Dharwad Power Cut: ಧಾರವಾಡದ ವಿವಿಧ ಪ್ರದೇಶಗಳಲ್ಲಿ ಡಿಸೆಂಬರ್ 23 ರಂದು ಪವರ್ಕಟ್, ಎಲ್ಲೆಲ್ಲಿ ಎಷ್ಟು ಹೊತ್ತು ಎಂಬಿತ್ಯಾದಿ ವಿವರ
Dharwad Power Cut: ಧಾರವಾಡದ 110 ಕೆವಿ ಯುಎಎಸ್ (ಕೃಷಿ ವಿಶ್ವವಿದ್ಯಾಲಯ ಧಾರವಾಡ) ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ. 23 ರಂದು 3ನೇ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಹೀಗಾಗಿ, ಧಾರವಾಡದ ವಿವಿಧ ಪ್ರದೇಶಗಳಲ್ಲಿ ಡಿಸೆಂಬರ್ 23 ರಂದು ಪವರ್ಕಟ್ ಜಾರಿಯಲ್ಲಿರಲಿದೆ. ಎಲ್ಲೆಲ್ಲಿ ಎಷ್ಟು ಹೊತ್ತು ಎಂಬಿತ್ಯಾದಿ ವಿವರ ಇಲ್ಲಿದೆ.
Dharwad Power Cut: ಧಾರವಾಡದ ವಿವಿಧ ಪ್ರದೇಶಗಳಲ್ಲಿ ನಾಳೆ (ಡಿಸೆಂಬರ್ 23) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಧಾರವಾಡದ 110 ಕೆವಿ ಯುಎಎಸ್ (ಕೃಷಿ ವಿಶ್ವವಿದ್ಯಾಲಯ ಧಾರವಾಡ) ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ. 23 ರಂದು 3ನೇ ತ್ರೈಮಾಸಿಕ ತುರ್ತು ಪಾಲನಾ ಕಾಮಗಾರಿ ಕೈಗೊಳ್ಳುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಧಾರವಾಡದ ವಿವಿಧೆಡೆ ಡಿಸೆಂಬರ್ 23 ರಂದು ಪವರ್ ಕಟ್; ಯಾವೆಲ್ಲ ಏರಿಯಾದಲ್ಲಿ
ಧಾರವಾಡದ 110 ಕೆವಿ ಯುಎಎಸ್ (ಕೃಷಿ ವಿಶ್ವವಿದ್ಯಾಲಯ ಧಾರವಾಡ) ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಪವರ್ ಕಟ್ ಇರಲಿದೆ.ಎತ್ತಿನಗುಡ್ಡ, ಕೃಷಿ ವಿವಿ ಕ್ಯಾಂಪಸ್, ಕುಮಾರೇಶ್ವರ ನಗರ, ಸೈದಾಪೂರ, ಬೆಳಗಾವಿ ಮೇನ್ ರೋಡ್, ನಾರಾಯಣಪುರ, ಸಿ.ಐ.ಟಿ.ಬಿ, ಕೆ.ಹೆಚ್.ಬಿ ಕಾಲೋನಿ, ಸಂಪಿಗೆ ನಗರ, ತಾವರಗೇರಿ ಹಾಸ್ಪಿಟಲ್, ಸನ್ಮತಿ ನಗರ, ಜಿ.ಟಿ.ಸಿ ಕ್ಯಾಂಪಸ್, ಮೆಹಬೂಬ ನಗರ, ಹಶ್ಮಿ ನಗರ, ಮಾಳಾಪುರ, ಏರಟೆಕ್, ಜಯಲಕ್ಷ್ಮೀ ಇಂಡಸ್ಟ್ರಿಸ್, ಬಸವ ಕಾಲೋನಿ, ಪವರ್ ಗ್ರಿಡ್, ಪೆಪ್ಸಿ, ಕಿಲ್ಲಾ, ಸಾಧುನವರ ಎಸ್ಟೆಟ್, ನರೇಂದ್ರ, ಮುಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ, ಹಿರೇಮಲ್ಲಿಗವಾಡ, ಶಿರಡಿನಗರ ವ್ಯಾಪ್ತಿಯಲ್ಲಿ ಸೋಮವಾರ (ಡಿಸೆಂಬರ್ 23) ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ತನಕ ಕರೆಂಟ್ ಇರಲ್ಲ.
ಬೇಂದ್ರೆ ನಗರ, ಹಿರೇಮಠ ಲೇಔಟ್ ಸೇರಿ ವಿವಿಧೆಡೆ ಪವರ್ ಕಟ್
ಅದೇ ರೀತಿ, ತಾಜನಗರ, ಬಿ.ಎಸ್.ಕೆ ಲೇಔಟ, ಮಾಳಾಪುರ ಲಾಸ್ಟ್ ಬಸ್ಟಾಪ್, ರಾಜನಗರ, ತಮದಂಡಿ ಪ್ಲಾಟ್, ಹರಿಜನಕೇರಿ, ಫೈರ ಸ್ಟೇಶನ್, ರಾಮನಗೌಡಾ ಹಾಸ್ಪಿಟಲ್, ದುರ್ಗಾದೇವಿ ದೇವಸ್ಥಾನ, ಮರಾಠ ಕಾಲೋನಿ, ಕೊಪ್ಪದಕೇರಿ, ಗುಲಗಂಜಿಕೊಪ್ಪ, ಎಂ.ಬಿ ನಗರ, ಸಿವಿಲ್ ಹಾಸ್ಪಿಟಲ್, ನಿತಿನ್ ನಗರ, ಒಲ್ಡ್ ಎಸ್.ಪಿ ಸರ್ಕಲ್, ಲಕ್ಷ್ಮೀ ಗುಡಿಯ ಸುತ್ತಮುತ್ತಲಿನ ಪ್ರದೇಶ, ಪೊಲೀಸ್ ಹೆಡ್ ಕ್ವಾಟರ್ಸ ಪ್ರದೇಶ, ಬೇಂದ್ರೆ ನಗರ, ಹಿರೇಮಠ ಲೇಔಟ್, ಐಶ್ವರ್ಯ ನ್ಯಾನೋಸಿಟಿ, ನಂದಿ ಹೈವೇ ಬೈಪಾಸ್, ಮಲ್ಲಿಗೆ ನಗರ, ಗುರುನಗರ, ಶ್ರೀಗುರು ನಗರ, ಕೆ.ಹೆಚ್.ಬಿ ಲೇಔಟ್, ಮಲ್ಲಿಗವಾಡ, ಮೂಕಾಂಬಿಕ ನಗರ, ಗೌಶಿಯ ಟೌನ್, ಸುಂದರ್ ನಗರ, ಸೈನಿಕ್ ನಗರ, ಜೋಶಿ ಫಾರ್ಮ, ಮುಧೋಳ್ಕರ್ ಕಂಪೌಂಡ್ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿಭಾಗ