ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ವಿತರಿಸಿ ಪ್ರತಿಭಟಿಸಿದ ಸಂಘಟನೆಗಳು, ಪೊಲೀಸರ ವಶಕ್ಕೆ ಮಾಂಸಾಹಾರದ ಡಬ್ಬಗಳು
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ, ಮೊಟ್ಟೆ ವಿತರಿಸುವ ಮೂಲಕ ಪ್ರಗತಿಪರ ಸಂಘಟನೆಗಳ ಪ್ರತಿಭಟನೆಗಳು ಆಹಾರ ಸಂಸ್ಕೃತಿ ವಿರುದ್ದ ನಡೆಗೆ ಆಕ್ರೋಶ ಹೊರ ಹಾಕಿದರು. ಅವರ ಪ್ರತಿಭಟನೆಯ ರೂಪ ಹೀಗಿತ್ತು.
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ, ಮೊಟ್ಟೆ ವಿತರಿಸುವ ಮೂಲಕ ಪ್ರಗತಿಪರ ಸಂಘಟನೆಗಳ ಪ್ರತಿಭಟನೆಗಳು ಆಹಾರ ಸಂಸ್ಕೃತಿ ವಿರುದ್ದ ನಡೆಗೆ ಆಕ್ರೋಶ ಹೊರ ಹಾಕಿದರು. ಅವರ ಪ್ರತಿಭಟನೆಯ ರೂಪ ಹೀಗಿತ್ತು.
(1 / 7)
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ವಿತರಿಸಬೇಕು ಎನ್ನುವ ಬೇಡಿಕೆಯೊಂದಿಗೆ ಪ್ರಗತಿಪರ ಸಂಘಟನೆಗಳು ವಿಶಿಷ್ಟವಾಗಿ ಪ್ರತಿಭಟಿಸಿದರು.
(2 / 7)
ಬಾಕ್ಸ್‌ಗಳಲ್ಲಿ ಮುದ್ದೆ, ಮಾಂಸಾಹಾರ, ಮೊಟ್ಟೆಗಳನ್ನು ತಂದು ಸಮ್ಮೇಳನ ನಡೆದ ಸ್ಥಳದಲ್ಲಿ ವಿತರಣೆ ಮಾಡಿದರು.ಹಲವರು ಮಾಂಸಾಹಾರ ಪಡೆದರು.
(3 / 7)
ಮಂಡ್ಯ ಸಾಹಿತ್ಯ ಸಮ್ಮೇಳನ ಸಮಿತಿಯಿಂದ ಮಾತ್ರ ಮೊಟ್ಟೆ ನೀಡುವುದಾಗಿ ಹೇಳಿದ್ದರೂ ಭಾನುವಾರ ರಾತ್ರಿ ಊಟದ ಜತೆಗೆ ವಿತರಿಸುವ ಸಾಧ್ಯತೆಯಿದೆ. ಇದರ ನಡುವೆ ಸಂಘಟನೆಗಳು ನಮ್ಮ ಆಹಾರ ನಮ್ಮ ಹಕ್ಕು ಎಂದು ಪ್ರತಿಭಟಿಸಿದವು
(4 / 7)
ಎರಡು ವಾರದಿಂದಲೂ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡುವಂತೆ ಒತ್ತಾಯಿಸುತ್ತಲೇ ಇದ್ದರೂ ಸಮಿತಿ ಸಮ್ಮತಿ ನೀಡಿರಲಿಲ್ಲ. ಇದರಿಂದ ಹೋರಾಟಗಾರರು ಕೋಳಿ ಸಂಗ್ರಹಿಸಿ ಬಾಡೂಟ ವಿತರಿಸುವ ನಿರ್ಧಾರ ಮಾಡಿದ್ದರು.
(6 / 7)
ಕೆಲವರು ತಾ ಮುಂದೆ ನಾ ಮುಂದು ಎಂದು ಮಾಂಸಾಹಾರವನ್ನು ಹಾಕಿಸಿಕೊಂಡು ಸವಿದರು. ಆದರೆ ಪೂರ್ತಿ ವಿತರಣೆ ಮಾಡುವ ಮುನ್ನವೇ ಆಹಾರದ ಡಬ್ಬಗಳನ್ನು ಪೊಲೀಸರು ವಶಕ್ಕೆ ಪಡೆದರು.
ಇತರ ಗ್ಯಾಲರಿಗಳು