ವಿಶ್ವಕಪ್ ಸರಣಿಶ್ರೇಷ್ಠ ಜಸ್ಪ್ರೀತ್ ಬುಮ್ರಾಗಿಲ್ಲ ಸ್ಥಾನ; 2024ರ ಟಾಪ್-5 ಟಿ20 ಬೌಲರ್ಸ್ ಆರಿಸಿದ ಆಕಾಶ್ ಚೋಪ್ರಾ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್ ಸರಣಿಶ್ರೇಷ್ಠ ಜಸ್ಪ್ರೀತ್ ಬುಮ್ರಾಗಿಲ್ಲ ಸ್ಥಾನ; 2024ರ ಟಾಪ್-5 ಟಿ20 ಬೌಲರ್ಸ್ ಆರಿಸಿದ ಆಕಾಶ್ ಚೋಪ್ರಾ

ವಿಶ್ವಕಪ್ ಸರಣಿಶ್ರೇಷ್ಠ ಜಸ್ಪ್ರೀತ್ ಬುಮ್ರಾಗಿಲ್ಲ ಸ್ಥಾನ; 2024ರ ಟಾಪ್-5 ಟಿ20 ಬೌಲರ್ಸ್ ಆರಿಸಿದ ಆಕಾಶ್ ಚೋಪ್ರಾ

Aakash Chopra: ಆಕಾಶ್ ಚೋಪ್ರಾ 2024 ರ ಟಾಪ್-5 ಟಿ20ಐ ಬೌಲರ್​​ಗಳ ಆಯ್ಕೆ ಮಾಡಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಟಿ20 ವಿಶ್ವಕಪ್​ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಜಸ್ಪ್ರೀತ್ ಬುಮ್ರಾಗೆ ಸ್ಥಾನ ನೀಡದಿರುವುದು ಅಚ್ಚರಿ ಮೂಡಿಸಿದೆ.

ವಿಶ್ವಕಪ್ ಸರಣಿಶ್ರೇಷ್ಠ ಜಸ್ಪ್ರೀತ್ ಬುಮ್ರಾಗಿಲ್ಲ ಸ್ಥಾನ; 2024ರ ಟಾಪ್-5 ಟಿ20 ಬೌಲರ್ಸ್ ಆರಿಸಿದ ಆಕಾಶ್ ಚೋಪ್ರಾ
ವಿಶ್ವಕಪ್ ಸರಣಿಶ್ರೇಷ್ಠ ಜಸ್ಪ್ರೀತ್ ಬುಮ್ರಾಗಿಲ್ಲ ಸ್ಥಾನ; 2024ರ ಟಾಪ್-5 ಟಿ20 ಬೌಲರ್ಸ್ ಆರಿಸಿದ ಆಕಾಶ್ ಚೋಪ್ರಾ

2024ರ ಕ್ಯಾಲೆಂಡರ್​ ವರ್ಷ ಮುಗಿಯುತ್ತಾ ಬಂದಿದೆ. ಕ್ರಿಕೆಟ್ ಪಂಡಿತರು ಈ ವರ್ಷ ಅದ್ಭುತ ಪ್ರದರ್ಶನ ನೀಡಿದ ತಮ್ಮ ನೆಚ್ಚಿನ ಆಟಗಾರರನ್ನು ಆರಿಸುತ್ತಿದ್ದಾರೆ. ಅದರಂತೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು 2024ರ ಕ್ಯಾಲೆಂಡರ್​ ವರ್ಷದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಶ್ವದ ಟಾಪ್​-5 ಬೌಲರ್​​ಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ಈ ವರ್ಷದ ಟಾಪ್-5 ಅತ್ಯುತ್ತಮ ಟಿ20ಐ ಬೌಲರ್​​ಗಳ ಪಟ್ಟಿಯಲ್ಲಿ ಭಾರತದ ವೇಗಿ ಹಾಗೂ 2024ರ ಟಿ20 ವಿಶ್ವಕಪ್​​ ಟೂರ್ನಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದ ಜಸ್ಪ್ರೀತ್ ಬುಮ್ರಾ ಅವರಿಗೆ ಸ್ಥಾನ ನೀಡದಿರುವುದು ಅಚ್ಚರಿ ಮೂಡಿಸಿದೆ. 

 ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಒಂದು ಮಾನದಂಡವನ್ನಿಟ್ಟುಕೊಂಡು ಬೌಲರ್​ಗಳ ಆಯ್ಕೆ ಮಾಡಿದ್ದಾರೆ. ಈ ವರ್ಷ ಕನಿಷ್ಠ 10 ಟಿ20ಐ ಪಂದ್ಯಗಳನ್ನು ಆಡಿದ ಬೌಲರ್​ಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ಬುಮ್ರಾ ಈ ವರ್ಷ 8 ಪಂದ್ಯಗಳಲ್ಲಿ ಮಾತ್ರ ಆಡಿದ್ದು, 15 ವಿಕೆಟ್ ಉರುಳಿಸಿದ್ದಾರೆ. 4.17 ಎಕಾನಮಿ, 8.26ರ ಬೌಲಿಂಗ್ ಸರಾಸರಿ ಹೊಂದಿದ್ದಾರೆ. ಇದೇ ವೇಳೆ ಎದುರಾಳಿ ತಂಡದ ಗುಣಮಟ್ಟವನ್ನ ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್​​ನಲ್ಲಿ ಮಾತನಾಡಿದ್ದು, ತಾನು ಆಯ್ಕೆ ಮಾಡಿದ ಬೌಲರ್​ಗಳ ಪ್ರದರ್ಶನವನ್ನೂ ವಿವರಿಸಿದ್ದಾರೆ.

5. ಹ್ಯಾರಿಸ್ ರೌಫ್

 ಈ ವರ್ಷದ ಟಾಪ್-5 ಬೌಲರ್​​ಗಳ ಲಿಸ್ಟ್​ನಲ್ಲಿ ಪಾಕಿಸ್ತಾನದ ಹ್ಯಾರಿಸ್ ರೌಫ್​ಗೆ ಐದನೇ ಸ್ಥಾನ ನೀಡುತ್ತೇನೆ ಎಂದು ಹೇಳಿದ್ದಾರೆ. ಭಾರತ ವಿರುದ್ಧ 3 ವಿಕೆಟ್, ಈ ವರ್ಷ ನ್ಯೂಜಿಲೆಂಡ್​ನಲ್ಲಿ 7 ವಿಕೆಟ್, ಆಸೀಸ್​ ವಿರುದ್ಧ 5 ವಿಕೆಟ್ ಸೇರಿ ಒಟ್ಟು 17 ಪಂದ್ಯಗಳಲ್ಲಿ 19ರ ಬೌಲಿಂಗ್ ಸರಾಸರಿಯಲ್ಲಿ 27 ವಿಕೆಟ್​ ಉರುಳಿಸಿದ್ದಾರೆ ಎಂದರು.

4. ಲಾಕಿ ಫರ್ಗುಸನ್​

ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್​ ಅವರನ್ನು ನಾಲ್ಕನೇ ಸ್ಥಾನಕ್ಕೆ ಆಯ್ಕೆ ಮಾಡುವೆ. ಅವರು ಕೇವಲ 10 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರೂ ಒಟ್ಟು 20 ವಿಕೆಟ್ ಕಿತ್ತಿದ್ದಾರೆ. ಅವರ ಬೌಲಿಂಗ್ ಎಕಾನಮಿ ಕೇವಲ 4.88. ಬೌಲಿಂಗ್ ಸರಾಸರಿ 9.25. ಆಸ್ಟ್ರೇಲಿಯಾ ವಿರುದ್ಧ ಕೇವಲ 3.4 ಓವರ್​ಗಳಲ್ಲಿ 12 ರನ್ ನೀಡಿ 4 ವಿಕೆಟ್ ಕಿತ್ತಿದ್ದರು. ಅನೇಕ ಸಲ ಮೂರು ವಿಕೆಟ್​ಗಳನ್ನು ಪಡೆದಿದ್ದಾರೆ ಎಂದ ಆಕಾಶ್ ಚೋಪ್ರಾ ಹೇಳಿದ್ದಾರೆ.

3. ಮತೀಶಾ ಪತಿರಾಣ

ಶ್ರೀಲಂಕಾದ ಮತೀಶಾ ಪತಿರಾಣ ಅವರನ್ನು 3ನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಪತಿರಾಣ ಅವರು ಅತ್ಯುತ್ತಮ ಬೌಲರ್​ ಎನ್ನುವುದಕ್ಕೆ ಯಾವುದೇ ಸಂದೇಹ ಇಲ್ಲ. 16 ಪಂದ್ಯಗಳಲ್ಲಿ 7.67ರ ಎಕಾನಮಿ, 13.25ರ ಸರಾಸರಿಯಲ್ಲಿ 28 ವಿಕೆಟ್ ಪಡೆದಿದ್ದಾರೆ. ಯಾರ್ಕರ್​​ಗಳ ಮೂಲಕ ಎದುರಾಳಿ ತಂಡಗಳ ಆಟಗಾರರನ್ನು ಇನ್ನಿಲ್ಲದಂತೆ ಕಾಡಿದ್ದಾರೆ ಎಂದು ಹೇಳಿದ್ದಾರೆ.

2. ಅಬ್ಬಾಸ್ ಅಫ್ರಿದಿ

ಟಾಪ್​-5 ಬೌಲರ್​​ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಶಾಹೀನ್ ಶಾ ಅಫ್ರಿದಿ ಬದಲಿಗೆ ಅಬ್ಬಾಸ್ ಅಫ್ರಿದಿ ಅವರನ್ನು ಆಯ್ಕೆ ಮಾಡಿರುವ ಆಕಾಶ್ ಚೋಪ್ರಾ, "ನಾನು ಇಲ್ಲಿ ಸ್ವಲ್ಪ ವಿಭಿನ್ನ ಆಯ್ಕೆಯನ್ನು ಮಾಡಿದ್ದೇನೆ" ಎಂದು ಹೇಳಿದ್ದಾರೆ. ಇವರು 18 ಪಂದ್ಯಗಳಲ್ಲಿ 30 ವಿಕೆಟ್ ಪಡೆದಿದ್ದಾರೆ. ಅವರ ಎಕಾನಮಿ 8.5ಕ್ಕಿಂತ ಕಡಿಮೆ ಮತ್ತು ಸರಾಸರಿ 14.96 ಆಗಿದೆ. ಅವರು ಸ್ಥಿರ ಬೌಲಿಂಗ್ ನಡೆಸಿದ್ದು, ಉತ್ತಮ ತಂಡಗಳ ವಿರುದ್ಧವೇ ವಿಕೆಟ್ ಕಿತ್ತಿರುವುದು ವಿಶೇಷ ಎಂದು ಹೇಳಿದ್ದಾರೆ. 

1. ಆರ್ಷದೀಪ್ ಸಿಂಗ್

ಟೀಮ್ ಇಂಡಿಯಾ ಎಡಗೈ ವೇಗಿ ಅರ್ಷದೀಪ್​ ಸಿಂಗ್ ಅವರನ್ನು ಮೊದಲ ಆಯ್ಕೆಯಾಗಿ ಆಕಾಶ್ ಚೋಪ್ರಾ ಆರಿಸಿದ್ದಾರೆ. ನಾನು ಅರ್ಷದೀಪ್ ಅವರನ್ನು ನಂ.1 ಸ್ಥಾನದಲ್ಲಿ ಇರಿಸಿದ್ದೇನೆ. ಅವರು 18 ಪಂದ್ಯಗಳಲ್ಲಿ 7.49 ಎಕಾನಮಿ ಮತ್ತು 13.5 ಸರಾಸರಿಯಲ್ಲಿ 36 ವಿಕೆಟ್ ಪಡೆದಿದ್ದಾರೆ. ಅವರು ಪ್ರತಿ ಬಾರಿಯೂ ಹೊಸ ಚೆಂಡಿನೊಂದಿಗೆ ಯಶಸ್ಸನ್ನು ಕಂಡಿದ್ದಾರೆ ಎಂದು ಚೋಪ್ರಾ ಹೊಗಳಿದ್ದಾರೆ.

Whats_app_banner