಧಿಗೆ ಒಪ್ಪಿಕೊಂಡಿದ್ದಾರೆ. ಆ ನಂತರ 2020ರಲ್ಲಿ 3 ಎಕರೆ ಹೊಲವನ್ನು ಸುಳ್ಳು ಹೇಳಿ ಮಾರಾಟ ಮಾಡಿದ ಬಗ್ಗೆ ಸೇಲ್ ಡೀಡ್ ಮಾಡಿಸಿಕೊಂಡಿದ್ದಾರೆ. ಅದಕ್ಕೆ 1 ಕೋಟಿ ಕೊಟ್ಟು, ಇಲ್ಲಿಯವರೆಗೆ 70 ಲಕ್ಷ ಬಡ್ಡಿ ಕಟ್ಟಿಸಿಕೊಂಡಿದ್ದಾರೆ. ಆದರೆ ಸ್ಥಳದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಇದೀಗ ಮರಳಿ ಹೊಲ ಕೇಳಲು ಹೋದರೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಿಯಲ್ ಎಸ್ಟೇಟ್ ವಂಚನೆ ಎಂದರೇನು?

ರಿಯಲ್ ಎಸ್ಟೇಟ್ ವಂಚನೆ ಎಂದರೆ ಆಸ್ತಿಯ ಖರೀದಿ, ಮಾರಾಟ, ಬಾಡಿಗೆ ವಿಚಾರದಲ್ಲಿ ಮೋಸ ಮಾಡುವುದಾಗಿದೆ. ಸುಳ್ಳು ಮಾಹಿತಿ ಅಥವಾ ಸಂದರ್ಭಗಳನ್ನು ಸೃಷ್ಟಿಸಿ ಹಣ ಅಥವಾ ಸ್ವತ್ತುಗಳನ್ನು ನೀಡಲು ಜನರನ್ನು ಮೋಸಗೊಳಿಸುವುದಾಗಿದೆ.

ಬೈಕ್ ಸ್ಕಿಡ್ ಆಗಿ ಬಿದ್ದು ಯುವಕ ಸಾವು

ಬೈಕ್ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬೈರೀದೇವರಕೊಪ್ಪದ ದರ್ಗಾ ಬಳಿ ಶನಿವಾರ (ಡಿಸೆಂಬರ್‌ 21) ನಡೆದಿದೆ. ಮೃತ ಯುವಕ ಯಲ್ಲಪ್ಪ ಭಜಂತ್ರಿ ಬೈರಿದೇವರಕೊಪ್ಪದವನೇ ಆಗಿದ್ದು, ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿರುವಾಗ ಘಟನೆ ನಡೆದಿದೆ. ಕೆಎ 28 HE 8233 ನಂಬರಿನ ಬೈಕಿನಲ್ಲಿ ತೆರಳುವಾಗ ಸ್ಕಿಡ್ ಆಗಿ ಬಿದ್ದು ತಲೆಗೆ ಬಲವಾದ ಏಟು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉತ್ತರ ಸಂಚಾರ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Whats_app_banner